ಮನೆಯವರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫಲ
ಪ್ರೀತಿ ಪಾತ್ರರು ನಿಮ್ಮಿಂದ ದೂರವಾಗಬಹುದು
ಜೀವನದ ಬಗ್ಗೆ ಧನಾತ್ಮಕವಾದ ಚಿಂತನೆ ಇರಲಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ

- ಈ ದಿನವೂ ಅಷ್ಟೊಂದು ಚೆನ್ನಾಗಿಲ್ಲ ಎಂದು ಹೇಳಬಹುದು
- ವ್ಯಾಪಾರ ವ್ಯವಹಾರದ ಬಗ್ಗೆ ಹೆಚ್ಚು ಗಮನವನ್ನು ಕೊಡಬೇಕಾಗುತ್ತದೆ
- ಹೆಚ್ಚಿನ ಲಾಭದ ಅವಕಾಶಗಳು ನಿಮಗೆ ಕಡಿಮೆ ಇದೆ
- ದುಷ್ಟ ಮನಸ್ಸಿನ ಕೆಲವರು ಹಿಂಸೆಯನ್ನು ಕೊಡಬಹುದು
- ನಿಮ್ಮ ಅಧಿಕಾರ,ಹಕ್ಕು ಎಲ್ಲವೂ ದುರ್ಬಳಕೆ ಆಗುವ ಸಾಧ್ಯತೆ ಇದೆ
- ಸರಿಯಾದ ನಿರ್ಧಾರಗಳಿಲ್ಲದೆ ಅವಮಾನ ಹೊಂದುತ್ತೀರಿ
- ಮಹಾಗಣಪತಿಯನ್ನು ಆರಾಧನೆ ಮಾಡಿ
ವೃಷಭ

- ಆತ್ಮೀಯರಿಂದ ಸಿಹಿ ಸುದ್ದಿಯನ್ನು ಕೇಳುತ್ತೀರಿ
- ಜಟಿಲ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುತ್ತೀರಿ
- ಸಮಾಜದಲ್ಲಿ ಜನಪ್ರಿಯತೆಗೆ ಅವಕಾಶವಿದೆ
- ಕೆಲಸದ ಸ್ಥಳದಲ್ಲಿ ನಾಯಕತ್ವ ನಿಮ್ಮದಾಗಬಹುದು
- ಹೊಸ ವ್ಯವಹಾರದ ಯೋಜನೆಗೆ ಅವಕಾಶವಿದೆ
- ತಾಯಿಯವರಿಗೆ ಅನಿರೀಕ್ಷಿತ ತೊಂದರೆಯಾಗಬಹುದು
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ಮಿಥುನ

- ಹಣಕಾಸಿನ ಯೋಜನೆಗೆ ಈ ದಿನ ಚೆನ್ನಾಗಿದೆ
- ಸಾಮಾಜಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
- ಮನೆಯವರ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುತ್ತೀರಿ
- ಆಡಳಿತಾತ್ಮಕ ವಿಚಾರದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು
- ಜನರು ಬುದ್ಧಿವಂತರು ಇರುತ್ತಾರೆ ನೀವು ಪ್ರಾಮಾಣಿಕವಾಗಿರಿ
- ಸಾಂಸಾರಿಕವಾಗಿ ಕೆಲವು ಸಮಾಧಾನವನ್ನು ಮಾಡಬೇಕಾಗುತ್ತದೆ
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕಟಕ

- ಕಾರ್ಯಕ್ಷೇತ್ರದಲ್ಲಿ ಮನಸ್ಸಿಗೆ ಮೆಚ್ಚುವಂತ ಕೆಲಸವನ್ನು ಮಾಡಿ
- ಆರೋಗ್ಯದ ಬಗ್ಗೆ ಗಮನಿಸಿಕೊಳ್ಳಿ
- ಆಂತರಿಕವಾದ ಶಕ್ತಿ, ಉತ್ಸಾಹ ಹೆಚ್ಚಾಗಲಿದೆ
- ಮುಖ ಸ್ತುತಿ ಮಾಡುವ ಜನರು ವಂಚಿಸಬಹುದು
- ಜನರ ಮಾತನ್ನು ಪ್ರತಿ ಹೆಜ್ಜೆ ಹೆಜ್ಜೆಗೂ ಗಮನಿಸಬೇಕಾಗುತ್ತದೆ
- ಆರ್ಥಿಕವಾಗಿ ತೊಂದರೆ ಇಲ್ಲ ಸಮಾಧಾನ ಸಿಗಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ

- ಈ ದಿನ ಅದೃಷ್ಟದ ಬೆಂಬಲ ಪರಿಪೂರ್ಣವಾಗಿರಲಿದೆ
- ಮನಸ್ಸಿನಲ್ಲಿ ನಕಾರಾತ್ಮಕ ಯೋಜನೆಗಳು ಬರೋದು ಬೇಡ
- ಬೇರೆಯವರ ತಪ್ಪುಗಳನ್ನು ನೀವು ಎತ್ತಿ ತೋರಿಸಬೇಡಿ
- ಉದ್ಯೋಗದ ಸ್ಥಳದಲ್ಲಿ ಬಡ್ತಿಗೆ ಅವಕಾಶವಿದೆ
- ನಿಮ್ಮ ಪ್ರತಿಭೆಯನ್ನು ಗುರುತಿಸಿ ಸಮಾಜದಲ್ಲಿ ಗೌರವಿಸುತ್ತಾರೆ
- ವಿದ್ಯಾರ್ಥಿಗಳಿಗೆ ಬಹಳ ಉತ್ತಮವಾದ ಪ್ರಗತಿ ಇದೆ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಆತ್ಮೀಯರನ್ನು ಭೇಟಿ ಮಾಡಿ ನಿಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತೀರಿ
- ವ್ಯಾವಹಾರಿಕವಾಗಿ ತಪ್ಪು ಮಾಹಿತಿಯ ಬಗ್ಗೆ ಚರ್ಚಿಸುವಿರಿ
- ಪ್ರೀತಿ ಪಾತ್ರರು ನಿಮ್ಮಿಂದ ದೂರವಾಗಬಹುದು
- ಕುಟುಂಬದಲ್ಲಿ ಜಗಳಕ್ಕೆ ಅವಕಾಶ ಮಾಡಿಕೊಡಬೇಡಿ
- ಆಸ್ತಿಯ ವಿಚಾರದಲ್ಲಿ ನೀವು ಆಡುವ ಮಾತು,ನಿರ್ಧಾರದಿಂದ ತೊಂದರೆ ಮಾಡಲಿದೆ
- ಬೇರೆಯವರ ಮಾತಿಗೂ ಸ್ವಲ್ಪ ಬೆಲೆ ಇರಲಿ
- ಐಕ್ಯ ಮತ್ಯ ಮಂತ್ರವನ್ನು ಶ್ರವಣ ಮಾಡಿ
ತುಲಾ

- ಕೆಲಸದಲ್ಲಿ ನಿಮ್ಮ ಗಮನ ಹೆಚ್ಚಾಗಿರಲಿ
- ಸಹೋದರ ವರ್ಗದಿಂದ ಸಿಹಿಸುದ್ದಿ ಬರಬಹುದು
- ಮಕ್ಕಳು ತಮ್ಮ ಚಟುವಟಿಕೆಯಿಂದ ಸಂತೋಷ ಪಡುತ್ತಾರೆ
- ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ
- ಪ್ರೇಮಿಗಳಿಗೆ ಶುಭವಾದ ದಿನ
- ಪ್ರಯಾಣಕ್ಕೆ ಸಮಯ ಅನುಕೂಲಕರವಾಗಿದೆ
- ಪ್ರತ್ಯಂಗಿರಾದೇವಿ ಪ್ರಾರ್ಥನೆ ಮಾಡಿ
ವೃಶ್ಚಿಕ

- ವೈಯಕ್ತಿಕ ಕೆಲಸಗಳಿಗೆ ತುಂಬಾ ಅಡೆತಡೆಗಳು ಬರಬಹುದು
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ಜನರನ್ನು ನಿಮ್ಮತ್ತ ಆಕರ್ಷಿಸಲು ವಿಫಲರಾಗುತ್ತೀರಿ
- ಮಾನಸಿಕವಾಗಿ ತುಂಬಾ ಬಳಲಬಹುದು
- ಮಕ್ಕಳ ಬಗ್ಗೆ ಒಲವು ತೋರಿಸಿ ಅದರಿಂದ ಸಮಾಧಾನ ಸಿಗಬಹುದು
- ಬೇರೆಯವರ ಮಾತಿಗೆ ಸ್ವಲ್ಪ ಬೆಲೆ ಕೊಡಿ
- ಕುಲದೇವತಾರಾಧನೆ ಮಾಡಿ
ಧನುಸ್ಸು

- ಬೇರೆಯವರ ಮಾತುಗಳನ್ನು ಹೆಚ್ಚಾಗಿ ನಂಬಿ ನಿರ್ಧಾರ ಮಾಡಬೇಡಿ
- ದಿನಚರಿಯಲ್ಲಿ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ
- ಮಾತಿನಿಂದ ಬೇರೆಯವರಿಗೆ ನೋವುಂಟು ಮಾಡುಬಹುದು
- ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಕಾಡಬಹುದು
- ಹಳೆಯ ನೆನಪಿನಿಂದ ಆತ್ಮವಿಶ್ವಾಸ ಕಡಿಮೆಯಾಗಬಹುದು
- ಎಲ್ಲಾ ಇದ್ದರೂ ಅನುಭವಿಸುವ ಯೋಗವಿಲ್ಲ
- ಆಂಜನೇಯನನ್ನು ಪ್ರಾರ್ಥನೆ ಮಾಡಿ
ಮಕರ

- ಸಾಂಸಾರಿಕ ಜೀವನದಲ್ಲಿ ಕಲಹ ಬೇಡ
- ವ್ಯಾವಹಾರಿಕವಾಗಿ ಆದಾಯ ಹೆಚ್ಚಾಗಬಹುದು
- ಮಕ್ಕಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿರುತ್ತವೆ
- ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು
- ತೊಂದರೆಯಲ್ಲಿರುವವರಿಗೆ ಸಹಾಯ ಮಾಡುತ್ತೀರಿ
- ಮಾನಸಿಕವಾಗಿ ಸ್ವಲ್ಪ ಸಮಾಧಾನದ ದಿನ
- ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ಕುಂಭ

- ಸರ್ಕಾರಿ ಉದ್ಯೋಗಗಳಿಗೆ ತುಂಬಾ ಉತ್ತಮ ಸಮಯ
- ಜೀವನದ ಬಗ್ಗೆ ಧನಾತ್ಮಕವಾದ ಚಿಂತನೆ ಇರಲಿ
- ಮಕ್ಕಳ ಜೊತೆಗೂಡಿ ಕೆಲವು ಚರ್ಚೆಮಾಡಿ ನಿರ್ಧಾರ ಮಾಡುತ್ತೀರಿ
- ಮನೆ, ವ್ಯವಹಾರದ ಅಭಿವೃದ್ಧಿ ಬಗ್ಗೆ ಅವಕಾಶ ಸಿಗಬಹುದು
- ನಿಮ್ಮ ಕೆಲಸದ ವೈಖರಿ ಬೇರೆಯವರನ್ನು ಆಕರ್ಷಿಸಬಹುದು
- ಸಮಾಜದಲ್ಲಿ ಹೆಸರು ಮಾಡಲು ಅವಕಾಶವಿದೆ
- ಶಿರಡಿ ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ
ಮೀನಾ

- ದೂರ ಪ್ರಯಾಣದ ಸಂಭವವಿದೆ
- ಮಕ್ಕಳ ಚಟುವಟಿಕೆ ಅಥವಾ ಅವರ ವರ್ತನೆ ನಿಮಗೆ ಬೇಸರ ತರಬಹುದು
- ಮನೆಯಲ್ಲಿ ಅಶಾಂತಿಯ ವಾತಾವರಣ
- ನಕಾರಾತ್ಮಕವಾದ ಚಿಂತನೆಯಿಂದ ಮನಸ್ಸನ್ನು ಕೆಡಿಸಿಕೊಳ್ಳಬೇಡಿ
- ಮಹಾತ್ಮರ ಸಾಧಕರ ಭೇಟಿಯ ಅವಕಾಶ ನಿಮಗೆ ಸಮಾಧಾನ ನೀಡಬಹುದು
- ಗಟ್ಟಿ ಮನಸ್ಸಿನಿಂದ ಕೆಲವು ಸರಿಯಾದ ತೀರ್ಮಾನ ಮಾಡಿ
- ಮಹಾಗಣಪತಿಯನ್ನ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ