ಇಂದು ಸಾಲ ಮರುಪಾವತಿಗೆ ದಾರಿಯಿದೆ
ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಶುಕ್ರವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ

- ಹಳೆಯ ಸ್ನೇಹಿತರ ಭೇಟಿಗೆ ಉತ್ಸುಕರಾಗಬಹುದು
- ಇಂದು ಸಾಲ ಮರುಪಾವತಿಗೆ ದಾರಿಯಿದೆ
- ಹೊಸ ಮೂಲಗಳಿಂದ ಹಣ ಬರಬಹುದು
- ನೇರವಾದ ನುಡಿ ಒಳ್ಳೆಯದಲ್ಲ, ಯಾವುದೇ ರೀತಿಯ ಹಠ ಬೇಡ
- ಸಾಂಸಾರಿಕವಾಗಿ ಸಂತೋಷ ಕಾಣಬಹುದು
- ನಿಮ್ಮ ಗುರಿ ಸಾಧಿಸುವಲ್ಲಿ ಯಶಸ್ಸು ಕಾಣಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ
ವೃಷಭ

- ನಿಮ್ಮ ವಿರೋಧಿಗಳು, ಶತ್ರುಗಳು ನಿಮ್ಮ ವಿಷಯಕ್ಕೆ ಬರುವುದಿಲ್ಲ
- ನಿಮ್ಮ ಕೆಲಸದಲ್ಲಿ ಸ್ಥಿರತೆ ಕಾಣುತ್ತೀರಿ
- ಕೆಲಸಗಳು ನಿಧಾನವಾಗಿ ಬಹಳ ಪರಿಪೂರ್ಣವಾಗಿ ಆಗುತ್ತವೆ
- ಸಹೋದ್ಯೋಗಿಗಳಲ್ಲಿ ಅನುಮಾನ ಮೂಡಬಹುದು
- ನಿಮ್ಮ ಕಾರ್ಯವೈಖರಿ ಹಿರಿಯರಿಗೆ ಇಷ್ಟವಾಗಬಹುದು
- ಹಣಕ್ಕಾಗಿ ಬೇರೆ ಬೇರೆ ಚಿಂತನೆ ನಡೆಸಬಹುದು
- ಗಣಪತಿ ಪ್ರಾರ್ಥನೆ ಮಾಡಿ
ಮಿಥುನ

- ಸಾಂಸಾರಿಕವಾಗಿ ನಂಬಿಕೆಯನ್ನು ಹೆಚ್ಚಿಸಿಕೊಳ್ಳಬೇಕು
- ಹೊಸ ವ್ಯವಹಾರದ ಕಲ್ಪನೆಗಳು ಮನಸ್ಸಿಗೆ ಬರಬಹುದು
- ಕೆಲಸದಲ್ಲಿ ಬದಲಾವಣೆಯ ಸೂಚನೆಯಿದೆ
- ಷೇರು ಮಾರುಕಟ್ಟೆಯಲ್ಲಿ ಲಾಭಗಳಿಸಬಹುದು
- ಮಕ್ಕಳ ಬಗ್ಗೆ ಇದ್ದ ಚಿಂತೆ ಅಧಿಕವಾಗಬಹುದು
- ಹಣಕ್ಕಾಗಿ ಸ್ವಲ್ಪ ಮಾತುಕತೆ ನಡೆಯಬಹುದು
- ಈಶ್ವರನ ಆರಾಧನೆ ಮಾಡಿ
ಕಟಕ

- ಅಕ್ಕಪಕ್ಕದವರ ಜೊತೆಯಲ್ಲಿ ಜಗಳ ಮಾಡಿಕೊಳ್ಳಬೇಡಿ
- ಮಾನಸಿಕವಾಗಿ ಸಮಾಧಾನ ಇರುವುದಿಲ್ಲ
- ವಿದ್ಯಾರ್ಥಿಗಳಿಗೆ ಹಲವಾರು ಯೋಚನೆಗಳಿಂದ ಬೇಸರ ಸಾಧ್ಯತೆ
- ಕೆಲವು ಗೊಂದಲದಲ್ಲಿ ಸಿಲುಕಬಹುದು
- ಹೊಸ ಸ್ನೇಹಿತರ ಬಗ್ಗೆ ಉತ್ಸುಕರಾಗಿರುತ್ತೀರಿ
- ವ್ಯವಹಾರದ ಮುಂದಿನ ಗುರಿ ಈಡೇರಬಹುದು
- ದುರ್ಗಾಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಸಿಂಹ

- ನಿಮ್ಮ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಬಹುದು
- ನಾಯಕತ್ವಕ್ಕಾಗಿ ಹಂಬಲ ಪಡುತ್ತೀರಿ ಅದು ಈಡೇರಬಹುದು
- ಸಾಮಾಜಿಕವಾಗಿ ಹೆಸರು ಮಾಡುತ್ತೀರಿ
- ಬೇರೆಯವರಿಗೂ ಸಂತೋಷ ನೀಡುತ್ತೀರಿ
- ಬೇರೆಯವರ ಬಗ್ಗೆ ಸ್ವಲ್ಪ ಕಾಳಜಿ ಇರಲಿ
- ವೈಯಕ್ತಿಕವಾದ ಚಾಪು ಮೂಡಿಸುವಲ್ಲಿ ಜಯಗಳಿಸುತ್ತೀರಿ
- ನರಸಿಂಹನನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಇಂದು ಉತ್ಸಾಹದಿಂದ ಎಲ್ಲಾ ಕೆಲಸ ಮಾಡಿ
- ತಪ್ಪು ತಿಳುವಳಿಕೆಯಿಂದ ಹೊರಗಡೆ ಬನ್ನಿ
- ಬೇರೆ ಸ್ಥಳದಲ್ಲಿ ವ್ಯಾಪಾರ ಮಾಡುವವರಿಗೆ ಲಾಭವಿದೆ
- ಪ್ರಮುಖ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬಹುದು
- ಜನರಿಗೆ ಸಹಾಯ ಮಾಡಲು ಪ್ರಯತ್ನಿಸಿ
- ವೈಯಕ್ತಿಕ ವಿಚಾರಗಳಿಂದ ಹಿನ್ನಡೆಯಾಗಬಹುದು
- ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ತುಲಾ

- ಇಂದು ಪ್ರೇಮಿಗಳಿಗೆ ಶುಭವಾದ ದಿನ
- ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸಿ
- ವೃತ್ತಿ ಜೀವನ ಸಂತೃಪ್ತಿ ಕೊಡಬಹುದು
- ವಿರೋಧಿಗಳ ಎದುರು ನಿಮಗೆ ಗೌರವ ಸಿಗಬಹುದು
- ಒಂದೇ ಸಮಯಕ್ಕೆ ಮೂರು, ನಾಲ್ಕು ವಿಚಾರಗಳಲ್ಲಿ ಗೆಲುವು ಸಾಧಿಸಬಹುದು
- ವ್ಯವಹಾರದ ಚತುರತೆ ನಿಮ್ಮ ಕೈ ಹಿಡಿಯಬಹುದು
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ

- ಹಣದ ವಿಚಾರದಲ್ಲಿ ಸ್ವಲ್ಪ ಜಾಗರುಕರಾಗಿರಿ
- ವಿಚಾರ ಮಾಡದೇ ಹಣ ಹೂಡಿಕೆ ಮಾಡಬೇಡಿ
- ತಂದೆ ತಾಯಿಯರ ಬಗ್ಗೆ ಬೇಸರ ಪಡಬಹುದು
- ಇಂದು ಮಾನಸಿಕವಾಗಿ ತುಂಬಾ ನೋವು ಉಂಟಾಗಬಹುದು
- ವಿವಾಹ, ಉದ್ಯೋಗ ಇಲ್ಲದೆ ಹಿಂಸೆ ಪಡಬಹುದು
- ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದೆ ಪ್ರಯತ್ನಿಸಿ
- ವಿಷ್ಣು ಸಹಸ್ರನಾಮವನ್ನ ಶ್ರವಣ ಮಾಡಿ
ಧನುಸ್ಸು

- ನಿಮ್ಮ ಜೀವನ ಶೈಲಿಯಲ್ಲಿ ಹೊಸತನ ಬೇಕು ಪ್ರಯತ್ನಿಸಿ
- ಸರ್ಕಾರಿ ನೌಕರರಿಗೆ ಸ್ವಲ್ಪ ಸಮಸ್ಯೆ ಆಗಬಹುದು
- ಮಾರ್ಕೆಟಿಂಗ್ ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗಬಹುದು
- ವೈವಾಹಿಕ ಜೀವನ ಬೇಸರ ತರಿಸುತ್ತದೆ
- ವ್ಯಾಪಾರದ ದೃಷ್ಠಿಯಿಂದ ಪ್ರಯಾಣ ಮಾಡುವ ಸಾಧ್ಯತೆಯಿದೆ
- ಹೊಸ ಕೆಲಸವನ್ನು ಆರಂಭಿಸುವ ಮುನ್ನ ಯೋಚಿಸಿ
- ಲಲಿತಾ ಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ
ಮಕರ

- ನಿಮ್ಮ ಕಠಿಣ ಪರಿಶ್ರಮಕ್ಕೆ ಫಲವಿದೆ ಆದರೆ ನಿಮ್ಮ ಪ್ರಯತ್ನ ಪ್ರಾಮಾಣಿಕವಾಗಿರಲಿ
- ಸ್ನೇಹಿತರ ಮೂಲಕ ಲಾಭ ಪಡೆಯಬಹುದು
- ಅಕ್ಕತಂಗಿ, ಅಣ್ಣತಮ್ಮ ಜಗಳ ತಾರಕಕ್ಕೇರಬಹುದು
- ತಾಯಿಯ ಆರೋಗ್ಯವನ್ನು ಗಮನಿಸಿಕೊಳ್ಳಿ
- ಕೆಲಸದಲ್ಲಿ ನಿಷ್ಠೆ ಇರಲಿ ತೋರಿಕೆ ಕೆಲಸ ಬೇಡ
- ಪ್ರಯಾಣದಿಂದ ಶುಭವಿಲ್ಲ, ಅನಗತ್ಯ ಪ್ರಯಾಣ ಮುಂದೂಡಿ
- ಕುಲದೇವತಾ ಆರಾಧನೆ ಮಾಡಿ
ಕುಂಭ

- ಇಂದು ಹೊಸ ವ್ಯವಹಾರಗಳನ್ನು ಆರಂಭಿಸಬಹುದು
- ಹಿರಿಯರು ನಿಮ್ಮನ್ನು ಮೆಚ್ಚಬಹುದು
- ಎರಡನೇ ಮದುವೆ ಆದವರಿಗೆ ಸ್ವಲ್ಪ ಸಮಸ್ಯೆ ಇದೆ
- ಉದ್ಯೋಗ, ವೃತ್ತಿ ಬದಲಾವಣೆಯಿಂದ ನಷ್ಟ ಸಂಭವ
- ಬೇರೆಯವರ ಕೆಲಸದಿಂದ ಲಾಭ ಗಳಿಸುತ್ತೀರಿ
- ಇಂದು ಅನಾವಶ್ಯಕ ವಾದ, ವಿವಾದ ಬೇಡ
- ಶಿವಾರಾಧನೆ ಮಾಡಿ
ಮೀನಾ

- ಪ್ರೇಮಿಗಳು ತಾವು ಮಾಡಿದ ತಪ್ಪಿಗೆ ಶಿಕ್ಷೆ ಆಗಬಹುದು
- ಪ್ರಜ್ಞಾವಂತರಿಂದ ಮಾರ್ಗದರ್ಶನ ಸಿಗಬಹುದು
- ವಾಗ್ವಾದಗಳನ್ನು ನಡೆಸಬೇಡಿ ತೊಂದರೆ ಇದೆ
- ನಿಮ್ಮ ದೌರ್ಬಲ್ಯಗಳನ್ನು ಮುಚ್ಚಿಡಬೇಡಿ
- ನಿಮ್ಮ ಖರ್ಚು ನಿಮ್ಮ ನಿಯಂತ್ರಣದಲ್ಲಿರಲಿ
- ನಿಮ್ಮ ಮನಸ್ಸನ್ನು ಹತೋಟಿಯಲ್ಲಿಡಲು ಪ್ರಯತ್ನಿಸಿ
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ