ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ
ಏನ್ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಮಾಸ, ಕೃಷ್ಣಪಕ್ಷ, ತ್ರಯೋದಶಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ :

- ಹೊಸ ಯೋಜನೆಗಳಿಗೆ ಶುಭ ದಿನ
- ಅನುಭವಿ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆಯಬಹುದು
- ಹಿರಿಯರ ಅಥವಾ ಸಹೋದರರ ಬಗ್ಗೆ ಚಿಂತೆ ನಡೆಸಬಹುದು
- ಅನುಪಯುಕ್ತ ಚಟುವಟಿಕೆಗಳಲ್ಲಿ ಸಮಯ ವ್ಯರ್ಥ ಮಾಡಬಹುದು
- ಪ್ರಮುಖ ಅವಕಾಶಗಳು ನಿಮಗಿವೆ ಸದುಪಯೋಗ ಮಾಡಿಕೊಳ್ಳಿ
- ಇಂದು ಆದಷ್ಟು ಜಾಗ್ರತೆವಹಿಸಿ ಹೆಜ್ಜೆಯನ್ನ ಇಡಬೇಕು
- ದೇವಿಯನ್ನು ಆರಾಧನೆ ಮಾಡಿ
ವೃಷಭ :

- ನಿಮ್ಮ ಕೆಲಸದಲ್ಲಿ ಗಟ್ಟಿಯಾದ ನಿರ್ಧಾರ ಯಶಸ್ಸಿಗೆ ಕಾರಣವಾಗಬಹುದು
- ಕುಟುಂಬದವರಿಂದ ಉತ್ತಮ ಸ್ಪಂದನೆ ಸಿಗಬಹುದು
- ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ
- ಸಂತೋಷದಿಂದ ಇರಲು ಈ ದಿನ ಅವಕಾಶವಿದೆ
- ಸ್ನೇಹಿತರ ಜೊತೆ ದೀರ್ಘವಾದ ಚರ್ಚೆ ಮಾಡಬಹುದು
- ಹಣ ಕಾಸಿನ ವಿಚಾರದಲ್ಲಿ ಸಮಾಧಾನ ವಿರುತ್ತದೆ
- ಕುಲದೇವತಾರಾಧನೆ ಮಾಡಿ
ಮಿಥುನ :

- ಪ್ರಯಾಣಕ್ಕೆ ಅನುಕೂಲಕರ ಇಲ್ಲದ ದಿನ ಅನಗತ್ಯ ಪ್ರಯಾಣ ಬೇಡ
- ಸಹೋದ್ಯೋಗಿಗಳಿಂದ ಭಿನ್ನಾಭಿಪ್ರಾಯ ಸಾಧ್ಯತೆ
- ನಿಮ್ಮ ಆರೋಗ್ಯದ ಬಗ್ಗೆ ಗಮನಿಸಿಕೊಳ್ಳಿ
- ಯಾವುದೇ ಕಾರಣಕ್ಕೂ ಜಗಳ ಬೇಡ
- ಸ್ನೇಹಿತರು ಅಸಹಕಾರವನ್ನು ತೋರಬಹುದು
- ಇದ್ದಕ್ಕಿದ್ದ ಹಾಗೆ ಅಪಶಕುನಗಳು ಕಾಡಬಹುದು
- ಆಂಜನೇಯನನ್ನು ಪ್ರಾರ್ಥನೆ ಮಾಡಿ
ಕಟಕ :

- ಮನಸ್ಸನ್ನು ನಿಮ್ಮ ಹತೋಟಿಯಲ್ಲಿಟ್ಟುಕೊಳ್ಳಿ
- ಅನಿರೀಕ್ಷಿತವಾದ ವಿಚಾರದಲ್ಲಿ ಗೊಂದಲವಾಗಬಹುದು
- ಮನೆಯಲ್ಲಿ ಒಗ್ಗಟ್ಟಿನ ಹಾದಿ ಹಿಡಿಯಬೇಕು
- ತಂದೆ ಮಕ್ಕಳ ಮಧ್ಯೆದಲ್ಲಿ ವಾಗ್ಯುದ್ಧ, ಜಗಳ ನಡೆಯಬಹುದು
- ಕೋಪವನ್ನು ದೂರ ಮಾಡಿಕೊಳ್ಳಿ ಅನಾಹುತಕ್ಕೆ ಅವಕಾಶವಿದೆ
- ಹಿರಿಯರ ಮಾತಿಗೆ ಬೆಲೆ ನೀಡುವುದು ಒಳ್ಳೆಯದು
- ದುರ್ಗಾದೇವಿ ಆರಾಧನೆ ಮಾಡಿ
ಸಿಂಹ :

- ಬಾಕಿ ಬರುವ ಹಣಕ್ಕಾಗಿ ಹೋರಾಟ ಮಾಡುವುದರಿಂದ ಜಯ ಸಿಗಬಹುದು
- ಪರಿಚಿತರೇ ಮೋಸ ಮಾಡಲು ಕಾಯುತ್ತಿರುತ್ತಾರೆ ಎಚ್ಚರ
- ಹಿರಿಯರ ಮಾರ್ಗದರ್ಶನ ಸಿಗಲಿದೆ
- ಅಂದುಕೊಂಡ ಕೆಲಸಕ್ಕೆ ಅಡ್ಡಿಯಾಗಬಹುದು
- ವಿದ್ಯಾರ್ಥಿಗಳಿಗೆ ತುಂಬಾ ಶ್ರಮವಿದೆ, ಅಪಯಶಸ್ಸು ಕಾಣಬಹುದು
- ತಂದೆಯವರಿಗೆ ಉಡುಗೊರೆ ಕೊಡಬಹುದು
- ಗಣಪತಿ ಪ್ರಾರ್ಥನೆ ಮಾಡಿ
ಕನ್ಯಾ :

- ಯಾವುದೇ ಕಾರಣಕ್ಕೂ ಬೇರೆಯವರ ಸಹಾಯ ಕೇಳಬೇಡಿ
- ಬಹಳ ವಿರಾಮವಾಗಿ ಸ್ವೇಚ್ಛೇ ಇಂದ ಇರುತ್ತೀರಿ
- ಸರ್ಕಾರಿ ಕೆಲಸದಲ್ಲಿ ಮುನ್ನಡೆಯಾಗಬಹುದು
- ವ್ಯಾಪಾರದ ದೃಷ್ಟಿಯಿಂದ ಪ್ರಯಾಣ ಸಾಧ್ಯತೆ
- ಆಸಕ್ತಿಯಿರುವ ಕೆಲಸದಲ್ಲಿ ತೊಂದರೆಯಾಗಬಹುದು
- ಮಕ್ಕಳಿಂದ ತುಂಬಾ ಕಿರಿಕಿರಿ ಸಾಧ್ಯತೆ
- ಸರಸ್ವತಿ ಪ್ರಾರ್ಥನೆ ಮಾಡಿ
ತುಲಾ :

- ಮಾನಸಿಕ ಧೈರ್ಯ ಹೆಚ್ಚಾಗಬಹುದು
- ನಿಮ್ಮ ನಿರ್ಧಾರಗಳನ್ನು ಜಾರಿಗೊಳಿಸಿ ಯಶಸ್ಸಿದೆ
- ಕಟ್ಟಡದ ಕೆಲಸ ನಿಮಗೆ ಸಮಾಧಾನ ನೀಡುತ್ತದೆ
- ವ್ಯವಹಾರದಲ್ಲಿ ಅನುಕೂಲ ಮತ್ತು ಬದಲಾವಣೆ ಇದೆ
- ದೊಡ್ಡವರ ಜೊತೆಯಲ್ಲಿ ಆತ್ಮೀಯತೆ ಹೊಂದಾಣಿಕೆ ಕಾಣಬಹುದು
- ಕಾನೂನು ವಿಚಾರದಲ್ಲಿ ಜಯ ಸಾಧನೆ ಜೊತೆಗೆ ಕೀರ್ತಿಯು ನಿಮ್ಮದಾಗಬಹುದು
- ಇಷ್ಟದೇವತಾರಾಧನೆ ಮಾಡಿ
ವೃಶ್ಚಿಕ :

- ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ
- ನಿಮ್ಮನ್ನ ಯಾರೂ ಅರ್ಥಮಾಡಿಕೊಳ್ಳದೇ ಇರಬಹುದು
- ಮನೆಯಲ್ಲಿ ಅಸಂತೋಷ, ಅಸಹಕಾರ ಉಂಟಾಗಬಹುದು
- ಬೇಜವಾಬ್ದಾರಿಯ ಬಗ್ಗೆ ತುಂಬಾ ಬೇಸರ, ಆಲಸ್ಯ
- ಸಹೋದರ ವರ್ಗದಿಂದ ಮಾರ್ಗದರ್ಶನ ಸಿಗಬಹುದು
- ಮನೆಯಲ್ಲಿ ಅಸಂತೋಷದಿಂದ ಬೇಸರವಾಗಬಹುದು
- ವಿಷ್ಣು ಸಹಸ್ರನಾಮವನ್ನ ಶ್ರವಣ ಮಾಡಿ
ಧನುಸ್ಸು :

- ದೈಹಿಕವಾಗಿ ಕೆಲವು ಸಮಸ್ಯೆ ಕಾಡಬಹುದು
- ಅಶಿಸ್ತಿನಿಂದ ಅವಕಾಶಗಳು ತಪ್ಪಿಹೋಗಬಹುದು
- ಮನೆಯಲ್ಲಿ ವಿನಾಕಾರಣ ಜಗಳವಾಗಬಹುದು
- ಪಿತ್ರಾರ್ಜಿತಕ್ಕಾಗಿ ಜಗಳ ಅದರಿಂದ ನಿಮಗೆ ಸೋಲಾಗಬಹುದು
- ಹಣಕಾಸಿನ ವಿಚಾರದಲ್ಲಿ ಅಡೆತಡೆಗಳು ಉಂಟಾಗಬಹುದು
- ಮಕ್ಕಳಿಂದ ಸಮಾಧಾನ ಇರುತ್ತದೆ
- ನವಗ್ರಹಾರಾಧನೆ ಮಾಡಿ ಸಾಧ್ಯವಾದ್ರೆ ನವಗ್ರಹ ಹೋಮ ಮಾಡಿಸಿ
ಮಕರ :

- ಮಕ್ಕಳ ವರ್ತನೆಯಿಂದ ಸಮಾಧಾನ ಸಿಗಬಹುದು
- ಹಣವನ್ನು ಸಂಗ್ರಹಿಸುವ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಬಹುದು
- ಹಿರಿಯರಿಗೆ ಆಘಾತ, ತೊಂದರೆಯಾಗಬಹುದು ಗಮನಿಸಿ
- ತಾಯಿಯವರಿಂದ ಸಹಾಯವಾಗಬಹುದು
- ವೈವಾಹಿಕ ವಿಚಾರದಲ್ಲಿ ಗೊಂದಲ, ಜಗಳವಾಗಬಹುದು
- ಸಮಾಜದಲ್ಲಿ ಗೌರವವಿದ್ದರೂ ಭಯದ ವಾತಾವರಣ
- ಶ್ರೀಸೂಕ್ತ ಮಂತ್ರವನ್ನ ಪಠಣೆ ಮಾಡಿ
ಕುಂಭ :

- ವ್ಯಾವಹಾರಿಕವಾಗಿ ತುಂಬಾ ಅನುಕೂಲವಾಗುವ ಸಮಯ
- ಸ್ವಯಂಕೃತ ಅಪರಾಧಗಳನ್ನು ತಡೆಯಿರಿ
- ಹೆಂಗಸರನ್ನು, ಮಾತೆಯರನ್ನು ಗೌರವಿಸಿ ಶುಭವಿದೆ
- ನಿಮ್ಮ ಅಕ್ಕಪಕ್ಕದವರಿಂದ ಅನಾನುಕೂಲವಾಗಬಹುದು
- ವಿನಾಕಾರಣ ಹಣದ ಖರ್ಚು ಬೇಡ ತೊಂದರೆಯಾಗಬಹುದು
- ಅಕಾಲ ಭೋಜನ, ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು
- ಲಲಿತಾ ಪರಮೇಶ್ವರಿಯನ್ನು ಆರಾಧನೆ ಮಾಡಿ
ಮೀನ :

- ಸಾಂಸಾರಿಕ ಜೀವನದಲ್ಲಿ ಯಶಸ್ಸು ಕಾಣುತ್ತೀರಿ
- ವಿದ್ಯಾರ್ಥಿಗಳಿಗೆ ಸಂಕಷ್ಟದ ದಿನ
- ಜಮೀನು, ಆಸ್ತಿ ಖರೀದಿಯಲ್ಲಿ ಮೋಸವಾಗುವ ಸಾಧ್ಯತೆಯಿದೆ ಎಚ್ಚರ
- ರಾಜಕಾರಣಿಗಳ ಭೇಟಿಯಿಂದ ನಿರಾಸೆಯಾಗಬಹುದು
- ಆರ್ಥಿಕವಾಗಿ ತೊಂದರೆಯಿಲ್ಲ ಸಮಾಧಾನ ವಿರುತ್ತದೆ
- ಅನಿರೀಕ್ಷಿತ ಕಾಲಿಗೆ ಗಾಯವಾಗಬಹುದು ಗಮನವಿರಲಿ
- ಕುಲದೇವತಾರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ