ಮನೆಯಲ್ಲಿ ವಿರಸ ಮತ್ತು ಭಿನ್ನಾಭಿಪ್ರಾಯ ಇರಲಿದೆ
ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ ಉಂಟಾಗಲಿದೆ
ನಿಮ್ಮ ನಿರ್ಧಾರವೇ ನಿಮಗೆ ಶ್ರೀರಕ್ಷೆಯಾಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ

- ಇಂದು ದ್ರವ್ಯ ಲಾಭ ಆಗಲಿದೆ
- ಇಂದು ಉನ್ನತವಾದ ಸ್ಥಾನ ಮಾನ ಸಿಗಲಿದೆ
- ಜೀವನಕ್ಕೆ ಉತ್ತಮ ತಿರುವು ಬರುವ ದಿನ
- ಇಂದು ಪ್ರೇಮಿಗಳಿಗೆ ಶುಭದಿನ
- ಹಿರಿಯರಿಂದ ಪ್ರಶಂಸೆಗೆ ಒಳಪಡುತ್ತೀರಿ
- ನಿಮ್ಮ ನಿರ್ಧಾರವೇ ನಿಮಗೆ ಶ್ರೀರಕ್ಷೆಯಾಗಬಹುದು
- ಮಹಾ ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ಉದ್ಯೋಗದಲ್ಲಿ ಅಸಮಾಧಾನ ಇರಲಿದೆ
- ಆರ್ಥಿಕ ಪರಿಸ್ಥಿತಿ ಕಷ್ಟ ಸಾಧ್ಯ
- ಮನಸ್ಸಿನ ಮೇಲೆ ದುಷ್ಟರಿಣಾಮ ಬೀರಲಿದೆ
- ಮಕ್ಕಳಿಂದ ಸಮಾಧಾನ ಮಾತು
- ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ ಉಂಟಾಗಲಿದೆ
- ವಿದ್ಯಾ ಬುದ್ಧಿ ನಿಮ್ಮ ಕೈ ಹಿಡಿಯುತ್ತದೆ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ಸ್ನೇಹಿತರನ್ನು ನಂಬಿ ನಿಮ್ಮ ಕೆಲಸದಲ್ಲಿ ತೊಂದರೆ ಮಾಡಿಕೊಳ್ಳುತ್ತೀರಿ
- ಮಾನಸಿಕ ನೆಮ್ಮದಿಗಾಗಿ ಪ್ರಯಾಣ ಮಾಡುತ್ತೀರಿ
- ಶತ್ರುಭಾಧೆ ನಿಮ್ಮನ್ನು ಕಾಡಲಿದೆ
- ಹಣ ಖರ್ಚು ಆಗುವ ಸಾಧ್ಯತೆ ಇದೆ
- ಒಂಟಿತನವನ್ನು ಬಯಸುತ್ತೀರಿ
- ಇಂದು ತಪ್ಪಿನ ಅರಿವಾಗುವುದಿಲ್ಲ
- ದುರ್ಗಾರಾಧನೆಯನ್ನು ಮಾಡಿ
ಕಟಕ

- ವೃತ್ತಿಯಲ್ಲಿ ಯಶಸ್ಸು ದೊರೆಯಲಿದೆ
- ನಿಮ್ಮ ಮಾತಿನಲ್ಲಿ ಹಿಡಿತವಿರಲಿ
- ಬಂಧುಗಳಲ್ಲಿ ದೊಡ್ಡಮಟ್ಟದ ಜಗಳ ಆಗಬಹುದು
- ಕೋರ್ಟ್ ಕೇಸುಗಳಲ್ಲಿ ವಿಘ್ನ ಆಗಬಹುದು
- ಅಪರಿಚಿತರ ಅವಲಂಬನೆ ಮಾಡಬೇಡಿ
- ಮನೆಯಲ್ಲಿ ವಿರಸ ಮತ್ತು ಭಿನ್ನಾಭಿಪ್ರಾಯ ಇರಲಿದೆ
- ಶಿವಾರಾಧನೆ ಮಾಡಿ
ಸಿಂಹ

- ವ್ಯಾವಹಾರಿಕವಾಗಿ ಅನುಕೂಲ ಆಗಲಿದೆ
- ಬೇರೆಯವರ ಕೆಟ್ಟ ದೃಷ್ಟಿಯಾಗದಂತೆ ಗಮನಿಸಿ
- ಮಂಗಳ ಕಾರ್ಯಗಳಿಗೆ ಹೋಗಲು ಆಸಕ್ತಿ ಇರುವುದಿಲ್ಲ
- ಕ್ರೀಡೆಯಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ
- ಪ್ರಯಾಣದ ಬಗ್ಗೆ ಆಸಕ್ತಿ ಇರುವುದಿಲ್ಲ
- ಮನಸ್ಸನ್ನು ಕೇಂದ್ರೀಕರಿಸಿ ನಿರ್ಧಾರ ಮಾಡಿ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಧರ್ಮ ಕಾರ್ಮಾಸಕ್ತಿಯನ್ನು ಸ್ವಲ್ಪ ಬೆಳೆಸಿಕೊಳ್ಳಿ ಒಳ್ಳೆಯದಾಗಲಿದೆ
- ಪ್ರತಿಭೆಗೆ ಪರಿಶ್ರಮಕ್ಕೆ ತಕ್ಕ ಪುರಸ್ಕಾರ ಫಲ ಸಿಗುವುದಿಲ್ಲ
- ಶೀತ ಸಂಬಂಧಿಯಾದ ಸಮಸ್ಯೆ ಕಾಣಲಿದೆ
- ವೈಯಕ್ತಿಕ ವಿಚಾರಗಳ ಬಗ್ಗೆ ಗಮನವಿರಲಿ
- ಜವಾಬ್ದಾರಿಯ ಕೆಲಸ ತುಂಬಾ ಇದೆ ಆದರೆ ಯಾವುದು ಆಗುತ್ತಿಲ್ಲ
- ಮನೆಯಲ್ಲಿ ಹೊಂದಾಣಿಕೆ ಇರಲಿ
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ತುಲಾ

- ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಸಿಗಲಿದೆ
- ನಿಮ್ಮ ಆತುರದಿಂದ ಕೆಲವು ಕೆಲಸಗಳು ಕೆಡಲಿದೆ
- ಆರೋಗ್ಯದಲ್ಲಿ ಚೇತರಿಕೆ ಆಗಲಿದೆ
- ಇಂದು ಅಧಿಕ ಖರ್ಚು ಆಗಲಿದೆ
- ಬೇರೆಯವರಿಗೆ ಸಹಾಯ ಮಾಡುತ್ತೀರಿ
- ಸಮಾಜದಲ್ಲಿ ಮೆಚ್ಚುಗೆಯನ್ನು ಪಡೆಯುತ್ತೀರಿ
- ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ
ವೃಶ್ಚಿಕ

- ಯೋಚಿಸದೆ ಮಾಡಿದ ಕೆಲಸಗಳಿಂದ ಸಮಸ್ಯೆಯಾಗಬಹುದು
- ಅವಕಾಶಗಳು ಕೈ ತಪ್ಪಿ ಹೋಗಲಿದೆ
- ಮಕ್ಕಳ ಜೊತೆ ವಿಶ್ವಾಸವಿರಲಿ ವ್ಯವಹಾರ ಬೇಡ
- ನಿಮ್ಮ ಯೋಚಿತವಾದ ಪ್ರವಾಸಕ್ಕೆ ಅಡ್ಡಿಯಾಗಬಹುದು
- ಮುಂದಿನ ಯೋಚನೆ ಇದ್ದರೆ ಇಂದಿನ ಸುಖವೂ ಹಾಳಾಗಬಹುದು
- ತಾಳ್ಮೆಯಿಂದಿರಿ ತನ್ನಿಂದ ತಾನೇ ಎಲ್ಲವೂ ಸರಿಯಾಗುತ್ತದೆ
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಅತಿಯಾದ ಆತ್ಮವಿಶ್ವಾಸದಿಂದ ನಷ್ಟದ ಸಾಧ್ಯತೆ
- ವಿರೋಧಿಗಳಿಂದ ಕುತಂತ್ರ ಆಗಬಹುದು
- ಆತ್ಮೀಯರ ಭೇಟಿ ಮಾಡುತ್ತೀರಿ ಆದರೆ ಸಮಾಧಾನವಿಲ್ಲ
- ನೀವಂದು ಕೊಂಡಂತಹ ಕೆಲಸ ಆಗದೆ ಬೇಸರ ಆಗಲಿದೆ
- ವಿನಾಕಾರಣ ವಾದವನ್ನು ಮಾಡಿ ನಿಷ್ಠೂರವಾಗುತ್ತೀರಿ
- ಮಾನಸಿಕ ಸ್ಥಿತಿ ಬದಲಾಯಿಸಿಕೊಳ್ಳಿ ಒಳ್ಳೆಯದಾಗಲಿದೆ
- ನವಗ್ರಹರ ಆರಾಧನೆಯನ್ನು ಮಾಡಿ
ಮಕರ

- ಅತಿಯಾದ ನಂಬಿಕೆ ಆತ್ಮವಿಶ್ವಾಸದಿಂದ ನಷ್ಟವನ್ನು ಅನುಭವಿಸುತ್ತೀರಿ
- ವಿರೋಧಿಗಳಿಂದ ಯೋಜನೆ ಮಾಡಿದ್ರೆ ತೊಂದರೆ ಆಗಲಿದೆ
- ನಂಬಿಕಸ್ಥರು ದ್ರೋಹವನ್ನು ಮಾಡುತ್ತಾರೆ
- ಮಾನಸಿಕವಾದ ವ್ಯಥೆ ಉಂಟಾಗಲಿದೆ
- ಹಲವರ ನಿಂದನೆಗೆ ಒಳಗಾಗುತ್ತೀರಿ
- ವ್ಯವಹಾರದಲ್ಲಿ ಸಾಧಾರಣ ಪ್ರಗತಿ ಕಾಣುತ್ತೀರಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕುಂಭ

- ಸಾಲ ಮಾಡುವ ಪರಿಸ್ಥಿತಿ ಎದುರಾಗಬಹುದು
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ
- ಅನಾವಶ್ಯಕ ಖರ್ಚು ಆಗಲಿದೆ
- ಅರಿವಿಲ್ಲದೆ ತೆಗೆದುಕೊಂಡ ನಿರ್ಧಾರದಿಂದ ಸಮಸ್ಯೆಯಾಗಲಿದೆ
- ಮಕ್ಕಳ ಮಾತಿನಿಂದ ಸಮಾಧಾನ ಆದರೂ ಸ್ವಾಭಿಮಾನ
- ಸದ್ಗುರುಗಳ ಆಶೀರ್ವಾದ ಪಡೆದುಕೊಳ್ಳಿ
ಮೀನ

- ಯತ್ನ ಕಾರ್ಯದಲ್ಲಿ ಜಯ ಸಿಗಲಿದೆ
- ಬೇರೆಯವರ ಮನಸ್ಸನ್ನು ಗೆಲ್ಲುತ್ತೀರಿ
- ದೂರದ ಪ್ರಯಾಣಕ್ಕೆ ಮನಸ್ಸು ಮಾಡುತ್ತೀರಿ ಆದರೆ ಆಗುವುದಿಲ್ಲ
- ಸ್ತ್ರೀಯರಿಗೆ ಲಾಭದ ಸೂಚನೆ
- ನಿವೃತ್ತ ನೌಕರರಿಗೆ ಸವಾಲುಗಳು ಎದುರಾಗಲಿದೆ
- ತುಂಬಾ ನಂಬಿಕೆ ಇಟ್ಟಿದ್ದ ವಿಷಯದಿಂದ ನಿರಾಸೆಯಾಗಬಹುದು
- ಲಲಿತ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ