ಬೆಲೆ ಬಾಳುವ ವಸ್ತುವನ್ನು ಖರೀದಿಸುವುದರಿಂದ ಬೇಸರ ಅಗಲಿದೆ
ಬಹಳ ದಿನಗಳಿಂದ ನಿಂತು ಹೋಗಿದ್ದ ಕೆಲಸಗಳು ಪುನರಾರಂಭ ಆಗಲಿದೆ
ಆಹಾರ ಪದಾರ್ಥಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಶುಕ್ರವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ

- ಇಂದು ಎಲ್ಲಾ ಕೆಲಸದಲ್ಲೂ ಉತ್ಸಾಹ ಇರಲಿದೆ
- ಆಹಾರ ಪದಾರ್ಥಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ
- ಸಾಂಸಾರಿಕವಾಗಿ ವಿರಸ ಉಂಟಾಗಬಹುದು
- ಕೆಟ್ಟ ಅಭ್ಯಾಸಗಳಿದ್ದರೆ ಅಗತ್ಯವಾಗಿ ದೂರ ಮಾಡಿಕೊಳ್ಳಿ
- ಬಹಳ ದಿನಗಳಿಂದ ನಿಂತು ಹೋಗಿದ್ದ ಕೆಲಸಗಳು ಪುನರಾರಂಭ ಆಗಲಿದೆ
- ಮಕ್ಕಳಿಂದ ಎಲ್ಲಾ ರೀತಿಯಲ್ಲೂ ಅನುಕೂಲವಿದೆ
- ಕುಲದೇವತಾ ಆರಾಧನೆ ಮಾಡಿ
ವೃಷಭ

- ವ್ಯಾವಹಾರಿಕವಾಗಿ ತುಂಬಾ ಸಕ್ರಿಯರಾಗಿರುತ್ತೀರಿ
- ಜೀವನದ ಶೈಲಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳಿ
- ಹೊಸ ಹೊಸ ಕೆಲಸಗಳನ್ನು ಆರಂಭಿಸಲು ಅವಕಾಶವಿದೆ
- ನಿಮ್ಮ ವಿರೋಧಿಗಳನ್ನು ಗೆಲ್ಲುತ್ತೀರಿ
- ಇಲ್ಲ ಸಲ್ಲದ ವಿಚಾರಗಳಿಗೆ ಕಿವಿ ಕೊಡಬೇಡಿ
- ಮಾನಸಿಕವಾಗಿ ಗಟ್ಟಿತನವನ್ನು ಉಳಿಸಿಕೊಳ್ಳಿ
- ಮಹಾಲಕ್ಷ್ಮಿಯನ್ನು ಆರಾಧನೆ ಮಾಡಿ
ಮಿಥುನ

- ಬೆಲೆ ಬಾಳುವ ವಸ್ತುವನ್ನು ಖರೀದಿಸುವುದರಿಂದ ಬೇಸರ ಅಗಲಿದೆ
- ವಿರೋಧಿಗಳು ನಿಮ್ಮನ್ನು ಬೆಂಬಲಿಸುತ್ತಾರೆ
- ಸಾಂಸಾರಿಕ ವಿಚಾರದಲ್ಲಿ ಅಡಚಣೆ ಆಗಲಿದೆ
- ಕೆಲವರು ಉದ್ದೇಶತವಾಗಿ ನಿಮ್ಮನ್ನು ಹಳಿಯಲು ಪ್ರಯತ್ನಿಸುತ್ತಾರೆ
- ಮನೆಯಲ್ಲಿ ಕೆಲವು ಉಪಕರಣಗಳ ತೊಂದರೆ ಆಗಬಹುದು
- ಮಕ್ಕಳ ಉತ್ತೇಜನ, ಸ್ಫೂರ್ತಿ ನಿಮಗೆ ಖುಷಿ ಕೊಡಲಿದೆ
- ಪಾರ್ವತಿ ದೇವಿಯನ್ನು ಸ್ಮರಣೆ ಮಾಡಿ
ಕಟಕ

- ಮಕ್ಕಳ ಬಗ್ಗೆ ಉತ್ತಮವಾದ ಅಭಿಪ್ರಾಯ ಇರಲಿದೆ
- ಕುಟುಂಬದ ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ
- ಮಾನಸಿಕವಾಗಿ ಸದೃಢರಾಗುವಿರಿ
- ಬಂಧುಗಳಲ್ಲಿ ಕಲಹ ಉಂಟಾಗುವುದರಿಂದ ಬೇಸರ ಆಗಲಿದೆ
- ಜನರು ನಿಮ್ಮ ವಿಚಾರದ ಬಗ್ಗೆ ಪ್ರಭಾವಿತರಾಗುತ್ತಾರೆ
- ರಾಜಕಾರಣಿಗಳಿಗೆ ಶುಭವಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಸಿಂಹ

- ಹಿರಿಯ ಅಧಿಕಾರಿಗಳಿಂದ ಸಹಾಯ ಸಿಗಲಿದೆ
- ಕೆಲಸದಲ್ಲಿನ ತೊಡುಕುಗಳು ನಿವಾರಣೆ ಆಗಲಿದೆ
- ವ್ಯಾಪಾರದ ದೃಷ್ಟಿಯಿಂದ ಲಾಭವಿದೆ ಪ್ರಯಾಣ ಮಾಡುತ್ತೀರಿ
- ಹಣ ಗಳಿಸಲು ಉಪಾಯ ಹುಡುಕುತ್ತೀರಿ
- ಹೊಸ ಉದ್ಯೋಗಕ್ಕೆ ಅವಕಾಶವಿದೆ
- ಹಿರಿಯರ ಆದೇಶವನ್ನು ಪಾಲಿಸಿ ಒಳ್ಳೆಯದಾಗಲಿದೆ
- ಈಶ್ವರನ ಆರಾಧನೆ ಮಾಡಿ
ಕನ್ಯಾ

- ಮನೆಯಲ್ಲಿ ಜವಾಬ್ದಾರಿಯನ್ನು ತೋರಿಸಬೇಕು
- ಹೊಸ ವಿಚಾರ ಕಿವಿಯ ಮೇಲೆ ಬಿದ್ದು ಪ್ರಭಾವಿತರಾಗುತ್ತೀರಿ
- ಕಾನೂನಿನ ವಿಚಾರದಲ್ಲಿ ಯಶಸ್ಸಿದೆ
- ನಿಮ್ಮ ಮನಸ್ಸು ಅತೃಪ್ತವಾಗಿಯೇ ಇರುತ್ತದೆ
- ಪ್ರೇಮಿಗಳಲ್ಲಿ ಪರಸ್ಪರವಾದ ಅಪನಂಬಿಕೆ
- ತಂದೆ ಅಥವಾ ತಾಯಿಗೆ ಆರೋಗ್ಯದಲ್ಲಿ ತೊಂದರೆ ಆಗಬಹುದು ಎಚ್ಚರಿಕೆವಹಿಸಿ
- ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ
ತುಲಾ

- ಅದೃಷ್ಟ ಲಕ್ಷ್ಮಿ ನಿಮ್ಮ ಮನೆ ಬಾಗಿಲಿಗೆ ಬರುವುದಿದೆ
- ಸುಳ್ಳು ಆರೋಪ ಮಾಡುವವರನ್ನು ದೂರವಿಡಿ
- ಹಲವಾರು ಜನ ನಿಮ್ಮನ್ನು ಹಿಂಬಾಲಿಸುತ್ತಾರೆ
- ಎಲ್ಲ ವಿಚಾರದಲ್ಲೂ ನೈಪುಣ್ಯತೆಯನ್ನು ಕಾಣುತ್ತೀರಿ
- ಮಾಡುತ್ತಿರುವ ಕೆಲಸದಲ್ಲಿ ಅಭಿವೃದ್ಧಿ ಇದೆ
- ಮಹಿಳೆಯರಿಗೆ ಆರೋಗ್ಯದಲ್ಲಿ ವ್ಯತ್ಯಾಸವಿದೆ
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ

- ಸ್ನೇಹಿತರ ಬಗ್ಗೆ ನಿಮಗೆ ಒಳ್ಳೆಯ ಅಭಿಪ್ರಾಯವಿರಲಿ
- ಸರ್ಕಾರಿ ಉದ್ಯೋಗದಲ್ಲಿ ತೊಡಕು ಕಾಣಬಹುದು
- ಸಮಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಿ
- ದೀರ್ಘಕಾಲದ ರೋಗವಿರುವವರಿಗೆ ಸಮಸ್ಯೆ ಇದೆ
- ಸಾಂಸಾರಿಕ ಜಗಳದಲ್ಲಿ ವೈಯಕ್ತಿಕವಾದ ವಿಚಾರಕ್ಕೆ ಆಸಕ್ತಿ ಕಡಿಮೆ ಆಗಲಿದೆ
- ಇಂದು ಮನಸ್ಸು ಚಂಚಲವಾಗಬಹುದು ಆದರೆ ಕೆಟ್ಟ ನಿರ್ಧಾರವನ್ನು ಮಾಡಬೇಡಿ
- ಸಾಯಿಬಾಬರನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಪ್ರೀತಿಯ ಮಾತುಗಳಿಂದ ಮನಸ್ಸು ಹಗುರವಾಗುತ್ತದೆ
- ದಾನ ಧರ್ಮ ವಿಚಾರಗಳಿಂದ ದೂರ ಉಳಿಯುತ್ತೀರಿ
- ಸ್ವತಂತ್ರವಿಲ್ಲದ ಜೀವನ ಅಂತ ಅನಿಸಬಹುದು
- ಹಳೆಯ ವಿಚಾರಗಳನ್ನು ಮನಸ್ಸಿಗೆ ತಂದುಕೊಂಡು ನೋವು ಆಗಲಿದೆ
- ನಿಮ್ಮ ಸರಿಯಾದ ಆಯ್ಕೆಯಲ್ಲಿ ತೊಂದರೆಯಾಗಬಹುದು
- ಕೆಟ್ಟ ರೀತಿ ಆಲೋಚನೆಗಳಿಂದ ದೂರವಿರಿ
- ನವಗ್ರಹ ಆರಾಧನೆಯನ್ನು ಮಾಡಿ
ಮಕರ

- ದೊಡ್ಡ ಯೋಜನೆಗೆ ಕೈ ಹಾಕಿ ಸೋಲಬಹುದು
- ಹಠಕ್ಕೆ ಬಿದ್ದ ನಿಮಗೆ ಎಲ್ಲ ಕಡೆ ಹಿನ್ನಡೆಯಾಗಬಹುದು
- ಆಹಾರ ವಿಚಾರದಲ್ಲಿ ಸಂತೋಷ ಪಡಬಹುದು
- ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗಿರುತ್ತದೆ
- ದೊಡ್ಡ ಯೋಜನೆಗಳನ್ನ ಪೂರ್ಣಗೊಳಿಸಲು ತುಂಬಾ ಶ್ರಮ ಪಡುತ್ತೀರಿ
- ಮಕ್ಕಳ ಹಠಮಾರಿ ತನಕ್ಕೆ ತಲೆ ಬಾಗಬಹುದು
- ದುರ್ಗಾರಾಧನೆಯನ್ನು ಮಾಡಿ
ಕುಂಭ

- ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಿಂದ ಸಮಾಧಾನ ಸಿಗಬಹುದು
- ವಿದ್ಯಾರ್ಥಿಗಳಿಗೆ ಚಂಚಲವಾದ ಮನಸ್ಸು ಅದರಿಂದ ಅಪಯಶಸ್ಸು
- ಕಾಲೋಚಿತವಾದ ರೋಗಗಳ ಭಯ ಕಾಡಬಹುದು
- ಅಗತ್ಯ ಕೆಲಸಗಳಿಂದ ವಿಮುಖರಾಗುವ ಸಾಧ್ಯತೆಯಿದೆ
- ಕೆಲಸದ ಒತ್ತಡ ತುಂಬಾ ಇರುತ್ತದೆ ಆದರೂ ಬೇಜವಾಬ್ದಾರಿ
- ಸ್ಥಿರ ಮನಸ್ಸಿರಲಿ ಆಲಸ್ಯ ಬೇಡ, ಧೋರಣೆ ಬೇಡ
- ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ
ಮೀನಾ

- ನಿಮ್ಮ ಹವ್ಯಾಸದ ಕಡೆ ಹೆಚ್ಚು ಗಮನ ಕೊಡುತ್ತೀರಿ
- ದೇಹವನ್ನು ಸರಿಯಾಗಿ ಗಮನಿಸಿಕೊಳ್ಳಿ ತೊಂದರೆಯಾಗಬಹುದು
- ಹೊಸ ಕೆಲಸ ಕೈ ಹಿಡಿಯಬಹುದು
- ವ್ಯಾಪಾರಿ ಮನಸ್ಸಿನಿಂದ ಹೊರ ಬರಬೇಕು
- ಎಲ್ಲದಕ್ಕೂ ಲೆಕ್ಕ ಹಾಕಿ ಹಣ ಖರ್ಚು ಮಾಡಿದರು ಬೇಸರವಾಗಬಹುದು
- ಬೇರೆಯವರ ಮನಸ್ಸು ಜಯಿಸಲು ಸಾಧ್ಯವಾಗುವುದಿಲ್ಲ
- ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ