newsfirstkannada.com

×

ದೇಶದ ಕೆಲವು ರಾಜ್ಯಗಳಲ್ಲಿ ಭಾರೀ ಮಳೆ.. ಉತ್ತರಾಖಂಡ್, ಗುಜರಾತ್​ನಲ್ಲಿ ಆತಂಕ.. ಕರ್ನಾಟಕದ ಕಥೆ ಏನು?

Share :

Published July 1, 2023 at 8:15am

Update July 1, 2023 at 8:16am

    ಮಳೆ ಆರ್ಭಟಕ್ಕೆ ಗುಜರಾತ್​, ಮಹಾರಾಷ್ಟ್ರದಲ್ಲಿ ಜನ ಜೀವನ ಅಸ್ತವ್ಯಸ್ತ

    ಪ್ರವಾಹ ಹಿನ್ನೆಲೆಯಲ್ಲಿ ಇಲ್ಲಿವರೆಗೆ 9 ಜನರು ಸಾವು, ಜನರಲ್ಲಿ ಆತಂಕ..!

    ಉತ್ತರಾಖಂಡ್​ನಲ್ಲಿ ಮಳೆಗೆ ಭೂಕುಸಿತ, ಗುರುತು ಸಿಗದಂತಾದ ರಸ್ತೆಗಳು

ಭಾರತಕ್ಕೆ ಮುಂಗಾರಿನ ಆಗಮನ ಆಗಿದೆ. ದೇಶದ ಶೇಕಡಾ 80 ರಷ್ಟು ಭಾಗಗಳಲ್ಲಿ ಮುಂಗಾರಿನ ಸಿಂಚನ ಕೂಡ ಆಗ್ತಾ ಇದೆ. ಆದ್ರೆ ಕೆಲ ಕಡೆಗಳಲ್ಲಿ ಅತಿವೃಷ್ಟಿ. ಇನ್ನೂ ಕೆಲವು ಕಡೆಗಳಲ್ಲಿ ಅನಾವೃಷ್ಟಿ ಅನ್ನೊ ಪರಿಸ್ಥಿತಿ ಕಾಣುತ್ತಿದೆ.

ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ರೆ ಉತ್ತರ ಭಾರತದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಗುಜರಾತ್​, ಉತ್ತರಾಖಂಡ್​, ಮಹಾರಾಷ್ಟ್ರ, ದೆಹಲಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಎಡೆಬಿಡದೆ ಸುರಿಯುತ್ತಿರೋ ಮಳೆ ಹಲವಡೆ ಅವಾಂತರಗಳನ್ನೇ ಸೃಷ್ಟಿಸಿದೆ.

ಗುಜರಾತ್​ನಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ವರುಣಾರ್ಭಟಕ್ಕೆ ಈವರೆಗೂ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಭಾರೀ ಮಳೆಗೆ ಗುಜರಾತ್​ನಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಅಲ್ಲದೆ, ಮುಂದಿನ 48 ಗಂಟೆಗಳಲ್ಲಿ ಗುಜರಾತ್​ ರಾಜ್ಯದ ಹಲವೆಡೆ ಭಾರಿ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಸೂಚನೆ ನೀಡಿದೆ.

​ಅಹಮದಾಬಾದ್​ನಲ್ಲಿ ಭಾರೀ ಮಳೆ.. ಹಲವೆಡೆ ಜಲಾವೃತ

ಗುಜರಾತ್​ನ ಅಹಮದಾಬಾದ್​ನಲ್ಲಿ ಭಾರೀ ಮಳೆಯಿಂದಾಗಿ ನಗರದ ಹಲವೆಡೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿಯುತ್ತಿರುವ ಕಾರಣ ವಾಹನ ಸವಾರರು ತಮ್ಮ ಮನೆಗಳಿಗೆ ತೆರಳಲು ಪರದಾಡಿದ್ದಾರೆ.

ಗಾಂಧಿಧಾಮ ಬಳಿ ಕ್ಯಾಬ್​ ಅತ್ತಲು ಪರದಾಡಿದ ಗರ್ಭಿಣಿ

ಧಾರಾಕಾರ ಮಳೆಗೆ ಗುಜರಾತ್​ನ ಗಾಂಧಿಧಾಮ ಬಳಿ ಮೊಣಕಾಲುದ್ದಷ್ಟು ನೀರು ನಿಂತಿದೆ. ಪರಿಣಾಮ ಮಳೆ ನೀರಿನಲ್ಲಿ ಗರ್ಭಿಣಿಯೊಬ್ಬರು ಕ್ಯಾಬ್​ ಹತ್ತಲು ಪರದಾಡಿಬೇಕಾಯಿತು.

ಹರಿದ್ವಾರದಲ್ಲಿ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತ

ಉತ್ತರಾಖಂಡ್​ನ ಹರಿದ್ವಾರದಲ್ಲಿ ಭಾರೀ ಮಳೆಯಿಂದಾಗಿ ನಗರದ ಹಲವೆಡೆ ಜಲಾವೃತವಾಗಿ ಜನರು ಸಮಸ್ಯೆಗಳನ್ನ ಎದುರಿಸುವಂತಾಗಿತ್ತು. ಇದರಿಂದ ವಾಹನ ಸವಾರರು ರಸ್ತೆಯಲ್ಲೇ ಪರದಾಡಿದ್ರು. ಇನ್ನು ಪೌರಿಯ ಲ್ಯಾನ್ಸ್‌ಡೌನ್‌ನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗುಂಡಿಗಳು ತುಂಬಿ ಹರಿದಿವೆ. ಭಾರೀ ಮಳೆಗೆ ಹಲವೆಡೆ ಭೂಕುಸಿತ ಸಂಭವಿಸಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಮೊನ್ನೆ ಚಮೋಲಿ ಜಿಲ್ಲೆಯಲ್ಲಿ ಬದ್ರಿನಾಥ್​ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಕೊಚ್ಚಿ ಹೋಗಿದೆ. ಇದರಿಂದ ಸಾವಿರಾರು ಪ್ರವಾಸಿಗರು ರಸ್ತೆಯಲ್ಲೇ ಪರದಾಡುವಂತಾಗಿದೆ.

ಇತ್ತ ಮುಂಬೈನಲ್ಲಿ ವರುಣನ ಆರ್ಭಟ ತೀವ್ರಗೊಂಡಿದೆ. ಮುಂಗಾರು ಮಳೆಯ ಹೊಡೆತಕ್ಕೆ ವಾಣಿಜ್ಯ ನಗರಿಯಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸ್ಥಳೀಯ ರೈಲುಗಳ ಸಂಚಾರಕ್ಕೂ ಅಡ್ಡಿ ಆತಂಕ ಎದುರಾದ್ದು, ಹಲವು ರೈಲುಗಳ ಸಂಚಾರವನ್ನು ನಿಲ್ಲಿಸಲಾಗಿದೆ. ಮತ್ತೆ ಕೆಲವು ರೈಲುಗಳು ನಿಧಾನಗತಿಯಲ್ಲಿ ಚಲಿಸುವಂತೆ ಮಾಡಲಾಗಿದೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭೀವಂಡಿಯಲ್ಲಿ ಜೋರಾಗಿ ಸುರಿದ ಮಳೆಗೆ ರಸ್ತೆಗಳೆಲ್ಲ ಕೆರೆಯಂತಾಗಿವೆ. ಭೀವಂಡಿ ಪೇಟೆಯಲ್ಲಿಟ್ಟಿದ್ದ ಅಂಗಡಿ ವಸ್ತುಗಳು ನೀರಲ್ಲಿ ತೇಲಿಕೊಂಡು ಹೋಗಿವೆ. ಇನ್ನೂ ವಾಹನ ಸವಾರರಿಗೆ ರಸ್ತೆ ಎಂಬುದೇ ಗುರುತು ಸಿಗದೇ ಹಾಗೆ ರಸ್ತೆಗಳನ್ನ ದಾಟಿದ್ದಾರೆ. ಅಂಧೇರಿ ಸುರಂಗಮಾರ್ಗ ಜಲಾವೃತಗೊಂಡ ನಂತರ ಮುಚ್ಚಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ನಿನ್ನೆ ಸಂಜೆ ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ಭಾರೀ ಮಳೆ ಸುರಿದ ನಂತರ ಜಲಾವೃತಗೊಂಡಿದ್ದರಿಂದ ದೆಹಲಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.

ರಸ್ತೆಯ ಗುಂಡಿಗೆ ಸಿಲುಕಿ ಆಟೋ ಚಾಲಕ ಸಾವು

ದೆಹಲಿಯ ಹರ್ಷ್ ವಿಹಾರ್ ಪ್ರದೇಶದಲ್ಲಿ ಆಟೋ ಚಾಲಕನೊಬ್ಬ ರಸ್ತೆಯ ಗುಂಡಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ. ಮಳೆಯ ನಂತರ ಪಾತ್​ ಹೋಲ್‌ನಲ್ಲಿ ನೀರು ತುಂಬಿಕೊಂಡಿದ್ದರಿಂದ ಚಾಲಕ, ಗಮನಿಸದೆ ಜಲಾವೃತಗೊಂಡ ರಸ್ತೆಯಲ್ಲಿದ್ದ ಪಾತ್ ಹೋಲ್‌ನಲ್ಲಿ ಆಟೋ ಓಡಿಸಿದ್ದಾನೆ. ಇದರಿಂದ ದೆಹಲಿಯ ನಂದ ನಾಗ್ರಿಯ 51 ವರ್ಷದ ಆಟೋರಿಕ್ಷಾ ಚಾಲಕ ಅಜಿತ್ ಶರ್ಮಾ ಸಾವನ್ನಪ್ಪಿದ್ದಾರೆ.

ಮಳೆಗಾಗಿ ಕರುನಾಡು ಸೇರಿ ದಕ್ಷಿಣ ಭಾರತದ ನದಿಗಳು ಕಾದು ಕುಳಿತ್ತಿದ್ರೆ, ವರುಣದೇವ ಮಾತ್ರ ಉತ್ತರ ಭಾರತದಲ್ಲಿ ರಣಾರ್ಭಟದ ರೂಪ ತಾಳಿ ಅಬ್ಬರಿಸುತ್ತಾ ಸಾವು ನೋವುಗಳನ್ನ ತಂದೊಡ್ಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇಶದ ಕೆಲವು ರಾಜ್ಯಗಳಲ್ಲಿ ಭಾರೀ ಮಳೆ.. ಉತ್ತರಾಖಂಡ್, ಗುಜರಾತ್​ನಲ್ಲಿ ಆತಂಕ.. ಕರ್ನಾಟಕದ ಕಥೆ ಏನು?

https://newsfirstlive.com/wp-content/uploads/2023/07/GUJARAT_RAIN_3.jpg

Load More