ಇಂದಿನಿಂದ ಇಂಡೋ-ವಿಂಡೀಸ್ ಮೊದಲ ಟೆಸ್ಟ್
ವಿಂಡೀಸ್ಗೆ ಇದ್ಯಾ ಇವರನ್ನು ಎದುರಿಸೋ ತಾಕತ್ತು
ಜಡ್ಡು-ಅಶ್ವಿನ್ ಜಾದೂಗೆ ವೆಸ್ಟ್ ವಿಂಡೀಸ್ ಗಿರಿಗಿಟ್ಲೆ ಫಿಕ್ಸ್.!
ಕ್ರಿಕೆಟ್ ದೈತ್ಯರು ಅಂತಾನೇ ಕರೆಸಿಕೊಳ್ಳೋ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಕ್ಷಣಗಣನೆ ಶುರುವಾಗಿದೆ. 20 ವರ್ಷಗಳಿಂದ ವಿಂಡೀಸ್ ನೆಲದಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಟೀಮ್ ಇಂಡಿಯಾ, ಮೊದಲ ಟೆಸ್ಟ್ ಪಂದ್ಯವನ್ನ ಮೂರೇ ದಿನದಲ್ಲಿ ಮಟಾಶ್ ಮಾಡೋಕೆ ಸಜ್ಜಾಗಿದೆ. ಭಾರತದ ಈ ಸ್ಪಿನ್ ಟ್ವಿನ್ಸ್ ಮ್ಯಾಜಿಕ್ ಮಾಡಿದ್ರೆ ಅದು ಅಸಾಧ್ಯವೂ ಅಲ್ಲ ಬಿಡಿ.
3 ದಿನದಲ್ಲೇ ಪಂದ್ಯ ಮುಗಿಸ್ತಾರೆ ಈ ಸ್ಪಿನ್ ಟ್ವಿನ್ಸ್..!
ಇಂದಿನಿಂದ ಭಾರತ – ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿ ಕಿಕ್ಸ್ಟಾರ್ಟ್ ಆಗ್ತಿದೆ. ಡೊಮಿನಿಕಾದಲ್ಲಿ ನಡೆಯಲಿರೋ ಮೊದಲ ಟೆಸ್ಟ್ ಇನ್ನೂ ಆರಂಭವಾಗಿಲ್ಲ. ಅದಾಗಲೇ ಮೂರೇ ದಿನಕ್ಕೆ ಪಂದ್ಯ ಮುಗಿಯುತ್ತೆ ಅನ್ನೋ ಮಾತು ಕೇಳಿ ಬರ್ತಿದೆ. ಇದು ಅಸಾಧ್ಯದ ಮಾತು ಅಲ್ಲವೇ ಅಲ್ಲ.. ಟೀಮ್ ಇಂಡಿಯಾದ ಈ ಸ್ಪಿನ್ ಟ್ವಿನ್ಸ್ ಮೋಡಿ ಮಾಡಿದ್ರೆ, ಮೂರೇ ದಿನಕ್ಕೆ ಟೆಸ್ಟ್ ಖತಃ ಆಗಲಿದೆ.
ವಿಂಡೀಸ್ ದೈತ್ಯರ ವಿರುದ್ಧದ ಕಾದಾಟಕ್ಕೆ ಸಜ್ಜಾಗಿರೋ ಟೀಮ್ ಇಂಡಿಯಾ ಬಲವೇ ಸ್ಪಿನ್ನರ್ಸ್..! ವಿಶ್ವ ದರ್ಜೆಯ ಸ್ಪಿನ್ನರ್ಗಳಾದ ಆರ್. ಅಶ್ವಿನ್, ರವೀಂದ್ರ ಜಡೇಜಾ ಡೊಮಿನಿಕಾದಲ್ಲಿ ಮ್ಯಾಜಿಕ್ ಮಾಡೋಕೆ ಸಜ್ಜಾಗಿದ್ದಾರೆ. ಇವರಿಬ್ಬರ ಸ್ಪಿನ್ ಮೋಡಿಗೆ ವಿಂಡೀಸ್ ಉಂಡೀಸ್ ಆಗೋದು ಗ್ಯಾರಂಟಿ..! ಈ ಕಾನ್ಫಿಡೆನ್ಸ್ಗೆ ಕಾರಣ ವಿಂಡೀಸ್ನ ಪ್ಲೇಯಿಂಗ್ ಕಂಡೀಷನ್..!
ಜಡ್ಡು-ಅಶ್ವಿನ್ ಜಾದೂಗೆ ವಿಂಡೀಸ್ ಗಿರಿಗಿಟ್ಲೆ ಪಕ್ಕಾ
ಮೂರೇ ದಿನದಲ್ಲಿ ಮೊದಲ ಟೆಸ್ಟ್ ಮುಗಿಯುತ್ತೆ ಅನ್ನೋದಕ್ಕೆ ಕಾರಣ ವೆಸ್ಟ್ ಇಂಡೀಸ್ ಪ್ಲೇಯಿಂಗ್ ಕಂಡಿಷನ್ನೇ ಕಾರಣವಾಗಿದೆ. ಬಹುತೇಕ ಭಾರತದಂತೆ ಕೆರಬಿಯನ್ ನಾಡಿನ ಪ್ಲೇಯಿಂಗ್ ಕಂಡೀಷನ್ ಕೂಡ ಇರಲಿದೆ. ಪಿಚ್ನ ವರ್ತನೆ ಕೂಡ ಸೇಮ್ ಟು ಸೇಮ್ ಇರಲಿದೆ. ಭಾರತದ ನೆಲದಲ್ಲಿ ಘಟಾನುಘಟಿಗಳನ್ನೇ ಕಟ್ಟಿ ಹಾಕಿ ಮೂರೇ ದಿನಕ್ಕೆ ಹಲ ಟೆಸ್ಟ್ ಮ್ಯಾಚ್ಗಳನ್ನ ಖತಂ ಮಾಡಿರೋ ಈ ಸ್ಪಿನ್ ಜೋಡಿ ವಿಂಡೀಸ್ನಲ್ಲೂ ಅದೇ ಪರ್ಫಾಮೆನ್ಸ್ ನೀಡೋಕೆ ಸಜ್ಜಾಗಿದೆ.
ಕಳೆದ 10 ಟೆಸ್ಟ್ಗಳಲ್ಲಿ ಅಶ್ವಿನ್-ಜಡೇಜಾ
ಕಳೆದ 10 ಟೆಸ್ಟ್ಗಳ 20 ಇನ್ನಿಂಗ್ಸ್ಗಳಿಂದ ಅಶ್ವಿನ್ ಹಾಗೂ ಜಡೇಜಾ ತಲಾ 45 ವಿಕೆಟ್ ಉರುಳಿಸಿದ್ದಾರೆ. ಈ ಪೈಕಿ ಅಶ್ವಿನ್, 91 ರನ್ ನೀಡಿ 6 ವಿಕೆಟ್ ಬೇಟೆಯಾಡಿರುವುದು ಬೆಸ್ಟ್ ಪರ್ಫಾಮೆನ್ಸ್ ಆಗಿದೆ. 42 ರನ್ ನೀಡಿ 7 ವಿಕೆಟ್ ಕಬಳಿಸಿರೋದು ಜಡೇಜಾರ ಉತ್ತಮ ಪ್ರದರ್ಶನವಾಗಿದೆ. ಈ 10 ಪಂದ್ಯಗಳಲ್ಲಿ ಅಶ್ವಿನ್ 2 ಬಾರಿ, ಜಡೇಜಾ 3 ಬಾರಿ 5 ವಿಕೆಟ್ ಹೌಲ್ ಸಾಧನೆ ಮಾಡಿದ್ದಾರೆ.
ರಿಸೆಂಟ್ ಟೆಸ್ಟ್ಗಳಲ್ಲಿ ಇಂಥಾ ಹೈ ಟಚ್ನಲ್ಲಿರೋ ಅಶ್ವಿನ್-ಜಡ್ಡು ಕಾಂಬೋ ಕೆರಿಬಿಯನ್ ಬ್ಯಾಟ್ಸ್ಮನ್ಗಳಿಗೆ ಸವಾಲೇ ಆಗಲಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ವಿಂಡೀಸ್ ವಿರುದ್ಧ ಅಬ್ಬರದ ಪ್ರದರ್ಶನ ನೀಡಿರುವ ಅಶ್ವಿನ್, 11 ಪಂದ್ಯಗಳಿಂದ ಬರೋಬ್ಬರಿ 60 ವಿಕೆಟ್ ಉರುಳಿಸಿರೋ ಟ್ರಾಕ್ ರೆಕಾರ್ಡ್ ಹೊಂದಿದ್ದಾರೆ.
ವಿಂಡೀಸ್ಗಿದ್ಯಾ ಇವರನ್ನು ಎದುರಿಸೋ ತಾಕತ್ತು.?
ಇದು ವಿಶ್ವ ಕ್ರಿಕೆಟ್ ಅಭಿಮಾನಗಳನ್ನ ಕಾಡ್ತಿರೋ ಪ್ರಶ್ನೆಯಾಗಿದೆ. ಏಕದಿನ ವಿಶ್ವಕಪ್ ಕ್ವಾಲಿಫೈಯರ್ನಲ್ಲಿ ಕ್ರಿಕೆಟ್ ಶಿಶುಗಳ ಎದುರೇ ಮಕಾಡೆ ಮಲಗಿರೋ ವೆಸ್ಟ್ ಇಂಡೀಸ್, ಟೀಮ್ ಇಂಡಿಯಾವನ್ನ ಎದುರಿಸೋದು ಸುಲಭದ ಮಾತೇ ಅಲ್ಲ. ಟೀಮ್ ಇಂಡಿಯಾ ಎದುರು ಕಣಕ್ಕಿಳಿಯುತ್ತಿರೋ ವೆಸ್ಟ್ ಇಂಡೀಸ್ ತಂಡದಲ್ಲಿ ಬಹುತೇಕ ಯುವ ಆಟಗಾರರೇ ಇದ್ದಾರೆ. ಅನುಭವಿ ಟೀಮ್ ಇಂಡಿಯಾದ ಮುಂದೆ ವಿಂಡೀಸ್ ಡಲ್ ಹೊಡೀತಾ ಇದೆ.
ಬ್ಯಾಟ್ಸ್ಮನ್ಗಳ ಪೈಕಿ ನಾಯಕ ಕ್ರೆಗ್ ಬ್ರಾಥ್ ವೇಟ್, ಜರ್ಮೈನ್ ಬ್ಲಾಕ್ವುಡ್, ಜೆಸನ್ ಹೋಲ್ಡರ್ ಹೊರತು ಪಡಿಸಿದ್ರೆ, ಉಳಿದವರು ಟೀಮ್ ಇಂಡಿಯಾವನ್ನ ಎದುರಿಸಿದ ಅನುಭವ ಇರಲಿ., ಗರಿಷ್ಠ 10ಕ್ಕೂ ಹೆಚ್ಚು ಟೆಸ್ಟ್ ಆಡಿರೋ ಅನುಭವವನ್ನೂ ಹೊಂದಿಲ್ಲ.. ರಕೀಮ್ ಕಾರ್ನ್ವಾಲ್ರಂತ ದೈತ್ಯ ಬ್ಯಾಟರ್ ತಂಡದಲ್ಲಿದ್ದಾರೆ. ಆದ್ರೆ, ರೆಡ್ಬಾಲ್ ಕ್ರಿಕೆಟ್ನಲ್ಲಿ ರಕೀಮ್ ಮಿಂಚಿದ್ದೇ ಇಲ್ಲ. ಹೀಗಾಗಿ ಬಡವಾಗಿ ಕಾಣ್ತಿರೋ ವಿಂಡೀಸ್ ಬ್ಯಾಟಿಂಗ್ ಲೈನ್ ಅಪ್ಗೆ, ನಮ್ಮ ಸ್ಪಿನ್ ಟ್ವಿನ್ಸ್ ಎದುರಿಸೋದು ಸವಾಲಿನ ಸಂಗತಿಯಾಗಿದೆ.
ಅಂಕಿ-ಅಂಶಗಳು, ಅನುಭವದ ಆಧಾರದಲ್ಲಿ ವೆಸ್ಟ್ ಇಂಡೀಸ್ ತಂಡ ಟೀಮ್ ಇಂಡಿಯಾಗಿಂತ ಬಡವಾಗೇ ಕಾಣ್ತಿದೆ. ಅದ್ರಲ್ಲೂ ಅಶ್ವಿನ್, ಜಡೇಜಾರ ಮ್ಯಾಜಿಕಲ್ ಎಸೆತಗಳನ್ನ ಎಚ್ಚರಿಕೆ ಹಾಗೂತಾಳ್ಮೆಯಿಂದ ಎದುರಿಸೋ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಕಾಣ್ತಿಲ್ಲ. ಹೀಗಾಗಿ ತವರಿನಲ್ಲಿ ವಿಂಡೀಸ್ ಕನಿಷ್ಠ ಪಕ್ಷ ಫೈಟ್ ಆದ್ರೂ ಅನ್ನೋದೆ ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್