newsfirstkannada.com

ಕೆಲವು ರಾಜ್ಯಗಳಲ್ಲಿ ಭಾರೀ ಮಳೆ, ಪ್ರವಾಹದಿಂದ ಜನರಿಗೆ ಸಂಕಷ್ಟ.. ಕರ್ನಾಟಕದಲ್ಲಿ ಕಣ್ಣಾಮುಚ್ಚಾಲೆ..!

Share :

27-06-2023

    ಅಸ್ಸಾಂ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಸೇರಿ ಹಲವೆಡೆ ಭಾರೀ ಮಳೆ

    ವರುಣನ ರೌದ್ರ ನರ್ತನಕ್ಕೆ ಹಿಮಚಲ ಪ್ರದೇಶದಲ್ಲಿ ಭೂ ಕುಸಿತ.. ಆತಂಕ

    ಗುಜರಾತ್​ನ ಅಹಮದಾಬಾದ್​ ವರುಣಾರ್ಭಟಕ್ಕೆ ಅಲ್ಲೋಲ-ಕಲ್ಲೋಲ

ಕರುನಾಡಿನ ಮೇಲೆ ಮುನಿದಿರೋ ವರುಣಾ ಬೇರೆ ರಾಜ್ಯಗಳಲ್ಲಿ ಬೇಡ ಅನ್ನುವಷ್ಟು ಸುರಿಯುತ್ತಿದ್ದಾನೆ. ಅಸ್ಸಾಂ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಸೇರಿ 9 ರಾಜ್ಯಗಳಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಜನರ ಜೀವದ ಜೊತೆ ಚೆಲ್ಲಾಟವಾಡಿ ರೌದ್ರ ನರ್ತನ ಮೆರೆಯುತ್ತಿದ್ದಾನೆ. ರಾಜ್ಯದಲ್ಲಿ ಕಣ್ಣಾಮುಚ್ಚಾಲೆ ಆಡ್ತಿರೋ ವರುಣಾ ಬೇರೆ ಕಡೆಗಳಲ್ಲಿ ರೌದ್ರನರ್ತನ ಮಾಡ್ತಿದ್ದಾನೆ. ಅಬ್ಬರಿಸಿ ಬೊಬ್ಬಿರಿದು ಆತಂಕ ಸೃಷ್ಟಿಸಿದ್ದಾನೆ. ಜನರ ಜೀವನದ ಜೊತೆ ಚೆಲ್ಲಾಟವಾಡ್ತಿದ್ದಾನೆ. ಜನರು ಸಾಕುಮಾಡು ವರುಣಾ ನಿನ್ನ ಆರ್ಭಟವನ್ನ ಅಂತ ಕೈಮುಗಿದು ಬೇಡುವ ಹಂತಕ್ಕೆ ಬಂದುಬಿಟ್ಟಿದ್ದಾನೆ.

ಅಸ್ಸಾಂನಲ್ಲಿ ವರುಣಾರ್ಭಟ.. ಜನರಿಗೆ ಪ್ರಾಣ ಸಂಕಟ

ಅಸ್ಸಾಂನಲ್ಲಿ ಆರ್ಭಟಿಸ್ತಿರೋ ಮಳೆರಾಯ ದೋ ಅಂತ ಸುರಿಯುತ್ತಿದ್ದಾನೆ. ಮಳೆ ಅವಾಂತರಕ್ಕೆ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಳ್ಳಕೊಳ್ಳಗಳು ಉಕ್ಕಿಹರಿದು ಸೇತುವೆಗಳು ತೇಲಿಹೋಗಿವೆ. ಜನ-ಜಾನುವಾರು ಸಂಕಷ್ಟಕ್ಕೆ ಸಿಲುಕಿದ್ದು 4 ಲಕ್ಷಕ್ಕೂ ಅಧಿಕ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.

ಮಳೆ ಅಬ್ಬರಕ್ಕೆ ಹಿಮಾಚಲ ಪ್ರದೇಶದಲ್ಲಿ ಭೂ ಕುಸಿತ

ಹಿಮಾಚಲ ಪ್ರದೇಶದಾದ್ಯಂತ ಸುರಿಯುತ್ತಿರುವ ಮಳೆಗೆ ಹಲವಡೆ ಭೂಕುಸಿತ ಸಂಭವಿಸಿದೆ. ರಸ್ತೆ ಮೇಲೆ ಬೃಹದಾಕರದ ಮಣ್ಣಿನ ರಾಶಿ ಬಿದ್ದಿರೋದ್ರಿಂದ ಸಂಪರ್ಕ ಕಡಿತಗೊಂಡಿದೆ. ರೈಲ್ವೇ ಹಳಿಗಳ ಮೇಲೂ ಮಣ್ಣಿನ ರಾಶಿ ಬಿದ್ದಿದ್ದು ರೈಲು ಸಂಚಾರ ಸಹ ಅಸ್ಥವ್ಯಸ್ಥಗೊಂಡಿದೆ. ಇನ್ನೂ ನದಿಗಳು ಸಹ ಉಕ್ಕಿಹರಿಯುತ್ತಿದ್ದು ನದಿ ಪಾತ್ರದ ಜನ ಸುರಕ್ಷಿತವಾಗಿರುವಂತೆ ಸರ್ಕಾರ ಸೂಚಿಸಿದೆ. ಮಳೆ ಆರ್ಭಟಕ್ಕೆ ಜಲಪಾತಗಳು ಭೋರ್ಗರೆಯುತ್ತಿವೆ.

ಮುಂಬೈನಲ್ಲೂ ಮಳೆರಾಯನ ಮಹಾನರ್ತನ

ಮಹರಾಷ್ಟ್ರದ ಮುಂಬೈನಲ್ಲೂ ಮಳೆ ಅಬ್ಬರ ಜೋರಾಗಿದೆ. ಮಳೆಯಿಂದ ಮುಂಬೈನ ಹಲವು ರಸ್ತೆಗಳು ಜಲಾವೃತವಾಗಿವೆ. ವಾಹನಗಳು ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿವೆ. ಮಳೆ ನೀರು ನುಗ್ಗಿದ ಪರಿಣಾಮ ಮುಂಬೈನ ರೈಲ್ವೇ ನಿಲ್ದಾಣದ ಹಳಿ ಮೇಲೆ ನೀರು ನಿಂತಿದೆ. ರೈಲು ನಿಲ್ದಾಣದ ಮೇಲ್ಚಾವಣಿ ಸಹ ಸೋರತೊಡಗಿದೆ.

ಮಳೆ ಅಬ್ಬರಕ್ಕೆ ಅಹಮದಾಬಾದ್​ ನಗರ ಅಲ್ಲೋಲ-ಕಲ್ಲೋಲ

ಗುಜರಾತ್​ ರಾಜ್ಯದಂತ ಸಹ ವರುಣಾ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮಳೆ ಅಬ್ಬರಕ್ಕೆ ಅಹಮದಾಬಾದ್​ ನಗರದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಗಳು ಉಕ್ಕಿಹರಿಯುತ್ತಿವೆ. ಹಲವಡೆ ವಾಹನ ಸಂಚಾರ ಅಸ್ತವ್ಯಸ್ಥವಾಗಿದೆ. ಪಂಜಾಬ್​ನಲ್ಲೂ ಮಳೆ ಆರ್ಭಟ ಜೋರಾಗಿದೆ. ತಗ್ಗು ಪ್ರದೇಶಗಳಿಗೆ ಲಗ್ಗೆ ಇಟ್ಟಿರುವ ಮಳೆ ನೀರು ಪ್ರವಾಹ ಪರಿಸ್ಥಿತಿಯನ್ನ ಉಂಟುಮಾಡಿದೆ. ಹಲವು ವಾಹನಗಳು ಮಳೆನೀರು ನುಗ್ಗಿ ಕೆಟ್ಟುನಿಂತಿವೆ.

ರಾಜಸ್ಥಾನದಲ್ಲೂ ಮಳೆರಾಯನ ರೌದ್ರನರ್ತನ

ರಾಜಸ್ಥಾನದಲ್ಲೂ ವರುಣಾ ಬಿಡುವಿಲ್ಲದೇ ಸುರಿಯುತ್ತಿದ್ದಾನೆ. ಧಾರಕಾರ ಮಳೆಯಿಂದಾಗಿ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ನಿಂತ ನೀರಿನಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಜೋಧ್​​ಪರ್​ ನಗರದ ಬೀದಿಗಳಲ್ಲಿ ಮಳೆ ನೀರು ಹೊಳೆಯಂತೆ ಹರೀಯುತ್ತಿದೆ.

ರಾಷ್ಟ್ರ ರಾಜಧಾನಿಗೂ ಮಳೆರಾಯನ ಲಗ್ಗೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಮಳೆರಾಯ ಎಡೆಬಿಡದೆ ಸುರಿಯುತ್ತಿದ್ದಾನೆ. ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಹಲವು ಮನೆಗಳು ಜಲಾವೃತವಾಗಿವೆ. ಮಳೆಯಿಂದ ಕೆಲ ರಸ್ತೆಗಳು ಕೆಸರು ಗೆದ್ದೆಯಂತಾಗಿದ್ದು ಕೆಸರಿನಲ್ಲಿ ಬಸ್​ ಸಿಲುಕಿದ ಪರಿಣಾಮ ಬಸ್​ ಸಿಬ್ಬಂದಿ ಪರದಾಟ ನಡೆಸಿದ್ದಾರೆ. ಜಮ್ಮು-ಕಾಶ್ಮೀರದಲ್ಲೂ ವರುಣ ಅಬ್ಬರಿಸಿಬೊಬ್ಬರಿಯುತ್ತಿದ್ದಾನೆ. ಮಳೆ ಆರ್ಭಟಕ್ಕೆ ಹಳ್ಳ-ಕೊಳ್ಳಗಳು ಉಕ್ಕಿಹರಿಯುತ್ತಿವೆ. ಧಾರಕಾರ ಮಳೆಗೆ ಭೂಕುಸಿತ ಸಂಭವಿಸಿ ರಸ್ತೆ ಮೇಲೆ ಬಂಡೆ ಕಲ್ಲುಗಳು ಉರುಳಿವೆ.

ತೆಲಂಗಾಣದಲ್ಲೂ ವರುಣನ ತಕ ತೈ

ತೆಲಂಗಾಣದಲ್ಲೂ ಮಳೆರಾಯನ ಅಬ್ಬರ ಜೋರಾಗಿದೆ. ವರುಣಾರ್ಭಟಕ್ಕೆ ಹೈದರಾಬಾದ್​ನ ಹಲವು ರಸ್ತೆಗಳು ಜಲಾವೃತವಾಗಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಳೆನೀರಿನಲ್ಲಿ ವಾಹನಗಳು ಸಿಲುಕಿವೆ. ಕರುಣಾಡಿನಲ್ಲಿ ಕಣ್ಣಾಮುಚ್ಚಾಲೆ ಆಡ್ತಿರೋ ಮಳೆರಾಯ ಬೇರೆ ರಾಜ್ಯಗಳಲ್ಲಿ ಮಾತ್ರ ತನ್ನ ಅಬ್ಬರವನ್ನ ತೋರಿಸ್ತಿದ್ದಾನೆ. ಅಲ್ಲಿನ ಬಳಿಕವಾದರೂ ವರುಣನಿಗೆ ನಮ್ಮ ರಾಜ್ಯದ ನೆನಪಾಗಿ ಭೂರಮೆಯನ್ನ ತಣಿಸಲು ಧರೆಗಿಳಿಯುತ್ತಾನ ಅಂತ ಕಾದುನೋಡ್ಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಲವು ರಾಜ್ಯಗಳಲ್ಲಿ ಭಾರೀ ಮಳೆ, ಪ್ರವಾಹದಿಂದ ಜನರಿಗೆ ಸಂಕಷ್ಟ.. ಕರ್ನಾಟಕದಲ್ಲಿ ಕಣ್ಣಾಮುಚ್ಚಾಲೆ..!

https://newsfirstlive.com/wp-content/uploads/2023/06/ASSAM_RAIN_2-1.jpg

Load More