newsfirstkannada.com

ಪ್ಯಾನ್-ಆಧಾರ್ ಕಾರ್ಡ್‌ ಲಿಂಕ್ ಮಾಡಲು ಇಂದೇ ಕಡೆಯ ದಿನ; ಇವತ್ತೂ ನೀವು ಮಾಡದಿದ್ದರೆ ಏನಾಗುತ್ತೆ ಗೊತ್ತಾ?

Share :

30-06-2023

  ಇವತ್ತೇ ಲಿಂಕ್ ಮಾಡದಿದ್ರೆ ಪ್ಯಾನ್ ಕಾರ್ಡ್‌ ಇನ್ ಆ್ಯಕ್ಟಿವ್ ಆಗೋದು ಪಕ್ಕಾ!

  ನಾಳೆಯಿಂದ ನಿಷ್ಕ್ರಿಯಗೊಳ್ಳುವ ಪ್ಯಾನ್ ಕಾರ್ಡ್‌ ಬಳಸಿದರೆ 10 ಸಾವಿರ ದಂಡ

  ಬ್ಯಾಂಕ್‌ನಲ್ಲಿ 50,000 ರೂಪಾಯಿಗಿಂತ ಹೆಚ್ಚಿನ ಹಣ ಪಡೆಯಲು ಸಾಧ್ಯವಿಲ್ಲ

ನವದೆಹಲಿ: ಪ್ಯಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ನೀಡಿದ್ದ ಗಡುವು ಮುಗಿಯುತ್ತಾ ಬರ್ತಿದೆ. ದೇಶದ ನಾಗರಿಕರು ಇವತ್ತು ಆನ್‌ಲೈನ್ ಮೂಲಕ 1000 ರೂಪಾಯಿ ಪಾವತಿಸಿ ತಮ್ಮ ಆಧಾರ್ ಕಾರ್ಡ್‌ ಅನ್ನು ತಮ್ಮ ಪ್ಯಾನ್‌ಗೆ ಲಿಂಕ್ ಮಾಡಲು ಅವಕಾಶವಿದೆ. ಒಂದು ವೇಳೆ ಇವತ್ತೂ ಲಿಂಕ್ ಮಾಡಿಸಿಕೊಳ್ಳದಿದ್ದರೆ ನಾಳೆಯಿಂದ ನಿಮ್ಮ ಪ್ಯಾನ್ ಕಾರ್ಡ್‌ ಅನ್ನು ಇನ್ ಆ್ಯಕ್ಟಿವ್ ಅಂದ್ರೆ ನಿಷ್ಕ್ರಿಯಗೊಳಿಸಲಾಗುತ್ತೆ. ನಿಷ್ಕ್ರಿಯಗೊಳ್ಳುವ ಪ್ಯಾನ್ ಕಾರ್ಡ್‌ ಅನ್ನು ಬಳಸಿದರೆ 1000 ರೂಪಾಯಿನಿಂದ 10 ಸಾವಿರ ರೂಪಾಯಿವರೆಗೂ ದಂಡ ಹಾಕಲು ಅವಕಾಶವಿದೆ.

ಪ್ಯಾನ್, ಆಧಾರ್ ಲಿಂಕ್ ಮಾಡುವ ಕಾಲಾವಧಿಯನ್ನು ಮತ್ತೆ ವಿಸ್ತರಿಸುವ ಸಾಧ್ಯತೆ ಇಲ್ಲ. ಯಾಕಂದ್ರೆ ಮೂರು ತಿಂಗಳ ಹಿಂದೆಯೇ ಜೂನ್ 30ರವರೆಗೆ ಆಧಾರ್, ಪ್ಯಾನ್ ಲಿಂಕ್ ಮಾಡಲು ಗಡುವನ್ನು ವಿಸ್ತರಿಸಲಾಗಿತ್ತು. ಜೂನ್ 30ರವರೆಗೆ ಅಂದ್ರೆ ಇಂದೇ ಆಧಾರ್, ಪ್ಯಾನ್ ಲಿಂಕ್ ಮಾಡೋಕೆ ಕಡೆಯ ದಿನವಾಗಿದೆ. ಮತ್ತೊಮ್ಮೆ ಈ ಕಾಲಾವಧಿಯನ್ನು ವಿಸ್ತರಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಒಂದು ವೇಳೆ ನೀವು ಇವತ್ತೂ ಪಾನ್, ಆಧಾರ್ ಕಾರ್ಡ್‌ ಅನ್ನು ಲಿಂಕ್ ಮಾಡದಿದ್ರೆ ಏನಾಗುತ್ತೆ. ಈ ಪ್ರಶ್ನೆಗೆ ಉತ್ತರ ಮೊದಲೇ ಹೇಳಿದಂತೆ ನಾಳೆಯಿಂದ ನಿಮ್ಮ ಪ್ಯಾನ್ ಕಾರ್ಡ್‌ ಅನ್ನು ಇನ್ ಆ್ಯಕ್ಟಿವ್ ಮಾಡಲಾಗುತ್ತೆ. ನಿಷ್ಕ್ರಿಯವಾಗುವ ಪ್ಯಾನ್ ಕಾರ್ಡ್‌ ಅನ್ನು ಬಳಸಿದರೆ 10 ಸಾವಿರ ರೂಪಾಯಿವರೆಗೂ ದಂಡ ಅಷ್ಟೇ ಅಲ್ಲ ಜೈಲು ಶಿಕ್ಷೆಗೂ ಗುರಿ ಮಾಡುವ ಸಂಭವವಿದೆ.

ಆಧಾರ್, ಪಾನ್ ಕಾರ್ಡ್‌ನ ಲಿಂಕ್ ಕಡ್ಡಾಯಗೊಳಿಸಿರುವುದರಿಂದ ಎರಡೆರಡು ಪ್ಯಾನ್ ಕಾರ್ಡ್‌ ಅನ್ನು ಬಳಸಿಕೊಂಡು ತೆರಿಗೆ ವಂಚನೆ ಮಾಡುವುದನ್ನು ತಪ್ಪಿಸಬಹುದು. ಲಿಂಕ್ ಆಗಿರುವ ಪ್ಯಾನ್ ಕಾರ್ಡ್‌ ಇಲ್ಲದೆ ಬ್ಯಾಂಕ್‌ನಲ್ಲಿ 50,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ಸರ್ಕಾರದ ತೆರಿಗೆ ಪ್ರಯೋಜನಗಳುನ್ನು ಪಡೆಯಲು ಆಗುವುದಿಲ್ಲ. TDS ಮತ್ತು TCS ಅನ್ನು ಕಡಿತಗೊಳಿಸದಿದ್ದಲ್ಲಿ, ನೀವು ಹೆಚ್ಚಿನ ವೈಯಕ್ತಿಕ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಬೇರೆ ಬೇರೆ ಮಾರ್ಗಗಳನ್ನು ಹುಡುಕುವುದಕ್ಕಿಂತ ಇವತ್ತೇ ನಾಗರಿಕರು ಆಧಾರ್, ಪಾನ್ ಕಾರ್ಡ್‌ ಅನ್ನು ಲಿಂಕ್ ಮಾಡೋದು ಉತ್ತಮ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ಯಾನ್-ಆಧಾರ್ ಕಾರ್ಡ್‌ ಲಿಂಕ್ ಮಾಡಲು ಇಂದೇ ಕಡೆಯ ದಿನ; ಇವತ್ತೂ ನೀವು ಮಾಡದಿದ್ದರೆ ಏನಾಗುತ್ತೆ ಗೊತ್ತಾ?

https://newsfirstlive.com/wp-content/uploads/2023/06/PANCARD.jpg

Load More