newsfirstkannada.com

Chandra Grahan 2023: ಇಂದು ವರ್ಷದ ಕೊನೆಯ ಚಂದ್ರಗ್ರಹಣ.. ಬೆಂಗಳೂರಲ್ಲಿ ಎಷ್ಟು ಗಂಟೆಗೆ ಗೋಚರಿಸಲಿದೆ ಗೊತ್ತಾ?

Share :

28-10-2023

    ವರ್ಷದ ಕೊನೇ ಚಂದ್ರಗ್ರಹಣ ಭಾರತದಲ್ಲಿ ಗೋಚರ!

    ಸೂರ್ಯಗ್ರಹಣ ಆದ 14 ದಿನದ ನಂತರ ಚಂದ್ರಗ್ರಹಣ

    ಚಂದ್ರಗ್ರಹಣ ಭಾರತದಲ್ಲಿ ಭಾಗಶಃ ಗೋಚರಿಸಲಿದೆ

ಇವತ್ತು 2023ರ ಕೊನೆ ಚಂದ್ರಗ್ರಹಣ ಸಂಭವಿಸಲಿದೆ. ಇದೇ ತಿಂಗಳಲ್ಲಿ ನಡೆಯುತ್ತಿರೋ ಎರಡನೇ ಗ್ರಹಣ ಇದು. 14 ದಿನಗಳ ಹಿಂದೆ ಇದೇ ತಿಂಗಳಲ್ಲಿ ಸೂರ್ಯಗ್ರಹಣ ಸಂಭವಿಸಿತ್ತು. ಇವತ್ತು ಚಂದ್ರಗ್ರಹಣ ಭಾರತದಲ್ಲಿ ಭಾಗಶಃ ಗೋಚರಿಸಲಿದೆ. ಗ್ರಹಣದ ಹಿನ್ನೆಲೆಯಲ್ಲಿ ಸಂಜೆ ನಂತರ ದೇವಾಲಯಗಳು ಬಂದ್‌ ಆಗಲಿವೆ.

ಇವತ್ತು ನಭೋ ಮಂಡಲದಲ್ಲಿ ನೆರಳು – ಬೆಳಕಿನ ಆಟ

ವರ್ಷದ 2ನೇ ಮತ್ತು ಕೊನೆ ಚಂದ್ರಗ್ರಹಣ ಇವತ್ತು ಮಧ್ಯರಾತ್ರಿ ಸಂಭವಿಸಲಿದೆ. ಇದೇ ತಿಂಗಳ 14ರಂದು ಸೂರ್ಯಗ್ರಹಣ ನಡೆದಿತ್ತು. ಆದ್ರೆ, ಭಾರತದಲ್ಲಿ ಅದು ಗೋಚರಿಸಿರಲಿಲ್ಲ. ಸೂರ್ಯಗ್ರಹಣ ಆದ 14 ದಿನದ ನಂತರ ಚಂದ್ರಗ್ರಹಣ ಸಂಭವಿಸ್ತಿದ್ದು, ಅಪರೂಪದ ವಿದ್ಯಮಾನಕ್ಕೆ ಭಾರತ ಸಾಕ್ಷಿಯಾಗಲಿದೆ.

ಭೂಮಿಯು ನೇರವಾಗಿ ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಚಂದ್ರಗ್ರಹಣ ಸಂಭವಿಸುತ್ತೆ ಅಂತ ವಿಜ್ಞಾನ ಹೇಳುತ್ತೆ. ಭಾರತದ ಜ್ಯೋತಿಷ್ಯ ಶುಭ-ಅಶುಭ ಫಲಗಳ ಬಗ್ಗೆ ಭವಿಷ್ಯ ನುಡಿಯುತ್ತೆ. ಶುಭ ಶರದ್ ಪೂರ್ಣಿಮಾ ದಿನದಂದು ಸಂಭವಿಸಲಿರುವ ಭಾಗಶಃ ಚಂದ್ರಗ್ರಹಣ ಭಾರತದ ಎಲ್ಲಾ ಸ್ಥಳಗಳಲ್ಲಿ ಗೋಚರಿಸಲಿದೆ.

ಬೆಂಗಳೂರಲ್ಲಿ ಬೆಳಗಿನ ಜಾವ 3.56ರವರೆಗೂ ಗೋಚರ

ಇವತ್ತು ರಾತ್ರಿ 11.31ಕ್ಕೆ ಚಂದ್ರಗ್ರಹಣ ಸಂಭವಿಸಲಿದೆ. ಅಕ್ಟೋಬರ್​29ರ ನಸುಕಿನ ಜಾವ 3.36 ನಿಮಿಷಕ್ಕೆ ಕೊನೆಯಾಗಲಿದೆ. ಇನ್ನು, ಮಧ್ಯರಾತ್ರಿ 1 ಗಂಟೆ 10 ನಿಮಿಷಕ್ಕೆ ಚಂದ್ರಗ್ರಹಣ ಸ್ಪರ್ಶವಾಗಲಿದೆ. ಇನ್ನು, ಚಂದ್ರಗ್ರಹಣ ಮೋಕ್ಷ ಕಾಲ ಮಧ್ಯರಾತ್ರಿ 2.20ಕ್ಕೆ ಆಗಲಿದೆ. ಭಾರತದ ಎಲ್ಲಾ ಸ್ಥಳಗಳಲ್ಲೂ ಚಂದ್ರಗ್ರಹಣ ಗೋಚರವಾಗಲಿದ್ದು, ಬೆಂಗಳೂರಲ್ಲಿ ಅಕ್ಟೋಬರ್​ 29ರ ನಸುಕಿನ ಜಾವ 3.56ರವರೆಗೂ ಕಾಣಸಿಗಲಿದೆ.

ಸಂಜೆ 6 ಗಂಟೆ ಬಳಿಕ ದೇಗುಲಗಳು ಬಂದ್

ಚಂದ್ರಗ್ರಹಣದ ಹಿನ್ನಲೆ ಸಂಜೆ ಸೂರ್ಯಾಸ್ತದವರೆಗೆ ರಾಜ್ಯದ ಹಲವು ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಇದಾದ ಬಳಿಕ ಭಕ್ತರಿಗೆ ದೇವಾಲಯಗಳಿಗೆ ಬಾಗಿಲಿಗೆ ಬೀಗ ಬೀಳಲಿದೆ. ಬೆಂಗಳೂರಿನ ಪ್ರಸಿದ್ಧ ಕಾಡು ಮಲ್ಲಿಕಾರ್ಜುನ ದೇವಾಲಯದಲ್ಲಿ ಗ್ರಹಣಕ್ಕೂ ಮುನ್ನ ವಿಶೇಷ ಪೂಜೆ ನಡೆಯಲಿದೆ. ರಾಹುಗ್ರಸ್ತ ಚಂದ್ರಗ್ರಹವು ಮೇಷ ರಾಶಿ, ಅಶ್ವಿನಿ ನಕ್ಷತ್ರದಲ್ಲಿ ಸಂಭವಿಸ್ತಿದೆ. ಹೀಗಾಗಿ ಮೇಷ ರಾಶಿ, ಅಶ್ವಿನಿ ನಕ್ಷತ್ರದವರು, ಸಂಜೆಯೇ ಪೂಜೆ ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವಂತೆ ಅರ್ಚಕರು ಸಲಹೆ ನೀಡ್ತಾರೆ.

ಇನ್ನು, ನಾಡಿನ ಶಕ್ತಿ ದೇಗುಲಗಳಾದ ಮೈಸೂರಿನ ಚಾಮುಂಡಿ ಬೆಟ್ಟ, ಬಾದಾಮಿಯ ಬನಶಂಕರಿ ದೇಗುಲಗಳಲ್ಲೂ ಕೂಡಾ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಸಂಜೆಯ ದರ್ಶನ ರದ್ದಾಗಲಿದೆ. ಚಾಮುಂಡಿ ಬೆಟ್ಟದಲ್ಲಿ ಸಂಜೆ 6 ಗಂಟೆ ಬಳಿಕ ಕ್ಲೋಸ್​ ಆಗಲಿದೆ. ಆದರೆ ಬನಶಂಕರಿ ದೇಗುಲದಲ್ಲಿ ಚಂದ್ರಗ್ರಹಣ ವೇಳೆ ಭಕ್ತರಿಗೆ ಗರ್ಭಗುಡಿ ದರ್ಶನಕ್ಕೆ ನಿಷೇಧ ಇದ್ದು, ಹೊರಗಡೆಯಿಂದ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಟ್ಟಾರೆ 2023ರ ಕೊನೆ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸಲಿದ್ದು, ನಬೋ ಮಂಡಲದಲ್ಲಿನ ಈ ಕೌತುಕ ಕ್ಷಣಗಳನ್ನು ವೀಕ್ಷಿಸಲು ವಿಜ್ಞಾನಿಗಳು ಕಾತುರರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chandra Grahan 2023: ಇಂದು ವರ್ಷದ ಕೊನೆಯ ಚಂದ್ರಗ್ರಹಣ.. ಬೆಂಗಳೂರಲ್ಲಿ ಎಷ್ಟು ಗಂಟೆಗೆ ಗೋಚರಿಸಲಿದೆ ಗೊತ್ತಾ?

https://newsfirstlive.com/wp-content/uploads/2023/10/Chandra-grahana.jpg

Load More