newsfirstkannada.com

ಇಂದು ಮೂರನೇ ದಿನದ ಅಧಿವೇಶನ; ಗ್ಯಾರಂಟಿ ಚರ್ಚೆ ನಡೆಸದಂತೆ ಪ್ಲಾನ್​ ಮಾಡಿದೆಯಾ ಕಾಂಗ್ರೆಸ್​​?

Share :

05-07-2023

    ಮೊದಲು ನಿಲುವಳಿ ಸೂಚನೆ ಕೊಟ್ಟವರಿಗೆ ಚರ್ಚೆಗೆ ಅವಕಾಶ

    ಗ್ಯಾರಂಟಿ ಕುರಿತು ಹೆಚ್ಚು ಚರ್ಚೆಯಾಗದಂತೆ ಕಾಂಗ್ರೆಸ್ ಪ್ಲಾನ್

    ಗ್ಯಾರಂಟಿ ಕುರಿತು ಧರಣಿ ಮುಂದುವರಿಸಲು ಬಿಜೆಪಿ ನಿರ್ಧಾರ

ಇಂದು ವಿಧಾನಸೌಧದಲ್ಲಿ ಮೂರನೇ ದಿನದ ಅಧಿವೇಶನ ನಡೆಯಲಿಕ್ಕಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳು ವಿಧಾನಸಭಾ ಕಲಾಪದಲ್ಲಿ ಹಗ್ಗಜಗ್ಗಾಟ ನಡೆಸುವ ಸಾಧ್ಯತೆ ಇದೆ. ಹೀಗಾಗಿ
ಪ್ರತಿಪಕ್ಷ ಬಿಜೆಪಿ ಗ್ಯಾರಂಟಿ ಕುರಿತು ಧರಣಿ ಮುಂದುವರಿಸಲು ನಿರ್ಧರಿಸಿವೆ. ಗ್ಯಾರಂಟಿ ಜಾರಿಯ ಲೋಪ ಕುರಿತು ಚರ್ಚಿಸಲು ಅವಕಾಶ ನೀಡುವಂತೆ ಆಗ್ರಹಿಸಲು ಮುಂದಾಗಿದೆ.

ನಿಯಮದ ಪ್ರಕಾರವೇ ಕಲಾಪ

ನಿನ್ನೆ ನಡೆದ ಕಲಾಪದಲ್ಲಿ ಸ್ಪೀಕರ್ ಯು ಟಿ ಖಾದರ್ ನಿಯಮದ ಪ್ರಕಾರವೇ ಕಲಾಪ ನಡೆಯಲಿದೆ ಎಂದು ಹೇಳಿದ್ದಾರೆ. ನಿಯಮದ ಪ್ರಕಾರ ಮೊದಲು ನಿಲುವಳಿ ಸೂಚನೆ ಕೊಟ್ಟಿರುವವರಿಗೆ ಚರ್ಚೆಗೆ ಅವಕಾಶ ಮಾಡಿಕೊಡಲಿದ್ದಾರೆ. ಆದರೆ ಬಿಜೆಪಿಗಿಂತ ಮೊದಲೇ ಜೆಡಿಎಸ್ ನಿಂದ ನಿಲುವಳಿ ಸೂಚನೆ ನೀಡಿದ್ದಾರೆ.

ಸ್ಪೀಕರ್ ನಿಲುವಿಗೆ ತೀವ್ರ ವಿರೋಧ

ಸ್ಪೀಕರ್ ಯು ಟಿ ಖಾದರ್ ಇಂದು ಜೆಡಿಎಸ್ ಗೆ ಚರ್ಚೆಗೆ ಅವಕಾಶ ನೀಡಲಿದ್ದು, ಬಿಜೆಪಿ ಸದಸ್ಯರು ಸ್ಪೀಕರ್ ನಿಲುವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಮುಖ ಪ್ರತಿಪಕ್ಷವಾಗಿದ್ದರೂ ಬಿಜೆಪಿಗೆ ಅವಕಾಶ ಕೊಟ್ಟಿಲ್ಲ ಎಂದು ದೂರಿದ್ದಾರೆ.

ಕೊಬ್ಬರಿ ಖರೀದಿ ಕುರಿತಾಗಿ ಚರ್ಚೆ

ಇಂದಿನ ಅಜೆಂಡಾದಲ್ಲಿ ಜೆಡಿಎಸ್ ಕೊಟ್ಟಿರುವ ಕೊಬ್ಬರಿ ಖರೀದಿ ಕುರಿತಾದ ವಿಷಯದ ಉಲ್ಲೇಖವಾಗಿ ಚರ್ಚಿಸಲಿದ್ದಾರೆ. ಹಾಗಾಗಿ ಅಜೆಂಡಾದಲ್ಲಿ ಬಿಜೆಪಿ ಕೊಟ್ಟಿರುವ ನಿಲುವಳಿ ಸೂಚನೆಯ ಪ್ರಸ್ತಾಪವೇ ಇಲ್ಲ. ಈ ವಿಚಾರವಾಗಿ ಬಿಜೆಪಿ ಇಂದು ಸಹ ಗ್ಯಾರಂಟಿ ಬಗ್ಗೆ ಚರ್ಚೆಗೆ ಪಟ್ಟು ಹಿಡಿಯಲಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಪ್ಲಾನ್

ಇನ್ನು ಗ್ಯಾರಂಟಿ ಕುರಿತು ಹೆಚ್ಚು ಚರ್ಚೆಯಾಗದಂತೆ ಕಾಂಗ್ರೆಸ್ ಪ್ಲಾನ್ ಮಾಡಿದೆ. ನಿಯಮದಂತೆಯೇ ಆಡಳಿತಾರೂಢ ಕಾಂಗ್ರೆಸ್ ಕಲಾಪ ನಡೆಸಲು ಸ್ಪೀಕರ್ ಬೆನ್ನಿಗೆ ನಿಲ್ಲಲಿದೆ.
ಚರ್ಚೆಗಾಗಿ ಬಿಜೆಪಿ ಹೋರಾಟ ನಡೆಸಲು ಮುಂದಾಗಿರುವ ಕಾರಣ ಕೋಲಾಹಲ ಸೃಷ್ಟಿಯಾಗಲಿದೆಯಾ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಮೂರನೇ ದಿನದ ಅಧಿವೇಶನ; ಗ್ಯಾರಂಟಿ ಚರ್ಚೆ ನಡೆಸದಂತೆ ಪ್ಲಾನ್​ ಮಾಡಿದೆಯಾ ಕಾಂಗ್ರೆಸ್​​?

https://newsfirstlive.com/wp-content/uploads/2023/07/Vidhana-sabha-kalapa.jpg

Load More