ವೃತ್ತಿಗೆ ಸಂಬಂಧಿಸಿದಂತೆ ಸಮಾಧಾನ ಸಿಗಬಹುದು
ಮಧುಮೇಹ ಇರುವವರು ಹೆಚ್ಚು ಗಮನಹರಿಸಬೇಕು
ಹೊಸ ಉದ್ಯಮಗಳನ್ನು ಆರಂಭಿಸುವ ಯೋಗವಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ಸಾರ್ವಜನಿಕ ಕ್ಷೇತ್ರದಲ್ಲಿ ಮಾಡುವ ಸೇವೆಯಿಂದ ಗೌರವ ಪ್ರಾಪ್ತಿಯಾಗಬಹುದು
- ವಿದ್ಯಾವಂತರ ಸಂಪರ್ಕ ಸಿಗಲಿದೆ
- ಕುಟುಂಬದ ಸಮಸ್ಯೆಗಳು ದೂರವಾಗಬಹುದು
- ಅನುಪಯುಕ್ತ ಕೆಲಸಗಳಲ್ಲಿ ಸಮಯ ವ್ಯರ್ಥವಾಗಬಹುದು
- ಇಂದು ವಿದ್ಯಾರ್ಥಿಗಳಿಗೆ ಶುಭವಿದೆ
- ನಿಮ್ಮ ಮಾತು ವಿರೂಪವಾಗದಂತೆ ಗಮನಿಸಿ
- ಇಷ್ಟದೇವತಾ ಆರಾಧನೆ ಮಾಡಿ
ವೃಷಭ
- ನಿಮ್ಮ ಯೋಗ್ಯತಾನುಸಾರ ಗೌರವ ಪಡೆಯುತ್ತೀರಿ
- ಮನೆಯಲ್ಲಿ ಸ್ವಲ್ಪ ಹೊಂದಾಣಿಕೆ ಇರಲಿ
- ದೂರದ ಪ್ರಯಾಣದ ಬಗ್ಗೆ ಚಿಂತಿಸುತ್ತೀರಿ
- ವೃತ್ತಿಗೆ ಸಂಬಂಧಿಸಿದಂತೆ ಸಮಾಧಾನ ಸಿಗಬಹುದು
- ರಾಜಕೀಯ ವ್ಯಕ್ತಿಗಳಿಗೆ ಶುಭವಿದೆ
- ಉತ್ಸಾಹದಲ್ಲಿ ಯಾವ ನಿರ್ಧಾರಗಳನ್ನು ಮಾಡಬೇಡಿ
- ಅಶ್ವತ್ಥ ಪ್ರದಕ್ಷಿಣೆ ಮಾಡಿ
ಮಿಥುನ
- ಮೇಲಾಧಿಕಾರಿಗಳ ಜೊತೆ ಸೌಹಾರ್ದತೆಯಿಂದ ವರ್ತಿಸಿ
- ಮಕ್ಕಳ ಸಂಪೂರ್ಣ ಸಹಕಾರ ಇರಲಿದೆ
- ಏಕಮುಖವಾದ ನಿರ್ಧಾರದಿಂದ ತೊಂದರೆಯಾಗಬಹುದು
- ಪ್ರೀತಿ ಪಾತ್ರರಿಗೆ ಸಹಾಯ ಮಾಡುತ್ತೀರಿ
- ಮನಸ್ಸಿಗೆ ಸಮಾಧಾನ ಇರುವುದಿಲ್ಲ
- ಮನೆಯಲ್ಲಿ ಯಾವುದೇ ರೀತಿಯ ಅಶಾಂತಿಗೆ ಕಾರಣವಾಗಬೇಡಿ
- ಗೋಸೇವೆಯನ್ನು ಮಾಡಿ
ಕಟಕ
- ಸಾಧನೆಗಳತ್ತ ನಿಮ್ಮ ಗಮನ ಇರುತ್ತದೆ
- ವ್ಯಾವಹಾರಿಕವಾಗಿ ನಿರೀಕ್ಷೆಗಿಂತ ಲಾಭಗಳಿಸುತ್ತೀರಿ
- ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ಮಧುಮೇಹ ಇರುವವರು ಹೆಚ್ಚು ಗಮನಹರಿಸಬೇಕು
- ಆಸ್ತಿ ವಿಚಾರವಾಗಿ ಸಮಸ್ಯೆಯಾಗಬಹುದು
- ತಾಯಿಯವರ ಆಶೀರ್ವಾದ ಪಡೆಯಿರಿ
- ಗಣಪತಿಗೆ ಬಿಳಿ ಎಕ್ಕದ ಹೂ ಅರ್ಪಣೆ ಮಾಡಿ
ಸಿಂಹ
- ಹಳೆಯ ಸ್ನೇಹಿತರ ಭೇಟಿ ಮಾಡುವುದರಿಂದ ಸಂತೋಷ ಆಗಲಿದೆ
- ಭೂ ವ್ಯವಹಾದಿಂದ ಲಾಭವಿದೆ
- ವೈದ್ಯಕೀಯ ರಂಗದವರಿಗೆ ಶುಭವಿದೆ
- ಸಾಮರ್ಥ್ಯಕ್ಕಿಂತ ಹೆಚ್ಚು ಸಾಧನೆ ಮಾಡುತ್ತೀರಿ
- ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನಹರಿಸಿ
- ನಿಮ್ಮ ವೈಯಕ್ತಿಕ ವಿಚಾರಗಳಿಗೆ ಆದ್ಯತೆ ಇರಲಿ
- ಧ್ಯಾನದ ಮೊರೆ ಹೋಗಿ
ಕನ್ಯಾ
- ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು
- ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ
- ನಿಮ್ಮ ಪ್ರತಿಭೆಗೆ ತಕ್ಕ ಪ್ರತಿಫಲ ಸಿಗಬಹುದು
- ಮಕ್ಕಳು ಎಲ್ಲ ರೀತಿಯಿಂದ ಸಹಕರಿಸುತ್ತಾರೆ
- ನವದಂಪತಿಗಳಿಗೆ ಹಿರಿಯರ ಆಶೀರ್ವಾದ ಸಿಗಲಿದೆ
- ಯಾವುದೇ ಕೆಟ್ಟ ನಿರ್ಧಾರಗಳು ಬೇಡ
- ನವಗ್ರಹರ ಪ್ರಾರ್ಥನೆ ಮಾಡಿ
ತುಲಾ
- ಹೊಸ ಉದ್ಯಮಗಳನ್ನು ಆರಂಭಿಸುವ ಯೋಗವಿದೆ
- ನಿಮ್ಮ ದಕ್ಷತೆ ಹೆಚ್ಚಾಗಬಹುದು
- ಬೇರೆಯವರಿಗೆ ಮಾರ್ಗದರ್ಶನ ಮಾಡುತ್ತೀರಿ
- ಬೇರೆಯವರಿಂದ ನಿಮಗೆ ಅನುಕೂಲ ಆಗಲಿದೆ
- ತೊಂದರೆಯಲ್ಲಿರುವವರಿಗೆ ಸಹಾಯ ಮಾಡಿ
- ಸಂಬಂಧಿಕರಿಗೆ ನಿಮ್ಮ ಸ್ವಭಾವ ಹಿಡಿಸದೆ ಇರಬಹುದು
- ರುದ್ರಾರಾಧನೆ ಮಾಡಿ
ವೃಶ್ಚಿಕ
- ಇಂದು ಕೆಲವು ಸಮರ್ಥನೆಗಳನ್ನು ಮಾಡಿಕೊಳ್ಳುತ್ತೀರಿ
- ನಿಮ್ಮ ಬುದ್ಧಿವಂತಿಕೆಯನ್ನ ಜನ ಮೆಚ್ಚುತ್ತಾರೆ
- ವಿದ್ಯಾರ್ಥಿಗಳಿಗೆ ವಿನಾಕಾರಣ ಸಮಯ ವ್ಯರ್ಥ
- ನಿಮ್ಮ ವಾತಾವರಣದಲ್ಲಿ ಅನಿರೀಕ್ಷಿತ ಬದಲಾವಣೆಯಾಗಬಹುದು
- ಯಾರನ್ನು ತುಂಬಾ ನಂಬಿಕೊಂಡು ನಿರಾಸೆ ಹೊಂದಬೇಡಿ
- ಹಿರಿಯರ ಅನುಭವದ ಮಾತು ಉಪಕಾರವಾಗಲಿದೆ
- ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಯಾರ ಜೊತೆಗೂ ವಾಗ್ವಾದವನ್ನು ಮಾಡಬೇಡಿ
- ಮನೆಯಲ್ಲಿ ಎಲ್ಲಾ ಕೆಲಸಗಳು ಅಂದುಕೊಂಡಂತೆ ಆಗಲಿದೆ
- ಮಕ್ಕಳ ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡುತ್ತೀರಿ
- ವಸ್ತ್ರಾಭರಣ ಖರೀದಿಯಿಂದ ಖುಷಿಯಾಗಲಿದೆ
- ಮಂಗಳಕಾರ್ಯದ ಚರ್ಚೆಯಾಗಬಹುದು
- ಮನೆಯ ವಾತಾವರಣ ಚೆನ್ನಾಗಿರಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಕರ
- ಉನ್ನತ ಶಿಕ್ಷಣದಲ್ಲಿ ಹೆಚ್ಚು ಸಾಧನೆ ಮಾಡಬಹುದು
- ಪ್ರೇಮಿಗಳಿಗೆ ಕೆಲವು ಕೌಟುಂಬಿಕ ಸಮಸ್ಯೆ ಉಂಟಾಗಬಹುದು
- ಮಕ್ಕಳ ವಿಚಾರಕ್ಕೆ ಕೆಲವು ಗೊಂದಲಗಳಿರುತ್ತವೆ
- ಮಹಿಳೆಯರು ಆರೋಗ್ಯದ ಬಗ್ಗೆ ಗಮನಹರಿಸಿ
- ಅತಿಯಾದ ತಿರುಗಾಟ ಅಥವಾ ಪ್ರಯಾಣ ಒಳ್ಳೆಯದಲ್ಲ
- ಸಹೋದರ ವರ್ಗದಿಂದ ಒಳ್ಳೆಯ ವಾರ್ತೆ ಕೇಳಬಹುದು
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಕುಂಭ
- ರೋಮಾಂಚನಕಾರಿ ಪ್ರವಾಸಕ್ಕೆ ಮುಂದಾಗಬಹುದು
- ಹಳೆಯ ಸ್ನೇಹಿತರಿಂದ ದೂರ ಆಗುತ್ತೀರಿ
- ಮನೆಯಲ್ಲಿ ಅಶಾಂತಿಯ ವಾತಾವರಣ
- ವಿನಾಕಾರಣ ಜಗಳಕ್ಕೆ ಅವಕಾಶವಿದೆ
- ಇಂದು ಯಾರನ್ನು ನೀವು ನಿಂದನೆ ಮಾಡಬೇಡಿ
- ಮಾನಸಿಕವಾಗಿ ಸಂತೋಷದಿಂದಿರಿ ಎಲ್ಲವೂ ಸಿಗಲಿದೆ
- ಶಕ್ತಿದೇವತಾ ಆರಾಧನೆ ಮಾಡಿ
ಮೀನ
- ಬೇರೆಯವರ ಬಗ್ಗೆ ಒಳ್ಳೆಯ ಮಾತನಾಡುತ್ತೀರಿ
- ನಿಮ್ಮ ಶಿಸ್ತು ನಿಮಗೆ ಮಾರ್ಗದರ್ಶಿಯಾಗಬಹುದು
- ತಂದೆಯವರಿಗೆ ಆಘಾತ ಅಥವಾ ಅಪಘಾತದ ಸಂಭವವಿದೆ ಜಾಗ್ರತೆವಹಿಸಿ
- ಹಣದ ವಿಚಾರವಾಗಿ ಸ್ವಲ್ಪ ಬದಲಾಗಬೇಕು
- ಮಕ್ಕಳಿಂದ, ಮೊಮ್ಮಕ್ಕಳಿಂದ ಸಂತೋಷ ಆಗಲಿದೆ
- ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ
- ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಸೂರ್ಯಗ್ರಹನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ