ವೈದ್ಯರು ಔಷಧಿಗೆ ತುಂಬಾ ಹಣ ಖರ್ಚು ಮಾಡುವ ದಿನವಾಗಿರಲಿದೆ
ಸಾಂಸಾರಿಕ ವಿಚಾರದಲ್ಲಿ ಬೇರೆಯವರಿಂದ ಸಮಸ್ಯೆಯಾಗಬಹುದು.!
ಯಾರಿಗೆ ಸಹಾಯ ಗೌರವ ನೀಡುತ್ತಿರೋ ಅವರೇ ಶತ್ರುಗಳಾಗುತ್ತಾರೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪೂರ್ವಾಷಾಡ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ
ಇರಲಿದೆ.
ಮೇಷ ರಾಶಿ

- ಕಾರ್ಯ ಕ್ಷೇತ್ರದಲ್ಲಿ ಉತ್ತಮ ನಿರ್ವಹಣೆ ಮಾಡಲು ಅವಕಾಶವಿದೆ
- ಇಂದು ಹೊಸ ಉದ್ಯೋಗಕ್ಕೆ ಅವಕಾಶವಿದೆ
- ಪ್ರೇಮಿಗಳಿಗೆ ಶುಭವಿದೆ ಆದರೆ ಮದುವೆಗೆ ಅಡ್ಡಿಯಾಗಬಹುದು
- ಸ್ನೇಹಿತರ ಸಹಾಯ ಸಹಕಾರ ಲಭ್ಯವಾಗಲಿದೆ
- ದಾಂಪತ್ಯ ಜೀವನ ಚೆನ್ನಾಗಿರಲಿದೆ
- ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆ ಕಾಣಲಿದೆ ಅಗತ್ಯವಾಗಿ ಪರಿಹರಿಸಿಕೊಳ್ಳಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ಸ್ನೇಹಿತ ವರ್ಗದಿಂದ ಉತ್ತಮವಾದ ಸುದ್ದಿ ಕೇಳುತ್ತೀರಿ
- ಮನೆಯ ವಾತಾವರಣ ಚೆನ್ನಾಗಿರಲಿದೆ
- ಅಂದುಕೊಂಡ ದೊಡ್ಡ ವ್ಯವಹಾರ ಸುಲಭವಾಗಿ ಆಗಲಿದೆ
- ಮಹಿಳೆಯರು ದುಬಾರಿ ವಸ್ತುಗಳನ್ನು ಖರೀದಿಸಬಹುದು
- ಮಕ್ಕಳು ವಿಶೇಷವಾದ ಚಟುವಟಿಕೆಗಳ ಬಗ್ಗೆ ಆಸಕ್ತಿ ವಹಿಸಬೇಕು
- ಪ್ರಯಾಣ ಅಥವಾ ಪ್ರವಾಸಕ್ಕೆ ಯೋಜನೆ ಹಾಕುತ್ತೀರಿ
- ಮನೆದೇವರ ಪ್ರಾರ್ಥನೆ ಮಾಡಿ
ಮಿಥುನ

- ನಿಮ್ಮ ಜಾಣ್ಮೆ, ಶಕ್ತಿ ,ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅವಕಾಶವಿದೆ
- ಇಂದು ವಿದ್ಯಾರ್ಥಿಗಳಿಗೆ ಯಶಸ್ವಿದೆ
- ಪ್ರೇಮಿಗಳಿಗೆ ಸವಾಲುಗಳಿದ್ದರೂ ಶುಭವಿದೆ
- ಉನ್ನತ ಅಧಿಕಾರಿಗಳ ಜೊತೆ ಉತ್ತಮವಾಗಿ ನಡೆದುಕೊಳ್ಳಿ
- ಈ ದಿನ ಒಟ್ಟಾರೆ ಸಾಧಾರಣವಾಗಿದೆ
- ನಕಾರಾತ್ಮಕ ಚಿಂತನೆಗಳು ಬೇಡ
- ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ
ಕಟಕ

- ಹಿರಿಯರ ವ್ಯವಹಾರದಿಂದ ನಿಧಾನವಾಗಬಹುದು
- ಅಂಧತ್ವದಿಂದ ಯಾರನ್ನು ನಂಬಬೇಡಿ
- ಮಾನಸಿಕವಾದ ಒತ್ತಡದಿಂದ ತಪ್ಪಿಸಿಕೊಳ್ಳಿ
- ವಿವಾದಾತ್ಮಕ ವಿಷಯಗಳಿಂದ ದೂರವಿರಿ
- ತಾಯಿಯಿಂದ ಕೆಲವು ಸಮಸ್ಯೆಗಳಾಗಬಹುದು
- ಮನೆಯಲ್ಲಿ ಹೊಂದಾಣಿಕೆಯಿರಲಿ
- ನವಗ್ರಹರನ್ನು ಆರಾಧನೆ ಮಾಡಿ ಅದರಲ್ಲೂ ಚಂದ್ರ ಗ್ರಹನನ್ನು ಪ್ರಾರ್ಥನೆ ಮಾಡಿ
ಸಿಂಹ

- ವಿದ್ಯಾರ್ಥಿಗಳಿಗೆ ಉತ್ತಮವಾದ ಫಲಿತಾಂಶವಿದೆ
- ವ್ಯಾಪಾರಸ್ಥರಿಗೆ ಉತ್ತಮವಾದ ದಿನ
- ಪ್ರೇಮಿಗಳಲ್ಲಿ ಪರಸ್ಪರ ಅನುಮಾನ ಉಂಟಾಗಿ ಸಮಸ್ಯೆಯಾಗಬಹುದು
- ಹಣ ಚಿನ್ನದ ಬಗ್ಗೆ ಜಾಗ್ರತೆವಹಿಸಿ
- ಮನೆಯಲ್ಲಿ ಅಶಾಂತಿಗೆ ನೀವು ಕಾರಣರಾಗಬೇಡಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ತುಂಬಾ ಒತ್ತಡವಿರುವ ದಿನ
- ಆರೋಗ್ಯದಲ್ಲಿ ತುಂಬಾ ಏರುಪೇರು ಉಂಟಾಗಬಹುದು
- ನಿಮ್ಮ ವಿವಾದಗಳನ್ನು ಪರಿಹರಿಸಿಕೊಳ್ಳಿ
- ಸಾಂಸಾರಿಕವಾಗಿ ಉತ್ತಮ ಹೊಂದಾಣಿಕೆಯಿರಲಿ
- ಮಕ್ಕಳ ಬಗ್ಗೆ ತುಂಬಾ ವೈಶಮ್ಯ ಬೆಳೆಯುತ್ತಿದೆ
- ತಾಳ್ಮೆಯಿಂದ ಎಲ್ಲವನ್ನು ಬಗೆಹರಿಸಿಕೊಳ್ಳಿ ಶುಭವಿದೆ
- ಕುಲದೇವತಾ ಪ್ರಾರ್ಥನೆ ಮಾಡಿ
ತುಲಾ

- ಸಹೋದ್ಯೋಗಿಗಳಿಂದ ಬೆಂಬಲ ಪಡೆಯುತ್ತೀರಿ
- ಸಂಕೀರ್ಣ ವಿಚಾರಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಿ
- ಬೇರೆಯವರ ಅಶಿಸ್ತನ್ನು ಸಹಿಸುವುದಿಲ್ಲ
- ಮನೆಯವರ ಜೊತೆ ಆನಂದದಿಂದಿರಿ
- ಮಕ್ಕಳ ಅಭ್ಯುದಯಕ್ಕಾಗಿ ಚಿಂತಿಸಿ ನಿರ್ಧಾರ ಮಾಡಿ
- ಮನೆಯಲ್ಲಿ ಸಡಗರದ ವಾತಾವರಣ ಇರಲಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ

- ಮಾನಸಿಕ ನೋವು ನಿಮಗೆ ದೌರ್ಬಲ್ಯವಾಗಬಹುದು
- ಮನೆಯಲ್ಲಿ ಅತಿಯಾದ ಒಂಟಿತನ ಒಳ್ಳೆಯದಲ್ಲ
- ಮದುವೆಯ ವಿಚಾರದಲ್ಲಿ ಬೇಸರವಾಗಬಹುದು
- ಇಂದು ಆರ್ಥಿಕವಾಗಿ ಲಾಭವಿದೆ
- ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲವಿದೆ
- ತಾಯಿ ಮಕ್ಕಳಲ್ಲಿ ಹೊಂದಾಣಿಕೆ ತುಂಬಾ ಅಗತ್ಯವಿದೆ
- ಈಶ್ವರನ ಆರಾಧನೆ ಮಾಡಿ
ಧನುಸ್ಸು

- ಕೆಲಸದಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತೀರಿ
- ಅಸೂಯೆಯಿಂದ ಜನರು ನಿಮ್ಮ ಕೆಲಸಗಳಿಗೆ ಅಡ್ಡಿ ಮಾಡುತ್ತಾರೆ
- ಸಂಬಂಧಿಕರ ಮದುವೆ ವಿಚಾರದಲ್ಲಿ ನಿಮಗೆ ಅವಮಾನ ಆಗಬಹುದು
- ಬೇರೆಯವರ ವಿಚಾರದಿಂದ ದೂರ ಉಳಿಯುವುದೇ ಉತ್ತಮ
- ಹೆಚ್ಚು ರಕ್ತದ ಒತ್ತಡ ಇರುವವರಿಗೆ ಸ್ವಲ್ಪ ಸಮಸ್ಯೆಯಾಗಬಹುದು
- ವೈದ್ಯರು ಔಷಧಿಗೆ ತುಂಬಾ ಹಣ ಖರ್ಚು ಮಾಡುವ ದಿನವಾಗಿರಲಿದೆ
- ಸಾಯಿಬಾಬಾರ ಪ್ರಾರ್ಥನೆ ಮಾಡಿ
ಮಕರ

- ಜವಾಬ್ದಾರಿ ಕೆಲಸಗಳಿಗೆ ಅಡ್ಡಿಯಾಗಬಹುದು
- ಯಾರಿಗೆ ಸಹಾಯ ಗೌರವ ನೀಡುತ್ತಿರೋ ಅವರೇ ಶತ್ರುಗಳಾಗುತ್ತಾರೆ
- ನಿಮ್ಮ ಮಾತಿಗೆ ಬೆಲೆ ಕಡಿಮೆಯಾಗಬಹುದು
- ಸಾರ್ವಜನಿಕ ಕಾರ್ಯದಲ್ಲಿ ಭಾಗಿಗಳಾಗುತ್ತೀರಿ
- ಜನರು ನಿಮ್ಮನ್ನು ನಂಬಿದರೆ ಉಳಿಸಿಕೊಳ್ಳಿ
- ಯಾರೊಂದಿಗೂ ವಾದ-ವಿವಾದಗಳು ಬೇಡ
- ಶಕ್ತಿದೇವತಾ ಆರಾಧನೆ ಮಾಡಿ
ಕುಂಭ

- ಸಾಂಸಾರಿಕ ವಿಚಾರದಲ್ಲಿ ಬೇರೆಯವರಿಂದ ಸಮಸ್ಯೆಯಾಗಬಹುದು
- ಅಪರಿಚಿತರ ಬಗ್ಗೆ ಜಾಗ್ರತೆಯಿರಲಿ
- ನಿಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ
- ಶಿಕ್ಷಣದಲ್ಲಿ ಉತ್ತಮ ಫಲಿತಾಂಶವಿದೆ
- ತಂದೆ ತಾಯಿಯರಲ್ಲಿ ವಿನಾಕಾರಣ ನಿಷ್ಠೂರವಾಗುತ್ತೀರಿ
- ನಿಮ್ಮದಲ್ಲದ ಕೆಲಸಕ್ಕೆ ಭಾಗಿಗಳಾಗಬೇಡಿ
- ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ
ಮೀನ

- ನಡೆಯುತ್ತಿರುವ ಕೆಲಸಗಳು ತಕ್ಷಣ ನಿಲ್ಲಬಹುದು
- ಸಹೋದರ ವರ್ಗದಲ್ಲಿ ತೊಂದರೆಯಾಗಬಹುದು
- ಹಣದ ವಿಚಾರದಲ್ಲಿ ಕುಟುಂಬದಲ್ಲಿ ಅಶಾಂತಿ
- ಬೇರೆಯವರಿಂದ ಅವಮಾನಿತರಾಗುತ್ತೀರಿ
- ಕಾನೂನಿನ ವಿಚಾರದಲ್ಲಿ ಸ್ವಲ್ಪ ತೊಡಕಿದೆ ಗಮನಿಸಿ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ