ಆಸ್ತಿಯ ವಿಚಾರಕ್ಕೆ ಇದ್ದ ಅಡತಡೆ ನಿವಾರಣೆಯಾಗಲಿದೆ
ದೇಹಾಲಸ್ಯ ಅಥವಾ ಸೋಮಾರಿತನ ನಿಮ್ಮನ್ನು ಕಾಡಬಹುದು
ಸಹೋದರ ವರ್ಗದ ಸಹಾಯ, ಸಹಕಾರ ದೊರೆಯಲಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಷಷ್ಠೀ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ

- ಸಾಹಸ ಚಟುವಟಿಕೆಗಳತ್ತ ಗಮನ ಕೊಡುತ್ತೀರಿ
- ಪ್ರಮುಖ ಕೆಲಸಗಳಿಗೆ ಉತ್ತಮವಾದ ದಿನ
- ಸಹೋದರ ವರ್ಗದ ಸಹಾಯ, ಸಹಕಾರ ದೊರೆಯಲಿದೆ
- ಇಂದು ಸಾಲದ ವಿಚಾರ ಬೇಡ
- ಅನಗತ್ಯವಾದ ಪ್ರಯಾಣವನ್ನು ಮುಂದೂಡಿ
- ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ವೃಷಭ

- ಕುಟುಂಬದವರ ಬೆಂಬಲ ಕಡಿಮೆ ಇರುವ ದಿನ
- ನ್ಯಾಯಾಲಯದ ಪ್ರಕರಣಗಳಿದ್ದರೆ ಇತ್ಯರ್ಥವಾಗಲಿದೆ
- ಮಕ್ಕಳ ಬಗ್ಗೆ ಹೆಚ್ಚು ಕಾಳಜಿವಹಿಸಿ
- ನಿಮ್ಮ ಕೆಲವು ಕೆಲಸ ನಿಧಾನಗತಿ ಹೊಂದಲಿದೆ
- ದೇಹಾಲಸ್ಯ ಅಥವಾ ಸೋಮಾರಿತನ ನಿಮ್ಮನ್ನು ಕಾಡಬಹುದು
- ನಿರ್ದಿಷ್ಟ ಅಥವಾ ಸ್ಥಿರವಾದ ಚಿಂತನೆ ಮಾಡಿ ಶುಭವಿದೆ
- ನವಗ್ರಹರನ್ನು ಆರಾಧನೆ ಮಾಡಿ
ಮಿಥುನ

- ವ್ಯಾವಹಾರಿಕವಾಗಿ ಉತ್ತಮ ಸುದ್ದಿ ಕೇಳುತ್ತೀರಿ
- ಕುಟುಂಬ ಸದಸ್ಯರ ಜೊತೆ ವ್ಯಾವಹಾರಿಕ ವಿಚಾರವನ್ನು ಚರ್ಚೆ ಮಾಡುತ್ತೀರಿ
- ಆಸ್ತಿಯ ವಿಚಾರಕ್ಕೆ ಇದ್ದ ಅಡತಡೆ ನಿವಾರಣೆಯಾಗಲಿದೆ
- ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ
- ನಿಮ್ಮ ಆಲೋಚನೆಗಳಿಗೆ ಮಾನ್ಯತೆ ಇದೆ
- ಮನಸ್ಸಿನಲ್ಲಿ ದೀರ್ಘಕಾಲದ ಯೋಚನೆ ಇರಲಿದೆ
- ಕುಲದೇವತಾ ಪ್ರಾರ್ಥನೆ ಮಾಡಿ
ಕಟಕ

- ವ್ಯಾವಹಾರಿಕ ಲಾಭಕ್ಕೆ ಅವಕಾಶವಿದೆ
- ಸಮಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಿ
- ವ್ಯಾವಹಾರಿಕವಾಗಿ ವಿಶೇಷವಾದ ಆಸಕ್ತಿ ಹೊಂದುತ್ತೀರಿ
- ಇಂದು ಕೋಪದಿಂದ ವರ್ತಿಸಬೇಡಿ
- ಮನೆಯ ಹಿತಕ್ಕಾಗಿ ಕೆಲವು ಯೋಜನೆಗಳನ್ನು ಹಾಕುತ್ತೀರಿ
- ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಲಿದೆ
- ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ
ಸಿಂಹ

- ಸ್ಪರ್ಧಾತ್ಮಕ ಭಾವನೆ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿಯಲಿದೆ
- ಬೇರೆಯವರನ್ನ ನಂಬಿ ಕೆಲಸವನ್ನು ಮಾಡಬೇಡಿ
- ಸರಿಯಾದ ನಿರ್ಧಾರಗಳಿಂದ ಯಶಸ್ಸಿದೆ
- ಅಧಿಕ ಖರ್ಚು ಆದರೆ ಗಮನವಿರುವುದಿಲ್ಲ
- ಪ್ರೇಮಿಗಳಿಗೆ ಶುಭದಿನ
- ಹೊಸತನ್ನು ಕಲಿಯಿರಿ ಹೊಸತನ್ನು ಮಾಡಬೇಕು
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಬೇರೆಯವರ ಅಭಿಪ್ರಾಯಕ್ಕೆ ವಿರುದ್ಧ ಹೋಗಬೇಡಿ
- ಹಠ ಒಳ್ಳೆಯದಲ್ಲ ಗಮನಿಸಿಕೊಳ್ಳಿ
- ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಶುಭವಿದೆ
- ಆರೋಗ್ಯ ಸಮಸ್ಯೆ ಕಾಡಬಹುದು
- ಹಣದ ವಿಚಾರವಾಗಿ ಚಿಂತಿತರಾಗುತ್ತೀರಿ
- ಆಸ್ತಿಯ ವಿಚಾರದಲ್ಲಿ ಬೇಸರವಾಗಬಹುದು
- ಶರಭೇಶ್ವರರನ್ನು ಪ್ರಾರ್ಥನೆ ಮಾಡಿ
ತುಲಾ

- ಹೊಸ ಕಾರ್ಯಾರಂಭ ಮಾಡುವುದರಿಂದ ಉತ್ಸಾಹ ನೀಡಲಿದೆ
- ಹಿರಿಯರಿಂದ ಹೊಗಳಿಕೆ ಸಿಗುವುದರಿಂದ ಸಂತಸ ಪಡುತ್ತೀರಿ
- ಸಾಂಸಾರಿಕ ಒತ್ತಡದಿಂದ ದೂರವಾಗಲಿದ್ದೀರಿ
- ಬಂಧುಗಳಲ್ಲಿ ವಿಶೇಷ ಗೌರವ, ಪ್ರೀತಿ ಸಿಗಲಿದೆ
- ಆರೋಗ್ಯ ಸಮಸ್ಯೆಗಳು ದೂರವಾಗಲಿದೆ
- ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ

- ಯಾರದ್ದೋ ಮಾತಿನಿಂದ ಸಮಸ್ಯೆಗೆ ಸಿಲುಕುತ್ತೀರಿ
- ಹಣಕಾಸಿನ ವಿಚಾರದಲ್ಲಿ ಸಮಾಧಾನವಿರುತ್ತದೆ
- ಉನ್ನತ ಹುದ್ದೆಯಲ್ಲಿರುವವರಿಗೆ ಒಳ್ಳೆಯದಾಗಲಿದೆ
- ನಿರುದ್ಯೋಗಿಗಳಿಗೆ ಸಮಸ್ಯೆ ಕಾಡಬಹುದು
- ಮನೆಯವರ ಒತ್ತಡದಿಂದ ಬೇಸರ ಆಗಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಕಾರ್ಯರೂಪದಲ್ಲಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡಬೇಕು
- ಉನ್ನತ ಸ್ಥಾನಮಾನಕ್ಕಾಗಿ ಹೋರಾಡುತ್ತೀರಿ
- ಹಿಂದಿನ ಆಸೆಗಳು ಇಂದು ನೆರವೇರಬಹುದು
- ಮನೆಯಲ್ಲಿ ಪರಸ್ಪರ ಜಗಳಕ್ಕೆ ಅವಕಾಶವಿದೆ
- ವಾತಾವರಣಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಿ
- ಯಾವುದೂ ನಕರಾತ್ಮಕವಾದ ಚಿಂತನೆಯಾಗದಿರಲಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಕರ

- ಬೇರೆಯವರ ಪ್ರಭಾವಕ್ಕೆ ಒಳಗಾಗುತ್ತೀರಿ
- ಮನಸ್ಸಿನಲ್ಲಿ ವಿಚಾರದ ಕೊರತೆ ಇರಲಿದೆ
- ಪೋಷಕರ ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ನಿಮ್ಮ ಕೆಲಸ ಅಥವಾ ವೃತ್ತಿಯಲ್ಲಿ ಸಮಾಧಾನವಿಲ್ಲ
- ಎಲ್ಲಿಯೂ ನೆಮ್ಮದಿಯಿಲ್ಲ ಎನ್ನುವಂತೆ ವರ್ತಿಸುತ್ತೀರಿ
- ಯಾರ ಕೆಂಗಣ್ಣಿಗೂ ಗುರಿಯಾಗಬೇಡಿ
- ಈಶ್ವರನ ಆರಾಧನೆ ಮಾಡಿ
ಕುಂಭ

- ನಿಮ್ಮ ಮನೋಬಲವನ್ನು ಹೆಚ್ಚು ಮಾಡಿಕೊಳ್ಳಿ
- ವ್ಯವಹಾರ ಮತ್ತು ಸಂಸಾರಗಳೆರಡನ್ನು ಜಾಣ್ಮೆಯಿಂದ ಮುನ್ನೆಡೆಸಿ
- ಸಹೋದರ ವರ್ಗದಲ್ಲಿ ಕೆಲವು ಭಿನ್ನಾಭಿಪ್ರಾಯಗಳಿರಬಹುದು
- ನಿಮ್ಮ ಜವಾಬ್ದಾರಿಯನ್ನು ಮರೆಯದಿದ್ದರೆ ಒಳ್ಳೆಯದು
- ಅವಿವಾಹಿತರಿಗೆ ಉತ್ತಮ ಸಮಯ
- ನಿಮ್ಮ ಕರ್ತವ್ಯ ಪ್ರಾಮಾಣಿಕವಾಗಿರಲಿ
- ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ಮೀನ

- ಮನೆಯ ವಾತಾವರಣ ಚೆನ್ನಾಗಿದೆ
- ಸಾಂಸಾರಿಕವಾಗಿ ಬಿಕ್ಕಟ್ಟು ದೂರವಾಗಲಿದೆ
- ಹೊಸ ವಾಹನ ಖರೀದಿಯ ವಿಚಾರ ಚರ್ಚೆ ಮಾಡುತ್ತೀರಿ
- ಮಕ್ಕಳಿಂದ ಹಲವು ರೀತಿಯ ಯೋಜನೆಯಾಗುವುದರಿಂದ ಲಾಭವಿದೆ
- ಆದಾಯ ಮತ್ತು ಖರ್ಚಿನಿಂದ ಸಮಾಧಾನವಾಗಲಿದೆ
- ಹಣದ ವಿಚಾರ ಅಥವಾ ಲೆಕ್ಕಾಚಾರ ಸ್ವಲ್ಪ ಗೊಂದಲವಾಗಬಹುದು
- ಇಷ್ಟದೇವತಾ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ