newsfirstkannada.com

ಚದುರಿ ಹೋದವರಿಗೆ ‘ಮತ್ತೆ ಒಂದಾಗೋಣ ಬನ್ನಿ’ ಎಂದ ಬಿಜೆಪಿ; ವಿಪಕ್ಷಗಳ ‘ಗೇಮ್ ಚೇಂಜರ್​’ ಸಭೆಗೆ 38 NDA ಸ್ನೇಹಕೂಟಗಳಿಂದ ಕೌಂಟರ್​..!

Share :

18-07-2023

    ಮೋದಿ ನೇತೃತ್ವದಲ್ಲಿ NDA ಒಕ್ಕೂಟದಿಂದ ಮಹತ್ವದ ಸಭೆ

    ಜನಸೇನೆ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್​​ಗೂ ಆಹ್ವಾನ

    ವಿಪಕ್ಷಗಳ ಸಭೆ ವರನಿಲ್ಲದ ದಿಬ್ಬಣ ಇದ್ದಂತೆ -ಜೆಪಿ ನಡ್ಡಾ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಒಕ್ಕೂಟಕ್ಕೆ ಟಕ್ಕರ್ ಕೊಡಲು ವಿರೋಧ ಪಕ್ಷಗಳ ಮೈತ್ರಿಕೂಟ ಬೆಂಗಳೂರಲ್ಲಿ ‘ಗೇಮ್​ ಚೇಂಜರ್’ ಸಭೆ ನಡೆಸುತ್ತಿದೆ. ನಿನ್ನೆಯಿಂದ ರಾಜಕೀಯ ತಂತ್ರ ಶುರುವಾಗಿದ್ದು ‘ನಾವೆಲ್ಲಾ ಒಂದಾಗಿದ್ದೇವೆ’ ಎಂಬ ಸಂದೇಶವನ್ನು ಕಾಂಗ್ರೆಸ್​ ನೇತೃತ್ವದ ಒಕ್ಕೂಟ ಸಾರಿ, ಸಾರಿ ಹೇಳ್ತಿದೆ. ಹೀಗಿರುವಾಗ ಬಿಜೆಪಿ ನೇತೃತ್ವದ ಎನ್​ಡಿಯ (National Democratic Alliance) ಕೂಡ ನಾವೂ ಸಹ ಸುಮ್ಮನೆ ಕೂರಲ್ಲ ಅಂತಾ ಮಹತ್ವದ ಸಭೆಯನ್ನು ಕರೆದಿದೆ.

ವಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಉದ್ದೇಶದಿಂದ ಇವತ್ತು ಸಂಜೆ 5 ಗಂಟೆಗೆ ಎನ್‌ಡಿಎ ಮೈತ್ರಿ ಕೂಟದಿಂದ ಸಭೆ ನಡೆಯಲಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಖಾಸಗಿ ಹೋಟಲ್​ನಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ 38 ರಾಜಕೀಯ ಪಕ್ಷಗಳು ಸಮಾಗಮ ಆಗಲಿವೆ. ವಿಪಕ್ಷಗಳ ಸಭೆಯಲ್ಲಿ 26 ರಾಜಕೀಯ ಪಕ್ಷಗಳು ಒಂದಾಗಿವೆ.

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ. ಬೆಂಗಳೂರಿನ ಸಭೆ ಕೇವಲ ತೋರಿಕೆಗೆ ಅಷ್ಟೇ ಸೀಮಿತ. ಅವರ ಸಭೆಯಿಂದ ಯಾವುದೇ ಔಟ್​ಫುಟ್​​ ಬರಲ್ಲ. ಆ ಸಭೆ ವರನಿಲ್ಲದೇ ದಿಬ್ಬಣಕ್ಕೆ ಹೋದಂತೆ.
ಜೆಪಿ ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಮುಂದಿನ ಲೋಕಸಭೆ ಚುನಾವಣೆಗಾಗಿ ಎನ್‌ಡಿಎ ಮೈತ್ರಿ ಕೂಟದ ಬಳಗವನ್ನು ಹೆಚ್ಚಿಸಿಕೊಳ್ಳಲು ಪಣ ತೊಟ್ಟಿರುವ ಬಿಜೆಪಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಒಟ್ಟು 38 ರಾಜಕೀಯ ಪಕ್ಷಗಳ ನಾಯಕರು ಆಗಮಿಸಲಿದ್ದಾರೆ.

ಯಾರೆಲ್ಲ ಬರ್ತಾರೆ..?

ಸಂಯುಕ್ತ ಜನತಾ ದಳ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಅಕಾಲಿ ದಳದಂತಹ ಹಲವಾರು ಸಾಂಪ್ರದಾಯಿಕ ಮಿತ್ರಪಕ್ಷಗಳನ್ನು ಬಿಜೆಪಿ ಕಳೆದುಕೊಂಡಿದೆ. ಬಿಜೆಪಿಯು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎನ್‌ಸಿಪಿಯ ಅಜಿತ್ ಪವಾರ್ ನೇತೃತ್ವದ ಬಣ, ಉತ್ತರ ಪ್ರದೇಶದಲ್ಲಿ ಓಮ್ ಪ್ರಕಾಶ್ ರಾಜ್‌ಭರ್ ನೇತೃತ್ವದ ಎಸ್‌ಬಿಎಸ್‌ಪಿ, ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ, ಉಪೇಂದ್ರ ಕುಶ್ವಾಹ ನೇತೃತ್ವದ ಆರ್‌ಎಲ್‌ಎಸ್‌ಪಿ ಪಕ್ಷಗಳ ನಾಯಕರು ಇಂದಿನ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ತಮಿಳುನಾಡಿನ ಎಐಎಡಿಎಂಕೆ, ಆಂಧ್ರ ಪ್ರದೇಶದ ಪವನ್ ಕಲ್ಯಾಣ್ ಅವರ ಜನಸೇನಾ, ಚಂದ್ರಬಾಬು ನಾಯ್ಡು ಅವರ ಟಿಡಿಪಿ ಪಕ್ಷಕ್ಕೂ ಸಭೆಗೆ ಬರಲು ಆಹ್ವಾನ ನೀಡಲಾಗಿದೆ. ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಹೊಸ ಮೈತ್ರಿ‌ ಮಾಡಿಕೊಳ್ಳಲು ಬಿಜೆಪಿ ಉತ್ಸುಕವಾಗಿದೆ. ಎನ್​ಡಿಎ ಸಭೆಗೆ ಆಗಮಿಸುವಂತೆ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿಯವರಿಗೂ ಆಹ್ವಾನ ಹೋಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.

ಮಾತ್ರವಲ್ಲ, ಬಿಜೆಪಿಯ ಹೊಸ ಮಿತ್ರಪಕ್ಷಗಳ ಹುಡುಕಾಟ ಶುರು ಮಾಡಿದೆ. ಬಿಜೆಪಿಯ ಹಳೆಯ ಮಿತ್ರಪಕ್ಷಗಳಾದ ಶಿರೋಮಣಿ ಅಕಾಲಿದಳ, ತೆಲುಗು ದೇಶಂ ಪಕ್ಷಗಳ ನಾಯಕರು ಎನ್ಡಿಎ ಸಭೆಗೆ ಬರುವ‌ ಸಾಧ್ಯತೆ ಇದೆ. ಇವು ಒಂದು ಕಾಲದಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದರು. ಈಗ ಚದುರಿಹೋಗಿರುವ ವಿವಿಧ ಪಕ್ಷಗಳ ನಾಯಕರಿಗೆ ಜೆ.ಪಿ ನಡ್ಡಾ ಪತ್ರ ಬರೆದಿದ್ದು, ‘ಮತ್ತೆ ಒಂದಾಗೋಣ ಬನ್ನಿ’ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚದುರಿ ಹೋದವರಿಗೆ ‘ಮತ್ತೆ ಒಂದಾಗೋಣ ಬನ್ನಿ’ ಎಂದ ಬಿಜೆಪಿ; ವಿಪಕ್ಷಗಳ ‘ಗೇಮ್ ಚೇಂಜರ್​’ ಸಭೆಗೆ 38 NDA ಸ್ನೇಹಕೂಟಗಳಿಂದ ಕೌಂಟರ್​..!

https://newsfirstlive.com/wp-content/uploads/2023/07/JPNADDA.jpg

Load More