newsfirstkannada.com

3 ಮಹತ್ವದ ಘೋಷಣೆ ಮಾಡಿದ ಪ್ರಧಾನಿ ಮೋದಿ.. HAL ನಿಂದ ISROವರೆಗಿನ 10 ಫೋಟೋಗಳು..!

Share :

26-08-2023

    ಮೋದಿ ಬರುವಿಕೆಗಾಗಿ ರಸ್ತೆಯಲ್ಲಿ ಕಾದಿದ್ದ ಬಿಜೆಪಿ ನಾಯಕರು

    ನ್ಯಾಷನಲ್ ಸ್ಪೇಸ್​ ಡೇ ಘೋಷಣೆ ಮಾಡಿದ ಪ್ರಧಾನಿ ಮೋದಿ

    ಇನ್ನೂ 2 ಘೋಷಣೆಗಳು ಯಾವುದು? ಅದಕ್ಕಾಗಿ ಈ ಸ್ಟೋರಿ ಓದಿ

ಬೆಂಗಳೂರು: ಚಂದ್ರಯಾನ-3 ಸಕ್ಸಸ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನ ಇಸ್ರೋದ ಕಚೇರಿಗೆ ಇಂದು ಭೇಟಿ ನೀಡಿ ವಿಜ್ಞಾನಿಗಳನ್ನ ಅಭಿನಂದಿಸಿದರು. ಬಳಿಕ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಯವರು ಮೂರು ಮಹತ್ವವಾದ ಘೋಷಣೆಗಳನ್ನು ಮಾಡಿದರು.

ಇಸ್ರೋ ಕೇಂದ್ರಕ್ಕೆ ಭೇಟಿ ನೀಡಲು ಬೆಂಗಳೂರಿನ ಹೆಚ್​ಎಎಲ್​ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ಮೋದಿಯವರನ್ನು ಸರ್ಕಾರದ ಮುಖ್ಯ ಅಧಿಕಾರಿಗಳು ಸ್ವಾಗತ ಮಾಡಿದರು.

ಇಸ್ರೋ ಕಚೇರಿಯಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿಯವರು, ಚಂದ್ರಯಾನ-3 ಲ್ಯಾಂಡ್ ಆದ ದಿನದ ನೆನಪಿಗಾಗಿ ಆಗಸ್ಟ್​ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಆಚರಣೆ ಮಾಡೋಣ ಎಂದು ಹೇಳಿದರು.

ಇನ್ನು ಭಾಷಣದ ವೇಳೆ ಚಂದ್ರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡ್ ಆಗಿರುವ ಸ್ಥಳವನ್ನು ಶಿವಶಕ್ತಿ ಎಂದು ನಾಮಕರಣ ಮಾಡಲು ಭಾರತ ನಿರ್ಧಾರ ಮಾಡಿದೆ ಎಂದು ಪ್ರಧಾನಿ ಘೋಷಣೆ ಮಾಡಿದರು.

ಅಲ್ಲದೇ ಈ ಹಿಂದೆ 2019ರಲ್ಲಿ ಚಂದ್ರನ ಮೇಲ್ಮೈ ಮೇಲೆ ಲ್ಯಾಂಡ್ ಆಗಲು ವಿಫಲವಾಗಿದ್ದ ಚಂದ್ರಯಾನ-2 ಇಳಿದ ಸ್ಥಳವನ್ನು ಕೂಡ ಮೋದಿ ನಾಮಕರಣ ಮಾಡಿದ್ದಾರೆ. ಅದಕ್ಕೆ ತಿರಂಗ ಪಾಯಿಂಟ್ ಎಂದು ಹೆಸರಿಟ್ಟಿದ್ದಾರೆ.

ಇಸ್ರೋ ಕೇಂದ್ರಕ್ಕೆ ಭೇಟಿ ನೀಡಲು ಪ್ರಧಾನಿ ಮೋದಿಯವರು ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ನಿಂತಿದ್ದ ಬಿಜೆಪಿ ನಾಯಕರಾದ ಶಾಸಕ ಮುನಿರತ್ನ, ನಳಿನ್ ಕುಮಾರ್ ಕಟೀಲ್, ಶಾಸಕ ಆರ್.ಅಶೋಕ್, K ಗೋಪಾಲಯ್ಯ ಕಡೆ ಕೈ ಬೀಸಿದರು.

ಪ್ರಧಾನಿ ಮೋದಿ ಬರುವಿಕೆಗಾಗಿ ಬೆಳಗಿನ ಜಾವಾದಲ್ಲೇ ಕಾದಿದ್ದ ಮಹಿಳಾ ಕಾರ್ಯಕರ್ತರು ರಾಷ್ಟ್ರಧ್ವಜ ಹಿಡಿದು ಸಾಲಾಗಿ ನಿಂತು ಫೋಟೋಗೆ ಪೋಸ್ ನೀಡಿದರು.

ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದ ವೇಳೆ ರಸ್ತೆಯಲ್ಲಿ ವೀರಗಾಸೆ ನೃತ್ಯ ಮಾಡಿ ಜನರನ್ನು ರಂಜಿಸಲಾಯಿತು.

ಪೀಣ್ಯದಲ್ಲಿನ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಇಸ್ರೋ ಅಧ್ಯಕ್ಷ ಎಸ್​ ಸೋಮನಾಥ್ ಸೇರಿದಂತೆ ಇತರೆ ವಿಜ್ಞಾನಿಗಳ ಜೊತೆ ಫೋಟೋಗೆ ಪೋಸ್ ಕೊಟ್ಟರು.

ಇಸ್ರೋ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷರು ಎಸ್ ಸೋಮನಾಥ್ ಅವರು ಪ್ರಧಾನಿ ಮೋದಿಗೆ ಚಂದ್ರಯಾನ-3 ಯಾವ ರೀತಿ ಕಾರ್ಯನಿರ್ವಹಿಸಿ ಯಶಸ್ಸು ಆಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಮೋದಿ ಬರುವಿಕೆಗಾಗಿ ಹೆಚ್​ಎಎಲ್ ವಿಮಾನ ನಿಲ್ದಾಣದ ಹೊರಗೆ ಬೆಳಗಿನ ಜಾವದಲ್ಲೇ ರಾಷ್ಟ್ರಧ್ವಜ ಹಿಡಿದು ಕಾದು ನಿಂತಿದ್ದ ಚಿಣ್ಣರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ಮಹತ್ವದ ಘೋಷಣೆ ಮಾಡಿದ ಪ್ರಧಾನಿ ಮೋದಿ.. HAL ನಿಂದ ISROವರೆಗಿನ 10 ಫೋಟೋಗಳು..!

https://newsfirstlive.com/wp-content/uploads/2023/08/MODI-7-1.jpg

Load More