ಯಾವುದೇ ರೀತಿಯ ಮಾತಿಗೆ ನಿಮ್ಮಿಂದ ಪ್ರತಿಕ್ರಿಯೆ ಇರಲ್ಲ, ನಾಗಾರಾಧನೆ ಮಾಡಿ
ಭವಿಷ್ಯದ ಬಗ್ಗೆ ಹೆಚ್ಚು ಭಯ, ಕುಟುಂಬದವರು ನಿಮಗೆ ತಿಳುವಳಿಕೆ ಹೇಳಬಹುದು
ತುಂಬಾ ಸಂತೋಷದ ಸಮಯ, ಅಪರೂಪದ ವಸ್ತುಗಳನ್ನು ನೀವು ಪಡೆಯಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು. ಆಷಾಢಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಪುಷ್ಯ ನಕ್ಷತ್ರ ರಾಹುಕಾಲ ಬುಧವಾರ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರಲಿದೆ.
ಮೇಷ:

- ವ್ಯಾವಹಾರಿಕವಾಗಿ ಬೇರೆಯವರ ಜೊತೆಗೆ ನಡೆದುಕೊಳ್ಳುವ ರೀತಿ ಜನರನ್ನು ಆಕರ್ಷಣೆ ಮಾಡುತ್ತದೆ
- ವ್ಯಾಪಾರದ ದೃಷ್ಟಿಯಿಂದ ಸಾಲ ಪಡೆಯಬಹುದು
- ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ
- ಜಟಿಲವಾದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಶಸ್ಸು ಕಾಣುತ್ತೀರಿ
- ತುಂಬಾ ಶಿಸ್ತು ಬದ್ಧವಾಗಿ ವರ್ತಿಸಬೇಡಿ
- ದೂರದ ಪ್ರಯಾಣ ಸಾಧ್ಯತೆ ಇದೆ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ:

- ನಿಮ್ಮ ಸಲಹೆಯಿಂದ ಜನ ಪ್ರಯೋಜನ ಪಡೆದುಕೊಳ್ಳುತ್ತಾರೆ
- ಅನಿವಾರ್ಯ ಇಲ್ಲದಿದ್ದರೆ ಪ್ರಯಾಣವನ್ನು ಮಾಡಬೇಡಿ
- ಅರ್ಥಹೀನವಾದ ವಾದಗಳನ್ನು ತಪ್ಪಿಸಿ
- ಕೆಲವು ಕೆಲಸಗಳು, ಕೆಲವು ವ್ಯಕ್ತಿಗಳು ಬೇಸರವನ್ನು ತರಬಹುದು
- ಆದಾಯದ ಮೂಲಗಳನ್ನು ಗಟ್ಟಿ ಮಾಡಿಕೊಳ್ಳಬೇಕು
- ಅನಾರೋಗ್ಯ ಪೀಡಿತರಿಗೆ ಸಮಸ್ಯೆಗಳಿವೆ
- ದುರ್ಗಾದೇವಿಯ ಆರಾಧನೆ ಮಾಡಿ
ಮಿಥುನ :

- ವ್ಯವಹಾರದಲ್ಲಿ ಅತ್ಯುತ್ಸಾಹ ಆದರೆ ನಷ್ಟ ಉಂಟಾಗಬಹುದು
- ಕುಟುಂಬದ ಆಗು ಹೋಗುಗಳ ಬಗ್ಗೆ ಗಮನವಿರಲಿ
- ವೃತ್ತಿಗೆ ಸಂಬಂಧಿಸಿದಂತೆ ಅನುಕೂಲವನ್ನು ಪಡೆಯುತ್ತೀರಿ
- ಅಭಿವೃದ್ಧಿಗೆ ಅವಕಾಶಗಳು ಇವೆ ಆದರೆ ನಿಮಗೆ ಆಸಕ್ತಿ ಇಲ್ಲ
- ಗಣ್ಯ ವ್ಯಕ್ತಿಗಳ ಸಂಪರ್ಕ ಆಗಲಿದೆ ಆದರೆ ಪ್ರಯೋಜನಗಳಾಗುವುದಿಲ್ಲ
- ಮನಸ್ಸಿನಲ್ಲಿ ಯಾವುದೇ ಗೊಂದಲಗಳು ಬೇಡ
- ಶರಬೇಶ್ವರನನ್ನು ಪ್ರಾರ್ಥನೆ ಮಾಡಿ
ಕಟಕ :

- ಬೇರೆಯವರ ತಪ್ಪನ್ನು ಸರಿ ಮಾಡುವ ಸಂದರ್ಭ ಒಳ್ಳೆಯದಾಗಲಿದೆ
- ನಿಂತಿರುವ ಕೆಲಸಗಳು ಪುನರಾರಂಭವಾಗಲಿದೆ
- ನಿಮ್ಮ ಸಾಮರ್ಥ್ಯವನ್ನು ಮೀರಿದ ಕೆಲಸಗಳಾಗುತ್ತದೆ
- ಕುಟುಂಬದಲ್ಲಿ ಕೆಲವು ದೊಡ್ಡ ನಿರ್ಧಾರಗಳಾಗುತ್ತದೆ
- ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ ಅನುಕೂಲ ಆಗಲಿದೆ
- ಉತ್ತಮ ಫಲಿತಾಂಶ ನಿರೀಕ್ಷೆ ಮಾಡಬಹುದಾದ ದಿನ
- ಶಿವರಾಧನೆಯನ್ನು ಮಾಡಿ
ಸಿಂಹ :

- ಎಲ್ಲಾ ಕೆಲಸದಲ್ಲಿ ಮನಸ್ಸು ದೃಢವಾಗಿರಬೇಕು
- ರಾಜಿ ಮಾಡಿಕೊಳ್ಳುವ ಪ್ರಸಂಗ ಬರಬಹುದು ಆದರೆ ಬೇಡ
- ಮಕ್ಕಳು ಅಥವಾ ಸ್ನೇಹಿತರ ಇಚ್ಛೆಯಂತೆ ನಡೆದುಕೊಳ್ಳುವುದರಿಂದ ಸಂತೋಷ ನೀಡಲಿದೆ
- ಮಾತೆಯರಿಗೆ ಸ್ವಲ್ಪ ಸಮಸ್ಯೆಯ ದಿನ
- ತಂದೆಯವರಿಗೆ ಅನಿರೀಕ್ಷಿತವಾಗಿ ಲಾಭದ ಸಾಧ್ಯತೆ
- ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ :

- ಹಣದ ಅಭಾವದಿಂದ ಚಿಂತೆ ಕಾಡಲಿದೆ
- ಸತ್ಯವನ್ನು ತಿಳಿಯದೆ ವಾದ ಮಾಡಬೇಡಿ
- ಶತ್ರುಗಳನ್ನು ಎದುರಿಸುವಲ್ಲಿ ವಿಫಲರಾಗುತ್ತೀರಿ
- ಹೃದ್ರೋಗಿಗಳಿಗೆ ಸ್ವಲ್ಪ ಸಮಸ್ಯೆ ಇದೆ ಎಚ್ಚರಿಕೆ ವಹಿಸಿ
- ಯಾವುದೇ ರೀತಿಯ ಮಾತಿಗೆ ನಿಮ್ಮಿಂದ ಪ್ರತಿಕ್ರಿಯೆ ಇರುವುದಿಲ್ಲ
- ಮಕ್ಕಳ ಬಗ್ಗೆ ಸಮಾಧಾನ ಇರುವುದಿಲ್ಲ
- ನಾಗಾರಾಧನೆಯನ್ನು ಮಾಡಿ
ತುಲಾ :

- ವ್ಯವಹಾರದಲ್ಲಿ ಅನಿರೀಕ್ಷಿತವಾಧ ಧನಲಾಭ
- ಪ್ರಮುಖ ನಿರ್ಧಾರಗಳಿಗೆ ಒಪ್ಪಿಗೆಯನ್ನು ನೀಡುತ್ತೀರಿ
- ಇಂದು ತುಂಬಾ ಮಂಗಳಕರವಾಗಿದೆ
- ಮಕ್ಕಳಿಗೆ ಬೇಕಾದ ಅನುಕೂಲ ಮಾಡಿ ಕೊಡುತ್ತೀರಿ
- ಹೊಸ ಕೆಲಸಗಳನ್ನು ಪ್ರಾರಂಭಿಸಲು ಅನುಕೂಲವಿದೆ
- ಹಣದ ವಿಚಾರವಾಗಿ ಕೂಡ ಅನುಕೂಲವಿದೆ
- ಕುಲದೇವತಾ ಆರಾಧನೆ ಮಾಡಿ
ವೃಶ್ಚಿಕ :

- ಸಹೋದ್ಯೋಗಿಗಳು ನಿಮಗೆ ಸಹಕರಿಸುವುದಿಲ್ಲ
- ಅಜಾಗರೂಕತೆಯಿಂದ ನಷ್ಟವನ್ನು ಹೊಂದುತ್ತೀರಿ
- ಅಹಂಭಾವವನ್ನು ಬಿಟ್ಟು ವರ್ತಿಸಬೇಕಾಗುತ್ತದೆ
- ಬೇರೆಯವರನ್ನು ಟೀಕಿಸಬೇಡಿ ಅವಮಾನ ಮಾಡಬೇಡಿ
- ಮಕ್ಕಳ ಅಪೇಕ್ಷೆಗಳನ್ನು ನಿರ್ಲಕ್ಷಿಸಬೇಡಿ
- ವಾಹನ ಚಾಲನೆಯಲ್ಲಿ ಎಚ್ಚರಿಕೆವಹಿಸಿ ತೊಂದರೆ ಇದೆ
- ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ
ಧನುಸ್ :

- ಮನರಂಜನೆಗೆ ಹೆಚ್ಚು ಹಣವನ್ನು ಖರ್ಚು ಮಾಡುತ್ತೀರಿ
- ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ
- ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ
- ಕೆಲಸದಿಂದ ವಿಘ್ನಗಳು ಆಗುವುದರಿಂದ ಕೋಪ ಬರಲಿದೆ
- ಕಮಿಷನ್ ಏಜೆಂಟ್ಸ್ಗೆ ಲಾಭ ಆಗಲಿದೆ
- ಪ್ರೇಮಿಗಳಿಗೆ ಸಮಸ್ಯೆ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಕರ :

- ಎಲ್ಲಾ ಕೆಲಸಗಳನ್ನು ಮನಸ್ಸಿನಿಂದ ಮಾಡಿ
- ಯಾವುದೇ ಬದಲಾವಣೆಗಳನ್ನು ನಿರೀಕ್ಷಿಸಬೇಡಿ
- ಸ್ನೇಹಿತರು ಅಥವಾ ಕುಟುಂಬದವರು ನಿಮಗೆ ತಿಳುವಳಿಕೆ ಹೇಳಬಹುದು
- ಭವಿಷ್ಯದ ಬಗ್ಗೆ ಹೆಚ್ಚು ಭಯ ಕಾಡಲಿದೆ
- ಆಕಸ್ಮಿಕವಾಗಿ ಧನ ನಷ್ಟವಾಗಬಹುದು
- ಹೊಸ ಆಸ್ತಿಯ ಖರೀದಿಯ ಬಗ್ಗೆ ಚರ್ಚೆ ಮಾಡುತ್ತೀರಿ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಕುಂಭ :

- ಅಪರೂಪದ ವಸ್ತುಗಳನ್ನು ನೀವು ಪಡೆಯಬಹುದು
- ತುಂಬಾ ಸಂತೋಷದ ಸಮಯವಿದೆ ಎದುರು ನೋಡ್ತೀರಿ
- ವ್ಯಾಪಾರದಲ್ಲಿ ಧನ ಲಾಭ ಸಂತೋಷ ಆಗಲಿದೆ
- ತಂತ್ರಜ್ಞಾನದ ವಿಚಾರದಲ್ಲಿ ಕೆಲವು ಚರ್ಚೆಗಳನ್ನು ಮಾಡುತ್ತೀರಿ
- ತಂದೆಯವರಿಗೆ ಅನಿರೀಕ್ಷಿತ ತೊಂದರೆಯಾಗಬಹುದು
- ಮಕ್ಕಳ ಚಟುವಟಿಕೆಗೆ ಸಂತಸ ತರಲಿದೆ
- ನವಗ್ರಹರ ಅರಾಧನೆ ಮಾಡಿ
ಮೀನ:

- ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲವಿದೆ
- ಉದ್ಯೋಗದಲ್ಲಿ ಉನ್ನತವಾದ ಸ್ಥಾನ ಸಿಗಲಿದೆ
- ಹಣದ ವಿಚಾರದಲ್ಲಿ ಕಾನೂನಾತ್ಮಕ ತೊಡಕುಗಳಾಗಬಹುದು
- ರಾಜಕೀಯ ವ್ಯಕ್ತಿಗಳಿಗೆ ಸಹಕಾರವಿದೆ
- ಸ್ನೇಹಿತರಿಗೋಸ್ಕರವಾಗಿ ಹಣವನ್ನು ವ್ಯಯ ಮಾಡುತ್ತೀರಿ
- ಮಕ್ಕಳ ಭವಿಷ್ಯವನ್ನು ನಿರೂಪಿಸಬೇಕಾಗುತ್ತದೆ
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ