newsfirstkannada.com

ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ; ಸಾರ್ವಜನಿಕರಿಗೆ ನದಿಗೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ

Share :

30-06-2023

  ಕರಾವಳಿಯಲ್ಲಿ ಚುರುಕುಗೊಂಡ ಮುಂಗಾರು ಮಳೆ

  ಭಾರೀ ಮಳೆಗೆ ಬೆಟ್ಟದಲ್ಲೇ ಸಿಲುಕಿಕೊಂಡ ಪ್ರವಾಸಿಗರು

  ವರುಣಾರ್ಭಟಕ್ಕೆ ಈ ಆರು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್

ರಾಜ್ಯದಲ್ಲಿ ಕಾಣಿಯಾಗಿದ್ದ ವರುಣರಾಯ ಕೊನೆಗೂ ಎಂಟ್ರಿ ಕೊಟ್ಟಿದ್ದಾನೆ. ಲೇಟಾದ್ರೂ ಕರಾವಳಿಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಸಿದೆ. ಅತ್ತ ಉತ್ತರ ಭಾರತದಲ್ಲಿ ವರುಣ ಅಬ್ಬರಿಸಿ ಬೊಬ್ಬೆರಿಯುತ್ತಿದ್ದಾನೆ.

ತುಂಬಿ ಹರಿಯಬೇಕಿದ್ದ ನದಿಗಳು ಬರಿದಾಗಿವೆ. ಡ್ಯಾಂಗಳಲ್ಲಂತೂ ನೀರೇ ಇಲ್ಲದಂತಾಗಿದೆ. ದಿನೇ ದಿನೇ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತಾನೆ ಸಾಗ್ತಿದೆ. ನೀರಿಲ್ಲದೇ ರೈತರು ಕಂಗಾಲಾಗಿದ್ದಾರೆ. ಮಳೆ ನಂಬಿ ಬಿತ್ತನೆ ಮಾಡಿದ ರೈತರಿಗೆ ದಿಕ್ಕೇ ತೋಚದಂತಾಗಿದೆ. ಮುಂದೇನು ಅಂತಾ ರೈತರು ಮುಗಿಲನ್ನೇ ನೋಡ್ತಿದ್ದಾರೆ. ಈ ಬಾರಿ ಮಳೆ ಕೈಕೊಟ್ಟಿದೆ ಅನ್ನುವಷ್ಟರಲ್ಲಿ ಕೊನೆಗೂ ವರುಣ ಎಂಟ್ರಿ ಕೊಟ್ಟಿದ್ದಾನೆ.

ಕರಾವಳಿ ಭಾಗದಯಲ್ಲಿ ಚುರುಕುಗೊಂಡ ಮುಂಗಾರು

ರಾಜ್ಯದಲ್ಲಿ ಇಷ್ಟು ದಿನ ಕಾಣೆಯಾಗಿದ್ದ ಮಳೆ ರಾಯ ಕೊನೆಗೂ ಎಂಟ್ರಿ ಕೊಟ್ಟಿದ್ದಾನೆ. ರಾಜ್ಯದ ಕರಾವಳಿ ಪ್ರದೇಶದಲ್ಲಿ ಮುಂಗಾರು ಚುರುಕುಗೊಂಡಿದೆ. ನಿನ್ನೆಯಿಂದ ಉಡುಪಿಯಲ್ಲಿ ಮಳೆಯಾಗುತ್ತಿದ್ದು, ನದಿ, ಹಳ್ಳಗಳು ತುಂಬಿ ಹರಿಯುತ್ತಿದೆ.

ಮಂಗಳೂರಲ್ಲೂ ಮಳೆರಾಯನ ಆಗಮನ

ಕೇವಲ ಉಡುಪಿ ಮಾತ್ರವಲ್ಲ, ಮಂಗಳೂರಲ್ಲೂ ಮಳೆ ಎಂಟ್ರಕೊಟ್ಟಿದೆ. ಮಂಗಳೂರಿನ ಹಲವೆಡೆ ನಿನ್ನಿಯಿಂದ ಭಾರೀ ಮಳೆಯಾಗ್ತಿದೆ. ಇಷ್ಟು ದಿನ ಮಳೆ ಇಲ್ಲದೇ ಕಂಗಾಲಾಗಿದ್ದ ರೈತರು. ಮಳೆಯ ಆಗಮನದಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಗುಡುಗು ಸಹಿತ ಮಳೆ ಆಗೋದಾಗಿ ಹವಾಮಾನ ಇಲಾಖೆ ಎಚ್ಚರಿಕೆ

ಕರಾವಳಿಯಲ್ಲಿ ಮುಂದಿನ 48 ಗಂಟೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ‌ನೀಡಿದೆ. ಮುಂದಿನ 24 ಗಂಟೆಗಳಲ್ಲಿ, ಗಂಟೆಗೆ 40 ಕಿಲೋಮೀಟರ್​ನಿಂದ 55 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಅಂತ ಸೂಚನೆ ನೀಡಲಾಗಿದೆ. ಇನ್ನೂ ನದಿ, ಸಮುದ್ರ, ಹಳ್ಳಗಳಿಗೆ ಸಾರ್ವಜನಿಕರು ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ದಾವಣಗೆರೆಯಲ್ಲೂ ಮುಂಗಾರು ಮಳೆಯ ಸಿಂಚನ

ಇನ್ನು ಮಧ್ಯ ಕರ್ನಾಟಕ ಭಾಗದಲ್ಲೂ ಮುಂಗಾರು ಮಳೆ ಚುರುಕುಗೊಂಡಿದೆ. ಬೆಣ್ಣೆನಗರಿ ದಾವಣಗೆರೆಯಲ್ಲಿ ಮಳೆಯ ಆಗಮನವಾಗಿದೆ. ನಗರದ ಹಲವೆಡೆ ಮಳೆಯಾಗಿದ್ದು, ಮಳೆಯನ್ನೇ ಎದುರು ನೋಡ್ತಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಉತ್ತರ ಭಾರತದಲ್ಲಿ ವರುಣನ ಆರ್ಭಟ

ಇತ್ತ ಕರ್ನಾಟಕಕ್ಕೆ ಮುಂಗಾರು ಲೇಟಾಗಿ ಎಂಟ್ರಿ ಕೊಟ್ಟಿದ್ರೆ, ಅತ್ತ ಉತ್ತರ ಭಾರತದಲ್ಲಿ ವರುಣ ಅಬ್ಬರಿಸ್ತಿದ್ದಾನೆ. ಭಾರೀ ಮಳೆಗೆ ಗುಜರಾತ್​ನಲ್ಲಿ ಅವಾಂತರವೇ ಸೃಷ್ಟಿಯಾಗಿದೆ. ಗುಜರಾತ್​ನ ತಾಪಿ ಜಿಲ್ಲೆಯ ಹಲವೆಡೆ ಪ್ರವಾಹದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ತ ಪಂಚಮಹಲ್ ​ಜಿಲ್ಲೆಯಲ್ಲಿ ಮಳೆಯಿಂದಾಗಿ ಕಾರ್ಖಾನೆ ಕುಸಿದು,4 ಮಕ್ಕಳು ಸಾವನ್ನಪ್ಪಿದ್ದಾರೆ.

ಭಾರೀ ಮಳೆ.. ಬೆಟ್ಟದಲ್ಲೇ ಸಿಲುಕಿಕೊಂಡ ಪ್ರವಾಸಿಗರು

ಇನ್ನು ಗುಜರಾತ್​ನಲ್ಲಿ ಭಾರೀ ಮಳೆಯಾಗ್ತಿದ್ದು ಓಸಮ್​ ಬೆಟ್ಟಕ್ಕೆ ತೆರಳಿದ್ದ ಪ್ರವಾಸಿಗರು ಬೆಟ್ಟದಲ್ಲೇ ಲಾಕ್​ ಆಗಿದ್ದರು. ಧಾರಾಕಾರ ಮಳೆಗೆ ಬೆಟ್ಟದಲ್ಲಿ ಜಲಪಾತವೇ ಸೃಷ್ಟಿಯಾಗಿತ್ತು. ಪರಿಣಾಮ ವಾಪಸ್​​ ಬರಲಾಗದೇ ಪ್ರವಾಸಿಗರು ಅಲ್ಲೆ ಸಿಲುಕಿಕೊಂಡಿದ್ರು. ಕೂಡಲೇ ಅವರನ್ನ ಸ್ಥಳೀಯರು ರಕ್ಷಣೆ ಮಾಡಿದ್ರು.

ಮಹಾರಾಷ್ಟ್ರದ ಆರು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್​

ಮಹರಾಷ್ಟ್ರದಲ್ಲಿ ವರುಣ ಅಬ್ಬರಿಸ್ತಿದ್ದಾನೆ. ಮುಂಬೈನಲ್ಲಿ ಧಾರಾಕಾರ ಮಳೆಯಾಗ್ತಿದೆ. ಮಹಾರಾಷ್ಟ್ರದ ಆರು ಜಿಲ್ಲೆಗಳಲ್ಲಿ ಇವತ್ತು ಎಲ್ಲೋ ಅಲರ್ಟ್​ ಘೋಷಿಸಲಾಗಿದೆ. ಮುಂಬೈ, ಥಾಣೆ, ಪಲ್ಘರ್​​, ರಾಯಘಡ್​, ನಾಸಿಕ್​ ಹಾಗೂ ರತ್ನಗಿರಿ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಅತ್ತ ಉತ್ತರ ಭಾರತದಲ್ಲಿ ವರುಣ ಅಬ್ಬರಿಸಿಸುತ್ತಿದ್ರೆ, ಇತ್ತ ಕರುನಾಡಲ್ಲಿ ಈಗತಾನೆ ಮಳೆರಾಯ ಎಂಟ್ರಿ ಕೊಟ್ಟಿದ್ದಾನೆ. ಕೈಕೊಟ್ಟಿದ್ದ ಮುಂಗಾರು ಕೊನೆಗೂ ಚುರುಕುಗೊಂಡಿದೆ. ಕರಾವಳಿ ಭಾಗದಲ್ಲಿ ಮಳೆಯ ಸಿಂಚನವಾಗಿದೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ; ಸಾರ್ವಜನಿಕರಿಗೆ ನದಿಗೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ

https://newsfirstlive.com/wp-content/uploads/2023/06/Rain-1-1.jpg

Load More