newsfirstkannada.com

ಪ್ರತಿಷ್ಠೆಯ ಕಣವಾದ RCB vs CSK ಪಂದ್ಯ.. ದಾಖಲೆ ಬರೆಯಲು ರೆಡಿಯಾದ ಕೊಹ್ಲಿ, MS ಧೋನಿ; ಏನೇನು?

Share :

Published May 18, 2024 at 3:13pm

    ವಿರಾಟ್​ ಕೊಹ್ಲಿ- MS ಧೋನಿ ಏನೇನು ದಾಖಲೆ ಮಾಡ್ತಾರೆ ಗೊತ್ತಾ?

    ಇಂದಿನ ಪಂದ್ಯದಲ್ಲಿ ವಿಶೇಷ ರೆಕಾರ್ಡ್​ ಮಾಡಲಿರುವ ವಿರಾಟ್​

    ಆರ್​ಸಿಬಿ ವಿರುದ್ಧ ಧೋನಿ ಎಷ್ಟು ಸಿಕ್ಸರ್ ಬಾರಿಸಿದ್ದಾರೆ, ಮತ್ತೆ ಕೊಹ್ಲಿ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಚೆನ್ನೈ ಸೂಪರ್ ಕಿಂಗ್ಸ್​ ನಡುವೆ ಇಂದು ಪಂದ್ಯ ನಡೆಯಲಿದೆ. ಈ 2 ತಂಡಗಳ ನಡುವೆ ನಡೆಯೋ ಪಂದ್ಯ ಪ್ರತಿಷ್ಠೆಯ ಕಣವಾಗಿದ್ದು ವಿಶ್ವ ಕ್ರಿಕೆಟ್ ಲೋಕ ಕಣ್ಣು ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಈ ರಣರೋಚಕ ಮ್ಯಾಚ್​ಗೆ ಕೌಂಟ್​ಡೌನ್​ ಶುರುವಾಗಿದ್ದು ಪಂದ್ಯದ ವೇಳೆ ಎಂ.ಎಸ್​ ಧೋನಿ, ಕಿಂಗ್ ಕೊಹ್ಲಿ ಬ್ಯಾಟಿಂಗ್​ನಲ್ಲಿ ಆರ್ಭಟಿಸಿದರೆ ದಾಖಲೆಗಳನ್ನು ಬರೆಯಲಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ನಂ​-18 ಅಂದ್ರೆ ವಿರಾಟ್​ ಧಗಧಗ ಉರಿತಾರೆ.. ಮೇ 18ರಂದೇ​ ಕೊಹ್ಲಿ ರಣಾರ್ಭಟದ ಬ್ಯಾಟಿಂಗ್ ಹೇಗಿರುತ್ತೆ?

ಆರ್​ಸಿಬಿ ಭಾರೀ ಅಂತರದಿಂದ ಗೆದ್ದು ಪ್ಲೇ ಆಫ್​​ಗೆ ಎಂಟ್ರಿ ಕೊಡೋ ಕನಸು ಕಾಣುತ್ತಿದೆ. ಇದರ ಮಧ್ಯೆ 2 ಟೀಮ್​ಗಳ ಸ್ಟಾರ್ ಪ್ಲೇಯರ್ಸ್​ ಆದ ವಿರಾಟ್​ ಕೊಹ್ಲಿ ಹಾಗೂ ಎಂ.ಎಸ್​ ಧೋನಿ ತಮ್ಮ ಬ್ಯಾಟಿಂಗ್​ನಿಂದ ದಾಖಲೆಗಳನ್ನು ಬರೆಯಲಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದ ವೇಳೆ ವಿರಾಟ್​ ಕೊಹ್ಲಿ ಬ್ಯಾಟಿಂಗ್​ ಉತ್ತಮವಾಗಿದ್ದು 124.9 ಸ್ಟ್ರೈಕ್​ರೇಟ್​ನಲ್ಲಿ 37.2 ಆವರೇಜ್​ನೊಂದಿಗೆ 1,006 ರನ್​ಗಳನ್ನು ಗಳಿಸಿದ್ದಾರೆ. ಯೆಲ್ಲೋ ಆರ್ಮಿ ವಿರುದ್ಧ 73 ರನ್​ಗಳ ಗಳಿಸಿರುವುದು ಕೊಹ್ಲಿಯ ವೈಯಕ್ತಿ ಹೆಚ್ಚಿನ ರನ್​ ಆಗಿದೆ. 38 ಭರ್ಜರಿ ಸಿಕ್ಸರ್ ಸಿಡಿಸಿದ್ದಾರೆ. ಅಲ್ಲದೇ ಚೆನ್ನೈ ವಿರುದ್ಧ 9 ಹಾಫ್​ಸೆಂಚುರಿಗಳನ್ನು ಸಿಡಿಸಿರುವ ವಿರಾಟ್​ ಕೊಹ್ಲಿ ಇವತ್ತಿನ ಪಂದ್ಯದಲ್ಲಿ 50 ರನ್​ ಬಾರಿಸಿದರೆ 10 ಅರ್ಧಶತಕ ಗಳಿಸಿದಂತೆ ಆಗುತ್ತದೆ. ಇದು ಐಪಿಎಲ್​ನಲ್ಲಿ ಒಂದು ತಂಡದ ವಿರುದ್ಧ ಕೊಹ್ಲಿ ವಿಶೇಷ ದಾಖಲೆ ಎನಿಸುತ್ತದೆ.

ಇದನ್ನೂ ಓದಿ: ಚೆನ್ನೈ ತಂಡದಲ್ಲಿ ಹೊಂಚು ಹಾಕಿ ಕುಳಿತ ಬಾಂಬೆ ಬಾಯ್ಸ್​​.. ಪಂದ್ಯದ ವೇಳೆ ಆರ್​ಸಿಬಿಗೆ ವಿಲನ್ ಆಗ್ತಾರಾ..!

ಇನ್ನು ಆರ್​ಸಿಬಿ ವಿರುದ್ಧ ಎಂಎಸ್​ ಧೋನಿಯ ಬ್ಯಾಟಿಂಗ್​ ಬಲವು ಹೆಚ್ಚಾಗಿದ್ದು ಕೊಹ್ಲಿಗಿಂತ ಹೆಚ್ಚು ಸಿಕ್ಸರ್​ಗಳನ್ನು ಸಿಡಿಸಿದ್ದಾರೆ. ಆರ್​ಸಿಬಿ ವಿರುದ್ಧ 84 ರನ್​ಗಳನ್ನ ಸಿಡಿಸಿರುವುದು ಧೋನಿ ವೈಯಕ್ತಿಕ ಅತ್ಯಧಿಕ ರನ್​ ಆಗಿದೆ. ಬೆಂಗಳೂರು ತಂಡದ ವಿರುದ್ಧ ಧೋನಿ ಇಲ್ಲಿವರೆಗೆ 140.7 ಸ್ಟ್ರೈಕ್​ರೇಟ್​​ನಲ್ಲಿ 39.9 ಆವರೇಜ್​ನಲ್ಲಿ 839 ರನ್​ಗಳನ್ನ ಗಳಿಸಿದ್ದಾರೆ. ಆರ್​ಸಿಬಿ ವಿರುದ್ಧ 46 ಸಿಕ್ಸರ್​ಗಳನ್ನ ಸಿಡಿಸಿರುವ ಧೋನಿ ಒಟ್ಟು 4 ಹಾಫ್​ಸೆಂಚುರಿ ಬಾರಿಸಿದ್ದಾರೆ. ಇವತ್ತಿನ ಪಂದ್ಯದಲ್ಲಿ 4 ಸಿಕ್ಸರ್ ಸಿಡಿಸಿದರೆ ಧೋನಿ ಒಟ್ಟು ಆರ್​ಸಿಬಿ ವಿರುದ್ಧ 50 ಸಿಕ್ಸರ್ ಬಾರಿಸಿದಂತೆ ಆಗುತ್ತದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪ್ರತಿಷ್ಠೆಯ ಕಣವಾದ RCB vs CSK ಪಂದ್ಯ.. ದಾಖಲೆ ಬರೆಯಲು ರೆಡಿಯಾದ ಕೊಹ್ಲಿ, MS ಧೋನಿ; ಏನೇನು?

https://newsfirstlive.com/wp-content/uploads/2024/05/VIRAT_KOHLI_DHONI-3.jpg

Load More