ಸ್ಯಾಂಡಲ್ವುಡ್ಗೂ ಕಾಲಿಟ್ಟ ಮೀ ಟೂ ಪ್ರಕರಣ
ಸ್ಯಾಂಡಲ್ವುಡ್ನಲ್ಲೂ ಕಮಿಟಿ ರಚನೆಗೆ ಒತ್ತಾಯ
ಇಂದು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಲಿರುವ ಫೈರ್
ನಿನ್ನೆವರೆಗೂ ಪಕ್ಕದ ಮಲಯಾಳಂ ಸಿನಿಮಾ ಇಂಡಸ್ಟ್ರಿಯ ಕರಾಳ ಪುಟಗಳು ಎಲ್ಲ ಕಡೆಯೂ ಹಲ್ಚಲ್ ಸೃಷ್ಟಿಸಿತ್ತು. ಆದ್ರೆ ಈಗ ಈ ಕರಾಳದ ಪುಟ ಚಂದನವನದಲ್ಲೂ ತೆರೆದುಕೊಂಡ ಅನುಮಾನಗಳು ಮೂಡಿವೆ. ಹೀಗಾಗಿ ಕೇರಳದ ಹೇಮಾ ಸಮಿತಿಯಂತೆ ಕರ್ನಾಟಕದಲ್ಲೂ ಸಮಿತಿ ಮಾಡಲು ಒತ್ತಾಯ ಕೇಳಿಬಂದಿದೆ. ಮಾತ್ರವಲ್ಲದೇ ಈ ಬಗ್ಗೆ ಸಿಎಂ ಭೇಟಿಗೂ ತಂಡವೊಂದು ಸಿದ್ಧವಾಗಿದೆ.
ಕೇರಳದ ಮಲಯಾಳಂ ಸಿನಿಮಾರಂಗದಲ್ಲಿ ಅಲ್ಲೋಲ-ಕಲ್ಲೋಲ ಎದ್ದಿದೆ. ಹೇಮಾ ಸಮಿತಿ ನೀಡಿದ ವರದಿಯಿಂದ ಸಿನಿಮಾ ಲೋಕದ ಕರಾಳತೆ ಬಹಿರಂಗವಾಗಿದೆ. ಇದು ನಿವಿನ್ ಪೌಲಿ ಎಂಬ ಖ್ಯಾತ ನಟನ ಸುತ್ತಲೂ ಸುತ್ತಿಕೊಂಡಿದೆ.
ಈಗ ಪಕ್ಕದ ಮಲಯಾಳಂ ಚಿತ್ರರಂಗದಂತೆ ಸ್ಯಾಂಡಲ್ವುಡ್ನ ಅಂಗಳದಲ್ಲೂ ಲೈಂಗಿಕ ದೌರ್ಜನ್ಯ ಸದ್ದು ಮಾಡ್ತಿದೆ. ಮೀಟೂ ಕೇಸ್.. ಈ ಹಿಂದೆ ಸ್ಯಾಂಡಲ್ವುಡ್ನಲ್ಲೂ ಸಂಚಲನ ಸೃಷ್ಟಿಸಿದ್ದ ಪ್ರಕರಣ.. ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಡಿದ್ದ ಆರೋಪ ದಕ್ಷಿಣ ಭಾರತದಲ್ಲೇ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಬಗ್ಗೆ ಫೈರ್ ಅಂದ್ರೆ FILM INDUSTRY FOR RIGHTS and EUQALITY ಸರ್ಕಾರಕ್ಕೆ ಪತ್ರ ಬರೆದಿದೆ.
ಇದನ್ನೂ ಓದಿ:ಕೇರಳದ MeToo ಗದ್ದಲದ ನಡುವೆ ಟಾಲಿವುಡ್ಗೆ ಸಮಂತಾ ದೊಡ್ಡ ಸಂದೇಶ
ಚಂದನವನದಲ್ಲಿ ಹಸಿ-ಬಿಸಿ ಕಮಟು!?
ಕನ್ನಡ ಸಿನಿರಂಗದಲ್ಲಿ ಕಾಸ್ಟಿಂಗ್ ಕೌಚ್ ಸಮಸ್ಯೆ ಇದೆ ಎಂಬ ಆರೋಪ ಆಗಾಗ ಕೇಳಿ ಬರ್ತಾನೇ ಇದೆ. ಕೆಲ ವರ್ಷಗಳ ಹಿಂದೆಯಷ್ಟೇ ಮಿ ಟೂ ಪ್ರಕರಣ ಸ್ಯಾಂಡಲ್ವುಡ್ನ ನಿದ್ದೆಗೆಡಿಸಿತ್ತು. ಇದಾದ ಬಳಿಕ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ 2017ರಲ್ಲಿ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ ರಚನೆ ಮಾಡಲಾಯ್ತು. ಅದ್ಯಾವಾಗ ಮಾಲಿವುಡ್ನ ಅಂತರಂಗ ದರ್ಶನವಾಯ್ತೋ, ಇದೀಗ ಸ್ಯಾಂಡಲ್ವುಡ್ನಲ್ಲೂ ಅದೇ ರೀತಿ ಸಮಿತಿ ರಚನೆ ಮಾಡ್ಬೇಕು ಅನ್ನೋ ಒತ್ತಾಯ ಕೇಳಿ ಬಂದಿದೆ.
ಇದನ್ನೂ ಓದಿ:ಕನ್ನಡ ಚಿತ್ರರಂಗದ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟ.. ಚೇತನ್ ಜೊತೆ ಕೈ ಜೋಡಿಸಿದ ಸುದೀಪ್, ರಮ್ಯಾ!
ನಿವೃತ್ತ ನ್ಯಾಯಾಮೂರ್ತಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಫೈರ್ ಕಮಿಟಿ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದೆ.
ಸರ್ಕಾರಕ್ಕೆ ಮನವಿ ಮಾಡಿದ್ದ ಪತ್ರವನ್ನ ನಟಿ ರಮ್ಯಾ ಕೂಡ ತಮ್ಮ ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರೊಂದಿಗೆ ಪತ್ರದಲ್ಲಿ ಫೈರ್ ಸಮಿತಿಯ ನಿರ್ದೇಶಕಿ ಕವಿತಾ ಲಂಕೇಶ್, ಸದಸ್ಯರಾದ ಚೇತನ್ ಹಾಗೇ ನಟಿ ರಮ್ಯಾ ಸಹಿ ಹಾಕಿದ್ದಾರೆ. ಅಲ್ಲದೇ ನಟಿಯರಾದ ಐಂದ್ರಿತಾ ರೈ, ಪೂಜಾ ಗಾಂಧಿ, ಆಶಿಕಾ ರಂಗನಾಥ್, ಶೃತಿ ಹರಿಹರನ್ ಕೂಡ ಸೈನ್ ಮಾಡಿದ್ದಾರೆ. ನಟರಾದ ಕಿಚ್ಚ ಸುದೀಪ್, ಸಿಹಿಕಹಿ ಚಂದ್ರು, ಡೈರೆಕ್ಟರ್ ಸುನಿ ಸೇರಿ ಹಲವರು ಸಹಿ ಹಾಕಿ ತನಿಖೆಗೆ ಸಹಮತ ಸೂಚಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಭೇಟಿ ಮಾಡಲಿರುವ ಫೈರ್ ಸದಸ್ಯರು
ಕೇವಲ ಸರ್ಕಾರಕ್ಕೆ ತನಿಖೆ ರಚಿಸುವಂತೆ ಪತ್ರ ಮಾತ್ರ ಬರೆಯದೇ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಫೈರ್ ಸದಸ್ಯರು ಭೇಟಿ ಮಾಡಲಿದ್ದಾರೆ. ಹೇಮಾ ಸಮತಿಯಂತೆ ಕರ್ನಾಟಕದಲ್ಲೂ ಕಮಿಟಿ ರಚನೆ ಮಾಡಿ ಎಂದು ಒತ್ತಾಯಿಸಲಿದ್ದಾರೆ. ಕನ್ನಡ ಸಿನಿಮಾರಂಗದ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ತನಿಖೆಗೆ ಆಗ್ರಹಿಸಲಿದ್ದಾರೆ. ಒಟ್ಟಾರೆ ಪಕ್ಕದ ಮಲಯಾಳಂ ಚಿತ್ರರಂಗದಲ್ಲಿ ಕೇಳಿಬಂದ ತೆರೆ ಹಿಂದಿನ ಕರಾಳ ಅಧ್ಯಾಯ ಸದ್ಯ ಕನ್ನಡ ಸಿನಿಮಾರಂಗದಲ್ಲೂ ಕೇಳಿಬಂದಿದ್ದು ದುರಂತ. ಬೇಡಿಕೆಯಂತೆ ಸರ್ಕಾರ ಸಮಿತಿ ರಚಿಸುತ್ತಾ ಕಾದು ನೋಡ್ಬೇಕು.
ಇದನ್ನೂ ಓದಿ:RCB ಕಣ್ಣು ಯಾರ ಮೇಲೆ.. ಮೆಗಾ ಹರಾಜಿಗೂ ಮುನ್ನ 8 ಕನ್ನಡಿಗರು ಹಾಟ್ ಟಾಪಿಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ