ಇಂದಿನಿಂದ ದುಲೀಪ್ ಟ್ರೋಫಿ ದಂಗಲ್ ಶುರು
ಸೆಪ್ಟೆಂಬರ್ 5 ರಿಂದ 22 ರ ತನಕ ಸ್ಟಾರ್ ವಾರ್
ಇಂಡಿಯಾ ಎ ತಂಡಕ್ಕೆ ಇಂಡಿಯಾ ಬಿ ತಂಡ ಸವಾಲು
ಒಂದು ತಿಂಗಳಿಂದ ಇಂಡಿಯನ್ ಕ್ರಿಕೆಟ್ ಫ್ಯಾನ್ಸ್ ಯಾವುದೇ ಸರಣಿಗಳಿಲ್ಲದೇ ಬೇಸರಗೊಂಡಿದ್ರು. ಇವತ್ತಿಗೆ ಅದಕ್ಕೆಲ್ಲಾ ಬ್ರೇಕ್ ಬೇಳಲಿದೆ. ಯಾಕಂದ್ರೆ ಇಂದಿನಿಂದ ಮೋಸ್ಟ್ ಎಕ್ಸೈಟೆಡ್ ದುಲೀಪ್ ಟ್ರೋಫಿ ಆರಂಭಗೊಳ್ಳಲಿದ್ದು ತೀರ ಕುತೂಹಲ ಮೂಡಿಸಿದೆ. ಟೀಮ್ ಇಂಡಿಯಾ ಘಟಾನುಘಟಿ ಆಟಗಾರರೇ ಇಲ್ಲಿ ಆಡ್ತಿದ್ದು, ಎಲ್ಲರ ಚಿತ್ತ ಅವರತ್ತ ನೆಟ್ಟಿದೆ. ಹಲವರ ಟೆಸ್ಟ್ ಕಮ್ಬ್ಯಾಕ್ ಭವಿಷ್ಯ ಇಲ್ಲೇ ನಿರ್ಧಾರವಾಗಲಿದೆ.
ಇಂದಿನಿಂದ ದುಲೀಪ್ ಟ್ರೋಫಿ ದಂಗಲ್
ದೇಶಿ ಕ್ರಿಕೆಟ್ ದುಲೀಪ್ ಟ್ರೋಫಿ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಇಂದಿನಿಂದ ಪಂದ್ಯಾವಳಿ ಆರಂಭಗೊಳ್ಳಲಿದ್ದು ಸೆಪ್ಟೆಂಬರ್ 22 ರ ತನಕ ಫ್ಯಾನ್ಸ್ಗೆ ಫುಲ್ ಮೀಲ್ಸ್ ಸಿಗಲಿದೆ. ನಾಲ್ಕು ತಂಡಗಳು ಈ ದಂಗಲ್ನಲ್ಲಿ ಆಡಲಿದ್ದು, ಮುಂಬರೋ ಬಾಂಗ್ಲಾ ಟೆಸ್ಟ್ ಸರಣಿಗೆ ತಂಡದ ಆಯ್ಕೆ ದೃಷ್ಟಿಯಿಂದ ಇದು ತುಂಬಾ ಮಹತ್ವ ಪಡೆದಿದೆ. ಟೀಮ್ ಇಂಡಿಯಾ ಸ್ಟಾರ್ ಆಟಗಾರರ ದಂಡೇ ಇಲ್ಲಿದ್ದು, ರನ್ ಕೊಳ್ಳೆ ಹೊಡೆದು ಸೆಲೆಕ್ಟರ್ಸ್ ಮನ ಗೆಲ್ಲೋದು ಎಲ್ಲರ ಹೆಬ್ಬಕೆಯಾಗಿದೆ. ಇಂದು ಚಿನ್ನಸ್ವಾಮಿ ಮೈದಾನದಲ್ಲಿ ಇಂಡಿಯಾ ಎ ಹಾಗೂ ಇಂಡಿಯಾ ಬಿ ತಂಡಗಳು ಸೆಣಸಾಡಿದ್ರೆ, ಅನಂತಪುರದಲ್ಲಿ ಇಂಡಿಯಾ ಸಿ ಹಾಗೂ ಇಂಡಿಯಾ ಡಿ ತಂಡಗಳು ತೊಡೆತಟ್ಟಲಿವೆ.
ಇದನ್ನೂ ಓದಿ:ದರ್ಶನ್ ಅಭಿಮಾನಿಗಳಿಗೆ ಗುಡ್ನ್ಯೂಸ್; ರಿಲೀಸ್ ಆಗುವ ಡೇಟ್ ನುಡಿದ ಬೀರಲಿಂಗೇಶ್ವರ ದೈವ
ಆಡಿ ಬೆಳೆದ ಅಂಗಳದಲ್ಲಿ ತ್ರಿಮೂರ್ತಿ ಕನ್ನಡಿಗರು ಮುಖಾಮುಖಿ..!
ಬೆಂಗಳೂರಿನ ಚಿನ್ನಸ್ವಾಮಿ ನಡೆಯುವ ಪಂದ್ಯದಲ್ಲಿ ಇಂಡಿಯಾ ಎ ಹಾಗೂ ಇಂಡಿಯಾ ಬಿ ತಂಡಗಳು ತೊಡೆ ತಟ್ಟಲಿವೆ. ಈ ಪಂದ್ಯದಲ್ಲಿ ತ್ರಿಮೂರ್ತಿ ಕನ್ನಡಿಗರಾದ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಹಾಗೂ ಪ್ರಸಿದ್ಧ್ ಕೃಷ್ಣಗೆ ಪ್ರತಿಷ್ಠೆಯಾಗಿದೆ. ಹೀಗಾಗಿ ಹೋಮ್ಗ್ರೌಂಡ್ನಲ್ಲಿ ಮೂವರು ಭರ್ಜರಿ ಸಿದ್ಧತೆ ನಡೆಸಿದ್ದು, ಬಾಂಗ್ಲಾ ಟೆಸ್ಟ್ ಸರಣಿಯಲ್ಲಿ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ತವರಿನಂಗಳದಲ್ಲಿ ಘರ್ಜಿಸಲು ಲೋಕಲ್ ಬಾಯ್
ಇಂಡಿಯಾ ಎ ತಂಡದಲ್ಲಿರೋ ಕೆಎಲ್ ರಾಹುಲ್ ಈ ಪಂದ್ಯಾವಳಿಯ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಈ ವರ್ಷದ ಇಂಗ್ಲೆಂಡ್ ವಿರುದ್ಧ ಕೊನೆ ಟೆಸ್ಟ್ ಆಡಿರೋ ರಾಹುಲ್ಗೆ ಕಮ್ಬ್ಯಾಕ್ ಹಾದಿ ಕಠಿಣವಾಗಿದೆ. ತಂಡದಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ದುಲೀಪ್ ಟ್ರೋಫಿಯಲ್ಲಿ ರನ್ ಗುಡ್ಡೆ ಹಾಕಲೇಬೇಕಿದೆ. ಹಾಗಾಗಿನೇ ಲೋಕಲ್ಬಾಯ್ ನೆಟ್ಸ್ನಲ್ಲಿ ಭರ್ಜರಿ ಪ್ರಾಕ್ಟೀಸ್ ನಡೆಸಿದ್ದಾರೆ. ಜೊತೆಗೆ ಕ್ಯಾಚ್ ಪ್ರಾಕ್ಟೀಸ್ ಕೂಡ ನಡೆಸಿದ್ದು, ಅಪಾರ ನಿರೀಕ್ಷೆ ಗರಿಗೆದರಿದೆ.
ಇದನ್ನೂ ಓದಿ:RCB ಕಣ್ಣು ಯಾರ ಮೇಲೆ.. ಮೆಗಾ ಹರಾಜಿಗೂ ಮುನ್ನ 8 ಕನ್ನಡಿಗರು ಹಾಟ್ ಟಾಪಿಕ್..!
ಇಂಡಿಯಾ ಎ ಕ್ಯಾಪ್ಟನ್ ಗಿಲ್ ಭರ್ಜರಿ ಪ್ರಾಕ್ಟೀಸ್
ಇಂಡಿಯಾ ಎ ತಂಡದ ಕ್ಯಾಪ್ಟನ್ ಆಗಿರೋ ಶುಭ್ಮನ್ ಪಂದ್ಯವನ್ನ ಗಂಭೀರವಾಗಿ ತೆಗೆದುಕೊಂಡಿದ್ದು ರನ್ ಹೊಳೆ ಹರಿಸುವ ಇರಾದೆಯಲ್ಲಿದ್ದಾರೆ. ಅದಕ್ಕಾಗಿ ನೆಟ್ಸ್ನಲ್ಲಿ ಇನ್ನಿಲ್ಲದಂತೆ ಬೆವರು ಹರಿಸಿದ್ದಾರೆ. ರನ್ ಗಳಿಕೆ ಜೊತೆ ತಂಡವನ್ನ ಗೆಲುವಿನ ದಡ ಸೇರಿಸುವ ಕನಸು ಕಾಣ್ತಿದ್ದಾರೆ.
ಆಟಗಾರನಾಗಿ ಅಥವಾ ನಾಯಕನಾಗಿ ನೀವು ಪ್ರತಿ ಪಂದ್ಯ, ಪ್ರತಿ ಸರಣಿಯಂದ ತುಂಬಾ ಕಲಿಯಬಹುದು. ನಾಯಕನಾದ್ರೆ ಆಟಗಾರರ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆ. ಅವರ ಸ್ಟ್ರೆಂಥ್ ಮತ್ತು ವೀಕ್ನೆಸ್ ಅರಿತುಕೊಳ್ಳಬಹುದು. ಇದರಿಂದ ಎಲ್ಲರ ಜೊತೆ ಬೇಗ ಕನೆಕ್ಟ್ ಆಗಬಹುದು-ಶುಭ್ಮನ್ ಗಿಲ್, ಇಂಡಿಯಾ ಎ ಕ್ಯಾಪ್ಟನ್
ಒಂದೆಡೆ ಇಂಡಿಯಾ ಎ ಕ್ಯಾಪ್ಟನ್ ಗೆದ್ದೇ ತೀರಲು ಪಣತೊಟ್ಟಿದ್ರೆ, ಅದಕ್ಕೆ ಅಡ್ಡಗಾಲು ಹಾಕಲು ಇಂಡಿಯಾ ಬಿ ತಂಡ ರೆಡಿಯಾಗಿದೆ. ನಾವು ಪಂದ್ಯಕ್ಕೆ ಎಲ್ಲಾ ರೀತಿಯಲ್ಲಿ ಸಜ್ಜಾಗಿದ್ದು, ಗೆಲ್ಲವುದೇ ನಮ್ಮ ಗುರಿಯಾಗಿದೆ ಎಂದು ತಂಡದ ಆಟಗಾರ ಯಶಸ್ವಿ ಜೈಸ್ವಾಲ್ ಹೇಳಿದ್ದಾರೆ.
ಅಭ್ಯಾಸ ಮಾಡಲೇಬೇಕು. ಉತ್ತಮ ಸಿದ್ಧತೆ ನಡೆಸಿದ್ದೇವೆ. ಉಳಿದದ್ದು ಏನು ಹೇಳೋಕ್ಕಾಗಲ್ಲ. ಆದರೆ ನಾವು ಎಂಜಾಯ್ ಮಾಡುತ್ತಾ ಪಂದ್ಯವನ್ನ ಗೆಲ್ಲಲು ಬಯಸುತ್ತೇವೆ. ಅದೇ ನಮ್ಮ ಗುರಿ-ಯಶಸ್ವಿ ಜೈಸ್ವಾಲ್, ಇಂಡಿಯಾ ಬಿ ಆಟಗಾರ
ಸರ್ಫರಾಜ್ ಖಾನ್ಗೆ ಅಗ್ನಿಪರೀಕ್ಷೆ
ಡೆಬ್ಯು ಟೆಸ್ಟ್ನಲ್ಲೆ ಸೆನ್ಷೆಷನ್ ಸೃಷ್ಟಿಸಿದ್ದ ಸರ್ಫರಾಜ್ ಖಾನ್ ದುಲೀಪ್ ಟ್ರೋಫಿ ಅಗ್ನಿಪರೀಕ್ಷೆ ಕಣವಾಗಿ ಮಾರ್ಪಟ್ಟಿದೆ. ಬಾಂಗ್ಲಾ ಸರಣಿಗೆ ಆಯ್ಕೆಯಾಗಬೇಕಾದ್ರೆ ಮುಂಬೈಕರ್ ಇಲ್ಲಿ ಪರ್ಫಾಮ್ ಮಾಡಲೇಬೇಕಿದೆ. ಯಾಕಂದ್ರೆ ಮಧ್ಯಮ ಕ್ರಮಾಂಕಕ್ಕಾಗಿ ಶ್ರೇಯಸ್ ಅಯ್ಯರ್ ಹಾಗೂ ರಾಹುಲ್, ಸರ್ಫರಾಜ್ ಪೈಪೋಟಿ ಒಡ್ಡಿದ್ದಾರೆ. ಹೀಗಾಗಿ ಡು ಡೈ ಬ್ಯಾಟಲ್ನಲ್ಲಿ ಘರ್ಜಿಸಲು ಸರ್ಫರಾಜ್ ಅಭ್ಯಾಸದ ಅಖಾಡದಲ್ಲಿ ಧೂಳೆಬ್ಬಿಸಿದ್ದಾರೆ.
ಇದನ್ನೂ ಓದಿ:‘ಅಷ್ಟೊಂದು ಸಾಕ್ಷಿನಾ?’ ಜೈಲಲ್ಲಿ ದಂಗಾದ ದರ್ಶನ್.. ಚಾರ್ಜ್ಶೀಟ್ ಪುಟಗಳ ಸಂಖ್ಯೆ ತಿಳಿದು ಹೇಳಿದ್ದೇನು?
ಇವರಷ್ಟೇ ಅಲ್ಲದೇ ಧ್ರುವ್ ಜುರೆಲ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಹಾಗೂ ಆವೇಶ್ ಖಾನ್ ಇದು ಪ್ರಮುವಾಗಿದೆ. ದುಲೀಪ್ ಟ್ರೋಫಿಯಲ್ಲಿ ಧೂಳೆಬ್ಬಿಸಲೇಬೇಕಿದೆ. ಇಲ್ಲವಾದ್ರೆ ಬಾಂಗ್ಲಾ ಟೆಸ್ಟ್ ಸರಣಿಯಲ್ಲಿ ಆಡುವ ಕನಸು ನುಚ್ಚುನೂರಾಗಲಿದೆ. ಹೀಗಾಗಿ ಈ ಬಾರಿಯ ದುಲೀಪ್ ಟ್ರೋಫಿ ಹಿಂದೆಂಗಿಂತಲೂ ಕೌತುಕತೆ ಹುಟ್ಟುಹಾಕಿದ್ದು, ನೋಡಿ ಎಂಜಾಯ್ ಮಾಡಿ.
ಇದನ್ನೂ ಓದಿ:RCBಗೆ ರಾಹುಲ್, ರೋಹಿತ್, ಪಾಂಡ್ಯ, ಅಯ್ಯರ್ ಸಿಗದಿದ್ರೆ ಬೋಲ್ಡ್ ಡಿಸಿಷನ್; ಹಳೇ ನಾಯಕನಿಗೇ ಕ್ಯಾಪ್ಟನ್ಸಿ ಪಟ್ಟ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್