ಕ್ರಿಕೆಟ್ ಲೋಕದ ಮಸ್ತ್ ಮಸ್ತ್ ಸುದ್ದಿಗಳು
ವಿಂಡೀಸ್ನಲ್ಲಿ ಟೀಮ್ ಇಂಡಿಯಾ ಮೋಜು-ಮಸ್ತಿ ಹೇಗಿದೆ-Video
ಭಾರತ ಮಹಿಳಾ ತಂಡ ಸೇರಿಕೊಳ್ಳಲಿದ್ದಾರೆ ನೂತನ ಕೋಚ್
ವಿಂಡೀಸ್ನಲ್ಲಿ ಟೀಮ್ ಇಂಡಿಯಾ ಆಟಗಾರರ ಮಸ್ತಿ
ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನಾಡಲು ಟೀಮ್ ಇಂಡಿಯಾ ಆಟಗಾರರು ವೆಸ್ಟ್ ಇಂಡೀಸ್ ತಲುಪಿದ್ದಾರೆ. ಕೆರಬಿಯನ್ ನಾಡನ್ನು ತಲುಪಿರುವ ಆಟಗಾರರು ಬೀಚ್ ವಾಲಿಬಾಲ್ ಆಡಿ ಮಸ್ತಿ ಮಾಡಿದ್ದಾರೆ. ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಆರ್ ಅಶ್ವಿನ್ ಸೇರಿದಂತೆ ಹಲ ಆಟಗಾರರು ಬೀಚ್ನಲ್ಲಿ ವಾಲಿಬಾಲ್ ಆಡಿದ್ದಾರೆ. ಆಟಗಾರರಿಗೆ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಸಾಥ್ ನೀಡಿದ್ದಾರೆ.
𝗧𝗼𝘂𝗰𝗵𝗱𝗼𝘄𝗻 𝗖𝗮𝗿𝗶𝗯𝗯𝗲𝗮𝗻! 📍
Ishan Kishan takes over the camera to shoot #TeamIndia's beach volleyball session in Barbados 🎥😎
How did Ishan – the cameraman – do behind the lens 🤔#WIvIND | @ishankishan51 pic.twitter.com/ZZ6SoL93dF
— BCCI (@BCCI) July 3, 2023
ಡ್ರೆಸ್ಸಿಂಗ್ ರೂಮ್ನಲ್ಲಿ ಕುಣಿದು ಕುಪ್ಪಳಿಸಿದ ಆಟಗಾರರು
ವಿಟಾಲಿಟಿ ಟಿ20 ಬ್ಲಾಸ್ಟ್ ಲೀಗ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸ್ತಿದ್ದಂತೆ ಲ್ಯಾಂಕ್ಶೈರ್ ತಂಡದ ಆಟಗಾರರು ಕುಣಿದು ಕುಪ್ಪಳಿಸಿದ್ದಾರೆ. ನಾರ್ಥಮ್ಟನ್ಶೈರ್ ವಿರುದ್ಧದ ಪಂದ್ಯದಲ್ಲಿ ಲ್ಯಾಂಕ್ಶೈರ್ ತಂಡ 6 ವಿಕೆಟ್ಗಳ ಜಯ ಸಾಧಿಸಿತು. ಈ ಮೂಲಕ ಕ್ವಾರ್ಟರ್ ಫೈನಲ್ಗೆ ಎಂಟ್ರಿ ಕೊಟ್ಟಿತು. ಇದ್ರಿಂದ ಫುಲ್ ಖುಷ್ ಆದ ಆಟಗಾರರು ಡ್ರೆಸ್ಸಿಂಗ್ ರೂಮ್ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಜೋಸ್ ಬಟ್ಲರ್, ಫಿಲಿಪ್ ಸಾಲ್ಟ್, ಡ್ಯಾರಿಲ್ ಮಿಚೆಲ್, ಲ್ಯೂಕ್ ವುಡ್ ರಂತಹ ಆಟಗಾರರನ್ನು ಒಳಗೊಂಡ ಲಯಾಮ್ ಲಿವಿಂಗ್ಸ್ಟೋನ್ ನೇತೃತ್ವದ ಲಾಂಕ್ಶೈರ್ ಟ್ರೋಫಿ ಗೆಲ್ಲೋ ಫೇವರಿಟ್ ಅನಿಸಿದೆ.
ಮಹಾಕಾಳೇಶ್ವರನಿಗೆ ವೇಗಿ ಉಮೇಶ್ ವಿಶೇಷ ಪೂಜೆ
ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗುಳಿದಿರುವ ಟೀಮ್ ಇಂಡಿಯಾ ವೇಗಿ ಉಮೇಶ್ ಯಾದವ್, ಉಜ್ಜಯಿನಿಗೆ ತೆರಳಿ ಮಹಾಕಾಳೇಶ್ವರನ ದರ್ಶನ ಪಡೆದಿದ್ದಾರೆ. ಪತ್ನಿಯೊಂದಿಗೆ ಮಹಾಕಾಳೇಶ್ವರನ ಸನ್ನಿದಿಗೆ ತೆರಳಿದ್ದ ಉಮೇಶ್ ಯಾದವ್, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಕಳೆದ 3 ತಿಂಗಳ ಹಿಂದೆಯೂ ಉಜ್ಜಯಿನಿಗೆ ಭೇಟಿ ನೀಡಿದ್ದ ಉಮೇಶ್ ಯಾದವ್ ವಿಶೇಷ ಪೂಜೆ ಸಲ್ಲಿಸಿದ್ರು. ಇಂಜುರಿಗೆ ತುತ್ತಾಗಿರುವ ಉಮೇಶ್ ಯಾದವ್ರನ್ನು ವಿಂಡೀಸ್ ಪ್ರವಾಸದಿಂದ ಕೈಬಿಡಲಾಗಿದೆ.
ಅಭಿಮಾನಿಗಳೊಂದಿಗೆ ಬೆರೆತ ನೆದರ್ಲೆಂಡ್ ಆಟಗಾರರು
ವಿಶ್ವಕಪ್ ಕ್ವಾಲಿಫೈಯರ್ ಟೂರ್ನಿಯ ಕಾವಿನ ನಡುವೆಯೆ ನೆದರ್ಲೆಂಡ್ ತಂಡದ ಆಟಗಾರರು ಅಭಿಮಾನಿಗಳೊಂದಿಗೆ ಕಾಲ ಕಳೆದಿದ್ದಾರೆ. ನಿನ್ನೆ ನಡೆದ ಒಮನ್ ವಿರುದ್ಧದ ಡು ಆರ್ ಡೈ ಪಂದ್ಯಕ್ಕೂ ಮುನ್ನ ನೆದರ್ಲೆಂಡ್ ಆಟಗಾರರು ಪುಟ್ಟ ಅಭಿಮಾನಿಗಳೊಂದಿಗೆ ಬೆರೆತಿದ್ದು, ಅವರಿಗೆ ಆಟೋಗ್ರಾಫ್ ಗಳನ್ನ ನೀಡಿದ್ದಾರೆ. ಪುಟ್ಟ ಅಭಿಮಾನಿಗಳು ನೆಚ್ಚಿನ ಆಟಗಾರರನ್ನ ಭೇಟಿಯಾದ ಕ್ಯೂಟ್ ವಿಡಿಯೋವನ್ನ ಐಸಿಸಿ ಹಂಚಿಕೊಂಡಿದೆ. ಸದ್ಯ ಕ್ವಾಲಿಫೈಯರ್ ಹಣಾಹಣಿ ರೋಚಕ ಘಟ್ಟ ತಲುಪಿದ್ದು, ಶ್ರೀಲಂಕಾ ಮೊದಲ ತಂಡವಾಗಿ ಕ್ವಾಲಿಫೈ ಆಗಿದೆ. ಉಳಿದ ಒಂದು ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ನೆದರ್ಲೆಂಡ್ ಕೂಡ ಕ್ವಾಲಿಫೈ ಆಗೋ ಕನವರಿಕೆಯಲ್ಲಿದೆ.
ಭಾರತ ಮಹಿಳಾ ತಂಡಕ್ಕೆ ಮಜುಂದಾರ್ ಕೋಚ್?
ರಾಜಸ್ಥಾನ್ ರಾಯಲ್ಸ್ನ ಮಾಜಿ ಅಸಿಸ್ಟೆಂಟ್ ಕೋಚ್, ಹಾಲಿ ಮುಂಬೈ ರಣಜಿ ತಂಡದ ಕೋಚ್ ಆಗಿರುವ ಅಮೋಲ್ ಮಜುಂದಾರ್, ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗುವ ಸಾದ್ಯತೆ ದಟ್ಟವಾಗಿದೆ. ಹುದ್ದೆಗೆ ಈಗಾಗಲೇ ಸಂದರ್ಶನ ಮಾಡಿರುವ ಕ್ರಿಕೆಟ್ ಅಡೈಸರಿ ಕಮಿಟಿ ಶಾರ್ಟ್ಲಿಸ್ಟ್ ಮಾಡಿದ್ದು, ಮಜುಂದಾರ್ ಹೆಸರು ಈ ಪಟ್ಟಿಯಲ್ಲಿದೆ ಎಂದು ತಿಳಿದುಬಂದಿದೆ. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಆಟಗಾರನಾಗಿ, ಕೋಚ್ ಆಗಿ ಹೆಚ್ಚು ಅನುಭವ ಹೊಂದಿರುವ ಅಮೋಲ್ ಮಜುಂದಾರ್, ಈ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ಬಹುತೇಕ 2 ವರ್ಷಗಳ ಅವಧಿಯ ಒಪ್ಪಂದವನ್ನು ಮಜುಂದಾರ್ ಜೊತೆಗೆ ಮಾಡಿಕೊಳ್ಳಲು ಬಿಸಿಸಿಐ ವಲಯದಲ್ಲಿ ಚರ್ಚೆ ನಡೆದಿವೆ ಎನ್ನಲಾಗಿದೆ.
ಆ್ಯಷಸ್ ಟೆಸ್ಟ್ ಸರಣಿಯಿಂದ ಲಯನ್ ಔಟ್
ಆ್ಯಷಸ್ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಗೆದ್ದ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದೆ. 2ನೇ ಟೆಸ್ಟ್ ಪಂದ್ಯದ ವೇಳೆ ಇಂಜುರಿಗೆ ತುತ್ತಾದ ಸ್ಟಾರ್ ಸ್ಪಿನ್ನರ್ ನಥಾನ್ ಲಯನ್ ಟೂರ್ನಿಯ ಇನ್ನುಳಿದ ಪಂದ್ಯಗಳಿಂದ ಹೊರ ಬಿದ್ದಿದ್ದಾರೆ. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕೃತ ಹೇಳಿಕೆ ನೀಡಿದೆ. ಲಾರ್ಡ್ಸ್ ಟೆಸ್ಟ್ನಲ್ಲಿ ಕಾಫ್ ಇಂಜುರಿಗೆ ತುತ್ತಾದ ಲಯನ್, ವಾಕಿಂಗ್ ಸ್ಟಿಕ್ ಸಹಾಯದಿಂದ ನಡೆದಾಡಲು ಆರಂಭಿಸಿದ್ರು. ಆ ನಂತರದಲ್ಲಿ ನೋವಿನ ನಡುವೆಯೂ ಕಣಕ್ಕಿಳಿದು ಬ್ಯಾಟಿಂಗ್ ನಡೆಸಿದ್ರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್