newsfirstkannada.com

‘ಓ ಇನ್ನೂ ನಾಯಕರಿಲ್ಲ ಕ್ಷಮಿಸಿ ಕ್ಷಮಿಸಿ..’ ಎನ್ನುತ್ತಲೇ ಕೈಮುಗಿದು ಅಪಹಾಸ್ಯ: ವಿಧಾನಸಭೆಯಲ್ಲಿ ಬರೀ ಕಾಲೆಳೆಯೋದೇ ಆಯ್ತು..!

Share :

05-07-2023

    ಪರಸ್ಪರ ಕಾಲೆಳೆದುಕೊಂಡ ಹಾಲಿ ಡಿಸಿಎಂ, ಮಾಜಿ ಡಿಸಿಎಂ

    ‘ಏ ಯತ್ನಾಳ್ ಅವ್ರೇ ಸ್ವಲ್ಪ ತಾಳ್ಮೆಯಿಂದಿರಿ’- ಸಿದ್ದು ಗೇಲಿ

    ಗ್ಯಾರಂಟಿ ಎಫೆಕ್ಟ್​.. ಧರ್ಮಸ್ಥಳದಲ್ಲಿ ಊಟವನ್ನೇ ನಿಲ್ಲಿಸಿದ್ದಾರಂತೆ..!

ವಿಧಾನಮಂಡಲದ ಮೂರನೇ ದಿನದ ಅಧಿವೇಶನದಲ್ಲಿ ಗ್ಯಾರೆಂಟಿ ವಿಚಾರವೇ ಸದ್ದು ಮಾಡಿದೆ. ಚರ್ಚೆಗಿಂತ ಆಡಳಿತ ಮತ್ತು ವಿಪಕ್ಷದ ಸದಸ್ಯರು ಒಬ್ಬರ ಕಾಲೊಬ್ಬರು ಎಳೆಯೋದ್ರಲ್ಲೇ ಬ್ಯುಸಿಯಾಗಿದ್ರು. ಸಿಎಂ ಸಿದ್ದರಾಮಯ್ಯನವರ ಸ್ಟೈಲ್​ನಲ್ಲೇ ಆರ್​.ಅಶೋಕ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರೆ, ಪ್ರತಿಬಾರಿ ಎದ್ದು ನಿಲ್ಲುತಿದ್ದ ಯತ್ನಾಳ್​​ಗೆ ಸಿಎಂ ಸಿದ್ದರಾಮಯ್ಯ ಕೌಂಟರ್ ಕೊಟ್ಟರು. ಇನ್ನು ಹಾಲಿ ಡಿಸಿಎಂ ಮತ್ತು ಮಾಜಿ ಡಿಸಿಎಂ ಮಧ್ಯೆಯೂ ಜಟಾಪಟಿ ನಡೀತು.

2ನೇ ದಿನದ ಕಲಾಪದಲ್ಲಿ ನಿಲುವಳಿ ಸೂಚನೆಗೆ ಬಿಗಿಪಟ್ಟು ಹಿಡಿದು ಪ್ರತಿಭಟನೆ ಮಾಡಿದ್ದ ಬಿಜೆಪಿ ಸದಸ್ಯರು, ಇವತ್ತು ಕಲಾಪ ಆರಂಭವಾಗ್ತಿದ್ದಂತೆ ಸರ್ಕಾರದ ಮೇಲೆ ಚಾರ್ಜ್​ ತೆಗೆದುಕೊಂಡ್ರು. ಕೊನೆಗೆ ಶೂನ್ಯವೇಳೆ ಬಳಿಕ ಗ್ಯಾರಂಟಿ ಯೋಜನೆಗಳ ಬಗ್ಗೆ ನಿಲುವಳಿ ಸೂಚನೆ ಮಂಡನೆಗೆ ಸಭಾಧ್ಯಕ್ಷರು ಅನುಮತಿ ನೀಡಿದ್ರು. ಶೂನ್ಯವೇಳೆ ಬಳಿಕ ಆರ್​.ಆಶೋಕ್​ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಪ್ರಸ್ತಾಪ ಮಂಡಿಸಿದ್ರು. ಈ ವೇಳೆ ಸಿದ್ದರಾಮಯ್ಯನವರ ಸ್ಟೈಲ್​ನಲ್ಲೇ ವಿಧಾನಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿ, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ್ರು.

ಮಹಾದೇವಪ್ಪ ನಿನಗೂ ಫ್ರೀ ಅಂದರು. ನನಗೂ ಫ್ರೀ ಅಂದರು. ಹಾಗಾದ್ರೆ ಇವತ್ತು ಯಾಕೆ ಕಂಡೀಷನ್ ಹಾಕ್ತಾ ಇದ್ದೀರಾ? ಯಾಕೆ ಫ್ರೀ ಕೊಡಲಿಲ್ಲ. ಹೇಳಿದೊಂದು ಮಾಡಿದೊಂದು
ಆರ್.ಅಶೋಕ್, ಮಾಜಿ ಡಿಸಿಎಂ

ಸಿದ್ದರಾಮಯ್ಯ ದಾಟಿಯಲ್ಲೇ ಟಾಂಗ್​ ನೀಡಿದ ಅಶೋಕ್

ಉಚಿತ ಬಸ್​ ಪ್ರಯಾಣದ ಬಗ್ಗೆ ಆರ್​.ಅಶೋಕ್​ ಮಾತನಾಡುವಾಗ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಹೆಚ್​ಡಿಕೆ, ಫ್ರೀ ಬಸ್​ ಯೋಜನೆಯಿಂದ ಧರ್ಮಸ್ಥಳದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಉಚಿತ ಊಟ ನೀಡುವುದನ್ನೇ ನಿಲ್ಲಿಸಿದ್ದಾರೆ ಎಂದು ಶಕ್ತಿ ಯೋಜನೆ ಬಗ್ಗೆ ಹಾಸ್ಯ ಮಾಡಿದರು.

ಯತ್ನಾಳ್​ ಕಾಲೆಳೆದ ಸಿಎಂ ಸಿದ್ದರಾಮಯ್ಯ

ನಿಲುವಳಿ ಪ್ರಸ್ತಾವ ಮಂಡನೆ ವೇಳೆ ಪದೇ ಪದೇ ಎದ್ದು ನಿಂತು ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ ಯತ್ನಾಳ್ ಅವರೇ ನೀವು ಸ್ವಲ್ಪ ತಾಳ್ಮೆಯಿಂದಿರಿ. ನಿಮ್ಮನ್ನು ವಿಪಕ್ಷ ನಾಯಕರ ಮಾಡುತ್ತಾರೋ ಇಲ್ವೋ ಗೊತ್ತಿಲ್ಲ. ಇಲ್ಲಿ ಎದ್ದೆದ್ದು ನಿಂತು ಮಾತಾಡಿದರೆ ನಿಮ್ಮ ವಿಪಕ್ಷ ನಾಯಕ ಮಾಡುತ್ತಾರೆ ಅಂತಾ ಅಂದುಕೊಂಡಿದ್ದೀರಾ ಎಂದು ಸಿಎಂ ಸಿದ್ದರಾಮಯ್ಯ, ಯತ್ನಾಳ್​ ಅವರ ಕಾಲೆಳೆದ್ರು.
ಜನರೇ ನಿಮಗೆ ಪಾಠ ಕಲಿಸಿದ್ದಾರೆ..

ಬಿಜೆಪಿ ಸದಸ್ಯರಿಗೆ ಸಿಎಂ ಟಾಂಗ್​

ಸರ್ಕಾರದ ಗ್ಯಾರಂಟಿಗಳ ಬಗ್ಗೆ ಕುಹಕವಾಡಿ ಬಿಜೆಪಿ ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಸಖತ್​ ಟಾಂಗ್​ ನೀಡಿದ್ರು. ಚುನಾವಣೆಯಲ್ಲಿ ನಿಮಗೆ ಜನರೇ ಪಾಠ ಕಲಿಸಿದ್ದಾರೆ. ಆದ್ರೂ ನಿಮಗೆ ಬುದ್ಧಿ ಬಂದಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ರು.

ಸಿಎಂ ಸಿದ್ದರಾಮಯ್ಯ ಬಳಿಕ ಮಾತಿಗಿಳಿದ ಡಿಸಿಎಂ ಡಿ.ಕೆ.ಶಿವಕುಮಾರ್​ ತಿಳಿದೋ ಅಥವಾ ತಿಳಿಯೋದೇ ಗೊತ್ತಿಲ್ಲ.. ವಿಪಕ್ಷ ನಾಯಕರು ಎಂಬ ಪದ ಬಳಕೆ ಮಾಡಿದ್ರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಇನ್ನು ವಿರೋಧ ಪಕ್ಷದ ನಾಯಕರೇ ಆಯ್ಕೆ ಆಗಿಲ್ಲ ಎಂದು ಡಿಕೆಶಿಯ ಗಮನಕ್ಕೆ ತಂದ್ರು.. ಓ.. ಹೌದಲ್ವಾ.. ಎನ್ನುತ್ತಲ್ಲೇ ಬಿಜೆಪಿಗರಿಗೆ ಕೈಮುಗಿದು, ಅಪಹಾಸ್ಯ ಮಾಡಿದ್ರು.. ಈ ವೇಳೆ ಮಧ್ಯಪ್ರವೇಶಿಸಿದ ಆರ್​.ಅಶೋಕ್​, ಡಿಕೆ ಶಿವಕುಮಾರ್​ ಅವರ ಸಿಎಂ ಗ್ಯಾರಂಟಿಯೋ ಠುಸ್​ ಆಗಿದೆ ಎಂದು ತಿರುಗೇಟು ನೀಡಿದ್ರು.

ಯಡಿಯೂರಪ್ಪನವರು ದೆಹಲಿಯಲ್ಲಿ ಧರಣಿ ಮಾಡಲಿ

ಇಡೀ ದಿನ ಸದನದ ಒಳಗೂ ಹೊರಗೂ ಬಿಜೆಪಿ ನಾಯಕರು ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಥಾನದ ವಿಚಾರವಾಗಿ ಪ್ರತಿಭಟನೆ ನಡೆಸಿದ್ರು. ಇದಕ್ಕೆ ವಿಧಾನಸಭೆಯಲ್ಲಿ ತಿರುಗೇಟು ನೀಡಿದ ಡಿಸಿಎಂ ಡಿಕೆಶಿ, ಬಿಜೆಪಿಯ ಪ್ರತಿಭಟನೆ ಪಶ್ಚಾತ್ತಾಪದ ಪ್ರತಿಭಟನೆ.. ಅವರು ಪ್ರತಿಭಟನೆ ಮಾಡಬೇಕಾಗಿರುವುದು ಇಲ್ಲಲ್ಲ.. ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಧರಣಿ ನಡೆಸಲಿ. ತೈಲ ಬೆಲೆ ಕುಸಿದಿದ್ದರೂ ಪೆಟ್ರೋಲ್, ಡೀಸೆಲ್ ದರ ಇಳಿಸಿಲ್ಲ. ಕೇಂದ್ರ ಸರ್ಕಾರ ತೈಲ ಬೆಲೆ ಇಳಿಸದಿದ್ದರಿಂದ ಬೆಲೆ ಏರಿಕೆಯಾಗಿದೆ ಎಂದು ಸದನದಲ್ಲಿ ಡಿಕೆ ಶಿವಕುಮಾರ್​ ಹೇಳಿದ್ರು.

ಭೋಜನಾದ ಬಳಿಕ ಹೆಚ್​ಡಿಕೆ ಶಿವಲಿಂಗೇಗೌಡ ಮಧ್ಯೆ ಟಾಕ್​ವಾರ್​

ಕೊಬ್ಬರಿ ವಿಚಾರವಾಗಿ ವಿಧಾನಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಚರ್ಚೆ ವೇಳೆ ಹಾಸನ ಜಿಲ್ಲೆಯ ಶಾಸಕರೊಬ್ಬರು ಎಂದ ಮಾತಿಗೆ ಶಿವಲಿಂಗೇಗೌಡ್ರು ಕೆರಳಿ ನಿಂತ್ರು.. ನಾನು ಹೆಸರು ಇಟ್ಟುಕೊಂಡೇ ಬಂದಿದ್ದೇನೆ, ಅದ್ಯಾಕೆ ಹಾಸನ ಜಿಲ್ಲೆಯ ಶಾಸಕರು ಅಂತೀರಾ ಹೆಸರು ಹೇಳಿ ಎಂದಿದು ಮಾಜಿ ಸಿಎಂ ಹೆಚ್​ಡಿಕೆ ವಿರುದ್ಧ ನಿಗಿನಿಗಿ ಕೆಂಡಕಾರಿದ್ರು. ಒಟ್ಟಾರೆ.. ವಿಧಾನಸಭೆಯ 3ನೇ ದಿನದ ಕಲಾಪದಲ್ಲಿ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಚರ್ಚೆಗಿಂತ ಪರಸ್ಪರ ಎಟು-ಏದಿರೇಟು ನೀಡುವುದರಲ್ಲಿಯೇ ತಲ್ಲೀನರಾಗಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಓ ಇನ್ನೂ ನಾಯಕರಿಲ್ಲ ಕ್ಷಮಿಸಿ ಕ್ಷಮಿಸಿ..’ ಎನ್ನುತ್ತಲೇ ಕೈಮುಗಿದು ಅಪಹಾಸ್ಯ: ವಿಧಾನಸಭೆಯಲ್ಲಿ ಬರೀ ಕಾಲೆಳೆಯೋದೇ ಆಯ್ತು..!

https://newsfirstlive.com/wp-content/uploads/2023/07/DKS-9.jpg

Load More