ಟಿ20ಗೆ ಯುವಕರನ್ನು ಆಯ್ಕೆ ಮಾಡೋದೆ ಕ್ಯಾಪ್ಟನ್ಗೆ ತಲೆ ಬಿಸಿ
ಕೆರಿಬಿಯನ್ ವಿರುದ್ಧ ಭಾರತ ಸೋತರೆ ಮುಖಭಂಗ ಗ್ಯಾರಂಟಿ
ಮೂವರು ಓಪನರ್ಸ್, ಮೂವರು ಮಿಡಲ್ ಆರ್ಡರ್ ಸಾಧ್ಯನಾ?
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್, ಏಕದಿನ ಸರಣಿ ಗೆದ್ದು ಬೀಗಿರುವ ಟೀಮ್ ಇಂಡಿಯಾಗೆ ಇಂದಿನಿಂದ ಅಸಲಿ ಸವಾಲು ಎದುರಾಗಲಿದೆ. ಅಪಾರ ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಟೀಮ್ ಇಂಡಿಯಾ ಇದೀಗ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಸ್ವಲ್ಪ ಯಾಮಾರಿದ್ರೆ, ಸೋಲಿನ ಮುಖಭಂಗ ಅನುಭವಿಸಬೇಕಾಗುತ್ತದೆ.
ಇಂಡೋ- ವಿಂಡೀಸ್ ಟೆಸ್ಟ್ ಹಾಗೂ ಏಕದಿನ ಸರಣಿಯನ್ನ ಕಬ್ಜ ಮಾಡಿಕೊಂಡ ಟೀಮ್ ಇಂಡಿಯಾ ಇದೀಗ ಟಿ20 ಸರಣಿಗೆ ಸಜ್ಜಾಗಿದೆ. ಚುಟುಕು ಸರಣಿ ಗೆದ್ದು ಬೀಗೋ ಲೆಕ್ಕಾಚಾರದಲ್ಲಿ ಯಂಗ್ ಇಂಡಿಯಾ ಇದೆ. ಆದ್ರೆ, ಅಸಲಿ ಅಖಾಡಕ್ಕೆ ಇಳಿಯೋಕೆ ಮುನ್ನವೇ ಹಲವು ಸವಾಲುಗಳು ಕ್ಯಾಪ್ಟನ್ ಹಾರ್ದಿಕ್ ತಲೆನೋವು ತಂದಿಟ್ಟಿವೆ. ಈ ಗೊಂದಲಗಳಿಗೆ ಸೂಕ್ತವಾದ ಪರಿಹಾರ ಕಂಡುಕೊಂಡು ಕಣಕ್ಕಿಳಿದ್ರೆ ಮಾತ್ರ ಟಿ20 ಸರಣಿ ಗೆಲುವು ನಮ್ಮದಾಗಲಿದೆ.
ಇರೋ ಮೂವರಲ್ಲಿ ಓಪನರ್ಸ್ ಯಾರು.?
ಟ್ರಿನಿಡಾಡ್ನಲ್ಲಿ ಇಂದು ನಡೆಯೋ ಮೊದಲ ಪಂದ್ಯಕ್ಕೂ ಮುನ್ನ ಹಾರ್ದಿಕ್ಗಿರೋ ಮೊದಲ ಸವಾಲ್ ಓಪನರ್ಸ್ ಆಯ್ಕೆ. ಏಕದಿನ ಸರಣಿಯ ಸಕ್ಸಸ್ಫುಲ್ ಜೋಡಿ ಇಶಾನ್ ಕಿಶನ್, ಶುಭ್ಮನ್ ಗಿಲ್ ಸದ್ಯ ಸಾಲಿಡ್ ರಿದಮ್ನಲ್ಲಿದ್ದಾರೆ. ಆದ್ರೆ, ಯಂಗ್ ಡೈನಾಮಿಕ್ ಯಶಸ್ವಿ ಜೈಸ್ವಾಲ್ ಕೂಡ ಕಣಕ್ಕಿಳಿಯಲು ತುದಿಗಾಲಲ್ಲಿ ನಿಂತಿದ್ದಾರೆ. ಶುಭ್ಮನ್ -ಕಿಶನ್ ಜೋಡಿಗೆ ಹಾರ್ದಿಕ್ ಮಣೆ ಹಾಕ್ತಾರಾ.? ಅಥವಾ ಜೈಸ್ವಾಲ್ಗೆ ಚಾನ್ಸ್ ಕೊಡ್ತಾರಾ ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.
ಮಿಡಲ್ ಆರ್ಡರ್ನಲ್ಲಿ ಯಾರಿಗೆ ಚಾನ್ಸ್.?
ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್, ಯಂಗ್ ಡೈನಾಮಿಕ್ ತಿಲಕ್ ವರ್ಮಾ ಹಾಗೂ ವೈಸ್ ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್ ನಡುವೆ ಮಿಡಲ್ ಆರ್ಡರ್ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಸಂಜು ಸ್ಯಾಮ್ಸನ್ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ್ರೆ, ತಿಲಕ್ ವರ್ಮಾಗೂ ಚಾನ್ಸ್ ಸಿಗೋ ಸಾಧ್ಯತೆ ದಟ್ಟವಾಗಿವೆ. ಇನ್ನು, ಸೂರ್ಯ ಕುಮಾರ್ ಫಿನಿಷರ್ ರೋಲ್ ಪ್ಲೇ ಮಾಡೋದು ಬಹುತೇಕ ಪಕ್ಕಾ.
ಆಲ್ರೌಂಡರ್ ಕೋಟಾದಲ್ಲಿ ಹಾರ್ದಿಕ್- ಅಕ್ಷರ್.!
ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಲ್ರೌಂಡರ್ ಜವಾಬ್ದಾರಿಯನ್ನ ನಿಭಾಯಿಸಿಲಿದ್ದಾರೆ. ಇನ್ನು, ಜಡೇಜಾಗೆ ಟಿ20 ಸರಣಿಯಿಂದ ರೆಸ್ಟ್ ನೀಡಿರೋದ್ರಿಂದ, ಸ್ಪಿನ್ ಆಲ್ರೌಂಡರ್ ಆಗಿ ಅಕ್ಷರ್ ಪಟೇಲ್ ಎಂಟ್ರಿ ಕೊಡೋದು ಕನ್ಫರ್ಮ್.!
ಸ್ಪೆಷಲಿಸ್ಟ್ ಸ್ಪಿನ್ನರ್ ಆಯ್ಕೆಯೇ ಕಗ್ಗಂಟು.!
15 ಆಟಗಾರರ ತಂಡದಲ್ಲಿ ಮೂವರು ಸ್ಪೆಷಲಿಸ್ಟ್ ಸ್ಪಿನ್ನರ್ಗಳಿದ್ದಾರೆ. ಕುಲ್ದೀಪ್ ಯಾದವ್, ಯುಜುವೇಂದ್ರ ಚಹಲ್ ಹಾಗೂ ರವಿ ಬಿಷ್ನೋಯ್ ತಂಡದಲ್ಲಿದ್ದ್ದು, ಇವರಲ್ಲಿ ಯಾರಿಗೆ ಚಾನ್ಸ್ ಸಿಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಕುಲ್ದೀಪ್ ಏಕದಿನ ಸರಣಿಯಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ್ರೆ, ಚಹಲ್ ಸರಣಿ ಪೂರ್ತಿ ಬೆಂಚ್ ಕಾದಿದ್ದಾರೆ. ಕಮ್ಬ್ಯಾಕ್ ಮಾಡಿರೋ ಬಿಷ್ನೋಯ್ ಕೂಡ ಪ್ಲೇಯಿಂಗ್ ಇಲೆವೆನ್ ಸ್ಥಾನದ ಕನವರಿಕೆಯಲ್ಲಿದ್ದಾರೆ.
T20ಗೂ ಡೆಬ್ಯೂ ಮಾಡ್ತಾರಾ ಮುಖೇಶ್ ಕುಮಾರ್.?
ಆರ್ಷ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಆವೇಶ್ ಖಾನ್ ಹಾಗೂ ಮುಖೇಶ್ ಕುಮಾರ್ ಸ್ಥಾನ ಗಿಟ್ಟಿಸಿಕೊಂಡಿರುವ ವೇಗಿಗಳಾಗಿದ್ದಾರೆ. ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಸಖತ್ ಪರ್ಫಾಮೆನ್ಸ್ ನೀಡಿರುವ ಮುಖೇಶ್ ಕುಮಾರ್ ಸ್ಥಾನಗಿಟ್ಟಿಸಿಕೊಳ್ಳೋ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ಸ್ಪೀಡ್ ಸ್ಟರ್ ಉಮ್ರಾನ್ ಮಲಿಕ್ಗೆ ಸ್ಥಾನ ಸಿಗೋ ಸಾಧ್ಯತೆಯಿದ್ದು, ಕಮ್ಬ್ಯಾಕ್ ಮಾಡಿರೋ ಆರ್ಷ್ದೀಪ್, ಆವೇಶ್ ಖಾನ್ ಸೆಲೆಕ್ಷನ್ ಸದ್ಯ ಹೆಡ್ಡೇಕ್ ತಂದಿಟ್ಟಿದೆ.
T20 ಮಾದರಿಯಲ್ಲಿ ವಿಂಡೀಸ್ ಬಲಿಷ್ಟ.!
ಟೆಸ್ಟ್ ಹಾಗೂ ಏಕದಿನ ಮಾದರಿಗೆ ಹೋಲಿಸಿದ್ರೆ, ವೆಸ್ಟ್ ಇಂಡೀಸ್ ತಂಡ ಹೆಚ್ಚು ಬಲಿಷ್ಠವಾಗಿದೆ. ಟೀಮ್ ಇಂಡಿಯಾದಲ್ಲಿ ಯಂಗ್ಸ್ಟರ್ಗಳು ತುಂಬಿದ್ರೆ, ವಿಂಡೀಸ್ ಪಡೆಯಲ್ಲಿ ಟಿ20 ಸ್ಪೆಷಲಿಸ್ಟ್ಗಳ ದಂಡೇ ಇದೆ. ಬಲಿಷ್ಟ ಟೀಮ್ ಸೆಲೆಕ್ಷನ್ ಜೊತೆಗೆ ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೆಯರ್ರಂತ ಸ್ಫೋಟಕ ಆಟಗಾರರನ್ನ ಕಟ್ಟಿ ಹಾಕಲು ರಣತಂತ್ರ ರೂಪಿಸೋದು ಕೂಡ ಹಾರ್ದಿಕ್ ಮುಂದಿರೋ ಸವಾಲಾಗಿದೆ. ಇದೆಲ್ಲವನ್ನ ಕ್ಯಾಪ್ಟನ್ ಪಾಂಡ್ಯ ಹೇಗೆ ನಿಭಾಯಿಸ್ತಾರೆ ಅನ್ನೋದೇ ಸದ್ಯದ ಕುತೂಹಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ