newsfirstkannada.com

World Cup: ಇಂದು ಶ್ರೀಲಂಕಾ ವಿರುದ್ಧ ಭಾರತ ಸೆಣಸಾಟ; ಸೆಮಿ ಫೈನಲ್​​ಗೆ ಗ್ರ್ಯಾಂಡ್ ಎಂಟ್ರಿ ನಿರೀಕ್ಷೆ..!

Share :

02-11-2023

    ಸತತ 7ನೇ ಗೆಲುವಿನ ನಿರೀಕ್ಷೆಯಲ್ಲಿ ಭಾರತ ತಂಡ

    ವಾಂಖೆಡೆ ಮೈದಾನದಲ್ಲಿ ವಿಶ್ವಕಪ್​ನ 33ನೇ ಪಂದ್ಯ

    ಭಾರತದ ಪ್ಲೇಯಿಂಗ್-11ರಲ್ಲಿ ಬದಲಾವಣೆ ನಿರೀಕ್ಷೆ ಇಲ್ಲ

ವಿಶ್ವಕಪ್ ಹಣಾಹಣಿಯಲ್ಲಿ ಭಾರತವನ್ನು ಶ್ರೀಲಂಕಾ ತಂಡ ಎದುರಿಸಲು ಸಿದ್ಧವಾಗಿದೆ. ಸೆಮಿಫೈನಲ್​ನಲ್ಲಿ ಬಹುತೇಕ ಸ್ಥಾನ ಗಿಟ್ಟಿಸಿಕೊಂಡಿರುವ ರೋಹಿತ್​ ಪಡೆಗೆ ಇಂದಿನ ಮ್ಯಾಚ್​ ನಿರ್ಣಾಯಕವಲ್ಲದಿದ್ದರೂ ಕೂಡ ಶೇಕಡ ನೂರರಷ್ಟು ಖಚಿತ ಪಡಿಸಿಕೊಳ್ಳುವಲ್ಲಿ ಸಹಾಯವಾಗಲಿದೆ.

ಆದರೆ ಲಂಕಾ ಪಡೆಗೆ ಈ ಪಂದ್ಯ ವಿಶ್ವಕಪ್ ಕನಸು ಜೀವಂತವಾಗಿರಿಸಿಕೊಳ್ಳಲು ಬಹುತೇಕ ನಿರ್ಣಾಯಕವೇ ಆಗಿದೆ. ವಿಶ್ವಕಪ್​ನಲ್ಲಿ ನಡೆದ 6ಕ್ಕೆ 6 ಪಂದ್ಯಗಳನ್ನು ಗೆದ್ದು ಗೆಲುವಿನ ನಾಗಾಲೋಟದಲ್ಲಿರುವ ಟೀಂ ಇಂಡಿಯಾವನ್ನು ಕಟ್ಟಿಹಾಕುವಲ್ಲಿ ಲಂಕಾ ಯಶಸ್ವಿಯಾಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ಇನ್ನು ಲಂಕಾ ವಿಶ್ವಕಪ್​​ನ ಪಾಯಿಂಟ್ಸ್​ ಟೇಬಲ್​ನಲ್ಲಿ 7ನೇ ಸ್ಥಾನದಲ್ಲಿದೆ. 6 ಪಂದ್ಯಗಳನ್ನು ಆಡಿರುವ ಲಂಕಾ ಪಡೆ, ಕೇವಲ 2 ರಲ್ಲಿ ಗೆದ್ದು ನಾಲ್ಕರಲ್ಲಿ ಸೋಲನ್ನು ಕಂಡಿದೆ. ಹೀಗಾಗಿ ಶ್ರೀಲಂಕಾಗೆ ಇವತ್ತಿನ ಪಂದ್ಯವು ತುಂಬಾನೇ ಮಹತ್ವದ್ದಾಗಿದೆ. ಸೆಮಿಫೈನಲ್ ಎದುರು ನೋಡುತ್ತಿರುವ ಭಾರತ ತಂಡವು, ಪ್ಲೇಯಿಂಗ್​-11ನಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಕಳೆದ ಪಂದ್ಯಗಳಲ್ಲಿ ಆಡಿದ ಆಟಗಾರರೇ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಸಂಭಾವ್ಯ ಟೀಂ ಇಂಡಿಯಾ: ರೋಹಿತ್ ಶರ್ಮಾ (ಕ್ಯಾಪ್ಟನ್), ಶುಭ್​​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹ್ಮದ್ ಶಮಿ, ಜಸ್​​ಪ್ರೀತ್ ಬೂಮ್ರಾ, ಮೊಹ್ಮದ್ ಸಿರಾಜ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

World Cup: ಇಂದು ಶ್ರೀಲಂಕಾ ವಿರುದ್ಧ ಭಾರತ ಸೆಣಸಾಟ; ಸೆಮಿ ಫೈನಲ್​​ಗೆ ಗ್ರ್ಯಾಂಡ್ ಎಂಟ್ರಿ ನಿರೀಕ್ಷೆ..!

https://newsfirstlive.com/wp-content/uploads/2023/10/ROHIT_SHARMA_BATTING-1.jpg

Load More