ಮಾನಸಿಕ ಗೊಂದಲದ ನಿವಾರಣೆಗೆ ಪ್ರಯತ್ನ ಮಾಡಬಹುದು
ಆರ್ಥಿಕ ಪ್ರಗತಿ ಅದರಿಂದ ಸಮಾಧಾನ ಕೂಡ ಆಗುತ್ತದೆ
ಮೇಲಾಧಿಕಾರಿಗಳ ಕಿರಿಕಿರಿ ಬೇಸರ ಉಂಟು ಮಾಡಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ವಿದ್ಯಾರ್ಥಿಗಳು ನಿಮ್ಮ ಮಹತ್ತರ ಯೋಜನೆಗಳನ್ನ ರೂಪಿಸಿಕೊಳ್ಳಿ
- ಸ್ನೇಹಿತರ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಅವಕಾಶವಿದೆ
- ಇಂದು ಅರ್ಥಪೂರ್ಣ ಚರ್ಚೆಗಳಿಗೆ ಅವಕಾಶವಿದೆ
- ನಿಮ್ಮ ಆರ್ಥಿಕ ಸಂಕಷ್ಟ ನಿವಾರಣೆಯಾಗಬಹುದು
- ವೃತ್ತಿ ಅಥವಾ ಉದ್ಯೋಗದಲ್ಲಿ ಸಮಾಧಾನಕರ ವಾತಾವರಣವಿದೆ
- ಪ್ರಮುಖ ವಿಚಾರಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಯಶಸ್ಸಿದೆ
- ಕುಲದೇವತಾ ಆರಾಧನೆ ಮಾಡಿ
ವೃಷಭ
- ಸಂಬಂಧಿಕರಿಂದ ಉತ್ತಮ ಪ್ರತಿಸ್ಪಂದನೆ ದೊರಕಬಹುದು
- ಇಂದು ನಂಬಿಕಸ್ಥರಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು
- ಬೇರೆಯವರಿಗೆ ಅನುಕೂಲ ಮಾಡುವಾಗ ಸ್ವಲ್ಪ ಚಿಂತನೆಯಿರಲಿ
- ಇಂದು ಹಣದ ಒತ್ತಡ ಕಾಡಿದರೂ ಬಗೆಹರಿಯುತ್ತದೆ
- ಇಂದು ಸಹೋದ್ಯೋಗಿಗಳಿಗೆ ಸಲಹೆ ಕೊಡಬೇಡಿ
- ಆದಷ್ಟು ಎಲ್ಲಾ ವಿಚಾರದಲ್ಲಿ ಮೌನವಾಗಿದ್ದರೆ ಒಳ್ಳೆಯದು
- ನವಗ್ರಹರ ಆರಾಧನೆ ಮಾಡಿ
ಮಿಥುನ
- ಹಿಂದೆ ಮಾಡಿದ ಕೆಲವು ನಿರ್ಧಾರಗಳು ಇಂದು ಪರೀಕ್ಷೆಗೆ ಒಳಪಡಬಹುದು
- ಇಂದು ದೂರದ ಪ್ರಯಾಣ ವಿಫಲವಾಗಬಹುದು
- ನಿಮ್ಮ ಹವ್ಯಾಸಕ್ಕೆ ಹಣ ಖರ್ಚು ಮಾಡಬಹುದು ಆದರೆ ನಿರಾಸೆಯಾಗತ್ತೆ
- ಆರ್ಥಿಕ ಸುಧಾರಣೆಗೆ ಚಿಂತನೆ ಮಾಡಬಹುದು
- ನಿಮ್ಮ ಕೆಲಸ, ಕಾರ್ಯಗಳಲ್ಲಿ ಹಿನ್ನಡೆಯಾಗಬಹುದು
- ವ್ಯಾವಹಾರಿಕವಾಗಿ ಹೊಸ ಒಪ್ಪಂದಗಳು ಬರುವ ಸಾಧ್ಯತೆಯಿದೆ ಆಲೋಚನೆ ಮಾಡಿ
- ದೇವಿ ಆರಾಧನೆಯನ್ನ ಮಾಡಿ
ಕಟಕ
- ಸ್ನೇಹಿತರಿಂದ ಉತ್ತಮವಾದ ಲಾಭಕ್ಕೆ ಅವಕಾಶವಿದೆ
- ಇಂದು ದಾಂಪತ್ಯದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ
- ಮನೆಯ ವಾತಾವರಣ ಸ್ವಲ್ಪ ಬದಲಾಗುವ ಸಾಧ್ಯತೆಯಿದೆ
- ಇಂದು ನಿಮ್ಮ ಮಾನಸಿಕ ಸ್ಥಿತಿಯನ್ನ ದೃಢಪಡಿಸಿಕೊಳ್ಳಿ
- ಹೊಸ ಉದ್ಯೋಗಕ್ಕೆ ಅವಕಾಶವಿದೆ
- ಬಂಧುಗಳಿಂದ ಕೆಲ ಮಾಹಿತಿ ಸಿಗಬಹುದು ಅದರಿಂದ ಸಮಾಧಾನ
- ಗಣಪತಿಯನ್ನ ಪ್ರಾರ್ಥನೆ ಮಾಡಿ
ಸಿಂಹ
- ಇಂದು ಕನಸು ನನಸಾಗುವ ದಿನ
- ಇಂದು ತುಂಬಾ ಒತ್ತಡಯಿರುವ ದಿನ
- ಹಿರಿಯ ಅಧಿಕಾರಿಗಳ ನೆರವು ಸಿಗಬಹುದು
- ಆಸ್ತಿ ಖರೀದಿಯ ವಿಚಾರದಲ್ಲಿ ಜಯವಿದೆ
- ಹಲವಾರು ರೀತಿಯ ಯಶಸ್ಸಿಗೆ ದಾರಿಯಾಗುವ ದಿನ
- ವಿದ್ಯಾರ್ಥಿಗಳಿಗೆ ಕೆಲವು ಸವಾಲುಗಳಿವೆ ಎದುರಿಸಬೇಕಾಬಹುದು
- ನರಸಿಂಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ಕನ್ಯಾ
- ತಾಳ್ಮೆಯನ್ನ ಪರೀಕ್ಷೆ ಮಾಡುವ ದಿನ ನೀವು ಅದರಲ್ಲಿ ಗೆಲ್ಲಲೇಬೇಕು
- ಉದ್ಯೋಗ ಅಥವಾ ವ್ಯವಹಾರದಲ್ಲಿ ಸಮಸ್ಯೆ ಉಂಟಾಗಬಹುದು
- ಆರೋಗ್ಯದ ವಿಚಾರದಲ್ಲಿ ಬೇಸರ ಉಂಟಾಗಬಹುದು
- ಒಳ್ಳೆಯ ವಿಚಾರಗಳು ಕೆಟ್ಟದಾಗಿ ಪರಿಣಾಮ ಬೀರಬಹುದು
- ಯಾವುದೇ ಸಾಧನೆ ಇಲ್ಲದೆ ಹತಾಶರಾಗಬಹುದು
- ಸಾಮಾಜಿಕ ಮನ್ನಣೆಯಿಲ್ಲದೇ ಬೇಸರವಾಗಬಹುದು
- ಇಷ್ಟದೇವತಾ ಪ್ರಾರ್ಥನೆ ಮಾಡಿ
ತುಲಾ
- ಇಂದು ಯಾರನ್ನು ಕೂಡ ಅಂಧವಾಗಿ ನಂಬಬೇಡಿ
- ಕಳೆದುಕೊಂಡದ್ದನ್ನ ಪುನಃ ಪಡೆಯುವ ಅವಕಾಶವಿದೆ
- ಧಾರ್ಮಿಕ ಪ್ರವೃತ್ತಿಯ ಜನರೊಂದಿಗೆ ಸಂಪರ್ಕವಾಗಬಹುದು
- ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳು ಬರಬಹುದು
- ಇಂದು ಉದ್ಯೋಗಿಗಳಿಗೆ ಅನುಕೂಲವಿದೆ
- ಹಳೆಯ ನೆನಪುಗಳು ಸಂತಸ ತರಬಹುದು
- ಗಣಪತಿಯನ್ನ ಪ್ರಾರ್ಥನೆ ಮಾಡಿ
ವೃಶ್ಚಿಕ
- ಇಂದು ಕುಟುಂಬ ಜೀವನ ಚೆನ್ನಾಗಿರುತ್ತದೆ
- ಹೊಸ ಕೆಲಸದ ಆರಂಭಕ್ಕೆ ಅವಕಾಶವಿದೆ
- ನಿಧಾನವಾಗಿ ಮಾಡಿದ್ದ ಕೆಲಸದಿಂದ ಅನುಕೂಲವಿದೆ
- ಇಂದು ನಿಮ್ಮ ಆಯ್ಕೆಯಲ್ಲಿ ವ್ಯತ್ಯಾಸವಾಗುತ್ತದೆ
- ಇಂದು ಹಲವಾರು ನಿರ್ಧಾರಗಳು ನಿಮಗೆ ಮಾರಕವಾಗಬಹುದು ಎಚ್ಚರ
- ಹಣದ ವಿಚಾರದಲ್ಲಿ ಗೊಂದಲ ಉಂಟಾಗಬಹುದು
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ನಿಮ್ಮ ಅಲ್ಪ ತಿಳುವಳಿಕೆಯಿಂದ ಸಮಸ್ಯೆ ಉಂಟಾಗಬಹುದು
- ವಿದ್ಯಾರ್ಥಿಗಳು ಸಾಧಿಸುವ ಛಲವನ್ನ ಬೆಳೆಸಿಕೊಳ್ಳಬೇಕು
- ಇಂದು ಜವಾಬ್ದಾರಿಯಿಂದ ವರ್ತಿಸಬೇಕು
- ಬಂಧುಗಳ ಭೇಟಿಯಿಂದ ಮನೋವಿಕಾರ ಸಾಧ್ಯತೆಯಿದೆ
- ಅತಿಯಾದ ಯೋಚನೆ ತೊಂದರೆ ಉಂಟುಮಾಡಬಹುದು
- ಇಂದು ಆರೋಗ್ಯ ಕೈ ಕೊಡುವ ಸಾಧ್ಯತೆಯಿದೆ
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಕರ
- ಅನುಪಯುಕ್ತ ಕೆಲಸಗಳಲ್ಲಿ ಸಮಯ ವ್ಯರ್ಥವಾಗಬಹುದು
- ಆರೋಗ್ಯದಲ್ಲಿ ಏರುಪೇರಾಗಬಹುದು
- ಸಾಧಕರ ಭೇಟಿಯಿಂದ ಮಾರ್ಗದರ್ಶನ ಸಿಗಬಹುದು
- ನಿಮ್ಮ ಮಾತಿಗೆ ಪ್ರಾಮುಖ್ಯತೆ ಇರುವುದಿಲ್ಲ
- ಇಂದು ವ್ಯವಹಾರದಲ್ಲಿ ನಷ್ಟ ಅನುಭವಿಸಬಹುದು
- ಮಕ್ಕಳಿಂದ ದೊಡ್ಡ ಯೋಚನೆ ಪ್ರಾರಂಭವಾಗಬಹುದು
- ಶರಭೇಶ್ವರನನ್ನ ಪ್ರಾರ್ಥನೆ ಮಾಡಿ
ಕುಂಭ
- ಇಂದು ಕುಟುಂಬ ಸದಸ್ಯರು ನಿಮ್ಮ ಜೊತೆಗೆ ಚೆನ್ನಾಗಿರುತ್ತಾರೆ
- ಮನಸ್ಸಿಗೆ ಅನ್ನಿಸಿದ ಕಾರ್ಯ ಮಾಡಬೇಡಿ ತೊಂದರೆಯಾಗಬಹುದು
- ಖುಷಿಯ ಹಿಂದೆ ದುಃಖವೂ ಇದೇ ಎಂದು ಮರೆಯಬೇಡಿ
- ಇಂದು ವಿರೋಧಿಗಳಿಂದ ಹುಷಾರಾಗಿರಿ ತೊಂದರೆಯಾಗಬಹುದು
- ಇಂದು ಒಂದೇ ಕೆಲಸ ಮತ್ತೆ ಮತ್ತೆ ಮಾಡಬೇಕಾಗುತ್ತದೆ
- ಮನೆಯ ವಾತಾವರಣದಲ್ಲಿ ಅಶಾಂತಿ ಬೇಡ
- ಶಿವರಾಧನೆ ಮಾಡಿ
ಮೀನ
- ಮಾನಸಿಕವಾದ ಸಮಾಧಾನ ಇರುವುದಿಲ್ಲ
- ಇಂದು ವ್ಯಾವಹಾರಿಕವಾಗಿ ಹಲವು ಸುಧಾರಣೆಗಳಾಗುತ್ತವೆ
- ಸ್ಥಗಿತಗೊಂಡ ಕಾಮಗಾರಿಗಳು ಪುನರಾರಂಭಗೊಳ್ಳವ ಯೋಗವಿದೆ
- ಹಣದ ವಿಚಾರದಲ್ಲಿ ಜಗಳವಾಗಬಹುದು
- ವ್ಯಾವಹಾರಿಕವಾಗಿ ಬದಲಾವಣೆ ಅದರಿಂದ ಸಮಾಧಾನವಾಗಬಹುದು
- ಮಹಿಳೆಯರಿಗೆ ಸ್ವಲ್ಪ ಸಮಸ್ಯೆ ಕಾಡಬಹುದು ಗಮನಹರಿಸಿ
- ಗುರುಗಳನ್ನ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ