ಜವಾಬ್ದಾರಿಯಿಂದ ಕೆಲವು ಕೆಲಸಗಳು ಹೆಚ್ಚಾಗಬಹುದು
ಸಣ್ಣ ವಿಚಾರಗಳಿಗೆ ಮನಸ್ತಾಪವಾಗುವ ಸಾಧ್ಯತೆಯಿದೆ
ಶತ್ರುಗಳು ಅಥವಾ ವಿರೋಧಿಗಳ ಬಗ್ಗೆ ಚಿಂತನೆ ನಡೆಸಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ

- ವ್ಯವಹಾರಿಕ ನಿರ್ಧಾರಗಳಿಗೆ ಬೇರೆಯವರನ್ನ ಅವಲಂಭಿಸಬಹುದು
- ನಿಮ್ಮ ಆದಾಯ ಮೂಲಕ್ಕೆ ಧಕ್ಕೆಯಾಗಬಹುದು
- ಇಂದು ಸ್ಪರ್ಧಾತ್ಮಕವಾಗಿ ನೀವು ಸೋಲಬಹುದು
- ಪ್ರೇಮಿಗಳಿಗೆ ಶುಭ ದಿನ
- ಇಂದು ಹಿರಿಯರ ವರ್ತನೆಯಿಂದ ಪ್ರಭಾವಿತರಾಗುತ್ತೀರಿ
- ಜನರಿಂದ ಅಪಹಾಸ್ಯಕ್ಕೆ ಈಡಾಗುವ ಸಾಧ್ಯತೆಯಿದೆ
- ಈಶ್ವರಾರಾಧನೆ ಮಾಡಿ
ವೃಷಭ

- ಸಂಬಂಧಿಕರ ಬಾಂಧವ್ಯದಲ್ಲಿ ಬಿರುಕು ಉಂಟಾಗಬಹುದು
- ಒಳ್ಳೆಯ ಸುದ್ದಿಗಳಿಂದ ದೂರು ಉಳಿಯಬಹುದು
- ಶತ್ರುಗಳು ಅಥವಾ ವಿರೋಧಿಗಳ ಬಗ್ಗೆ ಚಿಂತನೆ ನಡೆಸಬಹುದು
- ಇಂದು ದೊಡ್ಡ ಜವಾಬ್ದಾರಿಗಳನ್ನ ಮರೆಯಬೇಡಿ
- ಇಂದು ಉದ್ಯೋಗಿಗಳಿಗೆ ಹೊಂದಾಣಿಕೆ ಬಹಳ ಮುಖ್ಯ
- ವಿದ್ಯಾರ್ಥಿಗಳು ತಮ್ಮ ಪ್ರಯತ್ನವನ್ನ ಮುಂದುವರಿಸಬೇಕು
- ಕುಲದೇವತಾ ಪ್ರಾರ್ಥನೆ ಮಾಡಿ
ಮಿಥುನ

- ಇಂದು ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನ ಮಾಡಿ
- ವ್ಯವಹಾರಿಕವಾಗಿ ತುಂಬಾ ಅಭಿವೃದ್ಧಿಯ ಸೂಚನೆಯಿದೆ
- ಪ್ರೇಮಿಗಳಿಗೆ ಶುಭವಿರುವ ದಿನ
- ಸ್ನೇಹಿತರಿಂದ ಸಹಾಯ ಸಿಗಬಹುದು
- ನಿಮ್ಮ ಆಲೋಚನೆ ಸತ್ಯವಾಗಿರುವುದಿಲ್ಲ
- ಸಣ್ಣ ವಿಚಾರಗಳಿಗೆ ಮನಸ್ತಾಪವಾಗುವ ಸಾಧ್ಯತೆಯಿದೆ
- ಗೋ ಸೇವೆಯನ್ನ ಮಾಡಿ
ಕಟಕ

- ಅದೃಷ್ಟದಿಂದ ಕೆಲವು ಕೆಲಸಗಳಾಗಬಹುದು
- ಪ್ರಜ್ಞಾವಂತರ ಸಂಪರ್ಕ ಸಿಗಬಹುದು
- ಇಂದು ನಿರುದ್ಯೋಗಿಗಳಿಗೆ ಶುಭಫಲವಿದೆ
- ಆಸ್ತಿ ವಿಚಾರದಲ್ಲಿ ಫಲ ನಿರೀಕ್ಷೆ ಮಾಡುತ್ತೀರಿ ಆದರೆ ಹುಸಿಯಾಗಬಹುದು
- ಆರೋಗ್ಯ ಬಗ್ಗೆ ಹೆಚ್ಚಿನ ಗಮನ ಹರಿಸಿ
- ಜವಾಬ್ದಾರಿಯಿಂದ ಕೆಲವು ಕೆಲಸಗಳು ಹೆಚ್ಚಾಗಬಹುದು
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ

- ವ್ಯವಹಾರಿಕವಾಗಿ ಅಭಿವೃದ್ಧಿ ಕಾಣುವ ದಿನ
- ಬೇರೆಯವರಿಗೆ ಮಾರ್ಗದರ್ಶನ ಮಾಡಿ ಯಶಸ್ಸು ಹೊಂದುತ್ತೀರಿ
- ವಿವಾಹ ವಿಚಾರಗಳು ಮಂಗಳಕರವಾಗಿರುತ್ತವೆ
- ನಿಮ್ಮ ವರ್ತನೆಯಿಂದ ಜನಮನ ಗೆಲ್ಲುತ್ತೀರಿ
- ಪ್ರಯಾಣದಿಂದ ಬೇಸರವಾಗಬಹುದು ಆದರೆ ಅನಿವಾರ್ಯವಾಗಿರುತ್ತದೆ
- ಇಂದು ಯಾವುದೇ ನಕಾರಾತ್ಮಕ ಆಲೋಚನೆಗಳು ಬೇಡ
- ವೆಂಕಟರಮಣನನ್ನು ಪ್ರಾರ್ಥನೆ ಮಾಡಿ
ಕನ್ಯಾ

- ವಿದ್ಯಾರ್ಥಿಗಳಿಗೆ ಉತ್ತಮವಾದ ಸಮಯ
- ಇಂದು ತಾಳ್ಮೆಯಿಂದ ಕೆಲಸ ನಿರ್ವಹಿಸಬೇಕು
- ಇಂದು ಹಳೆಯ ಸಾಲಕ್ಕೆ ಮುಕ್ತಿ ಸಿಗಬಹುದು
- ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಬಹುದು
- ಧನಾತ್ಮಕವಾದ ಬದಲಾವಣೆಗೆ ಅವಕಾಶವಿದೆ
- ಹಳೆಯ ತಪ್ಪು ನಿರ್ಧಾರಗಳಿಂದ ನಷ್ಟದ ಸಾಧ್ಯತೆಯಿದೆ
- ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿ
ತುಲಾ

- ವೃತ್ತಿ ಅಥವಾ ಉದ್ಯೋಗದಲ್ಲಿ ಹೊಸ ತಿರುವು ಸಿಗಬಹುದು
- ವೈಯಕ್ತಿಕ ಜೀವನದಲ್ಲಿ ಯಶಸ್ಸು ಕಾಣಬಹುದು
- ಇಂದು ಪ್ರಚೋಧನಕಾರಿ ಹೇಳಿಕೆಗಳಿಗೆ ಸ್ಪಂದಿಸಬೇಡಿ
- ಮಾನಸಿಕವಾದ ಚಂಚಲತೆ ಕಾಡಬಹುದು
- ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
- ಇಂದು ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ
- ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ
ವೃಶ್ಚಿಕ

- ನಿಮ್ಮ ಆಲೋಚನೆಗಳು ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ
- ಇಂದು ಹಿರಿಯರಿಂದ ಪ್ರಶಂಸೆ ಸಿಗಬಹುದು
- ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ
- ಪ್ರೇಮಿಗಳಿಗೆ ಅಶುಭ ದಿನ
- ಅತಿಥಿಗಳ ಆಗಮನದಿಂದ ತೊಂದರೆ ಉಂಟಾಗಬಹುದು
- ಕಾನೂನು ಹೋರಾಟ ಎದುರಾಗುವ ಸಾಧ್ಯತೆಯಿದೆ
- ನವಗ್ರಹರ ಆರಾಧನೆ ಮಾಡಿ
ಧನುಸ್ಸು

- ಅನಿರೀಕ್ಷಿತವಾದ ನಷ್ಟದ ಸಾಧ್ಯತೆಯಿದೆ
- ಅಂದುಕೊಂಡ ಕೆಲಸವಾಯಿತು ಎನ್ನುವಾಗಲೇ ಅಡ್ಡಿ ಉಂಟಾಗಬಹುದು
- ಇಂದು ನಿಮ್ಮ ಆಲೋಚನೆಗಳಿಗೆ ಬೆಂಬಲ ಸಿಗುವುದಿಲ್ಲ
- ಮಾನಸಿಕವಾಗಿ ಭಯ ಕಾಡಬಹುದು
- ವಿರೋಧಿಗಳು ಹೆಚ್ಚಾಗುವ ಸಾಧ್ಯತೆಯಿದೆ
- ನಿಮಗೆ ಕೆಡುಕನ್ನ ಬಯಸುವವರಿಗೆ ಇದು ಸಕಾಲ
- ದುರ್ಗಾ ಪೂಜೆಯನ್ನ ಮಾಡಿ
ಮಕರ

- ಸಾರ್ವಜನಿಕ ಉಪಯೋಗವನ್ನ ಪಡೆಯಬಹುದು
- ಯಾರನ್ನು ನಿರ್ಲಕ್ಷ್ಯ ಮಾಡಬೇಡಿ ತೊಂದರೆಯಾಗಬಹುದು
- ಮನೆಯ ವಾತಾವರಣ ಶಾಂತಿಯಿಂದಿರುವಂತೆ ಗಮನಿಸಿ
- ಸಣ್ಣ ವಿಚಾರಗಳು ದೊಡ್ಡದಾಗಿ ಸಮಸ್ಯೆ ಉಂಟುಮಾಡಬಹುದು
- ತಾಯಿಯವರಿಗೆ ಸಮಸ್ಯೆಗಳು ಉಂಟಾಗಬಹುದು
- ಸಹೋದ್ಯೋಗಿಗಳು ಪರೋಕ್ಷವಾಗಿ ವಂಚಿಸಬಹುದು
- ನಾಗಾರಾಧನೆ ಮಾಡಿ
ಕುಂಭ

- ನಿರುದ್ಯೋಗಿಗಳಿಗೆ ಸ್ವಲ್ಪ ಸಮಸ್ಯೆಯ ದಿನ
- ವಿವಾಹ ವಿಚಾರ ಮುಂದೂಡಿಕೆಯಾಗಬಹುದು
- ಹಲವು ಚಿಂತನೆಗಳು ನಿಮಗೆ ಮಾರಕವಾಗಬಹುದು
- ಯಾರ ಸಹಾಯ ಅಥವಾ ಸಹಕಾರ ನಿರೀಕ್ಷಿಸ ಬೇಡಿ
- ಮನೆಯಲ್ಲಿಯ ವಾತಾವರಣ ಬೇಸರ ತರಬಹುದು
- ಭವಿಷ್ಯಕ್ಕೆ ದೃಢವಾದ ನಿರ್ಧಾರ ಮಾಡಿ ಪ್ರಗತಿಯಿದೆ
- ಲಕ್ಷ್ಮಿದೇವಿಯನ್ನ ಪ್ರಾರ್ಥನೆ ಮಾಡಿ
ಮೀನ

- ಪ್ರೇಮಿಗಳಿಗೆ ಶುಭವಿರುವ ದಿನ
- ವ್ಯವಹಾರಿಕವಾಗಿ ಮನಸ್ತಾಪದ ಸಾಧ್ಯತೆಯಿದೆ
- ಹಿಡಿದಿಟ್ಟಿರುವ ಸಿಟ್ಟು ಯಾವಾಗ ಬೇಕಾದರು ಸ್ಪೋಟವಾಗಬಹುದು
- ಕೆಲಸದಲ್ಲಿ ಅಸಮಾಧಾನ, ಬೇಸರವಾಗಬಹುದು
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ಇಂದು ಹಲವು ಸವಾಲುಗಳನ್ನ ಎದುರಿಸಬೇಕಾಗುತ್ತದೆ
- ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ