ಮಾನಸಿಕವಾಗಿ ಹಲವಾರು ಯೋಚನೆಗಳು ಬರಲಿವೆ
ವ್ಯಾವಹಾರಿಕವಾಗಿ ಸಮಾಜದಲ್ಲಿ ಸವಾಲುಗಳಿರುತ್ತವೆ
ಕೆಲವು ನಿರ್ಧಾರಗಳಲ್ಲಿ ಗೊಂದಲಗಳನ್ನು ಬಗೆಹರಿಸಿಕೊಳ್ಳಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ

- ಕೆಲಸದ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಿ
- ಉದ್ಯೋಗದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ
- ಕೋಪ-ತಾಪಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು
- ಅನಾವಶ್ಯಕವಾದ ಚರ್ಚೆಗಳು ಬೇಡ
- ಶತ್ರುಗಳಿಂದ ದೂರ ಉಳಿಯಿರಿ
- ವ್ಯಾವಹಾರಿಕವಾದ ವಿಚಾರದಲ್ಲಿ ಗಟ್ಟಿ ನಿರ್ಧಾರಗಳನ್ನು ಮಾಡಬೇಡಿ
- ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ವೃಷಭ

- ಸಾಮಾಜಿಕ ಕೆಲಸಗಳಲ್ಲಿ ಅವಕಾಶ ಸಿಗಲಿದೆ
- ಪ್ರೇಮಿಗಳಿಗೆ ಶುಭವಿದ್ದರೂ ಸವಾಲುಗಳನ್ನು ಎದುರಿಸಬೇಕಾಗಲಿದೆ
- ಕೆಲವು ನಿರ್ಧಾರಗಳಲ್ಲಿ ಗೊಂದಲಗಳನ್ನು ಬಗೆಹರಿಸಿಕೊಳ್ಳಿ
- ನಿಮ್ಮ ಕೆಲಸಕ್ಕೆ ತಕ್ಕ ಗೌರವ ಸಿಗಲಿದೆ
- ಮಕ್ಕಳ ಬಗ್ಗೆ ಚಿಂತೆ ಬೇಡ ಶುಭವಿದೆ
- ಸಂಬಂಧಿಕರ ಬಗ್ಗೆ ತಾತ್ಸಾರ ಬೇಡ ದ್ವೇಷ ಹೆಚ್ಚಾಗಬಹುದು
- ಲಕ್ಷ್ಮಿದೇವಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ಉದ್ಯೋಗದಲ್ಲಿ ಸ್ಪರ್ಧಿಗಳು ಹುಟ್ಟಿಕೊಳ್ಳುತ್ತಾರೆ
- ಮೇಲಾಧಿಕಾರಿಗಳ ಸಹಾಯವನ್ನು ಕೇಳುವುದರಿಂದ ಅವಮಾನ ಆಗಲಿದೆ
- ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ
- ವ್ಯಾವಹಾರಿಕವಾಗಿ ಸಮಾಜದಲ್ಲಿ ಸವಾಲುಗಳಿರುತ್ತವೆ
- ಆರ್ಥಿಕ ಸಂಕಷ್ಟಕ್ಕೆ ಅವಕಾಶವಿದೆ
- ಬಂಧುಗಳಲ್ಲಿ ಕಲಹ ಮತ್ತು ಮನಸ್ತಾಪ ಉಂಟಾಗಬಹುದು
- ನಾಗರಾಧನೆಯನ್ನು ಮಾಡಿ
ಕಟಕ

- ವ್ಯಾವಹಾರಿಕವಾಗಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತೀರಿ
- ಉದ್ಯೋಗಿಗಳಿಗೆ ಹೊಸ ಉತ್ಸಾಹ
- ಸರ್ವಾಂಗೀಣವಾದ ಯಶಸ್ಸಿನ ಸೂಚನೆ ಇದೆ
- ಇಂದು ಆರ್ಥಿಕ ಸುಧಾರಣೆಯಾಗಲಿದೆ
- ಮಂಗಳ ಕಾರ್ಯದ ಸಂಭ್ರಮ ಇರಲಿದೆ
- ಮನೆಯಲ್ಲಿ ಶುಭ ಶಾಂತಿಯ ವಾತಾವರಣವಿದೆ
- ದುರ್ಗಾದೇವಿಯ ಪೂಜೆ ಮಾಡಿ
ಸಿಂಹ

- ಸಾಂಸಾರಿಕ ವಿಚಾರದಲ್ಲಿ ಅತಿಯಾದ ಮಾಧುರ್ಯ,ಪ್ರೀತಿ ಹೆಚ್ಚಾಗುವ ಸಾಧ್ಯತೆ
- ಅನುಪಯುಕ್ತವಾದ ಚಟುವಟಿಕೆಯಲ್ಲಿ ಸಮಯವನ್ನು ವ್ಯರ್ಥ ಮಾಡಬೇಡಿ
- ವಿದ್ಯಾರ್ಜನೆಯ ಬಗ್ಗೆ ಗಮನವಿರಲಿ
- ಪ್ರವಾಸ ಅಥವಾ ಪ್ರಯಾಣ ಬೇಸರ ತರಲಿದೆ
- ಮಾನಸಿಕವಾಗಿ ಹಲವಾರು ಯೋಚನೆಗಳು ಬರಲಿದೆ
- ಸ್ನೇಹಿತರ ವರ್ತನೆ ಸರಿ ಅನಿಸುವುದಿಲ್ಲ
- ನವಗ್ರಹರ ಆರಾಧನೆ ಮಾಡಿ
ಕನ್ಯಾ

- ಹಳೆಯ ಸಂಬಂಧಗಳನ್ನು ಸರಿಪಡಿಸಿಕೊಳ್ಳಿ
- ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳುವ ಪರಿಸ್ಥಿತಿ
- ಆರ್ಥಿಕ ನಷ್ಟದ ಸೂಚನೆ ಇದೆ
- ಮಕ್ಕಳ ವಿಚಾರದಲ್ಲಿ ಬೇಸರ ಆಗಲಿದೆ
- ಬಂಧುಗಳಲ್ಲಿ ಮನಸ್ತಾಪ ಆಗುವುದರಿಂದ ನಿಮ್ಮ ತಪ್ಪನ್ನು ತೋರಿಸುತ್ತಾರೆ
- ರಾಜಕಾರಣಿಗಳಿಗೆ ಕೆಲವು ಸಂಕಷ್ಟಗಳು ಎದುರಾಗಬಹುದು
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ತುಲಾ

- ಆರೋಗ್ಯ ಸುಧಾರಣೆಯಾಗಲಿದೆ
- ಕಾಲಿಗೆ ಪೆಟ್ಟು ಬೀಳುವ ಸಾಧ್ಯತೆ ಇದೆ
- ಕೆಲಸದ ಸ್ಥಳದಲ್ಲಿ ಸ್ವಲ್ಪ ಮಾತಿನ ಚಕಮಕಿ ನಡೆಯಲಿದೆ
- ಮನೆಯ ಜವಾಬ್ದಾರಿಯಿಂದ ಹೈರಾಣವಾಗುತ್ತೀರಿ
- ಮಾನಸಿಕವಾದ ಗಟ್ಟಿತನ ನಿಮಗೆ ಜಯವನ್ನು ತರಲಿದೆ
- ಸ್ನೇಹಿತರು ಬಂಧುಗಳು ಹತ್ತಿರವಾಗುತ್ತಾರೆ
- ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ

- ಇಂದು ಕುಟುಂಬ ಜೀವನ ಚೆನ್ನಾಗಿರುತ್ತದೆ
- ಹೊಸ ಕೆಲಸದ ಆರಂಭಕ್ಕೆ ಅವಕಾಶವಿದೆ
- ನಿಧಾನವಾಗಿ ಮಾಡಿದ್ದ ಕೆಲಸದಿಂದ ಅನುಕೂಲವಿದೆ
- ಇಂದು ನಿಮ್ಮ ಆಯ್ಕೆಯಲ್ಲಿ ವ್ಯತ್ಯಾಸವಾಗುತ್ತದೆ
- ಇಂದು ಹಲವಾರು ನಿರ್ಧಾರಗಳು ನಿಮಗೆ ಮಾರಕವಾಗಬಹುದು ಎಚ್ಚರ
- ಹಣದ ವಿಚಾರದಲ್ಲಿ ಗೊಂದಲ ಉಂಟಾಗಬಹುದು
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಬೇರೆಯವರ ಸಮಸ್ಯೆಯಲ್ಲಿ ಬಾಗಿಯಾಗುವುದರಿಂದ ಹಿನ್ನಡೆಯಾಗಲಿದೆ
- ನಿಮ್ಮ ಮನೆಯ ಸಮಸ್ಯೆಯ ಬಗ್ಗೆ ವಿಚಾರ ಮಾಡಿ
- ಹಲವು ಅಸಂಬದ್ಧ ನಿರ್ಧಾರಗಳಿಂದ ಸಮಸ್ಯೆಯಾಗಬಹುದು
- ಸಾಂಸಾರಿಕವಾಗಿ ಶೀತಲ ಸಮರವನ್ನು ಎದುರಿಸುತ್ತೀರಿ
- ಪ್ರಯಾಣದಿಂದ ಖುಷಿಗೆ ಬದಲಾಗಿ ಬೇಸರ ಆಗಲಿದೆ
- ಕೆಲಸದ ಒತ್ತಡ ಇದ್ದಾಗ ಬೇಜವಾಬ್ದಾರಿತನವನ್ನು ತೋರಿಸುತ್ತೀರಿ
- ಈಶ್ವರನ ಆರಾಧನೆ ಮಾಡಿ
ಮಕರ

- ಮನೆಯಲ್ಲಿ ಕೆಲವು ಸಮಸ್ಯೆಗಳಿಗೆ ಗಮನಿಸಿಕೊಳ್ಳಿ
- ವ್ಯಾವಹಾರಿಕ ಪ್ರಗತಿಯಿಂದ ಸಂತಸ ಆಗಲಿದೆ
- ಜನರ ಸಲಹೆಗಳಿಗೆ ಆದ್ಯತೆ ಇರಲಿ
- ಯಾರದ್ದೋ ಸಂಗಡ ಕುಕೃತ್ಯಗಳಿಗೆ ಪ್ರಚೋದನೆ ಬೇಡ
- ನಿಮ್ಮ ಸ್ಥಾನಮಾನ ಉಳಿಸಿಕೊಳ್ಳಲು ಹೋರಾಟ ಮಾಡುತ್ತೀರಿ
- ಮಕ್ಕಳಿಂದ ಅತಿಯಾದ ಯೋಚನೆ ಕಾಡಲಿದೆ
- ಕುಲದೇವತಾ ಪ್ರಾರ್ಥನೆ ಮಾಡಿ
ಕುಂಭ

- ವ್ಯಾವಹಾರಿಕವಾದ ಸಮಸ್ಯೆ ಉಲ್ಬಣ ಆಗಲಿದೆ
- ಜನರು ನಿಮ್ಮನ್ನು ಅವಮಾನಿಸಲು ಕಾಯುತ್ತಿರುತ್ತಾರೆ
- ಮಾನಸಿಕ ಸಂಕಷ್ಟವನ್ನು ಎದುರಿಸುತ್ತೀರಿ
- ಹೊಟ್ಟೆ ಅಥವಾ ಎದೆ ನೋವು ಕಾಣಬಹುದು ಜಾಗ್ರತೆವಹಿಸಿ
- ಜೀವನ ಶೈಲಿಯನ್ನು ಸರಿಪಡಿಸಿಕೊಳ್ಳಿ
- ಯಾರ ಜೊತೆ ಜಗಳಕ್ಕೆ ಹೋಗದಿರಿ
- ಗೋ ಸೇವೆ ಮಾಡಿ
ಮೀನ

- ಕುಟುಂಬದ ಸದಸ್ಯರ ಬೆಂಬಲವಿದೆ
- ಕೈಹಿಡಿದ ಕೆಲಸಕ್ಕೆ ಹೊಸ ಮೆರಗು ಸಿಗಲಿದೆ
- ಸಮಾಧಾನದ ನಿಟ್ಟುಸಿರು ಬಿಡುತ್ತೀರಿ
- ವಾಹನ ಬದಲಾವಣೆಯ ಚಿಂತನೆಯನ್ನು ಮಾಡುತ್ತೀರಿ
- ವೈಯಕ್ತಿಕವಾದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುತ್ತೀರಿ
- ಆರ್ಥಿಕ ಲಾಭವಿದೆ ಸಮಾಧಾನವಿದೆ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ