ಪ್ರಮುಖ ನಿರ್ಧಾರ ಮಾಡುವಾಗ ಆಲೋಚನೆ ಮಾಡಿ
ಕೆಲಸದ ಬಗ್ಗೆ ಚಿಂತನೆ ಮಾಡಿ ಬೇರೆ ವಿಚಾರಗಳು ಬೇಡ
ಹಣ ವಿನಿಮಯ ಅಥವಾ ಸಹಾಯ ಮಾಡುವುದು ಬೇಡ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ

- ಇಂದು ಮನೆಯವರ ಜೊತೆ ಜಗಳ ಮಾಡಬಹುದು
- ಒಂಟಿತನ ಬಯಸಿ ಪ್ರಯಾಣ ಮಾಡಬಹುದು
- ಯಾರು ನನಗೆ ಸಹಕರಿಸುವುದಿಲ್ಲ ಎಂಬ ಭಾವನೆ ಮನಸ್ಸಿಗೆ ಬರಬಹುದು
- ನಿಮ್ಮ ಯೋಚನೆಗಳಿಗೆ ಕಡಿವಾಣ ಹಾಕಿ
- ಆಗುವ ಕೆಲಸದ ಬಗ್ಗೆ ಚಿಂತನೆ ಮಾಡಿ ಬೇರೆ ವಿಚಾರಗಳು ಬೇಡ
- ಇಂದು ಕಾನೂನಿಗೆ ಮೀರಿದ ಯಾವ ಕೆಲಸವೂ ಬೇಡ
- ವೆಂಕಟರಮಣನನ್ನು ಪ್ರಾರ್ಥನೆ ಮಾಡಿ
ವೃಷಭ

- ಮಕ್ಕಳ ಜೊತೆ ಗಹನವಾದ ಚರ್ಚೆ ನಡೆಯಬಹುದು
- ವ್ಯವಹಾರಿಕವಾಗಿ ಮುಂದುವರೆಯುತ್ತೀರಿ
- ಇಂದು ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ
- ಮನೆಯ ಸದಸ್ಯರ ಸಲಹೆ ಮುಖ್ಯವಾಗುತ್ತದೆ
- ಆರ್ಥಿಕ ಯೋಜನೆಗಳು ಗಟ್ಟಿಯಾಗುತ್ತವೆ
- ಹಣ ವಿನಿಮಯ ಅಥವಾ ಸಹಾಯ ಮಾಡುವುದು ಬೇಡ
- ಆಂಜನೇಯನನ್ನು ಪ್ರಾರ್ಥನೆ ಮಾಡಿ
ಮಿಥುನ

- ಇಂದು ಹಲವಾರು ಕೆಲಸಗಳು ಒಟ್ಟಿಗೆ ಬೇಡ
- ನಿಮ್ಮ ತಾಳ್ಮೆ ಪರೀಕ್ಷೆಯ ದಿನವಾಗಬಹುದು
- ಇಂದು ಜಾಣ್ಮೆಯಿಂದ ಕೆಲಸ ಮಾಡಿ
- ಹೊಸ ಉದ್ಯೋಗಕ್ಕೆ ಅವಕಾಶವಿದೆ
- ಪ್ರಮುಖ ನಿರ್ಧಾರ ಮಾಡುವಾಗ ಆಲೋಚನೆ ಮಾಡಿ
- ಮಕ್ಕಳ ಸಹಕಾರ ಬೇಕಾಗಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ಕಟಕ

- ರಾಜಕೀಯ ವ್ಯಕ್ತಿಗಳನ್ನು ಅವಲಂಬಿಸಿ ನಷ್ಟವಾಗಬಹುದು
- ಉದ್ಯೋಗಸ್ಥರಿಗೆ ಕೆಲಸದಲ್ಲಿ ನಿರಾಸಕ್ತಿ, ಸಮಸ್ಯೆ ಉಂಟಾಗಬಹುದು
- ಅನುಪಯುಕ್ತ ವಸ್ತುಗಳ ವಿಚಾರ ಬೇಡ
- ಆರೋಗ್ಯದ ಕಡೆ ಗಮನಹರಿಸಿ, ತಲೆನೋವು ನಿಮ್ಮನ್ನ ಬಾಧಿಸಬಹುದು
- ಮಕ್ಕಳ ಮೇಲೆ ಕೋಪ ಬರಬಹುದು ತಾಳ್ಮೆಯಿಂದ ವರ್ತಿಸಿ
- ಮನೆಯಲ್ಲಿ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಬಹುದು
- ಪ್ರತ್ಯಂಗಿರಾ ದೇವಿಯನ್ನ ಪ್ರಾರ್ಥನೆ ಮಾಡಿ
ಸಿಂಹ

- ಇಂದು ನಿಮ್ಮನ್ನು ಹೊಗಳುವ ವ್ಯಕ್ತಿಗಳಿಂದ ದೂರವಿರಿ
- ಸ್ನೇಹಿತರ ಮಾತಿಗೆ ಮರುಳಾಗಿ ಅವಮಾನದ ಸಾಧ್ಯತೆಯಿದೆ
- ಹಲವಾರು ಚಿಂತನಶೀಲ ವಿಚಾರಗಳಿಗೆ ಆದ್ಯತೆಯಿದಲಿ
- ಅನಿರೀಕ್ಷಿತವಾದ ಧನಲಾಭ ಅದರಿಂದ ಸಂತಸ
- ಕುಟುಂಬದಲ್ಲಿಯ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಳ್ಳಿ
- ಇಂದು ಜನರು ನಿಮ್ಮನ್ನು ಟೀಕಿಸಬಹುದು ಗಮನಿಸಿ
- ಮಹಾಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ
ಕನ್ಯಾ

- ಪ್ರಭಾವಿ ವ್ಯಕ್ತಿಗಳ ಜೊತೆಯಲ್ಲಿ ನಿಮ್ಮ ಬಾಂಧವ್ಯ ಚೆನ್ನಾಗಿರಲಿ
- ಬಹು ದಿನದ ಸಮಸ್ಯೆಗಳಿಗೆ ಮುಕ್ತಿ ಸಿಗುವ ದಿನ
- ಹೊಸ ವಿಚಾರದಲ್ಲಿ ಮನಸ್ಸನ್ನು ಮಾಡಿ
- ವ್ಯಾಪಾರಿಗಳಿಗೆ ಆದಾಯದ ಮಾರ್ಗ ಕಾಣಲಿದೆ
- ಮಕ್ಕಳ ಜೀವನದಲ್ಲಿ ಅಸ್ತವ್ಯಸ್ತ ಆಗಬಹುದು
- ಬೇರೆಯವರಿಂದ ಟೀಕೆಗೆ ಒಳಗಾಗುತ್ತೀರಿ
- ಈಶ್ವರ ಆರಾಧನೆ ಮಾಡಿ
ತುಲಾ

- ಕುಟುಂಬದ ಸದಸ್ಯರು ಒಟ್ಟಿಗೆ ಕೂತು ಚರ್ಚಿಸಿ ನಿರ್ಧಾರ ಮಾಡಿ
- ಯಾವುದೇ ನಿರ್ಧಾರವಾದರು ಕೂಡ ಏಕಮುಖವಾಗಿ ಬೇಡ
- ಹಳೆಯ ಅನುಭವ ಲಾಭವನ್ನು ತಂದುಕೊಡುತ್ತದೆ
- ನಿಮ್ಮ ನಡುವಳಿಕೆ ಹಲವರಿಗೆ ಸ್ಪೂರ್ತಿ ನೀಡಬಹುದು
- ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸವನ್ನ ಮುಗಿಸಿ
- ಬೇರೆಯವರಿಗೆ ಸಲಹೆಯನ್ನ ಕೊಡುವುದು ಬೇಡ
ಕುಲದೇವತಾರಾಧನೆ ಮಾಡಿ
ವೃಶ್ಚಿಕ

- ನಿಮ್ಮ ಕೆಲಸ, ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡಿ
- ವಿಶೇಷವಾದ ಅಧ್ಯಯನದ ಕಡೆ ಗಮನ ಹರಿಸಿ
- ಆರ್ಥಿಕ ಸ್ಥಿತಿ ಸ್ವಲ್ಪ ಕಷ್ಟಕರವಾಗಬಹುದು
- ಉದ್ಯೋಗದ ವಿಚಾರವೂ ಸಮಾಧಾನಕರವಾಗಿಲ್ಲ
- ಬಹಳ ದಿನಗಳಿಂದ ಇದ್ದ ಸಮಸ್ಯೆ ಹೆಚ್ಚಾಗಬಹುದು
- ಮನೆಯಲ್ಲಿ ಹೊಂದಾಣಿಕೆಯ ಕೊರತೆ ಇರುತ್ತದೆ
- ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ
ಧನುಸ್ಸು

- ನಿಮ್ಮ ಹಠಮಾರಿತನದಿಂದ ಜನ ದೂರವಾಗಬಹುದು
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ಔಷಧಿಗಳನ್ನು ತೆಗೆದುಕೊಳ್ಳುವಾಗ ಜಾಗ್ರತೆವಹಿಸಿ
- ವೈವಾಹಿಕ ಜೀವನದ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಕಾಡಬಹುದು
- ಇಂದು ಜನರು ಹೇಳುವುದನ್ನು ಸ್ವಲ್ಪ ತಾಳ್ಮೆಯಿಂದ ಕೇಳಬೇಕು
- ವಿಚಾರ ತಿಳಿದು ನಂತರ ನಿರ್ಧಾವನ್ನ ಮಾಡಿದರೆ ಒಳ್ಳೆಯದು
- ನರಸಿಂಹನನ್ನು ಪ್ರಾರ್ಥನೆ ಮಾಡಿ
ಮಕರ

- ನಿಮ್ಮ ಕ್ಷೇತ್ರದಲ್ಲಿ ಗಣನೀಯ ಪ್ರಗತಿ, ಯಶಸ್ಸು ಕಾಣುತ್ತೀರಿ
- ಕೆಲಸದ ಸ್ಥಳದಲ್ಲಿ ನಿಮ್ಮ ಬಗ್ಗೆ ಗುಣಗಾನ ಮಾಡುತ್ತಾರೆ
- ಇಂದು ಧನಾತ್ಮಕ ಶಕ್ತಿ ನಿಮ್ಮಲ್ಲಿ ಹೆಚ್ಚಾಗುತ್ತದೆ
- ವಿರೋಧಿಗಳು ನಿಮ್ಮ ಎದುರು ಸೋಲುತ್ತಾರೆ
- ಒಳ್ಳೆಯ ಸುದ್ದಿಗಳಿಂದ ಸಂತೋಷ ಪಡುತ್ತೀರಿ
- ಕೀರ್ತಿ ವೃದ್ಧಿಯಾಗುತ್ತದೆ ಜೊತೆಗೆ ಭಯವೂ ಹೆಚ್ಚಾಗುತ್ತದೆ
- ಇಷ್ಟದೇವತಾ ಪ್ರಾರ್ಥನೆ ಮಾಡಿ
ಕುಂಭ

- ಮಕ್ಕಳ ವಿಚಾರದಲ್ಲಿ ಸ್ವಲ್ಪ ಉದ್ವೇಗ ಕಾಣಬಹುದು
- ಮನೆ ಕೆಲಸದಲ್ಲಿ ತುಂಬಾ ಒತ್ತಡ ಇರುವ ದಿನ
- ಇಂದು ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಗಮನಿಸಿ
- ಇಂದು ಹಣದ ಹೂಡಿಕೆ ವಿಚಾರವನ್ನ ಮಾಡಬೇಡಿ
- ಆರ್ಥಿಕ ನಷ್ಟವನ್ನು ತಪ್ಪಿಸಿಕೊಳ್ಳಿ
- ವಿದ್ಯುತ್ ಉಪಕರಣಗಳಿಂದ ದೂರವಿದ್ದರೆ ಒಳ್ಳೆಯದು
- ಈಶ್ವರನ ಆರಾಧನೆ ಮಾಡಿ
ಮೀನಾ

- ನಿಮ್ಮ ಪರಿಪೂರ್ಣವಾದ ಆಲೋಚನೆ ಶುಭ ನೀಡುತ್ತದೆ
- ಕೆಲಸಗಳು ನಿಧಾನವಾಗವುದರಿಂದ ಬೇಸರವಾಗಬಹುದು
- ನಿಮ್ಮ ಗುರಿಗಳ ಬಗ್ಗೆ ಜಾಗರೂಕರಾಗಿರಿ
- ನಿಮ್ಮ ಬಗ್ಗೆ ಸಮಾಜದಲ್ಲಿ ಗೌರವವಿದೆ
- ಜನರು ನಿಮ್ಮ ಸಲಹೆ ಪಡೆಯಲು ಇಚ್ಚಿಸುತ್ತಾರೆ
- ಹೆಚ್ಚು ಬೆಲೆ ಬಾಳುವ ವಸ್ತು ಖರೀದಿಸುವ ಅವಕಾಶವಿದೆ
- ನವಗ್ರಹರ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ