ಅನುಚಿತ ವರ್ತನೆ ನಿಮಗೆ ಸಮಸ್ಯೆಯಾಗಬಹುದು
ಲಾಭ ನಷ್ಟಗಳ ಲೆಕ್ಕಾಚಾರ ತಲೆ ನೋವಾಗಬಹುದು
ವೃತ್ತಿಯ ಬಗ್ಗೆ ಚಿಂತನೆ ಮಾಡೋದನ್ನ ಬಿಡಿ ಶುಭವಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ

- ದೂರದ ಪ್ರಯಾಣದ ಯೋಗವಿದೆ ಆದರೆ ಬೇಡ
- ಸ್ವಾಭಿಮಾನಕ್ಕೆ ಆಧ್ಯತೆಯಿರಲಿ
- ದಾಂಪತ್ಯ ಕಲಹ ಉಂಟಾಗಬಹುದು
- ಹಳೆಯ ಕಹಿ ನೆನಪುಗಳಿಂದ ನೋವು ಆಗಲಿದೆ
- ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
- ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ಮನೆಯಲ್ಲಿ ಸ್ವಲ್ಪ ಅಹಿತವಾದ ವಾತಾವರಣ
- ಆರೋಗ್ಯದ ಬಗ್ಗೆ ಅಸಡ್ಡೆ ತೋರಿಸಬೇಡಿ
- ನಿಮ್ಮಿಂದ ಹಲವರಿಗೆ ಸ್ಪೂರ್ತಿ ದೊರಯಲಿದೆ
- ವೃತ್ತಿಯ ಬಗ್ಗೆ ಚಿಂತನೆ ಮಾಡೋದನ್ನ ಬಿಡಿ ಶುಭವಿದೆ
- ಕಾನೂನು ವಿಚಾರದಲ್ಲಿ ಜಯವಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ಕ್ಷುಲಕ ಕಾರಣಗಳಿಂದ ವ್ಯವಹಾರದಲ್ಲಿ ನಷ್ಟ ಆಗಬಹುದು
- ಕೋಪವನ್ನು ದೂರ ಮಾಡಿಕೊಳ್ಳಿ
- ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ
- ಉದ್ಯೋಗದ ವಿಚಾರದಲ್ಲಿ ಸಮಾಧಾನವಿಲ್ಲ
- ಸ್ನೇಹಿತರ ಭೇಟಿ ಲಾಭದಾಯಕ ಆಗಲಿದೆ
- ಮಕ್ಕಳಿಂದ ಹೊಸ ಭರವಸೆಗೆ ಅವಕಾಶವಿದೆ
- ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ
ಕಟಕ

- ಯಾವುದಾದರು ತಪ್ಪು ನಿಮ್ಮಿಂದಾಗಿದ್ದರೆ ಅದನ್ನ ತಿದ್ದಿಕೊಳ್ಳಲು ಪ್ರಯತ್ನಿಸಿ
- ಕೆಲಸದ ಸ್ಥಳದಲ್ಲಿ ಅನುಕೂಲಕರ ವಾತಾವರಣ
- ಹಣ ವಹಿವಾಟಿನಲ್ಲಿ ಸಮಾಧಾನ
- ಕೆಲಸದವರಿಂದ ಬೇಸರವಾಗುವ ಸಾಧ್ಯತೆ
- ಲಾಭ ನಷ್ಟಗಳ ಲೆಕ್ಕಾಚಾರ ತಲೆ ನೋವಾಗಬಹುದು
- ಮಕ್ಕಳ ಪರಿಪೂರ್ಣ ಸಹಕಾರ ಸಿಗಲಿದೆ
- ಶ್ರೀನಿವಾಸನ ಪ್ರಾರ್ಥನೆ ಮಾಡಿ
ಸಿಂಹ

- ಬೇರೆಯವರ ಮಾತು ನಿಮಗೆ ಹಿನ್ನಡೆಯಾಗಬಹುದು
- ಮನೆಯಲ್ಲಿ ವೈಮನಸು ಬರಲು ಅವಕಾಶ ಮಾಡಿಕೊಡಬೇಡಿ
- ಮನಸ್ಸಿನಲ್ಲಿ ಹೊಸ ಆಲೋಚನೆಗಳು ಬರಬಹುದು
- ಅಜಾಗರೂಕತೆ ತೋರಿಸಿದರೆ ಸಮಸ್ಯೆಯಾಗಬಹುದು
- ಜಾಣ್ಮೆಯನ್ನು ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸಿ
- ಹಣದ ವಿಚಾರ ಬಂದಾಗ ಬುದ್ಧಿವಂತರಾಗಿರಬೇಕು
- ನವಗ್ರಹರ ಆರಾಧನೆ ಮಾಡಿ
ಕನ್ಯಾ

- ಪ್ರಭಾವಿ ವ್ಯಕ್ತಿಗಳ ಜೊತೆಯಲ್ಲಿ ನಿಮ್ಮ ಬಾಂಧವ್ಯ ಚೆನ್ನಾಗಿರಲಿ
- ಬಹು ದಿನದ ಸಮಸ್ಯೆಗಳಿಗೆ ಮುಕ್ತಿ ಸಿಗುವ ದಿನ
- ಹೊಸ ವಿಚಾರದಲ್ಲಿ ಮನಸ್ಸನ್ನು ಮಾಡಿ
- ವ್ಯಾಪಾರಿಗಳಿಗೆ ಆದಾಯದ ಮಾರ್ಗ ಕಾಣಲಿದೆ
- ಮಕ್ಕಳ ಜೀವನದಲ್ಲಿ ಅಸ್ತವ್ಯಸ್ತ ಆಗಬಹುದು
- ಬೇರೆಯವರಿಂದ ಟೀಕೆಗೆ ಒಳಗಾಗುತ್ತೀರಿ
- ಈಶ್ವರ ಆರಾಧನೆ ಮಾಡಿ
ತುಲಾ

- ನಿಮ್ಮ ನಿರ್ಧಾರಗಳು ಗೌಪ್ಯವಾಗಿರಲಿ
- ಮನೆಯವರಿಗೆ ಸಹಕಾರಿಯಾಗಿ ವರ್ತಿಸಿ
- ತುಂಬಾ ಶ್ರಮದಿಂದ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
- ನಿಮ್ಮ ಹಿತೈಷಿಗಳಿಗೆ ಸಹಾಯ ಮಾಡಿ
- ಅವಕಾಶವಾದಿಗಳನ್ನು ದೂರವಿಡಿ
- ನಿಮ್ಮ ಒತ್ತಡದ ಮಧ್ಯೆ ಬೇರೆಯವರ ಕೆಲಸಗಳು ಬೇಡ
- ಇಷ್ಟದೇವತಾ ಪ್ರಾರ್ಥನೆ ಮಾಡಿ
ವೃಶ್ಚಿಕ

- ನಿಮ್ಮ ಚಿಂತನೆಗಳು ಧನಾತ್ಮಕವಾಗಿರಲಿ
- ಪ್ರೇಮಿಗಳು ಸಮಸ್ಯೆಯಲ್ಲಿ ಸಿಲುಕಿರುತ್ತೀರಿ
- ಹೊಸ ಕೆಲಸಕ್ಕೆ ಹಲವಾರು ಅಡ್ಡಿಯಾಗಲಿದೆ
- ಮಾನಸಿಕ ಆತಂಕಗಳಿಗೆ ತೊಂದರೆ ಕೊಡುತ್ತೀರಿ
- ಅನುಚಿತ ವರ್ತನೆ ನಿಮಗೆ ಸಮಸ್ಯೆಯಾಗಬಹುದು
- ಸ್ನೇಹಿತರ ಸಹೋದರರ ಸಹಕಾರ ಸಾಂತ್ವನ ಸಿಗಬಹುದು
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಬೇರೆಯವರಿಗೆ ಸಹಾಯ ಮಾಡಿ ಆದರೆ ನಿರೀಕ್ಷೆ ಮಾಡಬೇಡಿ
- ಅನಗತ್ಯ ಖರ್ಚು ಮನೆಯಲ್ಲಿ ದೊಡ್ಡ ಜಗಳಕ್ಕೆ ಅವಕಾಶ ಮಾಡಿಕೊಡಲಿದೆ
- ಆರೋಗ್ಯದಲ್ಲಿ ವ್ಯತ್ಯಯ ಆಗಲಿದೆ ಹಿಂಸೆ ಪಡುತ್ತೀರಿ
- ಮನೋರೋಗ ನಿಮ್ಮ ಹಿನ್ನಡೆಗೆ ಕಾರಣವಿರಬಹುದು
- ಬಂಧುಗಳಲ್ಲಿ ವೈಮನಸ್ಯ ಉಂಟಾಗಲಿದೆ
- ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಿ
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಮಕರ

- ಈ ದಿನ ಶುಭವಾಗಿದ್ದರು ಭಯ ಕಾಡಬಹುದು
- ಪ್ರಿಯತಮೆಗೆ ಉಡುಗೊರೆಯನ್ನು ಕೊಡಬಹುದು
- ಯಾರಿಂದಲೂ ಏನನ್ನು ನಿರೀಕ್ಷಿಸಬೇಡಿ
- ಮಕ್ಕಳು ನಿಮಗೆ ಧೈರ್ಯಗೆಡಿಸುತ್ತಾರೆ
- ವ್ಯಾವಹಾರಿಕ ಹಾನಿ ನೋವು ಅನುಭವಿಸುತ್ತೀರಿ
- ಸಹೋದರ ವರ್ಗದಿಂದ ಕಿರಿಕಿರಿಯಾಗಬಹುದು
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಕುಂಭ

- ಮನೆಯಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಕುಂಠಿತವಾಗ್ತಿದೆ
- ಭಾಗ್ಯವಂತಿಕೆ ಕರಗಿ ಹೋದರೆ ತೊಂದರೆಯಾಗಬಹುದು
- ಸಾಲದ ಹೊರೆ ನಿಮ್ಮನ್ನು ಕಾಡಬಹುದು
- ವಿವಾದದ ಹೇಳಿಕೆ ಕೊಟ್ಟು ಅವಮಾನಿತರಾಗುತ್ತೀರಿ
- ನಿಮ್ಮ ಆಲೋಚನೆಗಳು ಶುದ್ಧವಾಗಿರಲಿ
- ಮಕ್ಕಳಿಂದ ಸಹಾಯವನ್ನು ನಿರೀಕ್ಷಿಸಬಹುದು
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಮೀನಾ

- ನಿಮ್ಮ ಮಾನಸಿಕವಾದ ಸ್ಥಿಮಿತತೆಯೇ ನಿಮಗೆ ಬಲ
- ಕೆಲವು ಸಮಸ್ಯೆಗಳಿಂದ ಮುಕ್ತರಾಗುತ್ತೀರಿ
- ಬೇಡದ ವಿಚಾರ ಬೇಡದ ವ್ಯಕ್ತಿಗಳಿಂದ ದೂರ ಉಳಿಯಿರಿ
- ಮಕ್ಕಳಿಂದ ಹಲವು ಯೋಜನೆಗಳು ಆಗುವುದರಿಂದ ಶುಭವಿದೆ
- ನಿಮ್ಮ ಸಹಾಯದಿಂದ ಮನೆಯ ಅಭಿವೃದ್ಧಿಯಾಗಲಿದೆ
- ಆರ್ಥಿಕ ಸುಧಾರಣೆಯಿಂದ ಸಂತೋಷ ಸಿಗಲಿದೆ
- ಕುಲದೇವತಾ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ