newsfirstkannada.com

10ನೇ ತರಗತಿ ಓದಿದ ರೈತನ ಕೈ ಹಿಡಿದ ಟೊಮಾಟೊ.. ಒಂದೇ ತಿಂಗಳಲ್ಲಿ 1.8 ಕೋಟಿ ಆದಾಯ!

Share :

Published July 22, 2023 at 7:15pm

    1 ತಿಂಗಳಲ್ಲಿ ರೈತನಿಗೆ ಹೊಡೆಯಿತು ಭರ್ಜರಿ ಜಾಕ್​ಪಾಟ್​

    ಟೊಮಾಟೊದಿಂದ ಕೋಟಿ ಆದಾಯ ಗಳಿಸಿದ ರೈತ

    2 ಕೋಟಿ ಆದಾಯ ಮೀರಿಸುವ ನಿರೀಕ್ಷೆಯಲ್ಲಿದ್ದಾನೆ ಈ ಕೃಷಿಕ

‘ಡೋಂಟ್​ ವರಿ ಡೋಂಟ್​ ವರಿ ಚಿನ್ನ.. ನಿನ್​ ಟೈಂ ಕೂಡ ಬಂದೇ ಬತ್ತದೆ’ ಹಾಡು ಕೇಳಿದ್ರಾ? ಇದು ಕನ್ನಡದ ರ್ಯಾಪರ್​ ಆಲ್​ಓಕೆ ಹಾಡಿರೋ ಹಾಡು. ಈ ಹಾಡಿಗೂ ಇಲ್ಲೊಬ್ಬ ವ್ಯಕ್ತಿಯೂ ಸರಿಯಾಗಿ ಹೊಂದಾಣಿಕೆಯಾಗುತ್ತಿದೆ. ಏಕೆಂದರೆ 10ನೇ ತರಗತಿ ಓದಿರೋ ಈ ವ್ಯಕ್ತಿ 1 ತಿಂಗಳಲ್ಲಿ 1.8 ಕೋಟಿ ಗಳಿಸಿದ ನೈಜ್ಯ ಘಟನೆ ಇದು.

ಅಂದಹಾಗೆಯೇ, ಇದು ಆಂಧ್ರ ಪ್ರದೇಶದ ಕೌಡಿಪಲ್ಲಿ ಗ್ರಾಮದ ಮೆದಕ್​ನಲ್ಲಿ ನಡೆರುವ ಘಟನೆ. ಬಿ ಮಹಿಪಾಲ್​​ ರೆಡ್ಡಿ ಒಂದೇ ತಿಂಗಳಿನಲ್ಲಿ ಬರೋಬ್ಬರಿ 1.8 ಕೋಟಿ ಆದಾಯ ಗಳಿಸಿದ್ದಾರೆ. ಅಂದಹಾಗೆಯೇ ಇವರ ಆದಾಯದ ಮೂಲ ಯಾವುದು ಗೊತ್ತಾ? ಟೊಮಾಟೊ.

ಹೌದು. 40 ವರ್ಷದ ಮಹಿಪಾಲ್​​ ರೆಡ್ಡಿ ಟೊಮಾಟೊದಿಂದ ಜಾಕ್​ಪಾಟ್​ ಹೊಡೆದಂತಾಗಿದೆ. ಜೂನ್​ 15ರಿಂದ ಟೊಮಾಟೊ ಮಾರಾಟ ಮಾಡಿ ಸುಮಾರು 1.8 ಕೋಟಿ ರೂಪಾಯಿ ಗಳಿಸಿದ್ದಾರೆ.

ಈ ಬಗ್ಗೆ ಖಾಸಗಿ ಪತ್ರಿಕೆಯೊಂದಕ್ಕೆ ಮಾತನಾಡಿದ ಮಹಿಪಾಲ್​​ ರೆಡ್ಡಿ, ನಾನು ಈ ಋತುವಿನಲ್ಲಿ ಟೊಮಾಟೊ ಬೆಳೆಯಲು ಮುಂದಾದೆ. ಏಪ್ರಿಲ್​ 15ರಿಂದ ಜೂನ್​ 15ರವರೆಗೆ ಇಳುವರಿ ಪಡೆದೆ. ನನ್ನ ಉತ್ಪನ್ನ ಎ ಗ್ರೇಡ್​​​ ಆಗಿತ್ತು. ಹವಾಮಾನ ಸಂಬಂಧಿತ ಬದಲಾವಣೆಯ ಜೊತೆಗೆ ಒಂದಿಷ್ಟು ನಷ್ಟವನ್ನು ಅನುಭವಿಸಿದ್ದೇನೆ. ಆದರೂ ಈ ಸೀಸನ್​ನಲ್ಲಿ ಸುಲಭವಾಗಿ ಆದಾಯ 2 ಕೋಟಿ ದಾಟಲಿದೆ. ನನ್ನ ಜಮೀನಿನಲ್ಲಿ ಇನ್ನೂ ಶೇ.40ರಷ್ಟು ಟೊಮಾಟೊ ಇದೆ ಎಂದು ಹೇಳಿದ್ದಾರೆ.

ಇನ್ನು ಮಹಿಪಾಲ್​​ ರೆಡ್ಡಿಗೆ 100 ಎಕರೆ ಆಸ್ತಿ ಇದ್ದು, ನಾಲ್ಕು ವರ್ಷದ ಹಿಂದೆ 40 ಎಕರೆಯಲ್ಲಿ ತರಕಾರಿ ಮತ್ತು ಟೊಮಾಟೊ ಬೆಳೆಯಲು ಪ್ರಾರಂಭಿಸಿದರು. ಉಳಿದ ಭಾಗ ಭತ್ತ ಬೆಳೆಯುತ್ತಾರೆ. ಪ್ರತಿ ಎಕರೆಗೆ 2 ಲಕ್ಷ ಖರ್ಚು ಮಾಡುತ್ತಾರೆ. ಈವರೆಗೆ ಸುಮಾರು 7 ಸಾವಿರ ಬಾಕ್ಸ್​ ಟೊಮಾಟೊ ಮಾರಾಟ ಮಾಡಿದ್ದಾರೆ.

ಟೊಮಾಟೊ ಬೆಲೆ ಏರಿಕೆಯಿಂದ ಬಹುತೇಕ ರೈತರ ಬಾಳು ಬಂಗಾರವಾಗಿದೆ. ಪ್ರತಿ ವರ್ಷ ಟೊಮಾಟೊದಿಂದ ನಷ್ಟ ಅನುಭವಿಸುತ್ತಿದ್ದ ರೈತರಿಗೆ ಈ ಬಾರಿಯ ಬೆಲೆ ಏರಿಕೆಯಿಂದ ಮುಖದಲ್ಲಿ ಮಂದಹಾಸ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

10ನೇ ತರಗತಿ ಓದಿದ ರೈತನ ಕೈ ಹಿಡಿದ ಟೊಮಾಟೊ.. ಒಂದೇ ತಿಂಗಳಲ್ಲಿ 1.8 ಕೋಟಿ ಆದಾಯ!

https://newsfirstlive.com/wp-content/uploads/2023/07/Mahipal-Reddy.jpg

Load More