newsfirstkannada.com

WATCH: ಅಂದು ಕೋಳಿ, ಇಂದು ಟೊಮ್ಯಾಟೊ ಸರದಿ; ಮಿನಿಸ್ಟರ್ ಹುಟ್ಟುಹಬ್ಬ ಆಚರಣೆಯಲ್ಲಿ ಭರ್ಜರಿ ಉಡುಗೊರೆ

Share :

24-07-2023

  ಒಂದು ಜೀವಂತ ಕೋಳಿ, ಎಣ್ಣೆ ಬಾಟಲ್‌ ಹಂಚಿದ್ದ ವಿಡಿಯೋ ವೈರಲ್

  ಈ ಬಾರಿ ಮಹಿಳಾಮಣಿಯರಿಗೆ ಬುಟ್ಟಿ ತುಂಬಾ ಟೊಮೊಟೊ ಗಿಫ್ಟ್

  ಕೆ.ಟಿ ರಾಮರಾವ್ ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳಿಗೆ ಹಬ್ಬ

ಹೈದರಾಬಾದ್: ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ತಾರೆಯರು, ರಾಜಕಾರಣಿಗಳ ಹುಟ್ಟುಹಬ್ಬವನ್ನ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತೆ. ನಾಯಕರ ಬರ್ತ್‌ಡೇ ಅಂದ್ರೆ ಅವರ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಇದಕ್ಕೆ ಪೂರಕವಾಗಿ ಲೀಡರ್‌ಗಳು ಅಷ್ಟೇ ತಮ್ಮ ಫ್ಯಾನ್ಸ್‌ನ ಖುಷಿ ಪಡಿಸಲು ಏನ್ ಬೇಕಾದ್ರೂ ಮಾಡ್ತಾರೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ತೆಲಂಗಾಣದ ಐಟಿ ಸಚಿವ ಕೆ.ಟಿ ರಾಮರಾವ್ ಅವರ ಹುಟ್ಟುಹಬ್ಬ ಆಚರಣೆ.

ತೆಲಂಗಾಣದ ವಾರಂಗಲ್‌ನಲ್ಲಿ ಪ್ರತಿ ವರ್ಷ ಕೆ.ಟಿ ರಾಮರಾವ್ ಅವರ ಹುಟ್ಟುಹಬ್ಬವನ್ನ BRS ಪಕ್ಷದ ನಾಯಕರು ಭರ್ಜರಿಯಾಗಿ ಆಚರಿಸುತ್ತಾರೆ. ಕಳೆದ ವರ್ಷ ರಾಮರಾವ್ ಅವರ ಬರ್ತ್‌ಡೇ ಹಿನ್ನೆಲೆ ಒಂದು ಜೀವಂತ ಕೋಳಿ, ಮದ್ಯದ ಬಾಟಲಿಗಳನ್ನು ಅಭಿಮಾನಿಗಳಿಗೆ ಹಂಚಿದ್ದರು. ಕ್ಯೂ ನಿಂತಿದ್ದ ಜನರಿಗೆ ಕೋಳಿ ಹಾಗೂ ಬಾಟಲಿ ಹಂಚಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಸರಿಯಾಗಿ ಒಂದು ವರ್ಷದ ಬಳಿಕ ಕೆ.ಟಿ ರಾಮರಾವ್ ಅವರ ಅಭಿಮಾನಿಗಳು ವಾರಂಗಲ್‌ನಲ್ಲಿ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ಕಳೆದ ವರ್ಷ ಕೋಳಿ ಹಂಚಿದ್ದ BRS ಪಕ್ಷದ ನಾಯಕರು ಈ ಬಾರಿ ಬುಟ್ಟಿಗಟ್ಟಲೇ ಟೊಮೊಟೊ ಹಂಚಿದ್ದಾರೆ. ತಮ್ಮ ನಾಯಕ ಕೆ.ಟಿ ರಾಮರಾವ್ ಅವರ ಕಟೌಟ್‌ಗಳನ್ನ ಮುಂದೆ ಇಟ್ಟುಕೊಂಡು ಮಹಿಳಾಮಣಿಯರಿಗೆ ಒಂದು ಬುಟ್ಟಿ ಟೊಮೊಟೊ ಗಿಫ್ಟ್ ಕೊಟ್ಟಿದ್ದಾರೆ. ಮಾರುಕಟ್ಟೆಯಲ್ಲಿ ಟೊಮೊಟೊ ದರ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಟೊಮೊಟೊ ಗಿಫ್ಟ್ ಕೊಟ್ಟಿರೋದು ಜನರಿಗೂ ಖುಷಿಯಾಗಿದೆ. ಸಾಲುಗಟ್ಟಿ ನಿಂತಿದ್ದ ಮಹಿಳೆಯರು ಕೆ.ಟಿ ರಾಮರಾವ್ ಹೆಸರಲ್ಲಿ ಒಂದೊಂದು ಬುಟ್ಟಿ ಟೊಮೊಟೊ ತಗೊಂಡು ಮನೆ ಕಡೆ ನಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಅಂದು ಕೋಳಿ, ಇಂದು ಟೊಮ್ಯಾಟೊ ಸರದಿ; ಮಿನಿಸ್ಟರ್ ಹುಟ್ಟುಹಬ್ಬ ಆಚರಣೆಯಲ್ಲಿ ಭರ್ಜರಿ ಉಡುಗೊರೆ

https://newsfirstlive.com/wp-content/uploads/2023/07/Hyderabad-Tamoto.jpg

Load More