newsfirstkannada.com

ಬರೋಬ್ಬರಿ 21 ಲಕ್ಷ ಮೌಲ್ಯದ ಟೊಮ್ಯಾಟೋ ಜತೆ ಲಾರಿ ಡ್ರೈವರ್​ ಎಸ್ಕೇಪ್​​; ಆಮೇಲೇನಾಯ್ತು?

Share :

30-07-2023

    ಜೈಪುರಕ್ಕೆ ಹೊರಟ್ಟಿದ್ದ ಲಾರಿ ಸಮೇತ ಚಾಲಕ ನಾಪತ್ತೆ..!

    ಕೋಲಾರದ ಮೆಹತ್ ಟ್ರಾನ್ಸ್ ಪೋರ್ಟ್​ಗೆ ಸೇರಿದ ಲಾರಿ

    ಲಾರಿ ಚಾಲಕ ಸಂಪರ್ಕಕ್ಕೆ ಸಿಗುತ್ತಿಲ್ಲ, ಮಾಲೀಕರು ಕಂಗಾಲು

ಕೋಲಾರ: ದೇಶಾದ್ಯಂತ ದಿನೇ ದಿನೇ ಟೊಮ್ಯಾಟೋ ರೇಟ್ ಮತ್ತಷ್ಟು ದುಬಾರಿಯಾಗುತ್ತಿದೆ. ಈಗಾಗಲೇ ಶತಕ ಬಾರಿಸಿದ ಟೊಮ್ಯಾಟೋ ದ್ವಿಶತಕದತ್ತ ಹೋಗುತ್ತಿದೆ. ಟೊಮ್ಯಾಟೋ ದುಬಾರಿ ಆಗಿರುವ ಹಿನ್ನೆಲೆಯಲ್ಲಿ ಕೆಲ ಕಿಡಿಗೇಡಿಗಳು ಕೆಂಪು ರಾಣಿಯ ಹಿಂದೆ ಬಿದ್ದಿದ್ದಾರೆ. ಇದೀಗ ಬರೋಬ್ಬರಿ 21 ಲಕ್ಷ ರೂಪಾಯಿ ಮೌಲ್ಯದ ಟೊಮ್ಯಾಟೋ ತುಂಬಿಕೊಂಡು ಹೋಗುತ್ತಿದ್ದ ಲಾರಿ ನಾಪತ್ತೆಯಾಗಿದೆ. ಕೋಲಾರದಿಂದ ರಾಜಾಸ್ಥಾನಕ್ಕೆ ಹೊರಟಿದ್ದ ಟೊಮ್ಯಾಟೊ ಲಾರಿ ಸಮೇತ ಚಾಲಕ ಎಸ್ಕೇಪ್​ ಆಗಿದ್ದಾನೆ. ಟೊಮ್ಯಾಟೋ ತುಂಬಿಕೊಂಡು ಹೋಗುತ್ತಿದ್ದ ಲಾರಿಯು ಜುಲೈ 27ರಂದು ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ಹೊರಟ್ಟಿತ್ತು.

ಎ.ಜಿ ಟ್ರೇಡರ್ಸ್ ಸಕ್ಲೇನ್ ಹಾಗೂ ಎಸ್.ವಿ.ಟಿ ಟ್ರೇಡರ್ಸ್ ಮುನಿರೆಡ್ಡಿ ಎಂಬುವರಿಗೆ ಸೇರಿದೆ. ಇದೀಗ ಡ್ರೈವರ್ ಹಾಗೂ ಲಾರಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಕಂಗಾಲಾದ ಮಂಡಿ ಮಾಲೀಕರು ಈ ಕುರಿತು ಕೋಲಾರ ನಗರ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದಾರೆ.

ಇನ್ನು, ಹಲವು ದಿನಗಳ ಹಿಂದೆ ಕೋಲಾರ ಮಾರುಕಟ್ಟೆಯಲ್ಲಿ ಕಳ್ಳನೋರ್ವ ಟಮ್ಯಾಟೋ ಬಾಕ್ಸ್​ ಅನ್ನು ಕಳ್ಳತನ ಮಾಡಿದ್ದನು. ಕಳ್ಳತನ ಮಾಡುತ್ತಿರೋ ದೃಶ್ಯವು ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಈಗ ಚಾಲಕ ಸಮೇತ ಟಮ್ಯಾಟೋ ಲಾರಿ ನಾಪತ್ತೆಯಾಗಿದ್ದು ಅನುಮಾನ ಹುಟ್ಟು ಹಾಕುವಂತೆ ಮಾಡಿದೆ. ಸದ್ಯ ಪೊಲೀಸ್​ ಅಧಿಕಾರಿಗಳು ಟೊಮ್ಯಾಟೋ ತುಂಬಿಕೊಂಡು ಹೋಗುತ್ತಿದ್ದ ಲಾರಿ ಹಾಗೂ ಚಾಲಕನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 21 ಲಕ್ಷ ಮೌಲ್ಯದ ಟೊಮ್ಯಾಟೋ ಜತೆ ಲಾರಿ ಡ್ರೈವರ್​ ಎಸ್ಕೇಪ್​​; ಆಮೇಲೇನಾಯ್ತು?

https://newsfirstlive.com/wp-content/uploads/2023/07/Tamoto-lorry.jpg

Load More