ಬರೋಬ್ಬರಿ ಇಷ್ಟು ರೂಪಾಯಿಗಳು ಕಡಿಮೆಯಾಯಿತಾ.?
ಟೊಮ್ಯಾಟೋ ರೇಟ್ ಕೊಂಚ ಇಳಿಕೆ ಜನರು ರಿಲ್ಯಾಕ್ಸ್
80 ರೂಪಾಯಿ, 100 ರೂಪಾಯಿ ಬೋರ್ಡ್ಗಳು ಯಾಕೆ?
ಒಂದು ಗ್ರಾಂ ಬೆಳ್ಳಿನಾದ್ರೂ ಖರೀದಿ ಮಾಡಬಹುದು. ಆದರೆ ಒಂದು ಕೆ.ಜಿ ಟೊಮ್ಯಾಟೋ ಕೊಂಡುಕೊಳ್ಳುವುದು ಕಷ್ಟ ಆಗಿದೆ ಎಂದು ಮನೆಯಲ್ಲಿ ಅಡುಗೆ ಮಾಡುವವರೆಲ್ಲ ಗೊಣಗಾಡ್ತಿದ್ರು. ಬೆಲೆ ನೋಡಿದ ಕೆಲವರಂತೂ ಕಣ್ಣನ್ನೂ ಟೊಮ್ಯಾಟೋದಂತೆ ಕೆಂಪಗೆ ಮಾಡಿಕೊಂಡಿದ್ದರು. ಈ ಹುಳಿ ಸುಂದರಿಯ ಬೆಲೆಯಿಂದ ಕೆಲವೆಡೆ ಕಳ್ಳತನ, ಸೆಕ್ಯೂರಿಟಿ, ಸಿಸಿಟಿವಿ ಕಣ್ಗಾವಲು, ನಡೆಯೋಕೆ ಕಾರಣವಾಗಿತ್ತು. ಆದ್ರೆ ಈಗ ಜನರು ರಿಲ್ಯಾಕ್ಸ್ ಆಗಿ ಸಂತೋಷದಿಂದ ಟೊಮ್ಯಾಟೋವನ್ನ ಮನೆಗೆ ತೆಗೆದುಕೊಂಡು ಹೋಗೋ ದಿನಗಳು ಬರುವ ಲಕ್ಷಣಗಳು ಕಾಣುತ್ತಿವೆ.
ಇದು ಟೊಮ್ಯಾಟೋ ಪ್ರಿಯರಿಗೆ ಖುಷಿ ಸಂಗತಿ ಎಂದೇ ಹೇಳಬಹುದು. ಇಷ್ಟು ದಿನ ಟೊಮ್ಯಾಟೋ ರೇಟ್ಗೆ ಹೆದರಿ ಹುಣಸೆ ಹಣ್ಣು ಬಳಸುತ್ತಿದ್ದ ಮಹಿಳೆಯರು ಇದೀಗ ಮತ್ತೆ ಟೊಮ್ಯಾಟೋ ಕಡೆ ಮುಖ ಮಾಡಿದ್ದಾರೆ. ಕಾರಣ 120 ರೂಪಾಯಿ ಇದ್ದ ಟೊಮ್ಯಾಟೋ ದರ ಈಗ 80 ರೂಪಾಯಿಗೆ ಇಳಿದಿದೆ. ಅಂದ್ರೆ ಬರೋಬ್ಬರಿ 40 ರೂಪಾಯಿ ಇಳಿಕೆ ಕಂಡಿದೆ.
ಕೆಲವು ಕಡೆ ವ್ಯಾಪಾರಸ್ಥರು ಟೊಮ್ಯಾಟೋ ಬೆಲೆ 80 ರೂಪಾಯಿ ಹಾಕಿದ್ರೆ, ಮತ್ತಷ್ಟು ಕಡೆ 100 ರೂಪಾಯಿ ಬೋರ್ಡ್ಗಳು ಹಾಕಿರುವುದು ಕಂಡು ಬಂತು.
ಒಳ್ಳೆಯ ಟೊಮ್ಯಾಟೋಗೆ ಇನ್ನು ಬೆಲೆಯಿದೆ. ಸ್ವಲ್ಪ ಕೆಟ್ಟಿರೋ ಟೊಮ್ಯಾಟೋಗೆ ರೇಟ್ ಕಡಿಮೆ ಇದೆ. ಒಳ್ಳೆಯ ಟೊಮ್ಯಾಟೋ ಯಾರು ತಿನ್ನುತ್ತಿಲ್ಲ. 80, 70, 60 ಈ ರೇಟ್ನಲ್ಲಿರುವ ಟೊಮ್ಯಾಟೋ ತಿನ್ನುತ್ತಿದ್ದಾರೆ.
ನಾರಾಯಣ, ವ್ಯಾಪಾರಸ್ಥರು
ಇನ್ನು ಮೊದ್ಲೆಲ್ಲಾ ಕ್ವಾಂಟಿಟಿಗಿಂತ ಕ್ವಾಲಿಟಿ ಇಂಪಾರ್ಟೆಂಟ್ ಅಂತಿದ್ದ ಸಿಟಿ ಮಂದಿ ಈ ಬೆಲೆ ಏರಿಕೆಗೆ ಬೆದರಿ ಕ್ವಾಲಿಟಿಗಿಂತ ಕ್ವಾಂಟಿಟಿನೇ ಇಂಪಾರ್ಟೆಂಟ್ ಅಂತ 50 ರೂಪಾಯಿ ಕೊಟ್ಟು ಡ್ಯಾಮೇಜ್ಡ್ ಟೊಮ್ಯಾಟೊಗಳನ್ನ ತಗೊಂಡು ಹೋಗ್ತಿದ್ದಾರಂತೆ.
ಜನರು ಚಿಕ್ಕ ಟೊಮ್ಯಾಟೋಗಳನ್ನು ಖುಷಿಯಿಂದಲೇ ತೆಗೆದುಕೊಳ್ಳುತ್ತಿದ್ದಾರೆ. ದೊಡ್ಡ ಟೊಮ್ಯಾಟೋ ಎಲ್ಲ 100 ರಿಂದ 120 ರೂಪಾಯಿ ಇದೆ.
ಮಾವು ಪಾಷ, ವ್ಯಾಪಾರಸ್ಥರು
ಅದೇನೇ ಇರ್ಲಿ ಎಲ್ಲೆಡೆ ಮಳೆ ಹೆಚ್ಚಾಗ್ತಿದೆ. ಮಾರುಕಟ್ಟೆಯಲ್ಲಿ ಕೆಂಪುಸುಂದರಿಗೆ ಡಿಮ್ಯಾಂಡ್ ಕಮ್ಮಿಯಾಗ್ತಿದೆ. ಬೆಲೆ ಕೂಡಾ ದಿನದಿಂದ ದಿನಕ್ಕೆ ಕಡಿಮೆಯಾಗ್ತಿದ್ದು, ಶೀಘ್ರದಲ್ಲೇ ಸಾಮಾನ್ಯ ಜನರ ಕೈಗೆ ಎಟುಕುವ ದರದಲ್ಲಿ ಟೊಮ್ಯಾಟೋ ಸಿಗೋದ್ರಲ್ಲಿ ಅನುಮಾನ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ