ಟೊಮ್ಯಾಟೊ ದರ ಮತ್ತೆ ಕುಸಿತ
ಬೆಲೆ ಇಳಿಕೆಯಿಂದ ಗೃಹಿಣಿಯರಿಗೆ ಸಂತಸ
ಟೊಮ್ಯಾಟೊ ಬೆಲೆ ಕುಸಿತ ಕಾಣಲು ಕಾರಣವೇನು?
ಕೋಲಾರ: ಟೊಮ್ಯಾಟೊ ದರ ಮತ್ತೆ ಕುಸಿತ ಕಂಡಿದೆ. ಹದಿನೈದು ಕೆ.ಜಿ. ಕ್ರೇಟ್ ಟೊಮ್ಯಾಟೊ 500-800 ಹರಾಜಾಗಿದೆ.
ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಕುಸಿತ ಕಂಡಿದ್ದು, ಗೃಹಿಣಿಯರಿಗೆ ಈ ವಿಚಾರ ಸಂತಸ ನೀಡಿದೆ. ಮತ್ತೊಂದೆಡೆ ಸಹಜ ಸ್ಥಿತಿಯತ್ತ ಬಂದಿದೆ ಟೊಮ್ಯಾಟೊ ಬೆಲೆ. ಹೀಗಾಗಿ ಟೊಮ್ಯಾಟೊ ಪ್ರಿಯರು ಖರೀದಿಯತ್ತ ಮುಖ ಮಾಡಿದ್ದಾರೆ.
ಕಳೆದೊಂದು ವಾರದ ಹಿಂದೆ ಹದಿನೈದು ಕೆಜಿ ಬಾಕ್ಸ್ ಟೊಮ್ಯಾಟೊ 2700 ಗಡಿ ದಾಟಿತ್ತು. ಈಗ ಮತ್ತೆ ಮಳೆ ಕಡಿಮೆ ಹಾಗೂ ಟೊಮ್ಯಾಟೊ ಪೂರೈಕೆ ಹೆಚ್ಚಾದ ಹಿನ್ನಲೆ ಬೆಲೆ ಕುಸಿತ ಕಂಡಿದೆ. ಇನ್ನೆರಡು ದಿನದಲ್ಲಿ ಮತ್ತಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸದ್ಯ ಬೆಂಗಳೂರಿನಲ್ಲಿ ಟೊಮ್ಯಾಟೊ ಬೆಲೆ 70 ರೂಪಾಯಿಗೆ ಬಂದಿಳಿದಿದೆ. ಬೆಲೆ ಇಳಿಕೆಯ ಬೆನ್ನಲ್ಲಿ ಟೊಮ್ಯಾಟೊಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ