newsfirstkannada.com

ಮುಂದಿನ ತಿಂಗಳು 60 ರೂಪಾಯಿಗೆ ಟೊಮ್ಯಾಟೋ ಸಿಗುವ ಸಾಧ್ಯತೆ.. ಹೆಚ್ಚಾಗಲಿದೆಯಾ ಈರುಳ್ಳಿ ಬೆಲೆ?  

Share :

05-08-2023

    ಸೆಪ್ಟೆಂಬರ್​ ತಿಂಗಳಲ್ಲಿ 60-70 ಕೆ.ಜಿಗೆ ಸಿಗುವ ಸಾಧ್ಯತೆ

    ಕೆಂಪುರಾಣಿ ಬೆಲೆ ಇಳಿಕೆಯಿಂದ ಜನರಿಗೆ ಫುಲ್​ ಖುಷಿ

    ಮತ್ತೆ ಬೆಲೆ ಹೆಚ್ಚಿಸಿಕೊಳ್ಳಲಿರುವ ಈರುಳ್ಳಿ? ಅಕಾಲಿಕ ಮಳೆ ಕಾರಣವೇ?

ಟೊಮ್ಯಾಟೋ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೀಗ ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ ಕೆಂಪುರಾಣಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಸದ್ಯ ಕೆ.ಜಿಗೆ 100 ರೂಪಾಯಿ ಇದ್ದು, ಸೆಪ್ಟೆಂಬರ್​ ತಿಂಗಳಲ್ಲಿ 60-70  ರೂಪಾಯಿಯತ್ತ ಬರಲಿದೆ ಎಂದು ಅಂದಾಜಿಸಲಾಗಿದೆ.

ಸಂಶೋಧನಾ ಮತ್ತು ವಿಶ್ಲೇಷಣಾ ಸಂಸ್ಥೆಯಾದ ಸಿಆರ್​​​ಐಎಸ್​ಐಎಲ್​ ಪ್ರಕಾರ, ‘ಅಗಸ್ಟ್​ ತಿಂಗಳಲ್ಲಿ ಪೂರೈಕೆ ಮತ್ತು ಬೇಡಿಕೆ ಅಸಮತೋಲನವಾಗುವ ಸಾಧ್ಯತೆ ಇದ್ದು, ಈ ಸಮಯದಲ್ಲಿ ಈರುಳ್ಳಿ ಬೆಲೆಯಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇರಲಿದೆ’ ಎಂದು ಹೇಳಿದೆ.

ಬಳಿಕ, ‘ಸೆಪ್ಟೆಂಬರ್​ ಆರಂಭದಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಗಮನಾರ್ಹ ಬೆಲೆಯತ್ತ ಏರಿಕೆಯಾಗಲಿದೆ. ಹಾಗಾಗಿ ಟೊಮ್ಯಾಟೋ 60-70 ಕೆ.ಜಿಗೆ ತಲುಪಲಿದೆ’ ಎಂದು ಹೇಳಿದೆ.

ಇನ್ನು ಈರುಳ್ಳಿ ಬೆಲೆ ಏರಿಕೆಯಾಗಲು ಎರಡು ಪ್ರಮುಖ ಕಾರಣವನ್ನು ತಿಳಿಸಿದೆ. ಅದರಲ್ಲಿ ಅಕಾಲಿಕ ಮಳೆಯಿಂದಾಗಿ ಮಾರ್ಚ್​ ತಿಂಗಳಿನ ಈರುಳ್ಳಿಯ ಮೇಲೆ ಗಣನೀಯವಾಗಿ ಪರಿಣಾಮ ಬೀರಿದೆ. ಮತ್ತೊಂದೆಡೆ ಕಳೆದ ಆರು ತಿಂಗಳಲ್ಲಿ ಸ್ವಯಂ ಬೆಲೆಯಲ್ಲೂ ಈರುಳ್ಳಿ ಬೇಡಿಕೆ ಕಳೆದುಕೊಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಕಾಣಬಹುದು ಎಂದು ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂದಿನ ತಿಂಗಳು 60 ರೂಪಾಯಿಗೆ ಟೊಮ್ಯಾಟೋ ಸಿಗುವ ಸಾಧ್ಯತೆ.. ಹೆಚ್ಚಾಗಲಿದೆಯಾ ಈರುಳ್ಳಿ ಬೆಲೆ?  

https://newsfirstlive.com/wp-content/uploads/2023/07/Tomato-4.jpg

Load More