15 ದಿನಗಳಿಂದ ಟೊಮ್ಯಾಟೊ ಬೆಲೆಯಲ್ಲಿ ಭಾರೀ ಇಳಿಕೆ
ಟೊಮ್ಯಾಟೊ ಹಣ್ಣನ್ನು ಕೇಳುವವರೇ ಇಲ್ಲ, ಬೇಡಿಕೆಯೂ ಇಲ್ಲ
ಒಂದು ಕೆ.ಜಿ ಟೊಮ್ಯಾಟೋ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ
ಕಳೆದ ತಿಂಗಳಷ್ಟೆ ಕೆಂಪು ರಾಣಿ ಟೊಮ್ಯಾಟೊಗೆ ಬಂಗಾರದ ಬೆಲೆ ಬಂದು ಕೆ.ಜಿ.ಗೆ ನೂರು ರೂಪಾಯಿ ಗಡಿ ದಾಟಿತ್ತು. ಇದರಿಂದ ರೈತರು ಸಂತಸಗೊಂಡಿದ್ರು. ಆದರೆ, ಕಳೆದ 15 ದಿನಗಳಿಂದ ಟೊಮ್ಯಾಟೋ ಬೆಲೆ ಹಂತ ಹಂತವಾಗಿ ಕುಸಿದಿದ್ದು, ಒಂದು ಕೆ.ಜಿ. ಟೊಮ್ಯಾಟೊ ಬೆಲೆ ಕೇವಲ ಹತ್ತು ರೂಪಾಯಿಯಾಗಿದೆ. ಇದರಿಂದ ಚಿಕ್ಕಬಳ್ಳಾಪುರ ನಗರದ ಸಂತೆ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಹಣ್ಣನ್ನು ಕೇಳುವವರೇ ಇಲ್ಲದಂತಾಗಿದ್ದು, ರೈತರು ಕಂಗಲಾಗಿದ್ದಾರೆ.
ಟೊಮೆಟೊ ಗೆ ಬೆಲೆ ಏರಿಕೆ ಇದ್ದಾಗ ಹೆಚ್ಚು ವ್ಯಾಪಾರ ಆಗ್ತಿತ್ತು. ಈಗ ಟೊಮ್ಯಾಟೊ ಬೆಲೆ ಕಡಿಮೆಯಾಗಿದ್ದಕ್ಕೆ ಕೊಳ್ಳುವವರೇ ದಿಕ್ಕಿಲ್ಲ ಅಂತಾ ರೈತರು ಅಳಲು ತೋಡಿಕೊಳ್ತಿದ್ದಾರೆ.
ಅತ್ತ ಗಣೇಶ ಹಬ್ಬ ಬರುತ್ತಿದ್ದು, ಹಣ್ಣುಗಳ ಬೆಲೆಯಲ್ಲೆ ಏರಿಕೆ ಕಂಡಿದೆ. ಮಾತ್ರವಲ್ಲದೆ ಪೂಜಾ ಸಾಮಾಗ್ರಿಗಳ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದಾಗಿದೆ. ಒಟ್ಟಿನಲ್ಲಿ ಆಕಾಶದೆತ್ತರ ಏರಿ ಆ ಬಳಿಕ ಪಾತಾಳಕ್ಕೆ ಕುಸಿದ ಟೊಮ್ಯಾಟೋ ಬೆಲೆ ಮಾತ್ರ ನಂಬಲಸಾಧ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ