ಗ್ರಾಹಕರ ಜೇಬಿಗೆ ಬಿತ್ತು ಕತ್ತರಿ, ತರಕಾರಿ ಬೆಲೆ ಗಗನಕ್ಕೆ
ಜನ ಸಾಮಾನ್ಯರಿಗೆ ತಟ್ಟಿದ ಬೆಲೆ ಏರಿಕೆಯ ಬಿಸಿ
ಮತ್ತಷ್ಟು ತರಕಾರಿ ದರ ಏರಿಕೆಯ ಮುನ್ಸೂಚನೆ
ನವದೆಹಲಿ: ರಾಜ್ಯದಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿದೆ. ಮಳೆ ಕೊರತೆಯಿಂದ ರೈತರು ಕೃಷಿ ಚಟುವಟಿಕೆ ಆರಂಭಿಸಿಲ್ಲ. ಕಾರಣ ಹೂವು-ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ತರಕಾರಿ ಬೆಲೆ ಇನ್ನಷ್ಟು ದುಬಾರಿ ಆಗುವ ನಿರೀಕ್ಷೆ ದಟ್ಟವಾಗಿದ್ದು ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇದೀಗ ದೆಹಲಿಯ ಹಾಗೂ ಉತ್ತರಪ್ರದೇಶದಲ್ಲಿ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ.
ಅತಿ ಕಡಿಮೆ ದರದಲ್ಲಿ ಕೈಗೆ ಸಿಗುತ್ತಿದ್ದ ಟೊಮ್ಯಾಟೋ ಕಳೆದ ಕೆಲ ದಿನಗಳಿಂದ 100ರ ಗಡಿ ದಾಟುತ್ತಿದೆ. ದೆಹಲಿಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಟೊಮ್ಯಾಟೋಗೆ 129 ರೂಪಾಯಿ ಆಗಿದೆ. ಉತ್ತರಪ್ರದೇಶದಲ್ಲಿ 150 ರೂಪಾಯಿಗೆ ಟೊಮ್ಯಾಟೋ ಮಾರಾಟವಾಗುತ್ತಿದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಟೊಮ್ಯಾಟೋ ಬೆಲೆ ಪ್ರತಿ ಕೆಜಿಗೆ 160 ರೂಪಾಯಿಗೆ ಏರಿಕೆಯಾಗಿದೆ. ಹೀಗೆ ದಿನ ಕಳೆದಂತೆ ಟೊಮ್ಯಾಟೋ ಬೆಲೆ ಪ್ರತಿ ಕೆಜಿಗೆ 200 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಇದೀಗ ದಢೀರ್ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ.
ಇನ್ನು, ಉತ್ತರ ಪ್ರದೇಶ ಮೊರಾದಾಬಾದ್‌ನಲ್ಲಿ ಟೊಮ್ಯಾಟೋ ಬೆಲೆ ಕೆಜಿಗೆ 150 ರೂಪಾಯಿ ಆಗಿದ್ದು, ಬೆಲೆ ಏರಿಕೆಯಿಂದ ಗ್ರಾಹಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸರಕಾರ ತರಕಾರಿ ದರವನ್ನು ಕ್ರಮಬದ್ಧಗೊಳಿಸುವಂತೆ ಕೋರುತ್ತೇವೆ ಎಂದು ಅಲ್ಲಿನ ಗ್ರಾಹಕರು ಮನವಿ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ