ಮಾರುಕಟ್ಟೆಯಲ್ಲೀಗ ಟೊಮ್ಯಾಟೋಗಿಲ್ಲ ಡಿಮ್ಯಾಂಡ್
ಟೊಮ್ಯಾಟೋ ಬೆಲೆ ಮತ್ತಷ್ಟು ಇಳಿಕೆಯುವ ಸಾಧ್ಯತೆ
ಗ್ರಾಹಕರಿಗೆ ಗುಡ್ನ್ಯೂಸ್, ಬೆಳೆಗಾರರಿಗೆ ಆತಂಕ..!
ಬೆಂಗಳೂರು: ಜುಲೈ ತಿಂಗಳಲ್ಲಿ ಕೆಂಪು ಸುಂದರಿ ಟಾಕ್ ಜೋರಾಗಿತ್ತು. ಎಲ್ಲೆಲ್ಲೂ ಕೆಂಪು ಚಿನ್ನಕ್ಕೆ ಡಿಮ್ಯಾಂಡ್ ಡಿಮ್ಯಾಂಡ್ ಆಗಿತ್ತು. ಎಷ್ಟರ ಮಟ್ಟಿಗೆ ಕೆಂಪು ರಾಣಿ ಹವಾ ಕ್ರಿಯೇಟ್ ಮಾಡಿದ್ದಳು ಎಂದರೆ ಪೊಲೀಸ್ರು ಟೈಟ್ ಸೆಕ್ಯೂರಿಟಿ ಕೊಡುವಷ್ಟು. ಆದ್ರೆ ಜನ ಮಾತ್ರ ಇದೇ ಕೆಂಪು ಸುಂದರಿಯನ್ನ ನೋಡಿದಾಗಲೆಲ್ಲಾ ಕಣ್ಣೆಲ್ಲಾ ಕೆಂಪಾಗಿಸಿ ನೋಡುತ್ತಿದ್ದರು. ಆದರೀಗ, ಅದೇ ಕೆಂಪು ರಾಣಿ ಗ್ರಾಹಕರಿಗೆ ಹೊಸದಾಗಿ ಗುಡ್ ನ್ಯೂಸ್ ಕೊಟ್ಟಿದ್ದಾಳೆ.
150 ರಿಂದ 160ರ ಗಡಿ ದಾಟಿ ಓಡುತ್ತಿದ್ದ ಕೆಂಪು ರಾಣಿ ತನ್ನ ವೇಗದದ ಮಿತಿಯನ್ನ 70ರಲ್ಲಿ ಮುಂದುವರಿಸಿದ್ದಾಳೆ. ಗ್ರಾಹಕರ ಮುಖದಲ್ಲಿ ಕೊಂಚ ಮಂದಹಾಸ ಮೂಡಿಸಿದ್ದಾಳೆ. ಆದ್ರೆ ಗ್ರಾಹಕರು ರೇಟ್ ಕೇಳ್ತಿದ್ದಾರೆ ಖರೀದಿಸ್ತಿಲ್ಲ ಅನ್ನೋದು ವ್ಯಾಪಾರಸ್ಥರ ಮಾತು.
ಟೊಮ್ಯಾಟೋ ದರ ಇಳಿಕೆ
ವಾರಗಳ ಹಿಂದೆ 15 ಕೆಜಿ ಬಾಕ್ಸ್‌ಗೆ ಗರಿಷ್ಠ 2 ಸಾವಿರದ 700 ವರೆಗೆ ಟೊಮ್ಯಾಟೋ ದರ ಏರಿಕೆಯಾಗಿತ್ತು. ಗುರುವಾರ 1 ಸಾವಿರದ 100 ರೂಪಾಯಿ ಆಗಿದ್ರೆ, ಶುಕ್ರವಾರ 600-800ಕ್ಕೆ ಇಳಿಕೆಯಾಗಿದೆ. ಇನ್ನು ಬೆಂಗಳೂರು ಮಾರುಕಟ್ಟೆಯಲ್ಲಿ ಕಳೆದ ವಾರ ಬಾಕ್ಸ್‌ಗೆ ಗರಿಷ್ಠ 2 ಸಾವಿರದ 200, ಈಗ ಬಾಕ್ಸ್‌ಗೆ 1 ಸಾವಿರದ 400 ರಿಂದ 1 ಸಾವಿರದ 500 ಬೆಲೆಯಾಗಿದೆ.
ಟೊಮ್ಯಾಟೋ ರೇಟ್ ಕಡಿಮೆಯಾಗಲು ಕಾರಣವೇನು?
ಕೆಲ ತಿಂಗಳ ಹಿಂದೆ ರಾಜ್ಯದಲ್ಲಿ ಬೆಳೆಯುತ್ತಿದ್ದ ಟೊಮ್ಯಾಟೋ ಹೆಚ್ಚಾಗಿ ಉತ್ತರ ಭಾರತದೆಡೆಗೆ ಹೋಗುತ್ತಿತ್ತು. ಅದರಿಂದ ಜನರ ಕೈಗೆ ಸೇರೋ ಟೊಮ್ಯಾಟೋ ಬಾಕ್ಸ್ನಲ್ಲಿ ವ್ಯತ್ಯಯ ಕಾಣಿಸುತ್ತಿತ್ತು. ಟೊಮ್ಯಾಟೋ ಸಿಗ್ತಿಲ್ಲ ಅನ್ನೋ ಹಾಗಾಗಿತ್ತು. ಈಗ ರಾಜ್ಯದಿಂದ ಉತ್ತರ ಭಾರತದೆಡೆಗೆ ಹೋಗುವ ಟೊಮ್ಯಾಟೋ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಬೆಲೆ ಇಳಿಕೆ ಕಂಡಿದೆ.
ಅಲ್ಲದೆ ಮುಂದಿನ ತಿಂಗಳಲ್ಲಿ ಕೆಜಿ ಟೊಮ್ಯಾಟೋ 40-50 ಅಥವಾ ಅದಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆ ಇದೆ. ಇದಿಷ್ಟು ಮಾತ್ರವಲ್ಲದೆ ಆಗಸ್ಟ್ ಕೊನೆಯ ವಾರದಲ್ಲಿ ವಿಪರೀತ ಮಳೆಯಾದರೆ ಬೆಳೆ ನಾಶವಾಗುವ ಆತಂಕ ಒಂದು ಕಡೆಯಾದ್ರೆ, ಟೊಮ್ಯಾಟೋ ಬೆಲೆ ಮತ್ತೆ ಹೆಚ್ಚಾಗುವ ಭೀತಿ ಮತ್ತೊಂದು ಕಡೆ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ