newsfirstkannada.com

1KGಗೆ 3 ರೂಪಾಯಿ.. ಡಿಮ್ಯಾಂಡ್​​ ಕಳೆದುಕೊಂಡ ಟೊಮ್ಯಾಟೋ.. ಕೆಂಪು ರಾಣಿ ಕಥೆ ಕೇಳಿ ಕಂಗಾಲಾದ ರೈತರು!

Share :

08-09-2023

    ಮಾರುಕಟ್ಟೆಯಲ್ಲೀಗ ಟೊಮ್ಯಾಟೋಗಿಲ್ಲ ಡಿಮ್ಯಾಂಡ್​​

    ಟೊಮ್ಯಾಟೋ ರೇಟ್​ ಕಡಿಮೆಯಾಗಲು ಕಾರಣವೇನು?

    ಗ್ರಾಹಕರಿಗೆ ಗುಡ್​ನ್ಯೂಸ್​​, ಬೆಳೆಗಾರರಿಗೆ ಆತಂಕ ಶುರು!

ಅಮರಾವತಿ: ಸಮಯ, ಅವಕಾಶ, ಅದೃಷ್ಟ ಈ ಮೂರು ಒಂದು ಗೂಡಿದಾಗ ಮಾತ್ರ ಸಕ್ಸಸ್​​ ಖಚಿತ ಅನ್ನೋದು ಬಲ್ಲವರ ಮಾತು. ಈಗ ಕೆಂಪುರಾಣಿ ಟೊಮ್ಯಾಟೋ ವಿಚಾರದಲ್ಲಿ ಟ್ರೇನ್​ ಹೋದ ಮೇಲೆ ಟಿಕೆಟ್​ ತಗೊಂಡಂಗಾಗಿದೆ ಈ ರೈತರ ಪರಿಸ್ಥಿತಿ. ಕಳೆದ ಎರಡು ತಿಂಗಳ ಕಾಲವಿದ್ದ ಟೊಮ್ಯಾಟೋ ಸುಗ್ಗಿ ಅಂತ್ಯ ಆಗಿದೆ.

ಹೌದು ಕಳೆದ ತಿಂಗಳೂ ಜೂನ್​ನಲ್ಲಿ ಶತಕದ ಗಡಿ ದಾಟಿದ್ದ ಕೆಂಪು ರಾಣಿಗೆ ಚಿನ್ನಕ್ಕೆ ಡಿಮ್ಯಾಂಡ್​ ಡಿಮ್ಯಾಂಡ್​​ ಆಗಿತ್ತು. ಎಲ್ಲಿ ಹೋದರೂ ಪ್ರತಿಯೊಬ್ಬರ ಬಾಯಲ್ಲೂ ಟಮ್ಯಾಟೋ ಬಗ್ಗೆಯೇ ಮಾತುಕತೆ ನಡೀತಾ ಇತ್ತು. ಹಲವು ರಾಜ್ಯಗಳಲ್ಲಿ ಮುಂಗಾರು ಮಳೆ ಅಬ್ಬರದಿಂದ ಟಮ್ಯಾಟೋ ಬೆಳೆ ಹಾಳಾಗಿದ್ದು, ಪೂರೈಕೆಯಲ್ಲಿ ವ್ಯಥ್ಯಯವಾಗಿದೆ. ಹಾಗಾಗಿ ಟಮ್ಯಾಟೋ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿತ್ತು. ದೀಢಿರ್​​​ ಟೋಮ್ಯಾಟೋ ಏರಿಕೆಯಿಂದ ಗ್ರಾಹಕರು ಸಹ ಕಂಗಾಲಾಗಿದ್ದರೆ, ರೈತರು ಫುಲ್​​ ಖುಷಿಯಾಗಿದ್ದರು.

ಇದೀಗ ಟೊಮ್ಯಾಟೋವನ್ನು ಬೆಳೆದಿದ್ದ ಬೆಳೆಗಾರ ಮಾತ್ರ ಈಗ ದರದ ಶಾಕ್​​​ನಲ್ಲಿದ್ದಾನೆ. ಟೊಮ್ಯಾಟೋ ಬೆಲೆ ಇಳಿದಿದ್ದು, ಆಂಧ್ರಪ್ರದೇಶದ ಕರ್ನೂಲ್ ಮತ್ತು ನಂದ್ಯಾಲ್ ಜಿಲ್ಲೆಗಳ ರೈತರು ಟೊಮ್ಯಾಟೋಗಳನ್ನ ರಸ್ತೆಗೆ ಎಸೆದು ಪ್ರತಿಭಟನೆ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ 1 ಕೆಜಿ ಟೊಮ್ಯಾಟೋಗೆ 3 ರೂಪಾಯಿ ಇದ್ದು, ಕಷ್ಟಪಟ್ಟು ಬೆಳೆದ ಬೆಳೆಗೆ ಇಷ್ಟು ಕಡಿಮೆ ಬೆಲೆನಾ ಅಂತ ರೈತರು ಕಣ್ಣೀರಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

1KGಗೆ 3 ರೂಪಾಯಿ.. ಡಿಮ್ಯಾಂಡ್​​ ಕಳೆದುಕೊಂಡ ಟೊಮ್ಯಾಟೋ.. ಕೆಂಪು ರಾಣಿ ಕಥೆ ಕೇಳಿ ಕಂಗಾಲಾದ ರೈತರು!

https://newsfirstlive.com/wp-content/uploads/2023/09/tamato-3.jpg

Load More