newsfirstkannada.com

100 ಅಲ್ಲ, 150 ಅಲ್ಲ.. ಇಂದಿನ ಟೊಮ್ಯಾಟೋ ಬೆಲೆ ಕೇಳಿದ್ರೆ ಪಕ್ಕಾ ಶಾಕ್​​ ಆಗ್ತೀರಾ!

Share :

01-08-2023

  ಟೊಮ್ಯಾಟೋ ಬೆಲೆ ಮತ್ತೆ ಏರಿಕೆ

  ಇಂದಿನ ರೇಟ್​ ಕೇಳಿ ಜನ ಶಾಕ್​!

  ಒಂದು ಕೆಜಿ ಟೊಮ್ಯಾಟೋ ಎಷ್ಟು?​

ಬೆಂಗಳೂರು: ಟೊಮ್ಯಾಟೋ ಬೆಲೆ ಏರಿಕೆ ಕೇಳಿ ಜನ ಪ್ರತೀ ದಿನ ಶಾಕ್​​ ಆಗುತ್ತಿದ್ದಾರೆ. ಈ ಕೆಂಪು ರಾಣಿಯನ್ನು ಖರೀದಿ ಮಾಡಲಾಗದೆ ಜನ ಹತಾಶೆಯಲ್ಲಿದ್ದಾರೆ. ಖರೀದಿ ಮಾಡೋದು ಬಿಡಿ ಮನೆಯಲ್ಲಿ ಅಡುಗೆ ಮಾಡಲು ಟೊಮ್ಯಾಟೋ ಬಳಕೆ ಮಾಡಲು ತಲೆ ಕೆಡಿಸಿಕೊಂಡಿದ್ದಾರೆ. ಇತ್ತೀಚೆಗೆ 100ರ ಗಡಿ ದಾಟಿದ್ದ ಟೊಮ್ಯಾಟೋ ಬೆಲೆ ಈಗ 160ಕ್ಕೇರಿದೆ.

ಹೌದು, ಕಳೆದ ವಾರ 80 ರುಪಾಯಿ ಇದ್ದ ಟೊಮ್ಯಾಟೋ ದರ ಈಗ ಏಕಾಏಕಿ 150 ರಿಂದ 160 ರೂಪಾಯಿ ಆಗಿದೆ. ಇದರ ಪರಿಣಾಮ ಅಡಿಗೆ ಮಾಡುವವರು ತಲೆ ಮೇಲೆ ಕೈ ಇಟ್ಟಂತಾಗಿದೆ. ರಾಜ್ಯದಲ್ಲಿ ಇಳುವರಿ ಕಡಿಮೆಯಾದ್ದರಿಂದ ಹಾಗೂ ಹೊರ ರಾಜ್ಯಗಳಿಂದ ಟೊಮ್ಯಾಟೋ ಪೂರೈಕೆ ಆಗುತ್ತಿರುವುದರಿಂದ ರೇಟ್​ ಡಬಲ್​ ಆಗಿದೆ.

ಒಂದೆಡೆ ರೇಟ್​​ನಿಂದ ಜನರ ಟೊಮ್ಯಾಟೋ ಕಡೆ ಮುಖ ಮಾಡೋದನ್ನೇ ಮರೆತು ಹೋಗಿದ್ದಾರೆ, ಇನ್ನೊಂದೆಡೆ ಮಾರ್ಕೆಟ್​​ನಲ್ಲೂ ಟೊಮ್ಯಾಟೋ ಮರಿಚೀಕೆಯಾಗಿದೆ. ಇದಕ್ಕೆ ಕಾರಣ ಟೊಮ್ಯಾಟೋಗೆ ಇರುವ ಡಿಮ್ಯಾಂಡ್​​.

ಟೊಮ್ಯಾಟೋ ಹಿಂದೆ ಬಿದ್ದು ಜೈಲು ಸೇರಿದ್ರು

ಬಹಳ ದುಬಾರಿಯಾಗಿರೋ ಟೊಮ್ಯಾಟೋ ಹಿಂದೆ ಬಿದ್ದ ಸಾಕಷ್ಟು ಮಂದಿ ಕಂಬಿ ಎಣಿಸುತ್ತಿದ್ದಾರೆ. ಈ ಸುದ್ದಿ ಬಿಸಿ ಆರುವ ಮುನ್ನವೇ ಹೊಸಕೋಟೆಯಲ್ಲಿ ಇಬ್ಬರು ಖದೀಮರು ಕೆಂಪು ಸುಂದರಿಯನ್ನ ಹೈಜಾಕ್‌ ಮಾಡೋಕೆ ಹೋಗಿ ಅಂದರ್​​ ಆಗಿದ್ದಾರೆ. ಕೋಲಾರ ಮೂಲದ ಶಿವಾನಂದ, ಆನಂದ್ ಎಂಬುವರು ಟೊಮ್ಯಾಟೋ ಕದ್ದು ಎಸ್ಕೇಪ್​ ಆಗಿದ್ರು. ಹೀಗೆ ನೂರಾರು ಟೊಮ್ಯಾಟೋ ಕಳವು ಪ್ರಕರಣಗಳು ನಡೆದಿವೆ.

ಒಟ್ಟಾರೆ ಟೊಮ್ಯಾಟೋ ಹಾವು ಏಣಿನ ಆಟ ಮಾರಾಟಗಾರರಿಗೆ ಶುಕ್ರದೆಸೆ ಆದರೆ, ಕೆಂಪು ರಾಣಿ ಪ್ರಿಯರಿಗೆ ಮಾತ್ರ ವಕ್ರದೆಸೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

100 ಅಲ್ಲ, 150 ಅಲ್ಲ.. ಇಂದಿನ ಟೊಮ್ಯಾಟೋ ಬೆಲೆ ಕೇಳಿದ್ರೆ ಪಕ್ಕಾ ಶಾಕ್​​ ಆಗ್ತೀರಾ!

https://newsfirstlive.com/wp-content/uploads/2023/07/Tomatoe-3.jpg-1-3.jpg

Load More