newsfirstkannada.com

ಗ್ರಾಹಕರಿಗೆ ಸಿಹಿ ಸುದ್ದಿ.. ಬಂಗಾರದಂತಿದ್ದ ಟೊಮ್ಯಾಟೋ ಬೆಲೆ ದಿಢೀರ್ ಇಳಿಕೆ; ಕೋಲಾರದಲ್ಲಿ 1 ಕೆಜಿಗೆ ಎಷ್ಟು ಗೊತ್ತಾ?

Share :

09-08-2023

    ಗಗನಮುಖಿಯಾಗಿದ್ದ ಟೊಮ್ಯಾಟೋ ಬೆಲೆ ದಿಢೀರ್‌​​ ಇಳಿಕೆ

    ಟೊಮ್ಯಾಟೋ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆ

    ಏಕಾಏಕಿ ಟೊಮ್ಯಾಟೋ ಬೆಲೆ ಇಳಿಕೆಗೆ ಬೆಳೆಗಾರರು ಕಂಗಾಲು

ಕೋಲಾರ: ದೇಶಾದ್ಯಂತ ಟೊಮ್ಯಾಟೋಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಜಾಸ್ತಿ ಆಗಿತ್ತು. ಪ್ರತಿ ಕೆಜಿಗೆ 100, 150, 200 ರೂಪಾಯಿ ದಾಟಿರೋ ಕೆಂಪು ರಾಣಿಯ ಬಲೆಯಲ್ಲಿ ದಿಢೀರ್​ ಕುಸಿತ ಕಂಡಿದೆ. ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ದಿನ ಕಳೆದಂತೆ ಗಗನಕ್ಕೇರಿತ್ತು. ಹೀಗಾಗಿ ಟೊಮ್ಯಾಟೋ ಬೆಲೆ ಏರಿಕೆಯಿಂದ ರೈತರು ಫುಲ್​​ ಖುಷಿಯಲ್ಲಿದ್ದರು. ಇದೀಗ ದಾಖಲೆ ಬೆಲೆಯಲ್ಲಿ ಮಾರಾಟವಾಗಿದ್ದ ಟೊಮ್ಯಾಟೋ ಬೆಲೆ ದಿಢೀರ್ ಇಳಿಕೆಯಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಕಳೆದ ಒಂದು ವಾರದ ಹಿಂದೆ 15 ಕೆಜಿ ಟೊಮ್ಯಾಟೋ ಬಾಕ್ಸ್‌ಗೆ 2500 ರಿಂದ 2700 ರೂಪಾಯಿಗೆ ಮಾರಾಟವಾಗಿತ್ತು. ಅಂದ್ರೆ 1 ಕೆಜಿಗೆ 170 ರಿಂದ 180 ರೂಪಾಯಿವರೆಗೂ ಏರಿಕೆಯಾಗಿತ್ತು. ಕೋಲಾರದ‌ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಟೊಮ್ಯಾಟೋ ಬಾಕ್ಸ್‌ಗೆ 1000 ರೂಪಾಯಿಗೆ ಮಾರಾಟವಾಗಿದೆ. ಅಂದ್ರೆ ಬರೀ 66 ರೂಪಾಯಿಗೆ ಇಳಿಕೆಯಾಗಿದೆ. ಒಂದೇ ಒಂದು ವಾರದಲ್ಲಿ 15 ಕೆಜಿ ಟೊಮ್ಯಾಟೋ ಬಾಕ್ಸ್​ಗಳ ಬೆಲೆಯಲ್ಲಿ ಭಾರೀ ಕಡಿಮೆ ಆಗಿದೆ. ಕೋಲಾರ ಸೇರಿದಂತೆ ಆಂಧ್ರ ಪ್ರದೇಶ ಮತ್ತು ಬೇರೆ ಬೇರೆ ರಾಜ್ಯಗಳಿಂದ ಟೊಮ್ಯಾಟೋ ಯಥೇಚ್ಛವಾಗಿ ಬರುತ್ತಿದೆ. ಆದರೆ ಇದೇ ವೇಳೆ ಟೊಮ್ಯಾಟೋ ಬೆಲೆಯಲ್ಲಿ ದಿಢೀರ್​​ ಇಳಿಕೆ ಕಂಡು ಬಂದಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ. ಅಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿದ್ದರಿಂದ ಅಲ್ಲಿನ ವ್ಯಾಪಾರಿಗಳು ಟೊಮ್ಯಾಟೋ ಖರೀದಿ ಮಾಡುತ್ತಿಲ್ಲ. ಹೀಗಾಗಿ ಟೊಮ್ಯಾಟೋ ಬೆಲೆ ಒಂದೇ ಸಮನೆ ಕುಸಿಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗ್ರಾಹಕರಿಗೆ ಸಿಹಿ ಸುದ್ದಿ.. ಬಂಗಾರದಂತಿದ್ದ ಟೊಮ್ಯಾಟೋ ಬೆಲೆ ದಿಢೀರ್ ಇಳಿಕೆ; ಕೋಲಾರದಲ್ಲಿ 1 ಕೆಜಿಗೆ ಎಷ್ಟು ಗೊತ್ತಾ?

https://newsfirstlive.com/wp-content/uploads/2023/07/tamato-2-1.jpg

Load More