newsfirstkannada.com

ಟೊಮ್ಯಾಟೊ ತಿನ್ನೋದು ಬಿಟ್ರೆ ಬೆಲೆ ಏರಿಕೆ ಕುಸಿಯುತ್ತೆ.. ಬಿಜೆಪಿ ಸಚಿವೆಯ ಈ ಟಿಪ್ಸ್ ಸಖತ್ ವೈರಲ್‌!

Share :

24-07-2023

    ಮನೆಯ ಗಾರ್ಡನ್​ನಲ್ಲಿ ಟೊಮ್ಯಾಟೊ, ತರಕಾರಿ ಬೆಳೆಯಿರಿ

    ಯಾವ ವಸ್ತುವಿನ ಬೆಲೆ ಅಧಿಕ ಇರುತ್ತೋ ಅದನ್ನು ಬಳಸಬೇಡಿ

    ಟೊಮ್ಯಾಟೊ ಬದಲಿಗೆ ಜನರು ನಿಂಬೆಹಣ್ಣು ಬಳಸಬೇಕಂತೆ

ಲಕ್ನೊ: ಇತ್ತೀಚೆಗೆ ಮಾರ್ಕೆಟ್​ನಲ್ಲಿ ಗ್ರಾಹಕರ ಕಣ್ಣುಗಳನ್ನು ಟೊಮ್ಯಾಟೊ ಕೆಂಪಾಗಿಸಿದೆ. ತಿಂಗಳು ಆಗುತ್ತಾ ಬಂದರೂ ನಾನೇನು ಕೆಳಗೆ ಇಳಿಯಲ್ಲವೆಂದು 100 ರೂಪಾಯಿಯ ಮೇಲೆ ಟಮ್ಯಾಟೊ ಕುಣಿದಾಡುತ್ತಾ ಇದೆ. ಸದ್ಯ ಈ ಟೊಮ್ಯಾಟೊಗೆ ಟಕ್ಕರ್​ ಕೊಡಲು ಉತ್ತರ ಪ್ರದೇಶದ ಮಹಿಳಾ ಮಿನಿಸ್ಟರ್​ ಒಬ್ಬರು ಜನರಿಗೆ ಒಂದು ಐಡಿಯಾ ಕೊಟ್ಟಿದ್ದಾರೆ. ಈ ಐಡಿಯಾಕ್ಕೆ ಕಾಂಗ್ರೆಸ್​ ಆಕ್ರೋಶ ವ್ಯಕ್ತಪಡಿಸಿದೆ.

ಉತ್ತರಪ್ರದೇಶದ ಬಿಜೆಪಿ ಸಚಿವೆಯಾಗಿರುವ ಪ್ರತಿಭಾ ಶುಕ್ಲಾ ಅವರು, ಜನರು ಅಡುಗೆಯಲ್ಲಿ ಟೊಮ್ಯಾಟೊ ಬಳಕೆ ಮಾಡುವುದು ನಿಲ್ಲಿಸಿದರೆ ಬೆಲೆ ಕಡಿಮೆಯಾಗುತ್ತದೆ. ಯಾವ ವಸ್ತುವಿನ ಬೆಲೆ ಅಧಿಕವಾಗಿರುತ್ತೋ ಅದರ ಬಳಕೆ ಕಡಿಮೆ ಮಾಡಿ, ಟೊಮ್ಯಾಟೊ ಬದಲಿಗೆ ನಿಂಬೆಹಣ್ಣು ಅನ್ನು ಅಡುಗೆಯಲ್ಲಿ ಬಳಸಿ ಎಂದು ಹೇಳಿದ್ದಾರೆ.

ಸೀಸನ್​ಗೆ ತಕ್ಕಂತೆ ಬೆಲೆಗಳು ಏರಿಳಿತವಾಗುವುದು ಸಾಮಾನ್ಯ. ಪ್ರತಿ ಸಮಸ್ಯೆಗೆ ಪರಿಹಾರ ಇರುತ್ತದೆ. ಟೊಮ್ಯಾಟೊ ತಿನ್ನುವುದನ್ನು ನಿಲ್ಲಿಸಿದರೆ ಬೆಲೆ ಅದಾಗೇ ಕುಸಿಯಲಿದೆ. ಇನ್ನು ಮನೆಯಲ್ಲಿನ ಗಾರ್ಡನ್​, ಪಾಟ್​ಗಳಲ್ಲಿ ಟೊಮ್ಯಾಟೊ ಜತೆಗೆ ತರಕಾರಿ ಬೆಳೆಯುವುದನ್ನು ಜನರು ರೂಡಿಸಿಕೊಳ್ಳಬೇಕು ಎಂದಿದ್ದಾರೆ.

ಇಂತಹ ಹೇಳಿಕೆ ನೀಡಿದ ಬಿಜೆಪಿ ಸಚಿವೆಯನ್ನ ಕಾಂಗ್ರೆಸ್​ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗಾದ್ರೆ ಬೆಲೆ ಇಳಿಸಲು ಬಿಜೆಪಿ ಸರ್ಕಾರದಿಂದ ಸಾಧ್ಯವೇ ಇಲ್ಲ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್​ ಕಿಡಿ ಕಾರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೊಮ್ಯಾಟೊ ತಿನ್ನೋದು ಬಿಟ್ರೆ ಬೆಲೆ ಏರಿಕೆ ಕುಸಿಯುತ್ತೆ.. ಬಿಜೆಪಿ ಸಚಿವೆಯ ಈ ಟಿಪ್ಸ್ ಸಖತ್ ವೈರಲ್‌!

https://newsfirstlive.com/wp-content/uploads/2023/07/UP_PRATIBHA_SUKLA.jpg

Load More