newsfirstkannada.com

ಬೆಂಗಳೂರಲ್ಲಿ ಟೊಮ್ಯಾಟೋ ಬೆಲೆಯಲ್ಲಿ ಭಾರೀ ಏರಿಕೆ.. ಒಂದೇ ವಾರದಲ್ಲಿ ಮೂರು ಪಟ್ಟು ಹೆಚ್ಚಳ..!

Share :

26-06-2023

  ಬೆಲೆ ನೋಡಿ ಹೆದರಿ ವಾಪಸ್ ಹೋಗ್ತಿರುವ ಜನ

  K.R.ಮಾರುಕಟ್ಟೆಯಲ್ಲಿ ಹೋಲ್ ಸೇಲ್ ಬೆಲೆ ಎಷ್ಟು..?

  ದಿಢೀರ್ ಬೆಲೆ ಏರಿಕೆಗೆ ಕಾರಣ ಏನು ಗೊತ್ತಾ..?

ಬೆಂಗಳೂರು: ಗ್ಯಾರಂಟಿ ಖುಷಿ ನಡುವೆ ಬೆಂಗಳೂರು ಮಂದಿಗೆ ಬೆಲೆ ಏರಿಕೆ ಶಾಕ್ ಆಗಿದೆ. ಒಂದೇ ವಾರದಲ್ಲಿ ತರಕಾರಿಗಳ ಬೆಲೆ ದುಪ್ಪಟ್ಟು ಆಗಿದ್ದು, ಮನೆಯ ಯಜಮಾನರು ಕಂಗಾಲ್ ಆಗಿದ್ದಾರೆ.

ಅಂದಹಾಗೆ ಒಂದೇ ವಾರದಲ್ಲಿ ಟೊಮ್ಯಾಟೋ ರೇಟ್ ಮೂರು ಪಟ್ಟು ಹೆಚ್ಚಳವಾಗಿದೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ನೂರರ ಸನಿಹಕ್ಕೆ ಟೊಮ್ಯಾಟೋ ದರ ತಲುಪಿದೆ. ಇಂದು ಒಂದು ಕೆ.ಜಿಗೆ 80 ರಿಂದ 90 ರೂಪಾಯಿ ಇದೆ. ಕಳೆದ ವಾರ ಒಂದು ಕೆ.ಜಿಗೆ ಕೇವಲ 20 ರಿಂದ 30 ರೂಪಾಯಿ ಇತ್ತು.

ಇತರೆ ರಾಜ್ಯಗಳಲ್ಲಿ ಭಾರೀ ಮಳೆ ಹಿನ್ನೆಲೆ ರಾಜ್ಯದ ಟೊಮ್ಯಾಟೋಗೆ ಡಿಮ್ಯಾಂಡ್ ಬಂದಿದೆ. ರಾಜ್ಯದ ಟೊಮ್ಯಾಟೋ ಬೇರೆ ರಾಜ್ಯಗಳಿಗೆ ರಫ್ತು ಆಗುತ್ತಿದೆ. ಇದೇ ಮೊದಲ ಬಾರಿಗೆ ರಾಜ್ಯದ ಟೊಮ್ಯಾಟೋ ಬಾಂಗ್ಲಾಕ್ಕೆ ರಫ್ತಾಗಿದೆ.

ಯಶವಂತಪುರ ಮಾರುಕಟ್ಟೆ

 • ನಿನ್ನೆ : ಒಂದು ಟೊಮ್ಯಾಟೋ ಕೆಜಿಗೆ 70 ರಿಂದ 80 ರೂಪಾಯಿ
 • ಇವತ್ತು: ಒಂದು ಟೊಮ್ಯಾಟೋ ಕೆಜಿಗೆ 90 ರೂಪಾಯಿ

ಕೆ.ಆರ್​.ಮಾರುಕಟ್ಟೆ

 • ನಿನ್ನೆ : ಒಂದು ಟೊಮ್ಯಾಟೋ ಕೆಜಿಗೆ 80 ರೂಪಾಯಿ
 • ಇವತ್ತು: ಒಂದು ಟೊಮ್ಯಾಟೋ ಕೆಜಿಗೆ 100 ರೂಪಾಯಿ

ಒಂದೇ ದಿನ 20ಕ್ಕೂ ಹೆಚ್ಚು ರೂಪಾಯಿ ಏರಿಕೆ ಕಂಡಿದೆ. ಕಳೆದ ವಾರ 20 ರಿಂದ 30 ರೂಪಾಯಿಗೆ ಸೆಲ್ ಆಗುತ್ತಿತ್ತು. ಎರಡು ದಿನ‌‌ದ ಹಿಂದೆ ಕೆಜಿಗೆ 50 ರೂಪಾಯಿ ಇತ್ತು. ಇದು ಹೋಲ್ ಸೇಲ್ ದರವಾಗಿದ್ದು, ಕೆಲವು ಅಂಗಡಿಗಳಲ್ಲಿ 130 ರೂಪಾಯಿಗೆ ಮಾರಾಟ ಮಾಡಲಾಗ್ತಿದೆ. ಇನ್ನು ಕೆಲವರು ಟೊಮ್ಯಾಟೋ ದರ ಏರಿಕೆ ಹಿನ್ನೆಲೆಯಲ್ಲಿ ಕೊಂಡುಕೊಳ್ಳದೇ ವಾಪಸ್ ಹೋಗ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಟೊಮ್ಯಾಟೋ ಬೆಲೆಯಲ್ಲಿ ಭಾರೀ ಏರಿಕೆ.. ಒಂದೇ ವಾರದಲ್ಲಿ ಮೂರು ಪಟ್ಟು ಹೆಚ್ಚಳ..!

https://newsfirstlive.com/wp-content/uploads/2023/06/TOMOTO.jpg

Load More