newsfirstkannada.com

ಎರಡು ಬಾರಿ 25 ಕೆ.ಜಿ ಕದ್ದಿದ್ದ.. 3ನೇ ಬಾರಿ ಬಂದವ ಸಿಕ್ಕಿಬಿದ್ದ! ಇದು ಟೊಮ್ಯಾಟೋ ಕಳ್ಳನ ಕಥೆ

Share :

01-08-2023

    ರಾಜ್ಯದಲ್ಲಿ ಗಗನಕ್ಕೇರಿದ ಟೊಮ್ಯಾಟೋ ಬೆಲೆ

    ಬೆಳ್ಳಂ ಬೆಳಗ್ಗೆ 5.30 ರ ಸುಮಾರಿಗೆ ಕದಿಯಲು ಬಂದವ ಸಿಕ್ಕಿಬಿದ್ದ

    112ಗೆ ಕರೆ ಮಾಡಿ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಚಿಕ್ಕೋಡಿ: ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಮತ್ತೊಂದೆಡೆ ಕರ್ನಾಟಕದಲ್ಲಿ ಟೊಮ್ಯಾಟೋ ಅಭಾವದಿಂದ ಹೊರ ರಾಜ್ಯದಿಂದ ಆಮದು ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ರಾಜ್ಯದ ಕೆಲವೆಡೆ ಟೊಮ್ಯಾಟೋ ಬೆಳೆಯುವ ರೈತರು ಅದನ್ನು ಕಾಯಲು ತಲೆಕೆಡಿಸಿಕೊಂಡಿದ್ದಾರೆ. ಹೀಗಿರುವಾಗ ಕಳ್ಳನೊಬ್ಬ ರೈತ ಬೆಳೆದ ಟೊಮ್ಯಾಟೋ ಕದಿಯಲು ಹೋಗಿ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ.

25 ಕೆ.ಜಿಯ 200 ಟ್ರೆ ಕಳ್ಳತನ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದಲ್ಲಿ ರೈತ ಕುಮಾರ ಅಲಗೌಂಡ ಗೂಡೋಡಗಿ ಬೆಳೆದ ಟೊಮ್ಯಾಟೋವನ್ನು ಕದಿಯಲು ಹೋಗಿ ಕಳ್ಳ ಭುಜಪ್ಪ ಗಾಣೀಗೇರ ತಗಲಾಕಿಕೊಂಡಿದ್ದಾನೆ. ಕಳೆದ ಎರಡು‌ ಬಾರಿ 25 ಕೆ.ಜಿಯ 200 ಟ್ರೆ ಟೊಮ್ಯಾಟೋ ಕಳ್ಳತನವಾಗಿತ್ತು. ಇದರಿಂದ ಕುಮಾರ ಅಲಗೌಂಡ ಗೂಡೋಡಗಿ ಎಚ್ಚೆತ್ತುಕೊಂಡಿದ್ದ.

ಅರ್ಧ ಏಕರೆ ಟೊಮ್ಯಾಟೋ ಬೆಳೆದಿದ್ದ ರೈತ

ಕುಮಾರ ಅಲಗೌಂಡ ಗೂಡೋಡಗಿ ಯಲ್ಪಾರಟ್ಟಿ ಗ್ರಾಮದಲ್ಲಿ ಅರ್ಧ ಏಕರೆ ಟೊಮ್ಯಾಟೋ ಬೆಳೆದಿದ್ದ. ಆದರೆ ಟೊಮ್ಯಾಟೊ ಕಳ್ಳತನ ಮಾಡುವಾಗ ಕುಮಾರ ಕೈಯಲ್ಲಿ ರೆಡ್ ಹ್ಯಾಂಡಾಗಿ ಭುಜಪ್ಪ ಗಾಣೀಗೇರ ಸಿಕ್ಕಿಬಿದ್ದಿದ್ದಾನೆ.

ಇನ್ನು ಸಿಕ್ಕಿಬಿದ್ದ ಕಳ್ಳ ಯಲ್ಪಾರಟ್ಟಿಯ ಪಕ್ಕದ ಗ್ರಾಮದ ಸಿದ್ದಾಪೂರ ನಿವಾಸಿಯಾಗಿದ್ದಾನೆ. ಇಂದು ಬೆಳ್ಳಂ ಬೆಳಗ್ಗೆ 5.30 ರ ಸುಮಾರಿಗೆ ಕಳ್ಳತನ ಮಾಡುವಾಗ ಸಿಕ್ಕಿ ಬಿದ್ದಿದ್ದಾನೆ. ಬಳಿಕ  ಸ್ಥಳೀಯರು ಕಳ್ಳನನ್ನು 112 ಗೆ ಕರೆ ಮಾಡಿ ಪೋಲಿಸರಿಗೆ ಒಪ್ಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎರಡು ಬಾರಿ 25 ಕೆ.ಜಿ ಕದ್ದಿದ್ದ.. 3ನೇ ಬಾರಿ ಬಂದವ ಸಿಕ್ಕಿಬಿದ್ದ! ಇದು ಟೊಮ್ಯಾಟೋ ಕಳ್ಳನ ಕಥೆ

https://newsfirstlive.com/wp-content/uploads/2023/08/Tomato-1.jpg

Load More