newsfirstkannada.com

WATCH: ಪ್ರಯಾಣಿಕರೇ ಎಚ್ಚರ.. ನಾಳೆ ಬೆಂಗಳೂರು ಬಂದ್‌ ಹೇಗಿರುತ್ತೆ? ಆಟೋ, ಟ್ಯಾಕ್ಸಿ ಚಾಲಕರ ಪ್ಲಾನ್ ಏನು?

Share :

10-09-2023

  ಱಲಿಯಲ್ಲಿ 10 ಸಾವಿರಕ್ಕೂ ಹೆಚ್ಚು ಚಾಲಕರು ಭಾಗಿಯಾಗೋ ಸಾಧ್ಯತೆ

  ಇವತ್ತು ಮಧ್ಯರಾತ್ರಿಯಿಂದಲೇ ಖಾಸಗಿ ಸಾರಿಗೆಯ ಸೇವೆಗಳು ಸ್ಥಗಿತ

  ನಾಳೆ ಬೆಳಗ್ಗೆ ಸಂಪೂರ್ಣವಾಗಿ ಸ್ತಬ್ಧವಾಗಲಿದೆಯಾ ರಾಜ್ಯ ರಾಜಧಾನಿ?

ನಾಳೆ ಬೆಳಗ್ಗೆ ಆಟೋ, ಟ್ಯಾಕ್ಸಿ, ಖಾಸಗಿ ಸಾರಿಗೆ ಸಂಸ್ಥೆಯ ಚಾಲಕರು ಇಡೀ ಬೆಂಗಳೂರಿಗೆ ಅಷ್ಟ ದಿಗ್ಬಂಧನ ಹಾಕಲಿದ್ದಾರೆ. ನಾಲ್ಕೂ ದಿಕ್ಕುಗಳಿಂದ ಸಿಲಿಕಾನ್‌ ಸಿಟಿಗೆ ಲಗ್ಗೆ ಇಡೋ ಚಾಲಕರು, ಮೆರವಣಿಗೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ಲಾನ್​ ಮಾಡಿದ್ದಾರೆ. ನೆಲಮಂಗಲ, ವೈಟ್ ಫೀಲ್ಡ್, ಕೆಂಗೇರಿ, ಕೆಆರ್ ಪುರಂ, ಹೆಬ್ಬಾಳದಿಂದ ದೊಡ್ಡಮಟ್ಟದ ಱಲಿಗೆ ಚಾಲಕರು ಮುಂದಾಗಿದ್ದಾರೆ. ಒಂದು ವೇಳೆ ಱಲಿಯನ್ನ ಪೊಲೀಸರು ಹತ್ತಿಕ್ಕುವ ಪ್ರಯತ್ನ ಮಾಡಿದ್ರೆ, ಸ್ಥಳದಲ್ಲೇ ರಸ್ತೆ ತಡೆದು ಪ್ರತಿಭಟಿಸಲು ಚಾಲಕರು ಪ್ಲಾನ್​​ ಮಾಡಿಕೊಂಡಿದ್ದಾರೆ.

ಇದನ್ನು ಓದಿ: ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಮಿಲನ ಸೀರಿಯಲ್​​ ನಟ; ಪ್ರಶಾಂತ್ ಭಾರದ್ವಾಜ್ ಹೃದಯ ಕದ್ದ ಹುಡುಗಿ ಯಾರು?

ನಾಳೆ ಖಾಸಗಿ ವಾಹನಗಳ ಚಾಲಕರು ಬೆಂಗಳೂರಿನಲ್ಲಿ ಱಲಿ ನಡೆಸಲು ಪ್ಲಾನ್​ ಮಾಡಿದ್ದು, ಇದರಿಂದ ಜನ ಸಾಮಾನ್ಯರಿಗೆ ತೊಂದರೆ ಆಗದಂತೆ ಕ್ರಮಕ್ಕೆ ಪೊಲೀಸರು ಅಲರ್ಟ್​ ಆಗಿದ್ದಾರೆ. ನಾಳೆಯ ಬೆಂಗಳೂರು ಬಂದ್​ ಸಂಬಂಧ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ನೇತೃತ್ವದ ಸಭೆ ನಡೆಸಲಾಗಿದೆ. ಱಲಿಯಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆ ಇದ್ದು, ಬೆಂಗಳೂರಿನಾದ್ಯಂತ ಹೈ ಅಲರ್ಟ್ ಆಗಿರಲು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇನ್ನು, ನಾಳೆಯ ಬಂದ್​​ಗೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಬಸ್ ಮಾಲೀಕರ ಸಂಘ ಬೆಂಬಲ ಸೂಚಿಸಲು ನಿರಾಕರಿಸಿದೆ. ಈಗಾಗಲೇ ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತೇವೆಂದು ಭರವಸೆ ನೀಡಿದೆ. ಹೀಗಾಗಿ ನಾಳೆ ನಗರಲ್ಲಿ ಸ್ಟೇಜ್ ಕ್ಯಾರೇಜ್ ಬಸ್​​ಗಳು ಎಂದಿನಂತೆ ಓಡಾಡಲಿವೆ ಅಂತಾ ಸಂಘದ ಜನರಲ್ ಸೆಕ್ರೆಟರಿ ಜ.ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.

ಬೆಂಗಳೂರು ಬಂದ್ ರೂಪುರೇಷೆ ಹೇಗಿರುತ್ತದೆ?

 • ಫ್ರೀಡಂ ಪಾರ್ಕ್​ನಲ್ಲಿ ಶಕ್ತಿ ಪ್ರದರ್ಶನಕ್ಕೆ ತಯಾರಿ
 • ಇವತ್ತು ಮಧ್ಯರಾತ್ರಿಯಿಂದಲೇ ಖಾಸಗಿ ಸಾರಿಗೆ ಸ್ತಬ್ಧ
 • ಸೋಮವಾರ ಮಧ್ಯರಾತ್ರಿಯವರೆಗೂ ವಾಹನ ಇರಲ್ಲ
 • ಏರ್​ಪೋರ್ಟ್ ಟ್ಯಾಕ್ಸಿಯನ್ನೂ ಸಂಪೂರ್ಣ ಸ್ಥಗಿತಗೊಳಿಸುವುದು
 • ನಗರದ ಒಳಗೆ ಬೃಹತ್ ಮೆರವಣಿಗೆ ಮಾಡುವುದಕ್ಕೆ ಪ್ಲಾನ್
 • ಪ್ರತಿಭಟನೆ, ಮೆರವಣಿಗೆಯಲ್ಲಿ ಬೇರೆ ಜಿಲ್ಲೆಗಳ ಚಾಲಕರಿಗೂ ಮನವಿ
 • 3 ಲಕ್ಷ ಆಟೋ, 1.5 ಲಕ್ಷ ಟ್ಯಾಕ್ಸಿ, 20 ಸಾವಿರ ಗೂಡ್ಸ್ ವಾಹನಗಳು ಸ್ಥಗಿತ
 • 5 ಸಾವಿರಕ್ಕೂ ಹೆಚ್ಚು ಶಾಲಾ ವಾಹನ, 80 ಸಾವಿರ ಸಿಟಿ ಟ್ಯಾಕ್ಸಿಗಳು ಸ್ಥಗಿತ
 • ಕಾರ್ಪೊರೇಟ್ ಕಂಪನಿ ಬಸ್​ಗಳ ಸೇವೆಯೂ ಸಂಪೂರ್ಣವಾಗಿ ಸ್ಥಗಿತ

 ಖಾಸಗಿ ವಾಹನಗಳ ಬಂದ್​​ ಮಧ್ಯೆ ಏನೆಲ್ಲಾ ಸೇವೆ ಇರುತ್ತವೆ..? 

 • ಕೆಎಸ್​ಆರ್​ಟಿಸಿ ಬಸ್ ಸೇವೆ
 • ನಗರದಲ್ಲಿ ಬಿಎಂಟಿಸಿ ಬಸ್ ಸೇವೆ
 • ರೈಲುಗಳ ಸಂಚಾರ ಇರುತ್ತದೆ
 • ಮೆಟ್ರೋ ರೈಲು ಸಂಚಾರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಪ್ರಯಾಣಿಕರೇ ಎಚ್ಚರ.. ನಾಳೆ ಬೆಂಗಳೂರು ಬಂದ್‌ ಹೇಗಿರುತ್ತೆ? ಆಟೋ, ಟ್ಯಾಕ್ಸಿ ಚಾಲಕರ ಪ್ಲಾನ್ ಏನು?

https://newsfirstlive.com/wp-content/uploads/2023/09/band-1.jpg

Load More