ಇಂಡೋ-ಪಾಕ್ ಕದನದತ್ತ ವಿಶ್ವದ ಚಿತ್ತ..!
ಭಾರತ-ಪಾಕ್ ಪಂದ್ಯವೆಂದ್ರೆ ಭರಪೂರ ಮನರಂಜನೆ
ಹೆಚ್ಚಿದ ಹೃದಯ ಬಡಿತ.. ನಾಳೆ ರೋಚಕ ಹಣಾಹಣಿ
ಭಾರತ-ಪಾಕ್ ಪಂದ್ಯವೆಂದ್ರೆ ಭರಪೂರ ಮನರಂಜನೆ ಫಿಕ್ಸ್.! ಬದ್ಧವೈರಿಗಳ ನಡುವಿನ ಕದನದಿಂದ ಸಿಗುವಷ್ಟು ಎಂಟರ್ಟೈನ್ಮೆಂಟ್ ಮತ್ಯಾವ ಪಂದ್ಯದಲ್ಲೂ ನೋಡಲು ಸಾಧ್ಯವಿಲ್ಲ. ಯಾವಾಗ ಮುಖಾಮುಖಿಯಾದ್ರು, ಅಭಿಮಾನಿಗಳಲ್ಲಿ ಇನ್ನಿಲ್ಲದ ಕ್ರೇಜ್ ಮನೆ ಮಾಡಿರುತ್ತೆ. ಪ್ರತಿ ಬ್ಯಾಟಲ್ ವೇಳೆ ಇಂಡೋ-ಪಾಕ್ ಪಂದ್ಯಕ್ಕೆ ಇಷ್ಟೆಲ್ಲಾ ಹೈಪ್ ಕ್ರಿಯೇಟ್ ಆಗೋದಾದ್ರು ಏಕೆ.? ಆ ಕುರಿತ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ ನೋಡಿ.
ಕೊನೆಗೂ ಆ ಬಿಗ್ ಮೂಮೆಂಟ್ ಬಂದೇ ಬಿಡ್ತು. ಕೆಲಸಕ್ಕೆ ಚಕ್ಕರ್ ಹಾಕಿ ಟಿವಿ ಮುಂದೆ ಕೂತು ಅಸಲಿ ಮಜಾ ಸವಿಯುವ ಆ ಮೆಗಾ ಬ್ಯಾಟಲ್ ಬಂದೇ ಬಿಡ್ತು. ಮೋಸ್ಟ್ ಥ್ರಿಲ್ಲಿಂಗ್ & ಮೋಸ್ಟ್ ಅವೇಟೆಡ್ ಇಂಡೊ-ಪಾಕ್ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ನಾಳೆ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ಉಣಬಡಿಸಲು ಇಂಡೋ-ಪಾಕ್ ಟೀಮ್ಸ್ ಸಜ್ಜಾಗಿವೆ.
ಇಂಡೋ-ಪಾಕ್ ಪಂದ್ಯವೆಂದ್ರೆ ಅದು ಜಸ್ಟ್ ಗೇಮ್ ಅಲ್ಲ. ಅದೊಂದು ಸೇಡಿನ ಮಹಾಸಮರ. ಕ್ರಿಕೆಟ್ ಆರಾಧಕರ ಹೃದಯ ಬಡಿತ ಹೆಚ್ಚಿಸುವ ಎಕ್ಸೈಟಿಂಗ್ ಗೇಮ್. ಇಂಡೋ-ಪಾಕ್ ಯಾವಾಗ್ಲೇ ಮುಖಾಮುಖಿ ಆಗ್ಲಿ. ಅಪಾರ ನಿರೀಕ್ಷೆ ಮನೆ ಮಾಡಿರುತ್ತೆ. ಯಾರ ಬಾಯಲ್ಲಿ ನೋಡಿದ್ರು ಈ ಪಂದ್ಯದ್ದೆ ಜಪ. ಇದು ಬರೀ ಈ ಬಾರಿಯ ಕಥೆಯಲ್ಲ. ಸಾಂಪ್ರದಾಯಿಕ ಎದುರಾಳಿಗಳು ಎದುರಾಗಲೆಲ್ಲಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿರುತ್ತೆ. ಅಷ್ಟಕ್ಕೂ ಭಾರತ-ಪಾಕ್ ಪಂದ್ಯ ಪ್ರತಿ ಸಲ ಮಹತ್ವ ಪಡೆಯೋದ್ಯಾಕೆ ಅನ್ನೋದನ್ನ ಹೇಳ್ತಿವಿ ಕೇಳಿ.
ರೀಸನ್ ನಂ.1: ದ್ವಿಪಕ್ಷೀಯ ಸರಣಿ ಆಡಲ್ಲ
ಭಾರತ-ಪಾಕ್ ನಡುವೆ ದ್ವಿಪಕ್ಷಿಯ ಸರಣಿ ನಡೆಯದೇ ದಶಕಗಳೇ ಉರುಳಿವೆ. 2012-13 ರಲ್ಲಿ ಕೊನೆಯ ಬಾರಿ ಮುಖಮುಖಿಯಾಗಿದ್ವು. ಆ ಬಳಿಕ ಬದ್ಧವೈರಿಗಳು ದ್ವಿಪಕ್ಷೀಯ ಸರಣಿ ಆಡೇ ಇಲ್ಲ. ಬಿಗ್ ಟೂನರ್ಮೆಂಟ್ಗಳಲ್ಲಿ ಮಾತ್ರ ಆಡುತ್ತಿವೆ. ಏಷ್ಯಾಕಪ್ ಹಾಗೂ ಐಸಿಸಿ ಟ್ರೋಫಿಗಳಲ್ಲಿ ಮಾತ್ರ ಉಭಯ ತಂಡಗಳು ಕಾದಾಡುತ್ತವೆ. ಇದು ಇಂಡೋ-ಪಾಕ್ ಪಂದ್ಯದ ಕ್ರೇಜ್ ದುಪ್ಪಟ್ಟಾಗುವಂತೆ ಮಾಡಿದೆ.
ರೀಸನ್ ನಂ.2: ಅಪಾರ ಅಭಿಮಾನಿಗಳ ಬಲ
ಭಾರತ-ಪಾಕ್ ಪಂದ್ಯಕ್ಕೆ ಈ ಪರಿ ಹೈಪ್ ಕ್ರಿಯೇಟ್ ಆಗಲು ಎರಡು ದೇಶಗಳ ಅಭಿಮಾನಿಗಳು ಕೂಡ ಕಾರಣ. ಎಲ್ಲೇ ಪಂದ್ಯ ನಡೆಲಿ. ಇಂಡೋ-ಪಾಕ್ ಪಂದ್ಯಕ್ಕೆ ಹ್ಯೂಜ್ ಫ್ಯಾನ್ಸ್ ಬೆಂಬಲ ಸಿಗುತ್ತೆ. ನಿದ್ದೆ, ಊಟ ಬಿಟ್ಟು ತಂಡವನ್ನ ಹುರಿದುಂಬಿಸ್ತಾರೆ. ಸ್ಟೇಡಿಯಂನಲ್ಲಿ ಶೇಕಡಾ 90 ಪರ್ಸಂಟ್ ಉಭಯ ದೇಶಗಳ ಅಭಿಮಾನಿಗಳೇ ತುಂಬಿಕೊಂಡಿರ್ತಾರೆ. ಫ್ಯಾನ್ಸ್ ಸಪೋರ್ಟ್ ಪ್ಲೇಯರ್ಸ್ಗೆ ಸಿಕ್ಕು ರೋಚಕ ಹಣಾಹಣಿಗೆ ಸಾಕ್ಷಿಯಾಗುವಂತೆ ಮಾಡುತ್ತೆ.
ರೀಸನ್ ನಂ.3: ರಾಜಕೀಯ ಸಂಘರ್ಷ
ಇನ್ನು ಉಭಯ ದೇಶಗಳ ನಡುವಿನ ರಾಜಕೀಯ ಸಂಘರ್ಷ ಕೂಡ ಇಂಡೋ-ಪಾಕ್ ಪಂದ್ಯವನ್ನ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದೆ. ಗಡಿಯಲ್ಲಿ ಪಾಕ್ ಉಗ್ರರ ಉಪಟಳ ಹಾಗೂ ಭಯೋತ್ಪಾದನೆಯಿಂದ ಎರಡು ದೇಶಗಳ ಸಂಬಂಧ ಹಳಸಿದೆ. ಕ್ರಿಕೆಟ್ ಮೇಲೂ ಇದರ ನೆರಳು ಬಿದ್ದಿದೆ. ಪಂದ್ಯ ವೀಕ್ಷಿಸುವ ಪ್ರತಿಯೊಬ್ಬ ಭಾರತೀಯ ಅಭಿಮಾನಿ ಪಾಕ್ ತಂಡವನ್ನ ವೈರಿಯಂತೆ ಕಾಣ್ತಾರೆ. ಇನ್ನು ಪಾಕ್ ಫ್ಯಾನ್ಸ್ ಕೂಡ ಭಾರತವನ್ನ ಶತ್ರುವಿನಂತೆ ಭಾವಿಸುತ್ತೆ. ಈ ರಾಜಕೀಯ ಹಗೆತನ ಇಂಡೋ-ಪಾಕ್ ಪಂದ್ಯಕ್ಕೆ ಕ್ರೇಜ್ ಟಚ್ ನೀಡಿದೆ.
ರೀಸನ್ ನಂ.4: ಕೊನೆ ತನಕ ತೀವ್ರ ಜಿದ್ದಿನ ಹಣಾಹಣಿ
ಏಷ್ಯಾಕಪ್ ಹಾಗೂ ಐಸಿಸಿ ವಿಶ್ವಕಪ್ ಎರಡರಲ್ಲಿ ಯಾವುದೇ ಇರಲಿ. ಇಂಡೋ-ಪಾಕ್ ಟೀಮ್ಸ್ ಸುಲಭವಾಗಿ ಸೋಲೊಪ್ಪಿಕೊಳ್ಳಲ್ಲ. ಹಾವು ಏಣಿ ಆಟ. ಕೊನೆತನಕ ಎರಡು ತಂಡಗಳು ಪ್ರಬಲ ಹೋರಾಟ ನಡೆಸುತ್ತವೆ. ಈ ತೀವ್ರ ಜಿದ್ದಾಜಿದ್ದಿನ ಹಣಾಹಣಿ ಎಲ್ಲರು ಇಂಡೋ-ಪಾಕ್ ಪಂದ್ಯದತ್ತ ತಿರುಗಿ ನೋಡುವಂತೆ ಮಾಡುತ್ತೆ.
ಇದಿಷ್ಟೇ ಅಲ್ಲದೇ ಎರಡು ತಂಡಗಳಲ್ಲಿ ಸ್ಟಾರ್ ಆಟಗಾರರಿದ್ದಾರೆ. ಭಾರತದಲ್ಲಿ ಕಿಂಗ್ ಕೊಹ್ಲಿ, ರೋಹಿತ್ ಶರ್ಮಾರಂತ ದಿಗ್ಗಜರಿದ್ರೆ ಪಾಕ್ ತಂಡದಲ್ಲಿ ಬಾಬರ್ ಅಜಾಮ್, ಮೊಹಮ್ಮದ್ ರಿಜ್ವಾನ್, ಶಾಹೀನ್ ಅಫ್ರಿದಿಯಂತ ಶ್ರೇಷ್ಠ ಆಟಗಾರಿದ್ದಾರೆ. ಇದು ಕೂಡ ಇಂಡೋ-ಪಾಕ್ ಪಂದ್ಯದ ಬಗ್ಗೆ ಕ್ಯೂರಿಯಾಸಿಟಿ ಬೀಲ್ಡ್ ಮಾಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ