newsfirstkannada.com

INDvsAUS: ಮೋದಿ ಸ್ಟೇಡಿಯಂ ಬಳಿ ಜನಜಂಗುಳಿ.. ನಾಳಿನ ಪಂದ್ಯಕ್ಕಾಗಿ ಕಿಕ್ಕಿರಿದು ಸೇರಿದ ಜನ

Share :

18-11-2023

    ವಿಶ್ವಕಪ್​ ಪಂದ್ಯಕ್ಕಾಗಿ ವಿಶ್ವವೇ ಕಾದು ಕುಳಿತಿದೆ

    ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯಕ್ಕಾಗಿ ದಿನಗಣನೆ

    ನರೇಂದ್ರ ಮೋದಿ ಸ್ಟೇಡಿಯಂ ಆಸುಪಾಸಿನಲ್ಲಿ ಜನವೋ ಜನ

ಬಹುನಿರೀಕ್ಷಿತ ವಿಶ್ವಕಪ್​ ಪಂದ್ಯಕ್ಕಾಗಿ ವಿಶ್ವವೇ ಕಾದು ಕುಳಿತಿದೆ. ನಾಳೆ ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜನಜಂಗುಳಿ ತುಂಬಲಿದ್ದು, ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯವನ್ನು ಎದುರು ನೋಡಲು ಜನರು ಮುಂದಾಗಿದ್ದಾರೆ. ಈಗಾಗಲೇ ಸ್ಟೇಡಿಯಂ ಆಸುಪಾಸಿನಲ್ಲಿ ಜನರು ಬೀಡುಬಿಟ್ಟಿದ್ದಾರೆ. ಈ ಕುರಿತಾದ ಝಲಕ್​ ಇಲ್ಲಿದೆ.

ಭಾರತ 9 ಪ್ರದರ್ಶನದಲ್ಲೂ ಹಿಂದೇಟು ಹಾಕದೆ ಜಯ ನೆರಳಿನಲ್ಲಿ ದಾಪುಗಾಲಿಡುತ್ತಾ ಫೈನಲ್​ಗೆ ಬಂದಿದೆ. ನಾಳೆ ಪಂದ್ಯ ಗೆದ್ದರೆ ವಿಶ್ವಕಪ್​ ಮುಡಿಗೇರಿಸಲಿದೆ. ಇದು ಪ್ರತಿಯೊಬ್ಬ ಭಾರತೀಯನ ಕನಸಾಗಿಗೆ. ಹಾಗಾಗಿ ಈಗಾಗಲೇ ಎಲ್ಲರು ನಾಳಿನ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ.

ಈಗಾಗಲೇ ಸ್ಟೇಡಿಯಂ ಬಳಿ ಜನರು ಕ್ಕಿಕ್ಕಿರಿದು ಸೇರಿದ್ದಾರೆ. ಮತ್ತೊಂದೆಡೆ ಟೀಂ ಇಂಡಿಯಾ ಟೀ-ಶರ್ಟ್​ ಮಾರಾಟ ಮಾಡುತ್ತಿದ್ದಾರೆ. ಪಂದ್ಯವನ್ನು ಚಂದಗಾಣಿಸಲು ಮತ್ತು ತಂಡಕ್ಕೆ ಸಪೋರ್ಟ್​ ನೀಡುವ ಸಲುವಾಗಿ ಅಭಿಮಾನಿಗಳು ಟೀ-ಶರ್ಟ್​ ಖರೀದಿಸುತ್ತಿದ್ದಾರೆ.

ಅತ್ತ ಸ್ಟೇಡಿಯಂ ಕೂಡ ನಾಳಿನ ಪಂದ್ಯಕ್ಕಾಗಿ ಸೆಟ್​ ಆಗಿದೆ. ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಪಂದ್ಯ ವೀಕ್ಷಕರನ್ನು ತಪಾಸಣೆ ನಡೆಸಿ ಸ್ಟೇಡಿಯಂ ಒಳಕ್ಕೆ ಬಿಡಲಿದ್ದಾರೆ.

ಒಂದೆಡೆ ಸುಡು ಬಿಸಿಲು ಮತ್ತೊಂದೆಡೆ ಸ್ಟೇಡಿಯಂ ಹೊರ ಭಾಗದಲ್ಲಿ ಜನರು ನಾಳಿನ ಪಂದ್ಯಕ್ಕಾಗಿ ಇಂದೇ ಕಾದು ಕುಳಿತಿರುವುದನ್ನು ಕಂಡರೆ, ಬಹಳ ಕುತೂಹಲದಿಂದ ಕೂಡಿದ ಪಂದ್ಯ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ ಎಂಬುದಕ್ಕೆ ಎರಡು ಮಾತಿಲ್ಲ.

ನರೇಂದ್ರ ಮೋದಿ ಸ್ಟೇಡಿಯಂ ಬಳಿ ನೆರೆದ ಜನಜಂಗುಳಿಯ ದೃಶ್ಯ

INDvsAUS: ಮೋದಿ ಸ್ಟೇಡಿಯಂ ಬಳಿ ಜನಜಂಗುಳಿ.. ನಾಳಿನ ಪಂದ್ಯಕ್ಕಾಗಿ ಕಿಕ್ಕಿರಿದು ಸೇರಿದ ಜನ

https://newsfirstlive.com/wp-content/uploads/2023/11/INDvs-AUS.jpg

Load More