newsfirstkannada.com

ಯುವರಾಜ್‌ ಕುಮಾರ್ ಡಿವೋರ್ಸ್‌ ಕೇಸ್‌ಗೆ ನಾಳೆ ಮೇಜರ್‌ ಡೇ.. ಕೋರ್ಟ್‌ನಲ್ಲಿ ದೊಡ್ಮನೆ ಕುಡಿ ಭವಿಷ್ಯ!

Share :

Published July 3, 2024 at 10:06pm

Update July 3, 2024 at 10:07pm

  ಅಣ್ಣಾವ್ರ ಕುಟುಂಬದ ಮೊದಲ ಡಿವೋರ್ಸ್‌ ಕೇಸ್‌ ಏನಾಗುತ್ತೆ?

  ಯುವರಾಜ್‌ ವಿರುದ್ಧ ಶ್ರೀದೇವಿ ನೀಡುವ ಹೇಳಿಕೆ ಮೇಲೆ ನಿರ್ಧಾರ

  ಸುಮಾರು 7 ವರ್ಷ ಪ್ರೀತಿಸಿ ಮದುವೆಯಾದ ಜೋಡಿ ದೂರ, ದೂರ

ಬೆಂಗಳೂರು: ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವ ರಾಜ್‌ಕುಮಾರ್ ಡಿವೋರ್ಸ್‌ ಕೇಸ್‌ಗೆ ನಾಳೆ ನಿರ್ಣಾಯಕ ದಿನವಾಗಿದೆ. ಪತ್ನಿ ಶ್ರೀದೇವಿ ಭೈರಪ್ಪ ವಿರುದ್ಧ ಬಹಳ ಗಂಭೀರ ಆರೋಪ ಮಾಡಿರುವ ಯುವ ರಾಜ್‌ಕುಮಾರ್ ಅವರು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ನೋಟಿಸ್‌ಗೆ ಉತ್ತರ ನೀಡಲು ಶ್ರೀದೇವಿ ಭೈರಪ್ಪ ಅವರು ವಿದೇಶದಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಇದನ್ನೂ ಓದಿ: ‘ಯವ ರಾಜ್​ಕುಮಾರ್​​ಗೆ ಸಹನಟಿ ಜತೆ ಅಫೇರ್​’- ದೊಡ್ಮನೆ ಕುಡಿ ವಿರುದ್ಧ ಶ್ರೀದೇವಿ ಆರೋಪ

ಕಳೆದ ಜೂನ್ 6ರಂದು ಇಡೀ ಸ್ಯಾಂಡಲ್‌ವುಡ್‌ಗೆ ಶಾಕಿಂಗ್ ಸುದ್ದಿಯೊಂದು ಬಂದಿತ್ತು. ದೊಡ್ಮನೆ ಅಂತ ಕರೆಸಿಕೊಳ್ಳುವ ಅಣ್ಣಾವ್ರ ಕುಟುಂಬದಲ್ಲಿ ಮೊದಲ ಡಿವೋರ್ಸ್‌ ಕೇಸ್‌ನ ಸುದ್ದಿ ಕೇಳುತ್ತಿದ್ದಂತೆ ಇದು ನಿಜಾನಾ ಅಂತ ಹಲವರು ಕೇಳಿದ್ದರು. ಆದರೆ ಯುವರಾಜ್‌ ಕುಮಾರ್, ಶ್ರೀದೇವಿ ಭೈರಪ್ಪ ಅವರ ದಾಂಪತ್ಯದಲ್ಲಿ ಕಲಹ ಉಂಟಾಗಿದ್ದು, ವಿಚ್ಛೇದನದ ವಿಚಾರ ಕೋರ್ಟ್ ಮೆಟ್ಟಿಲೇರಿದೆ.

ನಾಳೆ ಕೋರ್ಟ್‌ನಲ್ಲಿ ಭವಿಷ್ಯ!
ಯುವರಾಜ್ ಕುಮಾರ್, ಶ್ರೀದೇವಿ ಭೈರಪ್ಪ ಅವರ ಡಿವೋರ್ಸ್ ಅರ್ಜಿಯ ವಿಚಾರಣೆ ನಾಳೆ ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ನಲ್ಲಿ ನಡೆಯುತ್ತಿದೆ. ಜೂನ್ 6ರಂದು ಸಲ್ಲಿಕೆಯಾಗಿದ್ದ ಡಿವೋರ್ಸ್‌ ಅರ್ಜಿ ವಿಚಾರಣೆಯನ್ನು ಕೋರ್ಟ್‌ ನಾಳೆಗೆ ನಿಗಧಿ ಮಾಡಿದೆ. ನಾಳೆ ಶ್ರೀದೇವಿ ಭೈರಪ್ಪ ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಇನ್​ಸ್ಟಾಗ್ರಾಂನಲ್ಲಿ ನೋವು ಹಂಚಿಕೊಂಡ ಯುವ ರಾಜ್​ಕುಮಾರ್​ ಪತ್ನಿ.. ಮನದ ಮಾತು ಬಿಚ್ಚಿಟ್ಟ ಶ್ರೀದೇವಿ 

ಪತ್ನಿ ವಿರುದ್ಧ ಯುವರಾಜ್‌ಕುಮಾರ್ ಅವರು ಕೌಟುಂಬಿಕ ಕಲಹ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಶ್ರೀದೇವಿ ಭೈರಪ್ಪ ಅವರು ಈಗಾಗಲೇ ನೋಟಿಸ್‌ಗೆ ಉತ್ತರ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ. ಇದೀಗ ನಾಳೆ ಕೋರ್ಟ್‌ನಲ್ಲಿ ನಡೆಯುವ ವಿಚಾರಣೆಯಲ್ಲಿ ಶ್ರೀದೇವಿ ಅವರು ನೀಡುವ ಹೇಳಿಕೆ ನಿರ್ಣಾಯಕವಾಗಿದೆ.

ಯುವರಾಜ್‌ ಕುಮಾರ್ ಡಿವೋರ್ಸ್‌ಗೆ ಅರ್ಜಿ ಸಲ್ಲಿಕೆ ಮಾಡಿದ ಬಳಿಕ ಶ್ರೀದೇವಿ ಭೈರಪ್ಪ ಅವರು ಸೋಷಿಯಲ್ ಮೀಡಿಯಾದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದರು.

‘ಅತ್ಯಂತ ದುರದೃಷ್ಟಕರ ಬೆಳವಣಿಗೆ’
ವೃತ್ತಿಪರ ಸೌಹಾರ್ದತೆಯನ್ನ ಕಾಯ್ದುಕೊಳ್ಳಬೇಕಾದ ವ್ಯಕ್ತಿಯೇ ಸಾರ್ವಜನಿಕವಾಗಿ ಒಬ್ಬ ಹೆಣ್ಣಿನ ಚಾರಿತ್ರ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪಗಳನ್ನ ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಹಾಗೂ ಬಹಳ ನೋವುಂಟು ಮಾಡಿದೆ. ಕಳೆದ ಕೆಲವು ತಿಂಗಳಿಂದಾದ ಅನೇಕ ನೋವುಗಳ ಹೊರತಾಗಿಯೂ, ನಾನು ಕುಟುಂಬದ ಗೌರವ ಕಾಪಾಡಿಕೊಳ್ಳಲು, ಮೌನವಾಗಿದ್ದೆ. ಆದ್ರೆ ನನ್ನ ಸಭ್ಯತೆ ಹಾಗೂ ಮಾನವೀಯತೆ ಗೌರವಿಸದೆ, ಕೀಳುಮಟ್ಟದ ಆರೋಪಗಳನ್ನ ಮಾಡ್ತಿರೋದು ದುರದೃಷ್ಟಕರ.
– ಶ್ರೀದೇವಿ, ಯುವ ರಾಜಕುಮಾರ್​ ಪತ್ನಿ

ಯುವ-ಶ್ರೀದೇವಿ ದೂರ.. ದೂರ
ಕಳೆದ ಆರೇಳು ತಿಂಗಳಿಂದ ಯುವ-ಶ್ರೀದೇವಿ ನಾನೊಂದು ತೀರ ನೀನೊಂದು ತೀರ ಅಂತ ದೂರ.. ದೂರ ಇದ್ದಾರೆ. ಸುಮಾರು 7 ವರ್ಷ ಪ್ರೀತಿಸಿ ಮದುವೆಯಾದ ಜೋಡಿ ಈಗ ಬೇರೆಯಾಗಲು ಮುಂದಾಗಿದ್ದಾರೆ. ನಾಳೆ ಕೋರ್ಟ್‌ನಲ್ಲಿ ಈ ಸ್ಟಾರ್ ಜೋಡಿ ಭವಿಷ್ಯ ನಿರ್ಧಾರವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವರಾಜ್‌ ಕುಮಾರ್ ಡಿವೋರ್ಸ್‌ ಕೇಸ್‌ಗೆ ನಾಳೆ ಮೇಜರ್‌ ಡೇ.. ಕೋರ್ಟ್‌ನಲ್ಲಿ ದೊಡ್ಮನೆ ಕುಡಿ ಭವಿಷ್ಯ!

https://newsfirstlive.com/wp-content/uploads/2024/06/Yuva-Rajkumar-Divorce-5.jpg

Load More