newsfirstkannada.com

ಇಂದು ದಸರಾ ಜಂಬೂ ಸವಾರಿ ವೈಭವ; ಸಕಲ ಸಿದ್ಧತೆ; ಬಿಗಿ ಪೊಲೀಸ್ ಬಂದೋಬಸ್ತ್​​!

Share :

24-10-2023

  ದಸರಾ ವೈಭವಕ್ಕಾಗಿ ಇಡೀ ಮೈಸೂರು ನಗರವೇ ಸಿಂಗರಿಸಿಕೊಂಡಿದೆ

  ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ!

  ಚಿನ್ನದ ಅಂಬಾರಿ ನೋಡಲು ದೇಶ ವಿದೇಶಗಳಿಂದ ಭಕ್ತರು ದೌಡು

ಮೈಸೂರು: ಕಳೆದ 9 ದಿನಗಳಿಂದ ಮೈಸೂರು ದಸರಾ ಸಂಭ್ರಮ-ಸಡಗರದಿಂದ ನಡೆಯುತ್ತಿದೆ. ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ ಇಂದು ನಡೆಯಲಿದೆ. ಕ್ಯಾಪ್ಟನ್ ಅಭಿಮನ್ಯು ಚಿನ್ನದ ಅಂಬಾರಿ ಹೊರಲು ಉತ್ಸುಕನಾಗಿದ್ದಾನೆ. ಈಗಾಗಲೇ ಜಂಬೂಸವಾರಿ ವೀಕ್ಷಣೆಗೆ ಜನರು ರಸ್ತೆಯ ಇಕ್ಕೆಲಗಳ ಸ್ಥಳವನ್ನೇ ಬುಕ್ ಮಾಡಿಕೊಂಡಿದ್ದಾರೆ. ಜಂಬೂಸವಾರಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ. ಚಿನ್ನದ ಅಂಬಾರಿಯನ್ನು ಹೊತ್ತು ರಾಜಗಾಂಭೀರ್ಯದಲ್ಲಿ ಕ್ಯಾಪ್ಟನ್ ಅಭಿಮನ್ಯು ಮೈಸೂರಿನ ಬೀದಿಗಳಲ್ಲಿ ಸಾಗಲಿದ್ದಾನೆ. ಈ ದೃಶ್ಯ ವೈಭವಕ್ಕಾಗಿ ಇಡೀ ಮೈಸೂರು ನಗರವೇ ಸಿಂಗರಿಸಿಕೊಂಡಿದೆ.

ಇಂದು ಅದ್ದೂರಿ ವಿಜಯದಶಮಿ ಮೆರವಣಿಗೆಗೆ ಮೈಸೂರು ಸಿದ್ಧತೆ
750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಲಿದ್ದಾನೆ ಅಭಿಮನ್ಯು

ಕಳೆದ 9 ದಿನಗಳಿಂದ ನಾಡಿನಾದ್ಯಂತ ನವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಗ್ತಿದೆ. ನವದುರ್ಗೆಯರನ್ನು ಭಕ್ತಿ-ಭಾವದಿಂದ ಆಚರಿಸಲಾಗ್ತಿದೆ. ಇಂದು ಹತ್ತನೇ ದಿನ ವಿಜಯದಶಮಿಗೆ ಸಾಂಸ್ಕ್ರತಿಕ ನಗರಿ ಮೈಸೂರು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಇಂದು ವೈಭವದಿಂದ ಜರುಗಲಿದೆ.

ಅರಮನೆಯ ಬಲರಾಮ ದ್ವಾರದಲ್ಲಿ ಇಂದು ಮಧ್ಯಾಹ್ನ 1.45 ರಿಂದ 2.08 ರೊಳಗೆ ನಂದಿಧ್ವಜ ಪೂಜೆ ನೆರವೇರಲಿದೆ. ಸಂಜೆ 4.40ರಿಂದ 5ರ ಸಮಯದಲ್ಲಿ ವರೆಗೆ ಅಂಬಾವಿಲಾಸ ಅರಮನೆಯ ಒಳಾವರಣದಲ್ಲಿ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗುವ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನು ಹೊತ್ತು ಕ್ಯಾಪ್ಟನ್ ಅಭಿಮನ್ಯು ಮೈಸೂರಿನ ಬೀದಿ ಬೀದಿಗಳಲ್ಲಿ ಸಂಚರಿಸಲಿದ್ದಾನೆ. ಅಭಿಮನ್ಯುಗೆ 14 ಆನೆಗಳು ಸಾಥ್​ ನೀಡಲಿವೆ. ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಪ್ರದರ್ಶಿಸುತ್ತಾ ರಾಜಪಥದಲ್ಲಿ ಸಾಗಲು ಕಲಾತಂಡಗಳು, ಸ್ತಬ್ಧಚಿತ್ರಗಳು ಸಜ್ಜಾಗಿವೆ.

ಜಂಬೂ ಸವಾರಿ ವೀಕ್ಷಣೆಯ ಟಿಕೆಟ್ ಸೋಲ್ಡ್ ಔಟ್
ಚಾಪೆ ಹಾಸಿ ಸ್ಥಳಗಳನ್ನ ಬುಕ್‌ ಮಾಡಿಕೊಂಡ ಜನರು

ಇನ್ನು, ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ನಾಡದೇವತೆ ಚಾಮುಂಡೇಶ್ವರಿಗೆ ಭಕ್ತಿಭಾವದಿಂದ ನಮಿಸಲು ದೇಶ-ವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಸಾಂಸ್ಕೃತಿಕ ನಗರಿಯತ್ತ ಧಾವಿಸುತ್ತಿದ್ದಾರೆ. ಜಂಬೂ ಸವಾರಿ ಸಾಗುವ ರಸ್ತೆಯ ಇಕ್ಕೆಲಗಳು ಈಗಾಗಲೇ ಬುಕ್ಕಿಂಗ್ ಆಗಿವೆ. ಇಂದು ನಾಲ್ಕುವರೆ ಕಿಲೋ ಮೀಟರ್ ದಸರಾ ಜಂಬೂ ಸವಾರಿ ಸಾಗಲಿದ್ದು ಈ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಜನರ ಜಟಾಪಟಿ ಶುರುವಾಗಿದೆ. ಅರಮನೆ ನಗರಿಯಲ್ಲಿ ಅಘೋಷಿತ ಬುಕ್ಕಿಂಗ್ ದರ್ಬಾರ್​ ಜೋರಾಗಿದೆ.

ಬುಕ್ಕಿಂಗ್ ಜಾಗಕ್ಕೆ ಬೇರೆಯವರು ಎಂಟ್ರಿಯಾದರೆ ಸ್ಥಳದಲ್ಲಿ ರಣರಂಗವೇ ಸೃಷ್ಟಿಯಾಗುತ್ತೆ. ರಸ್ತೆ ಇಕ್ಕೆಲಗಳಲ್ಲಿ ಛಾಫೆ, ಟಾರ್ಫಾಲ್ ಇಟ್ಟು ಜಾಗವನ್ನ ಬುಕ್ಕಿಂಗ್ ಮಾಡಲಾಗಿದೆ. ಒಟ್ಟಾರೆ ಇಂದು ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದೆ. ಅಭಿಮನ್ಯು ಚಿನ್ನದ ಅಂಬಾರಿ ಹೊರಲು ತಯಾರಾಗಿದ್ದು ತನ್ನ ಇನ್ನೀತರ 14 ಸ್ನೇಹಿತರೊಂದಿಗೆ ಮೆರವಣಿಗೆ ಮಾಡಲಿದ್ದಾನೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯ, ದೇಶ, ವಿದೇಶಗಳ ಜನರು ಮೈಸೂರಿಗೆ ದಾಂಗುಡಿ ಇಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ದಸರಾ ಜಂಬೂ ಸವಾರಿ ವೈಭವ; ಸಕಲ ಸಿದ್ಧತೆ; ಬಿಗಿ ಪೊಲೀಸ್ ಬಂದೋಬಸ್ತ್​​!

https://newsfirstlive.com/wp-content/uploads/2023/10/dasara_-2.jpg

Load More